ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕೆಪಿಎಲ್‌ 2019: ಕೊನೆಯ ಓವರ್‌ನಲ್ಲಿ ಬಳ್ಳಾರಿ ಟಸ್ಕರ್ಸ್ ಗೆ ರೋಚಕ ಜಯ

Padikkal Devdutt 2019 KP

ಬೆಂಗಳೂರು, ಆಗಸ್ಟ್ 18: ಅತ್ಯಂತ ರೋಚಕವಾಗಿ ಮೂಡಿಬಂದ ಮಾಜಿ ಚಾಂಪಿಯನ್ಸ್‌ಗಳ ನಡುವಣ ಹೈ ವೋಲ್ಟೇಜ್‌ ಪಂದ್ಯದಲ್ಲಿ ಬಳ್ಳಾರಿ ಟಸ್ಕರ್ಸ್ ತಂಡ ಬೆಳಗಾವಿ ಪ್ಯಾಂಥರ್ಸ್ ವಿರುದ್ಧ 5 ರನ್ ಗಳ ಜಯಗಳಿಸಿ ಕರ್ನಾಟಕ ಪ್ರೀಮಿಯರ್ ಲೀಗ್ ನಲ್ಲಿ ಶುಭಾರಂಭ ಮಾಡಿದೆ.

144 ರನ್ ಗಳ ಅಲ್ಪ ಮೊತ್ತವನ್ನು ಬೆಂಬತ್ತುವಲ್ಲಿ ವಿಫಲವಾದ ಬೆಳಗಾವಿ ಪ್ಯಾಂಥರ್ಸ್ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 138 ರನ್ ಗಳಿಸಿ ಸೋಲೊಪ್ಪಿಕೊಂಡಿತು. ಪ್ಯಾಂಥರ್ಸ್ ಪರ ಮನೋಹರ್ (26 ) ಹಾಗೂ ರಿತೇಶ್ ಭಟ್ಕಳ್ (27 ) ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದರೂ ತಂಡವನ್ನು ಸೋಲಿನಿಂದ ಪಾರು ಮಾಡಲಾಗಲಿಲ್ಲ. ಬಳ್ಳಾರಿ ಟಸ್ಕರ್ಸ್ ಪರ ಪ್ರಸಿಧ್ ಕೃಷ್ಣ, ಕೆ. ಗೌತಮ್ ಹಾಗೂ ಗುಲೇಚ ತಲಾ 2 ವಿಕೆಟ್ ಗಳಿಸಿದರು.

ಶಾಸ್ತ್ರಿ ಮರು ಆಯ್ಕೆ ಹಿಂದೆ ನಾಯಕ ಕೊಹ್ಲಿ ಪ್ರಭಾವ ಇಲ್ಲವೆಂದ ಕಪಿಲ್‌ ದೇವ್‌ಶಾಸ್ತ್ರಿ ಮರು ಆಯ್ಕೆ ಹಿಂದೆ ನಾಯಕ ಕೊಹ್ಲಿ ಪ್ರಭಾವ ಇಲ್ಲವೆಂದ ಕಪಿಲ್‌ ದೇವ್‌

ಮಿಂಚಿದ ಯುವ ಪ್ರತಿಭೆ ಪಡಿಕ್ಕಲ್
ಆಲ್‌ರೌಂಡರ್ ದೇವದತ್ತ ಪಡಿಕ್ಕಲ್ (54 ) ಅವರ ಜವಾಬ್ಧಾರಿಯುತ ಬ್ಯಾಟಿಂಗ್ ನೆರವಿನಿಂದ ಕರ್ನಾಟಕ ಪ್ರೀಮಿಯರ್ ಲೀಗ್ ನ ಮೂರನೇ ಪಂದ್ಯದಲ್ಲಿ ಬಳ್ಳಾರಿ ಟಸ್ಕರ್ಸ್ ತಂಡ ಬೆಳಗಾವಿ ಪ್ಯಾಂಥರ್ಸ್ ವಿರುದ್ಧ 143 ರನ್ ಗಳ ಸಾಧಾರಣ ಮೊತ್ತವನ್ನು ಕಲೆ ಹಾಕಿದೆ.

ಸೋಷಿಯಲ್‌ ಮೀಡಿಯಾದಲ್ಲಿ ನಗ್ನ ಫೋಟೊ ಪ್ರಕಟಿಸಿದ ಇಂಗ್ಲೆಂಡ್‌ ಆಟಗಾರ್ತಿ!ಸೋಷಿಯಲ್‌ ಮೀಡಿಯಾದಲ್ಲಿ ನಗ್ನ ಫೋಟೊ ಪ್ರಕಟಿಸಿದ ಇಂಗ್ಲೆಂಡ್‌ ಆಟಗಾರ್ತಿ!

