ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕೆಪಿಎಲ್ 2018 ಟ್ರೋಫಿ ಅನಾವರಣಗೊಳಿಸಿದ ಸ್ಟೈರಿಸ್

By Mahesh

ಲಕ್ಷ್ಮಿ ವಿಲಾಸ್ ಬ್ಯಾಂಕ್‍ನಿಂದ ಚಾಲಿತವಾದ ಕಾರ್ಬನ್ ಸ್ಮಾರ್ಟ್ ಫೋನ್ ಕರ್ನಾಟಕ ಪ್ರೀಮಿಯರ್ ಲೀಗ್‍ಗಾಗಿ ಟ್ರೋಫಿಯನ್ನು ಮೈಸೂರಿನ ರಾಜವಂಶಸ್ಥರಾದ ಶ್ರೀಮತಿ ಪ್ರಮೋದಾ ದೇವಿ ಒಡೆಯರ್ ಮತ್ತು ಮಾಜಿ ನ್ಯೂಜಿಲೆಂಡ್ ಆಲ್‍ರೌಂಡರ್ ಸ್ಕಾಟ್ ಸ್ಟೈರಿಸ್ ಅವರು ಅನಾವರಣಗೊಳಿಸಿದರು. ಥಳಥಳಿಸುವ ಬೆಡಗಿನ ಈ ಕಾರ್ಯಕ್ರಮ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇಂದು ನಡೆಯಿತು.

ಸೆಪ್ಟೆಂಬರ್ 6ರಂದು ನಡೆಯಲಿರುವ ಫೈನಲ್‍ನ ಅಂತ್ಯಕ್ಕೆ ಪ್ರತಿ ತಂಡ ಎತ್ತಿಹಿಡಿಯಲು ಬಯಸುವ ಈ ಟ್ರೋಫಿ ಅದರ ತೂಕದ ಚಿನ್ನಕ್ಕೆ ಸಮನಾಗಿದೆ. ಈ ಅದ್ಭುತ ಟ್ರೋಫಿ ನಾಲ್ಕು ಕಿಲೋ ತೂಕ ಹೊಂದಿದ್ದು 19.5 ಇಂಚುಗಳಷ್ಟು ಎತ್ತರವಾಗಿದೆ. ಈ ಟ್ರೋಫಿಯನ್ನು ಐಡಿಸೈನ್‍ನ ಸೋದರರಾದ ದಿನೇಶ್‍ಕುಮಾರ್ ಮತ್ತು ಸತೀಶ್ ಕುಮಾರ್ ವಿನ್ಯಾಸಗೊಳಿಸಿದ್ದಾರೆ.

ಪ್ರಸಕ್ತ ವರ್ಷದ ಈ ಹೊಳೆಯುವ ಟ್ರೋಫಿಗೆ ಅದ್ಭುತ ಮೈಸೂರು ಅರಮನೆಯ ವಾಸ್ತುಶಿಲ್ಪ ಸ್ಫೂರ್ತಿಯಾಗಿದೆ. ಮುಖ್ಯವಾಗಿ ಅಲ್ಲಿನ ಪ್ರಮುಖ ಆಕರ್ಷಣೆಗಳಾದ ಸ್ತಂಭಗಳನ್ನು ಟ್ರೋಫಿಯಲ್ಲಿ ಅಳವಡಿಸಲಾಗಿದ್ದು ಸಮೃದ್ಧ ಸುವರ್ಣಲೇಪಿತ ಹೂವಿನ ವಿನ್ಯಾಸಗಳಿಂದ ಅಲಂಕರಿಸಲಾಗಿದೆ. ಜೊತೆಗೆ ಸ್ತಂಭದ ಮೇಲೆ ಸುವರ್ಣ ಲೇಪಿತ ಕ್ರಿಕೆಟ್ ಚೆಂಡನ್ನು ಇರಿಸಲಾಗಿದ್ದು ಇದು ಆಟದ ತಿರುಳನ್ನು ಬಿಂಬಿಸುತ್ತದೆ.

