ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಆಗಸ್ಟ್‌ 16ರಿಂದ ಕರ್ನಾಟಕ ಪ್ರೀಮಿಯರ್‌ ಲೀಗ್‌, ಫೈನಲ್‌ ಎಲ್ಲಿ ಗೊತ್ತಾ?

The 8th edition of Karnataka Premier League

ಬೆಂಗಳೂರು, ಜುಲೈ 26: ಸ್ಥಳೀಯ ಪ್ರತಿಭೆಗಳಿಗೆ ಅಂತಾರಾಷ್ಟ್ರೀಯ ಗುಣಮಟ್ಟದ ವೇದಿಕೆ ಒದಗಿಸಿ ಪ್ರೋತ್ಸಾಹಿಸುವ ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ(ಕೆಎಸ್‌ಸಿಎ)ಯ ಮಹತ್ವಾಕಾಂಕ್ಷೀಯ ಟಿ20 ಕ್ರಿಕೆಟ್‌ ಟೂರ್ನಿ 'ಕರ್ನಾಟಕ ಪ್ರೀಮಿಯರ್‌ ಲೀಗ್‌'ನ 8ನೇ ಆವೃತ್ತಿಯು ಆಗಸ್ಟ್‌ 16ರಂದು ಬೆಂಗಳೂರಿನಲ್ಲಿ ಆರಂಭವಾಗಲಿದೆ.

ಈ ಹಿಂದಿನ ಆವೃತ್ತಿಗಳಂತೆ ಈ ಬಾರಿಯೂ ಮೂರು ನಗರಗಳಲ್ಲಿ ಟೂರ್ನಿ ನಡೆಯಲಿದ್ದು, ಬೆಂಗಳೂರಿನಲ್ಲಿ ಆರಂಭಗೊಂಡು, ಹುಬ್ಬಳ್ಳಿಯಲ್ಲಿ ಎರಡನೇ ಚರಣ ನಡೆಯಲಿದೆ. ಬಳಿಕ ಅಂತಿಮ ಲೀಗ್‌ ಪಂದ್ಯಗಳು ಮತ್ತು ನಾಕ್‌ಔಟ್‌ ಪಂದ್ಯಗಳಿಗೆ ಮೈಸೂರಿನಲ್ಲಿ ನಡೆಯಲಿದೆ ಎಂದು ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಕೆಎಸ್‌ಸಿಎ ಕಾರ್ಯದರ್ಶಿ ಸುಧಾಕರ್ ರಾವ್ ತಿಳಿಸಿದ್ದಾರೆ.

ಕೊಹ್ಲಿ-ಶಾಸ್ತ್ರಿ ಜೋಡಿ ಬೇರ್ಪಟ್ಟರೆ ಟೀಮ್‌ ಇಂಡಿಯಾಗೆ ಅಪಾಯವಂತೆ!ಕೊಹ್ಲಿ-ಶಾಸ್ತ್ರಿ ಜೋಡಿ ಬೇರ್ಪಟ್ಟರೆ ಟೀಮ್‌ ಇಂಡಿಯಾಗೆ ಅಪಾಯವಂತೆ!

ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಎಂಟನೇ ಆವೃತ್ತಿಯ ಕರ್ನಾಟಕ ಪ್ರೀಮಿಯರ್‌ ಲೀಗ್‌ ಟೂರ್ನಿಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಟೂರ್ನಿಯ ಪ್ರಚಾರ ರಾಯಭಾರಿ ಆಗಿರುವ ನಟಿ ರಾಗಿಣಿ ದ್ವಿವೇದಿ ಹಾಗೂ ಮಾಜಿ ಅಂತಾರಾಷ್ಟ್ರೀಯ ಕ್ರಿಕೆಟರ್‌ ವೆಂಕಟೇಶ್‌ ಪ್ರಸಾದ್‌, ಕೆಎಸ್‌ಸಿಎ ವಕ್ತಾರ ವಿನಯ್‌ ಮೃತ್ಯುಂಜಯ ಹಾಗೂ ಸಹಾಯಕ ಕಾರ್ಯದರ್ಶಿ ಸಂತೋಷ್‌ ಮೆನನ್‌ ಹಾಜರಿದ್ದರು.

