ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟಿ20 ಕ್ರಿಕೆಟ್ ಇತಿಹಾಸದಲ್ಲಿ ವಿಶಿಷ್ಠ ದಾಖಲೆ ಬರೆದ ಕೃಷ್ಣಪ್ಪ ಗೌತಮ್!

KPL 2019: Gowtham slams fastest ton, takes 8/15 in record-breaking T20 match

ಬೆಂಗಳೂರು, ಆಗಸ್ಟ್ 24: ಟಿ20 ಕ್ರಿಕೆಟ್ ಇತಿಹಾಸದಲ್ಲಿ ವಿಶಿಷ್ಠ ದಾಖಲೆಯೊಂದಕ್ಕೆ ಕನ್ನಡಿಗ ಕೃಷ್ಣಪ್ಪ ಗೌತಮ್ ಕಾರಣರಾಗಿದ್ದಾರೆ. ಕರ್ನಾಟಕ ಪ್ರೀಮಿಯರ್‌ ಲೀಗ್‌ (ಕೆಪಿಎಲ್‌)ನಲ್ಲಿ ಗೌತಮ್, ವಿಶ್ವದ ಗಮನ ಸೆಳೆಯುವಂತ ಆಲ್ ರೌಂಡರ್ ಆಟ ಪ್ರಶರ್ಶಿಸಿದ್ದಾರೆ.

ಎಂಎಸ್ ಧೋನಿ ಜಾಗಕ್ಕೆ ಸೂಕ್ತ ಆಟಗಾರನ ಸೂಚಿಸಿದ ವೀರೇಂದ್ರ ಸೆಹ್ವಾಗ್ಎಂಎಸ್ ಧೋನಿ ಜಾಗಕ್ಕೆ ಸೂಕ್ತ ಆಟಗಾರನ ಸೂಚಿಸಿದ ವೀರೇಂದ್ರ ಸೆಹ್ವಾಗ್

ಶುಕ್ರವಾರ (ಆಗಸ್ಟ್ 23) ನಡೆದ ಕೆಪಿಎಲ್ 15ನೇ ಪಂದ್ಯದಲ್ಲಿ ಶಿವಮೊಗ್ಗ ಲಯನ್ಸ್ ವಿರುದ್ಧ ಬಳ್ಳಾರಿ ಟಸ್ಕರ್ಸ್‌ ಪರ ಗೌತಮ್ 134 ರನ್ ಚಚ್ಚಿದರಲ್ಲದೆ, ಬರೋಬ್ಬರಿ 8 ವಿಕೆಟ್‌ಗಳೊಂದಿಗೆ ಅಪ್ಪಟ ಆಲ್ ರೌಂಡರ್ ಆಟ ತೋರಿಸಿದರು.

ಆರ್‌ಸಿಬಿ ಕಪ್‌ ಕನಸಿಗೀಗ ಜೀವ, ಕೋಚಿಂಗ್‌ ವಿಭಾಗದಲ್ಲಿ ಮುಖ್ಯ ಬದಲಾವಣೆ!ಆರ್‌ಸಿಬಿ ಕಪ್‌ ಕನಸಿಗೀಗ ಜೀವ, ಕೋಚಿಂಗ್‌ ವಿಭಾಗದಲ್ಲಿ ಮುಖ್ಯ ಬದಲಾವಣೆ!

ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ, ಕನ್ನಡಿಗನ ಟಿ20 ವಿಶೇಷ ದಾಖಲೆಗೆ ಸಾಕ್ಷಿಯಾಗಿದೆ.

ಬರೋಬ್ಬರಿ 13 ಸಿಕ್ಸರ್

ಬರೋಬ್ಬರಿ 13 ಸಿಕ್ಸರ್

ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಬಳ್ಳಾರಿ ಟಸ್ಕರ್ಸ್ ತಂಡದಿಂದ ಆರಂಭಿಕ ಬ್ಯಾಟ್ಸ್ಮನ್ ಅಭಿಷೇಕ್ ರೆಡ್ಡಿ 34, ನಾಯಕ ಸಿಎಂ ಗೌತಮ್ 13 ರನ್ ಸೇರಿಸಿದರು. 3ನೇ ಕ್ರಮಾಂಕದಲ್ಲಿ ಬ್ಯಾಟ್ ಎತ್ತಿಕೊಂಡಿದ್ದ ಕೆ ಗೌತಮ್ 56 ಎಸೆತಗಳಿಗೆ ಅಜೇಯ 134 ರನ್ ಸಿಡಿದರು. ಇದರಲ್ಲಿ 13 ಸಿಕ್ಸರ್ ಮತ್ತು 7 ಬೌಂಡರಿಗಳು ಸೇರಿವೆ.