ಕೇಂದ್ರ ಭಾಗದ ಸೆಂಟರ್‍ಪೀಸ್‍ನಲ್ಲಿ ಎರಡು ದೊಡ್ಡ ರೆಕ್ಕೆಗಳನ್ನು ಎರಡೂ ಭಾಗದಲ್ಲಿ ಜೋಡಿಸಲಾಗಿದ್ದು ಇವು ಆನೆಯ ದಂತಗಳನ್ನು ಹೋಲುತ್ತವೆ. ಮತ್ತೊಂದು ಪ್ರಮುಖ ವಿಷಯ ಏನೆಂದರೆ ಈ ದಂತ ಮೈಸೂರು ರಾಜಮನೆತನಕ್ಕೆ ಪರ್ಯಾಯವಾಗಿದೆ. ಟ್ರೋಫಿಯ ಅತ್ಯುನ್ನತ ಭಾಗದಲ್ಲಿ ದಿವಂಗತ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ ಚಿತ್ರವನ್ನು ಸ್ವರವೋಸ್ಕಿ ಹರಳುಗಳ ನಡುವೆ ಅಳವಡಿಸಲಾಗಿದೆ.

ಈ ಟ್ರೋಫಿ ಮೈಸೂರು ಅರಮನೆಯ ಕಲಾತ್ಮಕ ಅಂಶಗಳು ಮತ್ತು ಕ್ರಿಕೆಟ್‍ನ ಶ್ರೇಷ್ಠ ಮಿಶ್ರಣವಾಗಿದ್ದು ಶ್ರೇಷ್ಠ ಟ್ರೋಫಿಯ ಸೌಂದರ್ಯ ಮೌಲ್ಯವನ್ನು ಒಳಗೊಂಡಿದೆ.

ಪ್ರಮೋದಾ ದೇವಿ ಅವರು ಮಾತನಾಡಿ

ಪ್ರಮೋದಾ ದೇವಿ ಅವರು ಮಾತನಾಡಿ

ಮೈಸೂರಿನ ರಾಜವಂಶಸ್ಥರಾದ ಶ್ರೀಮತಿ ಪ್ರಮೋದಾ ದೇವಿ ಅವರು ಮಾತನಾಡಿ, 'ಕರ್ನಾಟಕ ರಾಜ್ಯ್ ಕ್ರಿಕೆಟ್ ಸಂಸ್ಥೆ ಈ ವರ್ಷ ಕೂಡ ಮೈಸೂರು ನಗರದಲ್ಲಿ 'ಕರ್ನಾಟಕ ಪ್ರೀಮಿಯರ್ ಲೀಗ್' ಅನ್ನು ನಡೆಸುತ್ತಿರುವುದು ನನಗೆ ಹರ್ಷ ತಂದಿದೆ. ಕರ್ನಾಟಕ ತನ್ನ ದೃಢವಾದ ಕ್ರಿಕೆಟ್ ಸಂಪ್ರದಾಯಕ್ಕೆ ಹೆಸರಾಗಿದೆ. ಮತ್ತು ಜಗತ್ತು ಕಂಡಿರುವ ಅತ್ಯುತ್ತಮ ಕ್ರಿಕೆಟಿಗರಿಗೆ ರಾಜ್ಯ ಮನೆಯಾಗಿದೆ. ನನ್ನ ದಿವಂಗತ ಪತಿ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರು ಕ್ರಿಕೆಟ್ ಕುರಿತು ಅಪಾರ ಭಾವೋದ್ವೇಗವುಳ್ಳವರಾಗಿದ್ದರು. ಅಲ್ಲದೆ, ಕೆಪಿಎಲ್ ರಾಜ್ಯದಲ್ಲಿ ಕ್ರಿಕೆಟ್ ಪ್ರತಿಭೆಗಳನ್ನು ಆವಿಷ್ಕರಿಸಲು ವೇದಿಕೆಯನ್ನು ಪೂರೈಸಬಲ್ಲದು.