ಆಗಸ್ಟ್‌ 16ರಂದು ಬೆಂಗಳೂರಿನಲ್ಲಿ ಆರಂಭವಾಗಲಿರುವ ಟೂರ್ನಿಗೆ ಎಂ. ಚಿನ್ನಸ್ವಾಮಿ ಕ್ರೀಡಾಂಗಣ 5 ದಿನಗಳ ಕಾಲ ಆತಿಥ್ಯ ವಹಿಸಲಿದೆ. ಬಳಿಕ ಹುಬ್ಬಳಿಯ ರಾಜಾನಗರದಲ್ಲಿರುವ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ಆ.22ರಿಂದ ಲೀಗ್‌ ಪಂದ್ಯಗಳು ನಡೆಯಲಿದ್ದು, ಆ.21ರಿಂದ ಸೆಪ್ಟೆಂಬರ್‌ 1ರವರೆಗೆ ಮೈಸೂರಿನಲ್ಲಿ ಪಂದ್ಯಗಳು ಜರುಗಲಿವೆ. ಆಗಸ್ಟ್‌ 26ರಂದು ವಿರಾಮ ದಿನವಾಗಿದೆ.

ಟೀಮ್‌ ಇಂಡಿಯಾ ಫೀಲ್ಡಿಂಗ್‌ ಕೋಚ್‌ ಹುದ್ದೆಗೆ ಅರ್ಜಿ ಸಲ್ಲಿಸಿದ ದಿಗ್ಗಜಟೀಮ್‌ ಇಂಡಿಯಾ ಫೀಲ್ಡಿಂಗ್‌ ಕೋಚ್‌ ಹುದ್ದೆಗೆ ಅರ್ಜಿ ಸಲ್ಲಿಸಿದ ದಿಗ್ಗಜ

ಕಳೆದಬಾರಿಯಂತೆ ಈ ಬಾರಿಯೂ ಒಟ್ಟು 7 ಫ್ರಾಂಚೈಸಿ ತಂಡಗಳು ಪ್ರಸಸ್ತಿಗಾಗಿ ಪೈಪೋಟಿ ನಡೆಸಲಿವೆ. ಕಳೆದ ಆವೃತ್ತಿಯಲ್ಲಿ ಬೆಂಗಳೂರು ಬ್ಲಾಸ್ಟರ್ಸ್‌ ತಂಡವನ್ನು ಮಣಿಸಿದ ಬಿಜಾಪುರ್‌ ಬುಲ್ಸ್‌ ತಂಡ ಚಾಂಪಿಯನ್ಸ್‌ ಪಟ್ಟ ಅಲಂಕರಿಸಿತ್ತು. ಆಗಸ್ಟ್‌ 16ರಿಂದ ಸೆಪ್ಟೆಂಬರ್‌ 1ರವರೆಗೆ ನಡೆಯಲಿರುವ ಟೂರ್ನಿಯಲ್ಲಿ ಒಟ್ಟು 25 ಪಂದ್ಯಗಳು ನಡೆಯಲಿವೆ.

ಕೆಪಿಎಲ್‌ಗೂ ಪ್ಲೇ ಆಫ್ಸ್‌ ಪರಿಚಯ

ಕೆಪಿಎಲ್‌ಗೂ ಪ್ಲೇ ಆಫ್ಸ್‌ ಪರಿಚಯ

ಕೆಪಿಎಲ್‌ ಟೂರ್ನಿಯಲ್ಲೂ ಮಹತ್ವದ ಬದಲಾವಣೆ ತರಲಾಗಿದ್ದು, ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಮಾದರಿಯಲ್ಲಿ ಪ್ಲೇ ಆಫ್ಸ್‌ ಪರಿಚಯಿಸಲಾಗಿದೆ. ಇತ್ತೀಚೆಗೆ ಅಂತ್ಯಗೊಂಡ ಐಸಿಸಿ ಏಕದಿನ ಕ್ರಿಕೆಟ್‌ ವಿಶ್ವಕಪ್‌ನಲ್ಲೂ ಐಪಿಎಲ್‌ ಮಾದರಿಯ ಪ್ಲೇ ಅಫ್ಸ್‌ ಪರಿಚಯಿದ ಬೇಕು ಎಂದು ಕೂಗು ಕೇಳಿಬಂದಿತ್ತು. ಇದರ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಕೆಎಸ್‌ಸಿಎ, 8ನೇ ಆವೃತ್ತಿಯ ಕೆಪಿಎಲ್‌ಗೆ ಎಲಿಮಿನೇಟರ್‌ ಮತ್ತು ಕ್ವಾಲಿಫೈಯರ್‌ ಪಂದ್ಯಗಳನ್ನು ಒಳಗೊಂಡ ಪ್ಲೇ ಆಫ್ಸ್‌ ಪರಿಚಯಿಸಲಾಗಿದೆ. "ಈ ಬಾರಿ ಎಲಿಮಿನೇಟರ್‌ ಮತ್ತು ಕ್ವಾಲಿಫೈಯರ್‌ ಪಂದ್ಯಗಳನ್ನು ಪರಿಚಯಿಸಲಾಗಿದ್ದು, ಟೂರ್ನಿಯ ರೋಚಕತೆ ಮತ್ತಷ್ಟು ಹೆಚ್ಚಾಗಿದೆ," ಎಂದು ಕೆಎಸ್‌ಸಿಎ ವಕ್ತಾರ ವಿನಯ್‌ ಮೃತ್ಯುಂಜಯ ಮೈಖೇಲ್‌ ಕನ್ನಡಕ್ಕೆ ತಿಳಿಸಿದರು.

