ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕೆಪಿಎಲ್‌: ಪಡಿಕ್ಕಲ್ ಸ್ಫೋಟಕ ಬ್ಯಾಟಿಂಗ್‌, ಟಸ್ಕರ್ಸ್‌ಗೆ ಶರಣಾದ ಟೈಗರ್ಸ್‌

Devdutt Padikkal 2019

ಬೆಂಗಳೂರು, ಆಗಸ್ಟ್ 19: ದೇವದತ್ ಪಡಿಕ್ಕಲ್ ಸಿಡಿಸಿದ ಅದ್ಭುತ ಅರ್ಧಶತಕ (70 ) ಮತ್ತು ಅಬ್ರಾರ್ ಖಾಝಿ ಅವರ ಸ್ಪಿನ್ ಮಂತ್ರದ ನೆರವಿನಿಂದ ಬಳ್ಳಾರಿ ಟಸ್ಕರ್ಸ್ ತಂಡ, ಕರ್ನಾಟಕ ಪ್ರೀಮಿಯರ್ ಲೀಗ್‌ನ 8 ನೇ ಆವೃತ್ತಿಯ 6ನೇ ಲೀಗ್‌ ಪಂದ್ಯದಲ್ಲಿ ಹುಬ್ಬಳ್ಳಿ ಟೈಗರ್ಸ್ ತಂಡವನ್ನು 9 ರನ್‌ಗಳಿಂದ ಮಣಿಸಿ, ಅಂಕ ಪಟ್ಟಿಯಲ್ಲಿ ಅಗ್ರ ಸ್ಥಾನ ಕಾಯ್ದುಕೊಂಡಿದೆ.

ಇಲ್ಲಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಗೆಲ್ಲಲು 164ರನ್‌ಗಳ ಸವಾಲಿನ ಮೊತ್ತವನ್ನು ಬೆಂನ್ನತ್ತಿದ ಹುಬ್ಬಳ್ಳಿ ಟೈಗರ್ಸ್ . 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 154 ರನ್ ಗಳಿಸಿ ಸೋಲೊಪ್ಪಿಕೊಂಡಿತು.

ಟೆಸ್ಟ್‌ ರ‍್ಯಾಂಕಿಂಗ್: ಕೊಹ್ಲಿಗೆ ಸಡ್ಡು ಹೊಡೆಯುವತ್ತ ಸಮೀಪಿಸಿದ ಸ್ಟೀವ್‌ ಸ್ಮಿತ್‌ಟೆಸ್ಟ್‌ ರ‍್ಯಾಂಕಿಂಗ್: ಕೊಹ್ಲಿಗೆ ಸಡ್ಡು ಹೊಡೆಯುವತ್ತ ಸಮೀಪಿಸಿದ ಸ್ಟೀವ್‌ ಸ್ಮಿತ್‌

ಪ್ರಸಕ್ತ ಲೀಗ್‌ನಲ್ಲಿ ಟೈಗರ್ಸ್‌ಗೆ ಇದು ಸತತ ಎರಡನೇ ಸೋಲಾಗಿದೆ. ನಾಯಕ ವಿನಯ್ ಕುಮಾರ್ 37 ರನ್ ಗಳಿಸಿ ಕೊನೆಯ ಕ್ಷಣದ ವರೆಗೂ ಹೋರಾಟ ನೀಡಿದರೂ ತಂಡವನ್ನು ಸೋಲಿನಿಂದ ಪಾರುಮಾಡಲಾಗಲಿಲ್ಲ.

