ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಪಂಜಾಬ್ ಕಿಂಗ್ಸ್ ವಿರುದ್ಧ ಕ್ರೀಡಾಸ್ಫೂರ್ತಿ ಮೆರೆದ ಕೃನಾಲ್ ಪಾಂಡ್ಯ: ವಿಡಿಯೋ

Krunal Pandya cancelled his appeal against KL Rahul run-out wonderful gesture

ಅಬುಧಾಬಿ: ಅಬುಧಾಬಿಯಲ್ಲಿ ಮಂಗಳವಾರ (ಸೆಪ್ಟೆಂಬರ್ 28) ನಡೆದ ಪಂಜಾಬ್ ಕಿಂಗ್ಸ್‌ ಮತ್ತು ಮುಂಬೈ ಇಂಡಿಯನ್ಸ್ ನಡುವಿನ ಪಂದ್ಯದಲ್ಲಿ ಮುಂಬೈ ಆಲ್ ರೌಂಡರ್ ಕೃನಾಲ್ ಪಾಂಡ್ಯ ಕ್ರೀಡಾಸ್ಫೂರ್ತಿಗಾಗಿ ಗಮನ ಸೆಳೆದಿದ್ದಾರೆ. ಪಂಜಾಬ್‌ ಬ್ಯಾಟ್ಸ್‌ಮನ್‌ ರನ್‌ ಔಟ್ ಆಗಿರುವ ಸಾಧ್ಯತೆಯಿದ್ದರೂ ಅಪೀಲ್ ರದ್ದುಗೊಳಿಸುವ ಮೂಲಕ ಕೃನಾಲ್ ಕ್ರೀಡಾ ಪ್ರೇಮಿಗಳ ಮನ ಗೆದ್ದಿದ್ದಾರೆ.

ಐಪಿಎಲ್ 2021: ಸೌಥೀ, ಮಾರ್ಗನ್ ಜೊತೆಗೆ ಅಶ್ವಿನ್ ಮಾತಿನ ಚಕಮಕಿ; ಡಿಕೆ ಮಧ್ಯ ಪ್ರವೇಶ: ವಿಡಿಯೋಐಪಿಎಲ್ 2021: ಸೌಥೀ, ಮಾರ್ಗನ್ ಜೊತೆಗೆ ಅಶ್ವಿನ್ ಮಾತಿನ ಚಕಮಕಿ; ಡಿಕೆ ಮಧ್ಯ ಪ್ರವೇಶ: ವಿಡಿಯೋ

ಘಟನೆ ನಡೆದಿದ್ದ ಪಂಜಾಬ್ ಕಿಂಗ್ಸ್‌ ಇನ್ನಿಂಗ್ಸ್‌ನಲ್ಲಿ ಕೃನಾಲ್ ಪಾಂಡ್ಯ ಅವರ 5.6ನೇ ಓವರ್‌ ವೇಳೆ. ಆಗ ಕ್ರಿಸ್ ಗೇಲ್ ಸ್ಟ್ರೈಕ್‌ನಲ್ಲಿದ್ದರು. ಗೇಲ್ ಬ್ಯಾಟ್ ತಾಗಿದ ಚೆಂಡು ನಾನ್ ಸ್ಟ್ರೈಕ್‌ನಲ್ಲಿದ್ದ ಕೆಎಲ್ ರಾಹುಲ್‌ಗೆ ಬಡಿಯಿತು. ಕೂಡಲೇ ಪಂಜಾಬ್‌ ಬ್ಯಾಟ್ಸ್‌ಮನ್‌ಗಳು ರನ್‌ಗೆ ಮುಂದಾದರು.

ಮುಂಬೈ ಇಂಡಿಯನ್ಸ್ vs ಪಂಜಾಬ್ ಕಿಂಗ್ಸ್, Live ಸ್ಕೋರ್‌

1
50864

ಈ ವೇಳೆ ಚೆಂಡು ಕಲೆಕ್ಟ್ ಮಾಡಿದ ಕೃನಾಲ್ ಚೆಂಡನ್ನು ವಿಕೆಟ್‌ಗೆ ತಾಗಿಸಿ ಬೇಲ್ಸ್ ಉರುಳಿಸಿದರು, ಬಳಿಕ ರನ್‌ಔಟ್‌ಗಾಗಿ ಅಪೀಲ್ ಮಾಡಿದರು. ಚೆಂಡು ರಾಹುಲ್‌ಗೆ ಬಡಿದಿದ್ದು ಅರಿವಾಗಿದ್ದರಿಂದ ಕೂಡಲೇ ತನ್ನ ರನ್‌ಔಟ್ ಅಪೀಲ್‌ ಅನ್ನು ಕೃನಾಲ್ ವಾಪಸ್ ಪಡೆದುಕೊಂಡರು. ಡಿಆರ್ಎಸ್ ಬೇಕಾಗಿಲ್ಲ ಎಂದು ಕೋರಿಕೊಂಡರು.

