ಮೈಸೂರು, ಸೆಪ್ಟೆಂಬರ್ 5: ಮೈಸೂರಿನ ಎಸ್ಡಿಎನ್ಆರ್ ಒಡೆಯರ್ ಕ್ರಿಕೆಟ್ ಮೈದಾನದಲ್ಲಿ ನಡೆದ ಮಹಿಳಾ ಕೆಪಿಎಲ್ ದ್ವಿತೀಯ ಪ್ರದರ್ಶನ ಪಂದ್ಯದಲ್ಲಿ ಬಿಜಾಪುರ್ ಬುಲ್ಸ್ ವಿರುದ್ಧ ಬೆಳಗಾವಿ ಪ್ಯಾಂಥರ್ಸ್ 7 ವಿಕೆಟ್ ಭರ್ಜರಿ ಜಯ ಸಾಧಿಸಿದೆ. ಆರಂಭಿಕ ಆಟಗಾರ್ತಿ ವೃಂದಾ ದಿನೇಶ್ ಅಜೇಯ 37 ರನ್ ನೊಂದಿಗೆ ಪ್ಯಾಂಥರ್ಸ್ ಗೆಲುವಿಗೆ ಕಾರಣರಾದರು.
ಏಷ್ಯಾಕಪ್ ಗೂ ಮುನ್ನ ಕೊಹ್ಲಿ-ರೋಹಿತ್ ಟ್ವೀಟ್ ಆನ್ ಫಾಲೋ?
ಟಾಸ್ ಗೆದ್ದು ಬ್ಯಾಟಿಂಗ್ ಗೆ ಇಳಿದ ಬಿಜಾಪುರ್ ಬುಲ್ಸ್ 20 ಓವರ್ ಗಳಲ್ಲಿ 9 ವಿಕೆಟ್ ಕಳೆದು 84 ರನ್ ಪೇರಿಸಿತ್ತು. 85 ರನ್ ಗುರಿ ಬೆನ್ನತ್ತಿದ ಬೆಳಗಾವಿ ಪ್ಯಾಂಥರ್ಸ್ ವೃಂದಾ (37) ಮತ್ತು ಪ್ರತ್ಯುಕ್ಷಾ ಅವರ 20 ರನ್ ನೆರವಿನೊಂದಿಗೆ 16.5 ಓವರ್ ನಲ್ಲಿ 3 ವಿಕೆಟ್ ಕಳೆದು 85 ರನ್ ಪೇರಿಸಿ ಗೆಲುವನ್ನಾಚರಿಸಿತು.
#WomensKPL: Belagavi Panthers best Bijapur Bills by 7 wickets in the second game. pic.twitter.com/hRVnfJjyTx
— Women's CricZone (@WomensCricZone) September 5, 2018
ಬಿಜಾಪುರ್ ಇನ್ನಿಂಗ್ಸ್ ವೇಳೆ ಪ್ಯಾಂಥರ್ಸ್ ನ ಸಹನಾ ಪವರ್ 18 ರನ್ನಿಗೆ 3 ವಿಕೆಟ್ ಕೆಡವಿದ್ದು ಎದುರಾಳಿಯ ರನ್ ಕದಿಯುವಿಕೆಗೆ ಬ್ರೇಕ್ ಹಾಕಿತು. ಅಂತಿಮವಾಗಿ ಪ್ಯಾಂಥರ್ಸ್ ಸುಲಭ ಜಯ ತನ್ನದಾಗಿಸಿತು. ಮೊದಲನೇ ಪ್ರದರ್ಶನ ಪಂದ್ಯದಲ್ಲಿ ಶಿವಮೊಗ್ಗ ಲಯನ್ಸ್ ಮಹಿಳಾ ತಂಡದ ವಿರುದ್ಧ ಮೈಸೂರು ವಾರಿಯರ್ಸ್ ವನಿತೆಯರು ಗೆದ್ದಿದ್ದರು.
ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