ಜೊತೆಗೆ ಕರ್ನಾಟಕದಲ್ಲಿ ಕ್ರಿಕೆಟ್ ಆಟವನ್ನು ಅಭಿವೃದ್ಧಿಪಡಿಸುವಲ್ಲಿ ಇದು ನಿರ್ಣಾಯಕ ಪಾತ್ರ ವಹಿಸಲಿದೆ ಎಂದು ನಂಬಿದ್ದರು. ಡಿಸೆಂಬರ್ 1, 2013ರಂದು ಕೆಎಸ್‍ಸಿಎ ಅಧ್ಯಕ್ಷರಾಗಿ ಆಯ್ಕೆಯಾದ ತಕ್ಷಣವೇ ಈ ಟೂರ್ನಿಯನ್ನು ಮುಂದಿನ ಹಂತಕ್ಕೆ ಒಯ್ಯುವುದು ಅವರ ಇಚ್ಛೆಯಾಗಿತ್ತು. ಅವರಿಗೆ ಗೌರವವಾಗಿ ಕೆಪಿಎಲ್ ಟೂರ್ನಿಯನ್ನು ಪ್ರತಿ ವರ್ಷ ಆಯೋಜಿಸುವುದರೊಂದಿಗೆ ಕೆಎಸ್‍ಸಿಎ ನಿರ್ಣಾಯಕ ಸಮಿತಿ ಅವರ ಭಾವೋದ್ವೇಗವನ್ನು ಅನುಸರಿಸಿರುವುದು ನನಗೆ ಹರ್ಷ ತಂದಿದೆ'' ಎಂದರು.

ವಿನಯ್ ಮೃತ್ಯುಂಜಯ ಅವರು ಮಾತನಾಡಿ

ವಿನಯ್ ಮೃತ್ಯುಂಜಯ ಅವರು ಮಾತನಾಡಿ

ಈ ಕಾರ್ಯಕ್ರಮದಲ್ಲಿ ಕೆಎಸ್ ಸಿಎನ ಅಧಿಕೃತ ವಕ್ತಾರರು ಮತ್ತು ನಿರ್ವಹಣಾ ಸಮಿತಿ ಸದಸ್ಯರಾದ ವಿನಯ್ ಮೃತ್ಯುಂಜಯ ಅವರು ಮಾತನಾಡಿ, 'ಕೆಪಿಎಲ್ ಆಟಗಾರರಿಗೆ ಒಂದು ಅದ್ಭುತ ವೇದಿಕೆಯಾಗಿದೆ. ದೊಡ್ಡ ಸಂಖ್ಯೆಯ ಪ್ರೇಕ್ಷಕರ ಮುಂದೆ ಅಲ್ಲದೆ, ಫ್ರಾಂಚೈಸಿ ಒತ್ತಡದಡಿಯಲ್ಲಿ ಆಟವಾಡುವುದನ್ನು ಹುಡುಗರು ತಮ್ಮ ಅಭಿವೃದ್ಧಿಯ ಆರಂಭದ ಹಂತದಲ್ಲಿಯೇ ಕಲಿಯುತ್ತಾರೆ. ಐಪಿಎಲ್ ತಂಡಗಳು ಇದನ್ನು ಶ್ಲಾಘಿಸಿದ್ದು ಅವರ ಪ್ರತಿನಿಧಿಗಳು ಬಂದು ಕೆಪಿಎಲ್ ಪಂದ್ಯಗಳನ್ನು ನೋಡಿ ಪ್ರತಿಭಾವಂತ ಆಟಗಾರರನ್ನು ಇಲ್ಲಿಂದ ಆರಿಸಲು ಮುಂದಾಗಿದ್ದಾರೆ. ಈ ವರ್ಷ ಕೂಡ ಅವರು ಆಸಕ್ತಿ ಹೊಂದಿರುವ ಇನ್ನು ಹೆಚ್ಚಿನ ಸಂಖ್ಯೆಯ ಆಟಗಾರರನ್ನು ಈ ಪ್ರತಿನಿಧಿಗಳು ಕಂಡುಕೊಳ್ಳಲಿದ್ದಾರೆ ಎಂಬ ಖಾತ್ರಿ ನನಗಿದೆ'' ಎಂದರು.