ದಿನೇಶ್ ಕಾರ್ತಿಕ್ ಮುಖಕ್ಕೆ ಬ್ಯಾಟ್ ಬೀಸಿದ ರಿಷಭ್ ಪಂತ್: ವಿಡಿಯೋದಿನೇಶ್ ಕಾರ್ತಿಕ್ ಮುಖಕ್ಕೆ ಬ್ಯಾಟ್ ಬೀಸಿದ ರಿಷಭ್ ಪಂತ್: ವಿಡಿಯೋ

ಕೃನಾಲ್ ನಡೆಗೆ ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ ಕೂಡ ನಕ್ಕು ಪ್ರತಿಕ್ರಿಯಿಸಿದರು. ಆಚೆ ಸ್ಟ್ರೈಕ್‌ನತ್ತ ಹೋಗಿದ್ದ ರಾಹುಲ್ ತನಗೇನೂ ಆಗಿಲ್ಲ, ನಾನು ಚೆನ್ನಾಗಿದ್ದೇನೆ ಎಂದರಲ್ಲದೆ ಕ್ರೀಡಾಸ್ಫೂರ್ತಿ ತೋರಿಸಿದ್ದಕ್ಕಾಗಿ ಕೃನಾಲ್ ಅವರತ್ತ ಥಂಪ್ಸ್‌ ಉಪ್‌ ತೋರಿಸಿದರು. ಅಷ್ಟೇ ಅಲ್ಲ, ಕಾಮೆಂಟರಿ ಮಾಡುತ್ತಿದ್ದವರೂ ಕೃನಾಲ್ ನಡೆಗೆ ಮೆಚ್ಚುಗೆ ಸೂಚಿಸಿದರು.

ಮುಂಬೈ ಇಂಡಿಯನ್ಸ್ ಪ್ಲೇಯಿಂಗ್ XI
ರೋಹಿತ್ ಶರ್ಮಾ (ಸಿ), ಕ್ವಿಂಟನ್ ಡಿ ಕಾಕ್ (ವಿಕೆ), ಸೂರ್ಯಕುಮಾರ್ ಯಾದವ್, ಸೌರಭ್ ತಿವಾರಿ, ಕೃನಾಲ್ ಪಾಂಡ್ಯ, ಹಾರ್ದಿಕ್ ಪಾಂಡ್ಯ, ಕೀರನ್ ಪೊಲ್ಲಾರ್ಡ್, ನಾಥನ್ ಕೌಲ್ಟರ್-ನೈಲ್, ರಾಹುಲ್ ಚಾಹರ್, ಜಸ್ಪ್ರೀತ್ ಬೂಮ್ರಾ, ಟ್ರೆಂಟ್ ಬೌಲ್ಟ್.

ಪಂಜಾಬ್ ಕಿಂಗ್ಸ್ ಪ್ಲೇಯಿಂಗ್ XI
ಕೆಎಲ್ ರಾಹುಲ್ (c & wk), ಮನ್ ದೀಪ್ ಸಿಂಗ್, ಕ್ರಿಸ್ ಗೇಲ್, ಐಡೆನ್ ಮಾರ್ಕ್ರಮ್, ನಿಕೋಲಸ್ ಪೂರನ್, ದೀಪಕ್ ಹೂಡಾ, ಹರಪ್ರೀತ್ ಬ್ರಾರ್, ನಾಥನ್ ಎಲ್ಲಿಸ್, ಮೊಹಮ್ಮದ್ ಶಮಿ, ರವಿ ಬಿಷ್ಣೋಯ್, ಅರ್ಷದೀಪ್ ಸಿಂಗ್.

Story first published: Wednesday, September 29, 2021, 10:29 [IST]
Other articles published on Sep 29, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X