ಟಾಸ್ ಗೆದ್ದ ಬೆಳಗಾವಿ ಪ್ಯಾಂಥರ್ಸ್ ಫೀಲ್ಡಿಂಗ್ ಆಯ್ದುಕೊಂಡು ಅಷ್ಟೇ ಉತ್ತಮ ರೀತಿಯಲ್ಲಿ ತನ್ನ ಆಯ್ಕೆಯನ್ನು ಸಮರ್ಥಿಸಿಕೊಂಡಿತು. ಆರಂಭಿಕ ಆಟಗಾರ ಅಜಿತ್ ಕಾರ್ತಿಕ್ ಕೇವಲ 7 ರನ್ ಗಳಿಸಿ ಅವಿನಾಶ್ ಗೆ ವಿಕೆಟ್ ಒಪ್ಪಿಸಿದರು. ಇನ್ನೋರ್ವ ಆರಂಭಿಕ ಆಟಗಾರ ಅಭಿಷೇಕ್ ರೆಡ್ಡಿ 33 ಎಸೆತಗಳನ್ನು ಎದುರಿಸಿ 5 ಬೌಂಡರಿಗಳ ನೆರವಿನಿಂದ 35 ರನ್ ಗಳಿಸಿ ತಂಡದ ಚೇತರಿಕೆಗೆ ನೆರವಾದರು. ಅನುಭವಿ ಆಟಗಾರ, ನಾಯಕ ಸಿ. ಎಂ. ಗೌತಮ್ ಜವಾಬ್ಧಾರಿಯುತ ಆಟ ಆಡಿದರೂ ಬೃಹತ್ ಮೊತ್ತ ದಾಖಲಾಗಲಿಲ್ಲ. 1 ಬೌಂಡರಿ ಹಾಗೂ 2 ಸಿಕ್ಸರ್ ನೆರವಿನಿಂದ 27 ರನ್ ಗಳಿಸಿದರೂ ಬಳಸಿದ್ದು 25 ಎಸೆತಗಳನ್ನು.

ಸಿಕ್ಸರ್‌ಗಳಲ್ಲಿ ಸಚಿನ್‌ ದಾಖಲೆ ಸರಿಗಟ್ಟಿದ ನ್ಯೂಜಿಲೆಂಡ್‌ನ ಬೌಲರ್‌!ಸಿಕ್ಸರ್‌ಗಳಲ್ಲಿ ಸಚಿನ್‌ ದಾಖಲೆ ಸರಿಗಟ್ಟಿದ ನ್ಯೂಜಿಲೆಂಡ್‌ನ ಬೌಲರ್‌!

ಬೌಲಿಂಗ್ ನಲ್ಲೂ ಮಿಂಚುವ ಸಾಮರ್ಥ್ಯ ಹೊಂದಿರುವ ದೇವದತ್ತ ಪಡಿಕ್ಕಲ್ ಬ್ಯಾಟಿಂಗ್ ನೆರವಿನಿಂದ ಬಳ್ಳಾರಿ ಟಸ್ಕರ್ಸ್ ಸಾಧಾರಣ ಮೊತ್ತವನ್ನು ಗಳಿಸಲು ಸಾಧ್ಯವಾಯಿತು. ದೇಶೀಯ ಕ್ರಿಕೆಟ್ ನಲ್ಲಿ ಮಿಂಚುವ ಪಡಿಕ್ಕಲ್ ಮನೆಯಂಗಣದ ಪಿಚ್ ಬಗ್ಗೆ ಚೆನ್ನಾಗಿ ಬಲ್ಲರು. ಭಾರತದ ಕಿರಿಯರ ತಂಡದಲ್ಲಿ ಮಿಂಚಿದ್ದ ಪಡಿಕ್ಕಲ್ ಐಪಿಎಲ್ ನಲ್ಲಿ ರಾಯಲ್ ಚಾಲೆಂಜರ್ಸ್ ತಂಡಲ್ಲಿದ್ದರೂ ಆಡುವ ಅವಕಾಶ ಪಡೆಯಲಿಲ್ಲ.

ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಗುಡ್‌ಬೈ ಹೇಳಿದ ಯೂನಿವರ್ಸ್‌ ಬಾಸ್‌!ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಗುಡ್‌ಬೈ ಹೇಳಿದ ಯೂನಿವರ್ಸ್‌ ಬಾಸ್‌!

ಆದರೆ ಸಿಕ್ಕ ಅವಾಕಾಶವನ್ನು ಚೆನ್ನಾಗಿ ಸದುಪಯೋಗಪಡಿಸಿಕೊಳ್ಳುವ ಆಟಗಾರ. ಒಂದೆಡೆ ವಿಕೆಟ್ ಉರುಳುತ್ತಿರುವಾಗ ಆತ್ಮವಿಶ್ವಾಸದ ಆಟ ಆಡಿದ ಪಡಿಕ್ಕಲ್ 43 ಎಸೆತಗಳನ್ನು ಎದುರಿಸಿ 2 ಬೌಂಡರಿ ಹಾಗೂ ಎರಡು ಸಿಕ್ಸರ್ ನೆರವಿನಿಂದ 54 ರನ್ ಗಳಿಸಿದರು. ಇದರಿಂದ ಬಳ್ಳಾರಿ ಟಸ್ಕರ್ಸ್ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 143 ರನ್ ಗಳಿಸಿತು. ಬೆಳಗಾವಿ ಪ್ಯಾಂಥರ್ಸ್ ಪರ ಜಾಹೂರ್ ಫಾರೂಕಿ 28 ರನ್ ಗೆ 2 ವಿಕೆಟ್ ಗಳಿಸಿದರು. ಡಿ. ಅವಿನಾಶ್ ಮತ್ತು ದೀಕ್ಷಾಂಶು ನೇಗಿ ತಲಾ ಒಂದು ವಿಕೆಟ್ ಗಳಿಸಿದರು.

Story first published: Sunday, August 18, 2019, 14:35 [IST]
Other articles published on Aug 18, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X