ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕೆಪಿಎಲ್‌ 2019: ಬಿಜಾಪುರ್‌ ಬುಲ್ಸ್‌ಗೆ ಸೋಲುಣಿಸಿದ ಬಳ್ಳಾರಿ ಟಸ್ಕರ್ಸ್

KPL 2019: Bellary Tuskers won by 7 wickets

ಬೆಂಗಳೂರು, ಆಗಸ್ಟ್ 20: ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಮಂಗಳವಾರ (ಆಗಸ್ಟ್ 20) ನಡೆದ ಕರ್ನಾಟಕ ಪ್ರೀಮಿಯರ್ ಲೀಗ್ 2019ರ 8ನೇ ಪಂದ್ಯದಲ್ಲಿ ಬುಜಾಪುರ್ ಬುಲ್ಸ್ ವಿರುದ್ಧ ಬಳ್ಳಾರಿ ಟಸ್ಕರ್ಸ್ 7 ವಿಕೆಟ್ ಜಯ ಗಳಿಸಿದೆ. ಅಭಿಷೇಕ್ ರೆಡ್ಡಿ ಮತ್ತು ಸಿಎ ಕಾರ್ತಿಕ್ ಅರ್ಧಶತಕದ ಬೆಂಬಲದೊಂದಿಗೆ ಟಸ್ಕರ್ಸ್ ಸತತ 3ನೇ ಗೆಲುವು ದಾಖಲಿಸಿದೆ.

ಭಾರತ-ವಿಂಡೀಸ್: ಟೆಸ್ಟ್‌ನಲ್ಲಿ ಇತ್ತಂಡಗಳ ಕುತೂಹಲಕಾರಿ ಅಂಕಿ-ಅಂಶಗಳುಭಾರತ-ವಿಂಡೀಸ್: ಟೆಸ್ಟ್‌ನಲ್ಲಿ ಇತ್ತಂಡಗಳ ಕುತೂಹಲಕಾರಿ ಅಂಕಿ-ಅಂಶಗಳು

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಬಿಜಾಪುರ್ ಬುಲ್ಸ್, ನಾಯಕ ಭರತ್ ಚಿಪ್ಲಿ 50 (39 ಎಸೆತ), ರಾಜು ಭಟ್ಕಳ್ 62 (43) ಗಣನೀಯ ರನ್‌ನೊಂದಿಗೆ 20 ಓವರ್ ಮುಕ್ತಾಯಕ್ಕೆ 7 ವಿಕೆಟ್ ನಷ್ಟದೊಂದಿಗೆ 162 ರನ್ ಮಾಡಿತು. ಬುಲ್ಸ್ ಇನ್ನಿಂಗ್ಸ್‌ನಲ್ಲಿ ಎದುರಾಳಿ ತಂಡದ ಕೃಷ್ಣಪ್ಪ ಗೌತಮ್ 3, ಪ್ರಸಿದ್ಧ್ ಕೃಷ್ಣ 2, ಸಿಎ ಕಾರ್ತಿಕ್ 1 ವಿಕೆಟ್ ಪಡೆದರು.

ವಿಲಿಯಮ್ಸನ್, ಅಖಿಲ ಧನಂಜಯ ಮೇಲೆ ಸಂಶಯಾಸ್ಪದ ಬೌಲಿಂಗ್ ದೂರುವಿಲಿಯಮ್ಸನ್, ಅಖಿಲ ಧನಂಜಯ ಮೇಲೆ ಸಂಶಯಾಸ್ಪದ ಬೌಲಿಂಗ್ ದೂರು

ಗುರಿ ಬೆಂಬತ್ತಿದ್ದ ಬಳ್ಳಾರಿ ಟಸ್ಕರ್ಸ್‌ಗೆ ಆರಂಭಿಕ ಆಟಗಾರರಾದ ಅಭಿಷೇಕ್ ಮತ್ತು ಕಾರ್ತಿಕ್ ಅವರ ಉತ್ತಮ ಜೊತೆಯಾಟದ ಬೆಂಬಲ ಲಭಿಸಿತು. ಅಭಿಷೇಕ್ ಅಜೇಯ 62 (54), ಕಾರ್ತಿಕ್ 57 (36), ದೇವದತ್ ಪಡಿಕಳ್ 29 ರನ್ ಸೇರಿಸಿ ತಂಡ ಬೆಂಬಲಿಸಿದರು.

ಪೂಜಾರ, ರಹಾನೆ, ವಿಹಾರಿ ಆಟದ ಸೊಬಗು: ವಿಂಡೀಸ್ ಅಭ್ಯಾಸ ಪಂದ್ಯ ಡ್ರಾಪೂಜಾರ, ರಹಾನೆ, ವಿಹಾರಿ ಆಟದ ಸೊಬಗು: ವಿಂಡೀಸ್ ಅಭ್ಯಾಸ ಪಂದ್ಯ ಡ್ರಾ

18.5 ಓವರ್‌ಗೆ ಬಳ್ಳಾರಿ ಟಸ್ಕರ್ಸ್ 3 ವಿಕೆಟ್ ಕಳೆದು 163 ರನ್‌ನೊಂದಿಗೆ ಗೆಲುವಿನ ನಗು ಬೀರಿತು. ಪ್ರತೀಕ್ ಜೈನ್, ನವೀನ್ ಎಂಜಿ ಮತ್ತು ಸುನೀಲ್ ರಾಜು ತಲಾ 1 ವಿಕೆಟ್ ಪಡೆದರು. ಟಸ್ಕರ್ಸ್‌ನ ಅಭಿಷೇಕ್ ರೆಡ್ಡಿ ಪಂದ್ಯಶ್ರೇಷ್ಠರೆನಿಸಿದರು. ಈ ಪಂದ್ಯದ ಬಳಿಕ ಟಸ್ಕರ್ಸ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿತ್ತು.

Story first published: Tuesday, August 20, 2019, 21:48 [IST]
Other articles published on Aug 20, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X