ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕೆಪಿಎಲ್: ವಿನಯ್ ಸ್ಫೋಟಕ ಅರ್ಧಶತಕ, ಹುಬ್ಳಿಗೆ ಶರಣಾದ ಬೆಂಗಳೂರು

KPL 2019: Vinay Kumar leads from the front as Hubli Tigers progress to playoffs

ಮೈಸೂರು, ಆಗಸ್ಟ್ 27: ಈ ಬಾರಿಯ ಕರ್ನಾಟಕ ಪ್ರೀಮಿಯರ್ ಲೀಗ್‌ನಲ್ಲಿ ಬೆಂಗಳೂರು ಬ್ಲಾಸ್ಟರ್ಸ್ ಅದೃಷ್ಟವೇ ಸರಿಯಿದ್ದಂತಿಲ್ಲ. ಆಡಿರುವ 6 ಪಂದ್ಯಗಳಲ್ಲಿ ಒಂದೇ ಗೆಲುವು ದಾಖಲಿಸಿರುವ ಬೆಂಗಳೂರು, ಮಂಗಳವಾರ (ಆಗಸ್ಟ್ 27) ಹುಬ್ಳಿ ಟೈಗರ್ಸ್ ವಿರುದ್ಧ 7 ವಿಕೆಟ್ ಸೋಲನುಭವಿಸಿದೆ. ಆದರೆ ಈ ಗೆಲುವಿನೊಂದಿಗೆ ಹುಬ್ಳಿ ತಂಡ ಪ್ಲೇ ಆಫ್‌ಗೆ ಪ್ರವೇಶಿಸಿದೆ.

ICC Test Rankingನಲ್ಲಿ ಎತ್ತರಕ್ಕೇರಿದ ಆ್ಯಷಸ್ ಹೀರೋ ಬೆನ್ ಸ್ಟೋಕ್ಸ್!ICC Test Rankingನಲ್ಲಿ ಎತ್ತರಕ್ಕೇರಿದ ಆ್ಯಷಸ್ ಹೀರೋ ಬೆನ್ ಸ್ಟೋಕ್ಸ್!

ಮೈಸೂರಿನ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಸ್ಟೇಡಿಯಂನಲ್ಲಿ ನಡೆದ ಕೆಪಿಎಲ್ 20ನೇ ಪಂದ್ಯದಲ್ಲಿ ನಾಯಕ ವಿಜಯ್ ಕುಮಾರ್ ಸ್ಫೋಟಕ ಅರ್ಧಶತಕದಿಂದಾಗಿ ಹುಬ್ಳಿ ಟೈಗರ್ಸ್, 3ನೇ ಗೆಲುವು ದಾಖಲಿಸಿದೆ. ಹುಬ್ಳಿ ಆಡಿರುವ 6ರಲ್ಲಿ 3 ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದೆ.

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಬೆಂಗಳೂರು ಬ್ಲಾಸ್ಟರ್ಸ್ ಪರ ಭರತ್ ದೂರಿ ಬಿಟ್ಟರೆ ಯಾರೂ ಅಂಥ ಬ್ಯಾಟಿಂಗ್ ಬೆಂಬಲ ನೀಡಲಿಲ್ಲ. ದೂರಿ 42 ರನ್ ಸೇರಿಸಿದರು. ಅದು ಬಿಟ್ಟರೆ ಕುಲದೀಪ್ ಕುಮಾರ್ 19, ಮನೋಜ್ ಎಸ್ ಭಂಡಾಜೆ 28 ರನ್ ಸೇರಿಸಿದ್ದೇ ಹೆಚ್ಚೆನಿಸಿತು.

ಕೊನೆಯ 6 ಎಸೆತಕ್ಕೆ 20 ರನ್: KPLನಲ್ಲಿ ಮೈಸೂರು ವಾರಿಯರ್ಸ್ ದಾಖಲೆ ರನ್ ಚೇಸ್ಕೊನೆಯ 6 ಎಸೆತಕ್ಕೆ 20 ರನ್: KPLನಲ್ಲಿ ಮೈಸೂರು ವಾರಿಯರ್ಸ್ ದಾಖಲೆ ರನ್ ಚೇಸ್

ಬ್ಲಾಸ್ಟರ್ಸ್ 20 ಓವರ್‌ಗೆ 9 ವಿಕೆಟ್ ನಷ್ಟದಲ್ಲಿ 158 ರನ್ ಮಾಡಿತು. ಗುರಿ ಬೆಂಬತ್ತಿದ ಹುಬ್ಳಿ ಟೈಗರ್ಸ್, ಮೊಹಮ್ಮದ್ ತಾಹ 48 (31 ಎಸೆತ), ವಿನಯ್ ಕುಮಾರ್ 81 (51) ರನ್‌ನೊಂದಿಗೆ 17.4 ಓವರ್‌ಗೆ 3 ವಿಕೆಟ್ ನಷ್ಟದಲ್ಲಿ 164 ರನ್ ಗಳಿಸಿತು. ಬೆಂಗಳೂರು ಇನ್ನಿಂಗ್ಸ್‌ನಲ್ಲಿ ಹುಬ್ಳಿಯ ಡೇವಿಡ್ ಮಥೀಯಸ್ 4, ಆದಿತ್ಯ ಸೋಮಣ್ಣ 2 ವಿಕೆಟ್‌ನೊಂದಿಗೆ ಗಮನ ಸೆಳೆದರು.

Story first published: Tuesday, August 27, 2019, 22:00 [IST]
Other articles published on Aug 27, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X