ಕ್ವಾಲಿಫೈಯರ್‌, ಎಲಿಮಿನೇಟರ್‌ ಹೇಗೆ?

ಕ್ವಾಲಿಫೈಯರ್‌, ಎಲಿಮಿನೇಟರ್‌ ಹೇಗೆ?

ಐಪಿಎಲ್‌ ಮಾದರಿಯಲ್ಲಿ ಲೀಗ್‌ ಹಂತದಲ್ಲಿ ಅಗ್ರ 2 ಸ್ಥಾನ ಪಡೆಯುವ ತಂಡಗಳು ಮೊದಲ ಕ್ವಾಲಿಫೈಯರ್‌ ಪಂದ್ಯದಲ್ಲಿ ಮುಖಾಮುಖಿಯಾಗಿ ಬಳಿಕ 3ನೇ ಮತ್ತು 4ನೇ ಸ್ಥಾನ ಪಡೆಯುವ ತಂಡಗಳು ಎಲಿಮಿನೇಟರ್‌ನಲ್ಲಿ ಸೆಣಸಲಿವೆ. ಎಲಿಮಿನೇಟರ್‌ನಲ್ಲಿ ಗೆದ್ದ ತಂಡ ಕ್ವಾಲಿಫೈಯರ್‌ 1ರಲ್ಲಿ ಸೋತ ತಂಡದ ವಿರುದ್ಧ ಕ್ವಾಲಿಫೈರ್‌ 2 ಪಂದ್ಯದಲ್ಲಿ ಫೈನಲ್‌ ಅರ್ಹತೆಗಾಗಿ ಸೆಣಸಲಿವೆ.

ಸ್ಪರ್ಧೆಯಲ್ಲಿರುವ ತಂಡಗಳು

ಸ್ಪರ್ಧೆಯಲ್ಲಿರುವ ತಂಡಗಳು

1.ಬಿಜಾಪುರ್‌ ಬುಲ್ಸ್‌
2. ಮೈಸೂರು ವಾರಿಯರ್ಸ್‌
3. ಬಳ್ಳಾರಿ ಟಸ್ಕರ್ಸ್‌
4. ಬೆಳಗಾವಿ ಪ್ಯಾಂಥರ್ಸ್‌
5. ಬೆಂಗಳೂರು ಬ್ಲಾಸ್ಟರ್ಸ್‌
6. ಶಿವಮೊಗ್ಗ ಲಯನ್ಸ್‌
7. ಹುಬ್ಬಳ್ಳಿ ಟೈಗರ್ಸ್‌

ಹಿಂದಿನ ಚಾಂಪಿಯನ್ಸ್‌

ಹಿಂದಿನ ಚಾಂಪಿಯನ್ಸ್‌

ವರ್ಷ ಚಾಂಪಿಯನ್ಸ್ ರನ್ನರ್ಸ್‌ಅಪ್‌
2009/10 ಪ್ರಾವಿಡೆಂಟ್‌ ಬೆಂಗಳೂರು ಬೆಳಗಾವಿ ಪ್ಯಾಂಥರ್ಸ್‌
2010/11 ಮಂಗಳೂರು ಯುನೈಟೆಡ್‌ ಪ್ರಾವಿಡೆಂಟ್‌ ಬೆಂಗಳೂರು
2014/15 ಮೈಸೂರು ವಾರಿಯರ್ಸ್‌ ಬೆಳಗಾವಿ ಪ್ಯಾಂಥರ್ಸ್‌
2015/16 ಬಿಜಾಪುರ್‌ ಬುಲ್ಸ್‌ ಹುಬ್ಬಳ್ಳಿ ಟೈಗರ್ಸ್‌
2016/17 ಬಳ್ಳಾರಿ ಟಸ್ಕರ್ಸ್‌ ಹುಬ್ಬಳ್ಳಿ ಟೈಗರ್ಸ್‌
2017/18 ಬೆಳಗಾವಿ ಪ್ಯಾಂಥರ್ಸ್‌ ಬಿಜಾಪುರ್‌ ಬುಲ್ಸ್‌
2018/19 ಬಿಜಾಪುರ್‌ ಬುಲ್ಸ್‌ ಬೆಂಗಳೂರು ಬ್ಲಾಸ್ಟರ್ಸ್‌

Story first published: Friday, July 26, 2019, 21:56 [IST]
Other articles published on Jul 26, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X