ಕೋವಿಡ್-19 ಕೇಂದ್ರಗಳಿಗೆ ಆಮ್ಲಜನಕದ ಸಾಂದ್ರಕಗಳ ಕಳುಹಿಸಿದ ಪಾಂಡ್ಯ ಬ್ರದರ್ಸ್

ನವದೆಹಲಿ: ಟೀಮ್ ಇಂಡಿಯಾದ ಆಲ್ ರೌಂಡರ್‌ಗಳಾದ ಹಾರ್ದಿಕ್ ಪಾಂಡ್ಯ ಮತ್ತು ಕೃನಾಲ್ ಪಾಂಡ್ಯ ಕೋವಿಡ್--19 ವಿರುದ್ಧದ ಪರಿಹಾರಕ್ಕೆ ನೆರವಾಗಿದ್ದಾರೆ. ಮೇ 24ರ ಸೋಮವಾರ ಪಾಂಡ್ಯ ಬ್ರದರ್ಸ್ ಕೋವಿಡ್-19 ಕೇಂದ್ರಗಳಿಗೆ ಆಮ್ಲಜನಕದ ಹೊಸ ಸಾಂದ್ರಕಗಳನ್ನು ಕಳುಹಿಸಿಕೊಟ್ಟಿರುವುದಾಗಿ ತಿಳಿಸಿದ್ದಾರೆ.

ಚೇತರಿಸಿಕೊಳ್ಳುತ್ತಿದ್ದಾರೆ ಕೆಎಲ್ ರಾಹುಲ್, ಇಂಗ್ಲೆಂಡ್ ಪ್ರವಾಸಕ್ಕೆ ಸಿದ್ಧತೆಚೇತರಿಸಿಕೊಳ್ಳುತ್ತಿದ್ದಾರೆ ಕೆಎಲ್ ರಾಹುಲ್, ಇಂಗ್ಲೆಂಡ್ ಪ್ರವಾಸಕ್ಕೆ ಸಿದ್ಧತೆ

ಟ್ವೀಟ್ ಮಾಡಿರುವ ಹಾರ್ದಿಕ್ ಪಾಂಡ್ಯ ಅವರ ಅಣ್ಣ ಕೃನಾಲ್ ಪಾಂಡ್ಯ, 'ಸೋಂಕಿತರು ಶೀಘ್ರ ಗುಣಮುಖರಾಗಲಿ ಎಂಬ ತುಂಬು ಮನದ ಹಾರೈಕೆಯೊಂದಿಗೆ ಕೋವಿಡ್-19 ಕೇಂದ್ರಗಳಿಗೆ ಹೊಸ ಆಮ್ಲಜನಕ ಸಾಂದ್ರಕಗಳನ್ನು ಕಳುಹಿಸಿಕೊಡುತ್ತಿದ್ದೇವೆ' ಎಂದು ಬರೆದುಕೊಂಡಿದ್ದಾರೆ.

ಕೃನಾಲ್ ಟ್ವೀಟ್‌ಗೆ ಹಾರ್ದಿಕ್ ಪ್ರತಿಕ್ರಿಯಿಸಿದ್ದಾರೆ. 'ನಾವು ಕಠಿಣ ಯುದ್ದದ ಮಧ್ಯಭಾಗದಲ್ಲಿದ್ದೇವೆ. ನಾವೆಲ್ಲರೂ ಜೊತೆಯಾಗಿ ಹೋರಾಡಿದರೆ ನಾವೀ ಯುದ್ಧವನ್ನು ಗೆಲ್ಲಬಹುದು' ಎಂದು ಹಾರ್ದಿಕ್ ಬರೆದುಕೊಂಡಿದ್ದಾರೆ. ಇದಕ್ಕೂ ಮುನ್ನ ಹಾರ್ದಿಕ್ ಕುಟುಂಬ 200 ಆಮ್ಲಜನಕದ ಸಾಂದ್ರಕಗಳನ್ನು ಕೊಡುಗೆಯಾಗಿ ನೀಡಿತ್ತು.

ಕೊವಿಡ್ ವಿರುದ್ಧದ ಹೋರಾಟಕ್ಕೆ ಆರ್‌ಸಿಬಿ ಕಡೆಯಿಂದ 45 ಕೋಟಿ ದೇಣಿಗೆಕೊವಿಡ್ ವಿರುದ್ಧದ ಹೋರಾಟಕ್ಕೆ ಆರ್‌ಸಿಬಿ ಕಡೆಯಿಂದ 45 ಕೋಟಿ ದೇಣಿಗೆ

ನಾನು, ನನ್ನ ತಮ್ಮ ಹಾರ್ದಿಕ್ ಮತ್ತು ನಮ್ಮ ಇಡೀ ಕುಟುಂಬ ಕೋವಿಡ್ ವಿರುದ್ಧದ ಹೋರಾಟಕ್ಕೆ ನಮ್ಮ ಕೈಲಾದ ನೆರವು ನೀಡುತ್ತಿದ್ದೇವೆ ಎಂದು ಕೃನಾಲ್ ಹೇಳಿದ್ದಾರೆ. ಬಿಸಿಸಿಐ ಇತ್ತೀಚೆಗೆ ಇಂಗ್ಲೆಂಡ್ ಪ್ರವಾಸಕ್ಕೆ ತಂಡ ಪ್ರಕಟಿಸಿದ್ದು, ತಂಡದಲ್ಲಿ ಪ್ಯಾಂಡ್ಯ ಸಹೋದದರು ಕಾಣಿಸಿಕೊಂಡಿಲ್ಲ.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Monday, May 24, 2021, 17:07 [IST]
Other articles published on May 24, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X