17 ಓವರ್‌ಗೆ 204 ರನ್ ಗುರಿ

17 ಓವರ್‌ಗೆ 204 ರನ್ ಗುರಿ

ಟಸ್ಕರ್ಸ್ ಇನ್ನಿಂಗ್ಸ್‌ ವೇಳೆ ಮಳೆ ಶುರುವಾಗಿದ್ದರಿಂದ ಪಂದ್ಯವನ್ನು 17 ಓವರ್‌ಗೆ ಕಡಿತಗೊಳಿಸಲಾಯ್ತು. ಬಳ್ಳಾರಿ ಟಸ್ಕರ್ಸ್ 17 ಓವರ್‌ಗೆ 3 ವಿಕೆಟ್ ನಷ್ಟದಲ್ಲಿ 203 ರನ್ ಪೇರಿಸಿತು. ಶಿವಮೊಗ್ಗ ಲಯನ್ಸ್‌ಗೆ ವಿಜೆಡಿ ನಿಯಮದ ಪ್ರಕಾರ 17 ಓವರ್‌ಗೆ 204 ರನ್ ಗುರಿ ನೀಡಲಾಗಿತ್ತು.

133 ರನ್‌ಗೆ ಆಲ್ ಔಟ್

133 ರನ್‌ಗೆ ಆಲ್ ಔಟ್

ಗುರಿ ಬೆನ್ನತ್ತಿದ ಶಿವಮೊಗ್ಗ ಲಯನ್ಸ್ ಬ್ಯಾಟ್ಸ್ಮನ್‌ಗಳನ್ನು ಕೃಷ್ಣಪ್ಪ ಗೌತಮ್ ಕಾಡಹತ್ತಿದರು. ಅಕ್ಷಯ್ ಬಲ್ಲಾಳ್ 40, ಪವನ್ ದೇಶಪಾಂಡೆ 46 ಗಮನಾರ್ಹ ರನ್‌ನೊಂದಿಗೆ ಶಿವಮೊಗ್ಗ 16.3 ಓವರ್‌ಗೆ ಎಲ್ಲಾ ವಿಕೆಟ್ ಕಳೆದುಕೊಂಡು 133 ಗಳಿಸಲಷ್ಟೇ ಶಕ್ತವಾಯ್ತು.

ವಿಕೆಟ್ ಮೇಲೆ ವಿಕೆಟ್!

ವಿಕೆಟ್ ಮೇಲೆ ವಿಕೆಟ್!

ಶಿವಮೊಗ್ಗ ಲಯನ್ಸ್ ಇನ್ನಿಂಗ್ಸ್‌ನಲ್ಲಿ ಕೆ ಗೌತಮ್ ಕೇವಲ 15 ರನ್ನಿಗೆ 8 ವಿಕೆಟ್ ಉರುಳಿಸಿದ್ದು ಎದುರಾಳಿಯನ್ನು ಕಂಗೆಡಿಸಿತು. ಅಂತೂ ಪಂದ್ಯವನ್ನು ಟಸ್ಕರ್ಸ್ ಭರ್ಜರಿ 70 ರನ್‌ಗಳಿಂದ ಗೆದ್ದುಕೊಂಡಿತು. ಈ ಪಂದ್ಯದ ಬಳಿಕ ಬಳ್ಳಾರಿ ಟಸ್ಕರ್ಸ್ 4 ಗೆಲುವುಗಳೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ, ಶಿವಮೊಗ್ಗ, ಹುಬ್ಬಳ್ಳಿ ಅನಂತರದ ಸ್ಥಾನಗಳಲ್ಲಿವೆ.

Story first published: Saturday, August 24, 2019, 18:22 [IST]
Other articles published on Aug 24, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X