ದೇವದತ್ತ ಪಡಿಕ್ಕಲ್ ಆಸರೆ

ಬೆಳಗಾವಿ ಪ್ಯಾಂಥರ್ಸ್ ವಿರುದ್ಧದ ಪಂದ್ಯದಲ್ಲೂ ಅರ್ಧಶತಕ ಗಳಿಸಿ ಜಯದ ರೂವಾರಿ ಎನಿಸಿದ್ದ ದೇವದತ್‌ ಪಡಿಕ್ಕಲ್ (70 ), ಹುಬ್ಬಳ್ಳಿ ಟೈಗರ್ಸ್ ವಿರುದ್ಧವೂ ಸ್ಫೋಟಕ ಆಟವಾಡಿ ಸವಾಲಿನ ಮೊತ್ತ ದಾಖಲಿಸಲು ನೆರವಾದರು. ಇದರೊಂದಿಗೆ ಬಳ್ಳಾರಿ ಟಸ್ಕರ್ಸ್ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 163 ರನ್ ಕಲೆಹಾಕಿತು.
ಟಾಸ್ ಗೆದ್ದ ಹುಬ್ಬಳ್ಳಿ ಟೈಗರ್ಸ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲ ಪಂದ್ಯದಲ್ಲಿ ಗೆದ್ದ ಆತ್ಮ ವಿಶ್ವಾಸದಲ್ಲಿದ್ದ ಬಳ್ಳಾರಿ ಟಸ್ಕರ್ಸ್ ಸ್ಫೋಟಕ ಆಟಕ್ಕೆ ಮನ ಮಾಡಿತ್ತು.

ಟೀಮ್‌ ಇಂಡಿಯಾದ ಸಹಾಯಕ ಕೋಚ್‌ಗಳ ನೇಮಕಾತಿ ಪ್ರಕ್ರಿಯೆ ಶುರುಟೀಮ್‌ ಇಂಡಿಯಾದ ಸಹಾಯಕ ಕೋಚ್‌ಗಳ ನೇಮಕಾತಿ ಪ್ರಕ್ರಿಯೆ ಶುರು

ಆದರೆ, ನಾಯಕ ವಿನಯ್ ಕುಮಾರ್ ಗೆ ಮೊದಲ ಓವರ್ ನಲ್ಲೆ ಯಶಸ್ಸು ಸಿಕ್ಕಿತ್ತು. 9 ರನ್ ಗಳಿಸಿ ಆಡುತ್ತಿದ್ದ ಕೋದಂಡ ಕಾರ್ತಿಕ್ ಸುಲಭ ತುತ್ತಾದರು. ಅಭಿಷೇಕ್ ರೆಡ್ಡಿ ಕೂಡ 24 ರನ್ ಗಳಿಸುತ್ತಲೇ ಪೆವಿಲಿಯನ್ ಹಾದಿ ಹಿಡಿದರು.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಪಾಳಯದಲ್ಲಿ ಚುಟುಕು ಕ್ರಿಕೆಟ್ ಗೆ ಯಾವ ರೀತಿಯಲ್ಲಿ ಆಡಬೇಕು ಎಂಬುದನ್ನು ಅರಿತಿರುವ ದೇವದತ್ತ ಪಡಿಕ್ಕಲ್ ಹಿಂದಿನ ಪಂದ್ಯದಲ್ಲೂ 54 ರನ್ ಸಿಡಿಸಿ ಬೆಳಗಾವಿ ಪ್ಯಾಂಥರ್ಸ್ ತಂಡದ ಬೌಲರ್ ಗಳನ್ನು ದಂಡಿಸಿದ್ದರು.

ಐಪಿಎಲ್‌ 2020: ನೂತನ ಸಹಾಯಕ ಕೋಚ್‌ ನೇಮಕ ಮಾಡಿದ ಸನ್‌ರೈಸರ್ಸ್‌ಐಪಿಎಲ್‌ 2020: ನೂತನ ಸಹಾಯಕ ಕೋಚ್‌ ನೇಮಕ ಮಾಡಿದ ಸನ್‌ರೈಸರ್ಸ್‌