'ಕೆಪಿಎಲ್ ಯುವ ಆಟಗಾರರಿಗೆ ತಮ್ಮ ಪ್ರತಿಭೆ ಮತ್ತು ಮನೋಧರ್ಮವನ್ನು ಪ್ರದರ್ಶಿಸಲು ಅದ್ಭುತ ವೇದಿಕೆಯಾಗಿದೆ. ಯಾವ ಉದ್ದೇಶಕ್ಕಾಗಿ ಯೋಜಿಸಲಾಗಿತ್ತೊ ಅದಕ್ಕೆ ಸಮೃದ್ಧ ರೀತಿಯಲ್ಲಿ ಟೂರ್ನಿ ಸೇವೆ ಸಲ್ಲಿಸುತ್ತಿದೆ'' ಎಂದರು.

ಕೆಎಸ್‍ಸಿಎ ಗೌರವಾಧ್ಯಕ್ಷರಾದ ಸಂಜಯ್ ದೇಸಾಯ್

ಕೆಎಸ್‍ಸಿಎ ಗೌರವಾಧ್ಯಕ್ಷರಾದ ಸಂಜಯ್ ದೇಸಾಯ್

ಕೆಎಸ್‍ಸಿಎ ಗೌರವಾಧ್ಯಕ್ಷರಾದ ಸಂಜಯ್ ದೇಸಾಯ್ ಅವರು ಮಾತನಾಡಿ, 'ಪ್ರಸಕ್ತ ವರ್ಷ ಕರ್ನಾಟಕ ಪ್ರೀಮಿಯರ್ ಲೀಗ್‍ನ 7ನೇ ಆವೃತ್ತಿಗೆ ಆತಿಥ್ಯ ವಹಿಸಲು ನಮಗೆ ನಿಜಕ್ಕೂ ರೋಮಾಂಚಕವಾಗುತ್ತಿದೆ. ಈ ಟೂರ್ನಿ ಮೂರು ನಗರಗಳಲ್ಲಿ ನಡೆಯಲಿದ್ದು, ಇದಕ್ಕಾಗಿ ನಾವು ಎದುರು ನೋಡುತ್ತಿದ್ದೇವೆ. ಕೆಪಿಎಲ್ ದೊಡ್ಡ ಸ್ವದೇಶಿ ಟೂರ್ನಿಯಾಗಿ ಬೆಳೆದಿದ್ದು ಇದು ಭಾರತದಲ್ಲಿ ಅತ್ಯುತ್ತಮ ಟೂರ್ನಿಯಾಗಬೇಕೆಂಬ ಇಚ್ಛೆ ನಮ್ಮದಾಗಿದೆ. ಗೆಲ್ಲಲು ಹೋರಾಟ ನಡೆಸಲೇಬೇಕಾದಂತಹ ಟ್ರೋಫಿ ಇದಾಗಿರುವುದನ್ನು ನೀವು ವೀಕ್ಷಿಸಬಹುದಾಗಿದೆ'' ಎಂದರು.