ಪ್ರಮುಖ ಆಟಗಾರರು ರನ್ ಗಳಿಸುವಲ್ಲಿ ವಿಫಲ ಆಗಿರುವುದನ್ನು ಗಮನಿಸಿದ ಪಡಿಕ್ಕಲ್ ಹುಬ್ಬಳ್ಳಿ ಟೈಗರ್ಸ್ ವಿರುದ್ಧ ಜವಾಬ್ಧಾರಿಯುತ ಆಟ ಆಡಿದರು. 56 ಎಸೆತಗಳನ್ನು ಎದುರಿಸಿದ ಪಡಿಕ್ಕಲ್ 4 ಬೌಂಡರಿ ಹಾಗೂ 3 ಸಿಕ್ಸರ್ ನೆರವಿನಿಂದ 70 ರನ್ ಸಿಡಿಸಿ ತಂಡಕ್ಕೆ ನೆರವಾದರು. ಪ್ರಸಕ್ತ ಕೆಪಿಎಲ್ ನಲ್ಲಿ ಪಡಿಕ್ಕಲ್ ಅವರ ಎರಡನೇ ಅರ್ಧ ಶತಕ ಇದಾಗಿದೆ. ಜಿಶಾನ್ ಅಲಿ 14 ಎಸೆತಗಳನ್ನೆದುರಿಸಿ ಸಿಡಿಸಿದ 25 ರನ್ ತಂಡದ ಬೃಹತ್ ಮೊತ್ತಕ್ಕೆ ನೆರವಾಯಿತು. ಪಡಿಕ್ಕಲ್ ಒಂದೆಡೆ ಬ್ಯಾಟಿಂಗ್ ಅಬ್ಬರ ಮುಂದುವರಿಸಿದ್ದರೂ ಹುಬ್ಬಳ್ಳಿ ಟೈಗರ್ಸ್ ತಂಡದ ಬೌಲಿಂಗ್ ಶಕ್ತಿಯಲ್ಲಿ ಕುಂದುಂಟಾಗಲಿಲ್ಲ.

ಟಿ20 ಕ್ರಿಕೆಟ್‌: ಮಹಿಳಾ ಸೂಪರ್‌ ಲೀಗ್‌ನಲ್ಲಿ ಡೇನಿಯೆಲ್‌ ವ್ಯಾಟ್‌ ಐತಿಹಾಸಿಕ ಶತಕಟಿ20 ಕ್ರಿಕೆಟ್‌: ಮಹಿಳಾ ಸೂಪರ್‌ ಲೀಗ್‌ನಲ್ಲಿ ಡೇನಿಯೆಲ್‌ ವ್ಯಾಟ್‌ ಐತಿಹಾಸಿಕ ಶತಕ

ಆದಿತ್ಯ ಸೋಮಣ್ಣ ಒಂದೇ ಓವರ್ ನಲ್ಲಿ ಜಿಶಾನ್ ಅಲಿ ಮತ್ತು ಕೆ. ಗೌತಮ್ ಅವರ ವಿಕೆಟ್ ಪಡೆಯುವ ಮೂಲಕ ಟಸ್ಕರ್ಸ್ ರನ್ ಗಳಿಕೆಗೆ ಕಡಿವಾಣ ಹಾಕಿದರು. ಡೇವಿಡ್ ಮಥಾಯಸ್ ಹಾಗೂ ವಿಕ್ರಂಕಾಂತ್ ಯಾದವ್ ತಲಾ ಒಂದು ವಿಕೆಟ್ ಗಳಿಸಿದರು. ವಿನಯ್‌ ಕುಮಾರ್ ಏಕೈಕ ವಿಕೆಟ್ ಗೆ ತೃಪ್ತಿಪಟ್ಟರು. ವಿದ್ಯಾಧರ ಪಾಟೀಲ್ 4 ಓವರ್ ಗೆ 49 ರನ್ ನೀಡಿ ದುಬಾರಿ ಬೌಲರ್ ಎನಿಸಿದರು.

Story first published: Monday, August 19, 2019, 21:06 [IST]
Other articles published on Aug 19, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X