ಕರ್ನಾಟಕ ಪ್ರೀಮಿಯರ್ ಲೀಗ್ ದೇಶದಲ್ಲಿ ಅತ್ಯುತ್ತಮ ಸ್ವದೇಶಿ ಲೀಗ್ ಆಗುವತ್ತ ಕ್ಷಿಪ್ರಗತಿಯಲ್ಲಿ ಸಾಗಿದೆ. ಸ್ಟಾರ್ ಸ್ಪೋಟ್ರ್ಸ್ ಮತ್ತು ಹಾಟ್‍ಸ್ಟಾರ್‍ಗಳು ಪ್ರಸಾರ ಪಾಲುದಾರರಾಗಿ ಕಳೆದ ವರ್ಷ ಕೆಪಿಎಲ್ ದೇಶದಲ್ಲಿ 2ನೇ ಅತ್ಯಂತ ಹೆಚ್ಚಿನ ಸಂಖ್ಯೆಯ ವೀಕ್ಷಣೆ ಹೊಂದಿದ ಸ್ವದೇಶಿ ಲೀಗ್ ಎಂಬ ಗೌರವ ಪಡೆದಿದೆ. ಸ್ಟಾರ್ ಸ್ಪೋಟ್ರ್ಸ್ ಪಾಲುದಾರರಾಗಿ ವೀಕ್ಷಕರ ಸಂಖ್ಯೆ 2016ರಲ್ಲಿದ್ದ 26 ದಶಲಕ್ಷದಿಂದ 2017ರಲ್ಲಿ 59 ದಶಲಕ್ಷಕ್ಕೆ ಹೆಚ್ಚಿದೆ.

ಸಾಮಾಜಿಕ ಮಾಧ್ಯಮದಲ್ಲಿ ಸಂಚಲನ

ಸಾಮಾಜಿಕ ಮಾಧ್ಯಮದಲ್ಲಿ ಸಂಚಲನ

ಪ್ರಸಕ್ತ ವರ್ಷ ಈ ಟೂರ್ನಿಯನ್ನು ಏಷಿಯಾದ ಉಪಖಂಡಗಳು, ಕೆನಡಾ, ಯುಎಸ್‍ಎ ಮತ್ತು ಯುಕೆಗಳಲ್ಲಿ ಕನ್ನಡ ವೀಕ್ಷಕ ವಿವರಣೆಯ ಆಯ್ಕೆ ಲಭ್ಯತೆಯೊಂದಿಗೆ ಪ್ರಸಾರ ಮಾಡಲಾಗುವುದು.

ಜೊತೆಗೆ ಕೆಪಿಎಲ್ ಟ್ವಿಟರ್‍ನಲ್ಲಿ 3.15 ದಶಲಕ್ಷ ಇಂಪ್ರೆಷನ್‍ಗಳು ಮತ್ತು 1,57,02,582ಗಳಷ್ಟು ಫೇಸ್‍ಬುಕ್ ರೀಚ್ ಪಡೆಯುವುದರೊಂದಿಗೆ ಈ ಲೀಗ್ ಸಾಮಾಜಿಕ ಮಾಧ್ಯಮದಲ್ಲಿ ಸಂಚಲನ ಮೂಡಿಸಿತ್ತು. ಇದು ಸ್ಥಳೀಯ ಲೀಗ್‍ಗೆ ದೊಡ್ಡ ಸಾಧನೆಯಾಗಿದೆ.

ಕರ್ನಾಟಕ ಪ್ರೀಮಿಯರ್ ಲೀಗ್ ಕಳೆದ ವರ್ಷ ವೀಕ್ಷಕರ ಸಂಖ್ಯೆಯಲ್ಲಿ ಶೇ.222 ಹೆಚ್ಚಳದೊಂದಿಗೆ ನೂತನ ಎತ್ತರ ತಲುಪಿದೆ. ಅದ್ಭುತ ಆಟಗಾರರು ಮತ್ತು ತಂಡಗಳ ಹೆಚ್ಚಿರುವ ಆತ್ಮವಿಶ್ವಾಸಗಳೊಂದಿಗೆ ಪ್ರಸಕ್ತ ವರ್ಷ ಅಭಿಮಾನಿಗಳು ಮತ್ತು ಮಾಧ್ಯಮಗಳ ದೃಢವಾದ ಬೆಂಬಲದೊಂದಿಗೆ ಈ ಟೂರ್ನಿ ಸಂಪೂರ್ಣ ನೂತನ ಮಟ್ಟವನ್ನು ತಲುಪುವ ಸಾಧ್ಯತೆ ಇದೆ.

ಆಗಸ್ಟ್ 15ರಂದು ಬೆಂಗಳೂರಿನಲ್ಲಿ ಆರಂಭ

ಆಗಸ್ಟ್ 15ರಂದು ಬೆಂಗಳೂರಿನಲ್ಲಿ ಆರಂಭ

ಲೀಗ್ ನ ಫ್ರಾಂಚೈಸಿಗಳಂತೆ ಪ್ರಾಯೋಜಕರು ಕೂಡ ವರ್ಷದಿಂದ ವರ್ಷಕ್ಕೆ ಟೂರ್ನಿಯನ್ನು ಮುಂದಕ್ಕೆ ಒಯ್ಯುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಕಾರ್ಬನ್ ಸ್ಮಾರ್ಟ್‍ಫೋನ್ ಮತ್ತು ಸೈಕಲ್ ಪ್ಯೂರ್ ಅಗರಬತ್ತಿಗಳಂತಹ ಪ್ರಾಯೋಜಕರು ಈ ಟೂರ್ನಿಗೆ ತಮ್ಮ ಮುಂದುವರಿದ ಬೆಂಬಲವನ್ನು ಮತ್ತೊಮ್ಮೆ ಪ್ರದರ್ಶಿಸಿದ್ದಾರೆ. ಹೆಚ್ಚುವರಿಯಾಗಿ ನೂತನ ಪಾಲುದಾರರಾದ ಲಕ್ಷ್ಮಿ ವಿಲಾಸ್ ಬ್ಯಾಂಕ್, ಫಾಸ್ಟ್ರಾಕ್ ರಿಫ್ಲೆಕ್ಸ್ 2.0, ಶೆರ್ಲಾಕ್, ವಿಮಲ್ ಪಾನ್ ಮಸಾಲಾ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಬಿ-ಟೆಕ್ಸ್ ಗಳು ಟೂರ್ನಿಗೆ ಮತ್ತಷ್ಟು ಹುರುಪು ನೀಡಲು ಮುಂದೆ ಬಂದಿವೆ.

ಪ್ರಸಕ್ತ ಋತುವಿನ ಪಂದ್ಯಗಳು ಆಗಸ್ಟ್ 15ರಂದು ಬೆಂಗಳೂರಿನಲ್ಲಿ ಆರಂಭವಾಗಲಿವೆ. ನಂತರ ಆಗಸ್ಟ್ 19ರಂದು ಹುಬ್ಬಳ್ಳಿಗೆ ಆನಂತರ 29ರಂದು ಮೈಸೂರಿಗೆ ಈ ಟೂರ್ನಿ ತೆರಳಲಿದೆ. ಈ ಪಂದ್ಯಾವಳಿಯನ್ನು ಸ್ಟಾರ್ ಸ್ಪೋರ್ಟ್, ಸ್ಟಾರ್ ಸ್ಪೋಟ್ಸ್ ಎಚ್‍ಡಿ ಮತ್ತು ಹಾರ್ಟ್ ಸ್ಟಾರ್ಟ್ ಗಳಲ್ಲಿ ಕೆನಡಾ, ಯುಕೆ ಮತ್ತು ಏಷ್ಯಾ ಪೆಸಿಫಿಕ್ ಪ್ರದೇಶಗಳಲ್ಲಿ ನೇರವಾಗಿ ಪ್ರಸಾರ ಮಾಡಲಾಗುವುದು.

Story first published: Tuesday, August 14, 2018, 11:46 [IST]
Other articles published on Aug 14, 2018
Read in English: KPL 2018: Trophy launched
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X