ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

3 ತಿಂಗಳ ಬಳಿಕ ಮೈದಾನಕ್ಕಿಳಿದ ಆಲ್ ರೌಂಡರ್ ಕೃನಾಲ್ ಪಾಂಡ್ಯ

Krunal Pandya resumes outdoor training after 3 months

ವಡೋದರಾ, ಜೂನ್ 30: ಕೊರೊನಾವೈರಸ್ ಲಾಕ್‌ಡೌನ್‌ನಿಂದಾಗಿ ಮೂರು ತಿಂಗಳ ಕಾಲ ಮನೆಯ ನಾಲ್ಕು ಗೋಡೆಗಳ ಮಧ್ಯೆ ಬಂಧಿಯಾಗಿದ್ದ ಟೀಮ್ ಇಂಡಿಯಾದ ಆಲ್ ರೌಂಡರ್ ಕೃನಾಲ್ ಪಾಂಡ್ಯ ಮತ್ತೆ ಮೈದಾನಕ್ಕಿಳಿದಿದ್ದಾರೆ. ಮಂಗಳವಾರ (ಜೂನ್ 30) ಪಾಂಡ್ಯ ಹೊರಾಂಗಣ ಅಭ್ಯಾಸ ಪುನರಾರಂಭಿಸಿದ್ದಾರೆ.

ಭಾರತ-ಪಾಕ್ ಈ ಪಂದ್ಯಗಳಲ್ಲಿ ನಂಬಲಾಗದ ಕಾಕತಾಳೀಯ ಸಂಗತಿಗಳು ನಡೆದಿತ್ತು!ಭಾರತ-ಪಾಕ್ ಈ ಪಂದ್ಯಗಳಲ್ಲಿ ನಂಬಲಾಗದ ಕಾಕತಾಳೀಯ ಸಂಗತಿಗಳು ನಡೆದಿತ್ತು!

ದೇಸಿ ಕ್ರಿಕೆಟ್‌ನಲ್ಲಿ ಬರೋಡಾ ತಂಡದಲ್ಲಿ ಆಡುವ ಕೃನಾಲ್, ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಅವರ ಅಣ್ಣ. ಒಟ್ಟು 18 ಟಿ20ಐ ಪಂದ್ಯಗಳಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದಾರೆ. 'ಮೈದಾನದಲ್ಲಿ ಓಡಿ ಅಭ್ಯಾಸ ನಡೆಸುವ ಮೂಲಕ ನಾನು ನನ್ನ ದಿನವನ್ನು ಆರಂಭಿಸಿದ್ದೇನೆ. ಮತ್ತೆ ಹೊರ ಬಂದಿರುವುದು ಖುಷಿ ನೀಡಿದೆ,' ಎಂದು ಕೃನಾಲ್ ಟ್ವೀಟ್ ಮಾಡಿದ್ದಾರೆ.

 ರೋಹಿತ್ ಶರ್ಮಾ ಬಗ್ಗೆ ಬಹುದೊಡ್ಡ ನಿರೀಕ್ಷೆ ವ್ಯಕ್ತಪಡಿಸಿದ ಕ್ರಿಸ್ ಶ್ರೀಕಾಂತ್ ರೋಹಿತ್ ಶರ್ಮಾ ಬಗ್ಗೆ ಬಹುದೊಡ್ಡ ನಿರೀಕ್ಷೆ ವ್ಯಕ್ತಪಡಿಸಿದ ಕ್ರಿಸ್ ಶ್ರೀಕಾಂತ್

ಎಲ್ಲಾ ಭಾರತೀಯ ಕ್ರಿಕೆಟಿಗರ ಹಾಗೆ ಕೃನಾಲ್ ಪಾಂಡ್ಯ ಕೂಡ ವಡೋದರದ ತನ್ನ ನಿವಾಸದಲ್ಲಿ ಮಾರ್ಚ್ 25ರಿಂದಲೂ ಕಾಲ ಕಳೆದಿದ್ದರು. ಕೋವಿಡ್-19ನಿಂದಾಗಿ ಭಾರತ ದೇಶದಾದ್ಯಂತ ಲಾಕ್‌ಡೌನ್ ಜಾರಿಯಾಗಿದ್ದರಿಂದ ಕೃನಾಲ್‌ಗೂ ಮೈದಾನಕ್ಕಿಳಿಯಲು ಆಗಿರಲಿಲ್ಲ.

ತೆಂಡೂಲ್ಕರ್ ಪುತ್ರ ಅರ್ಜುನ್ ವಿರುದ್ಧ ನಂಜು ಕಾರಿದ್ದ ನೆಟ್ಟಿಗರ ಬಣ್ಣ ಬಯಲು!ತೆಂಡೂಲ್ಕರ್ ಪುತ್ರ ಅರ್ಜುನ್ ವಿರುದ್ಧ ನಂಜು ಕಾರಿದ್ದ ನೆಟ್ಟಿಗರ ಬಣ್ಣ ಬಯಲು!

ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾದಿಂದ ಮಾನ್ಯತೆ ಪಡೆದ ಆಟಗಾರರಲ್ಲಿ, ಕೊರೊನಾ ಬಳಿಕ ಮೈದಾನಕ್ಕಿಳಿದ ಮೊದಲ ಆಟಗಾರನಾಗಿ ಭಾರತದ ವೇಗಿ ಶಾರ್ದೂಲ್ ಠಾಕೂರ್ ಗುರುತಿಸಿಕೊಂಡಿದ್ದರು. ಕಳೆದ ತಿಂಗಳು ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯಲ್ಲಿನ ಬೋಯ್ಸರ್ ಮೈದಾನದಲ್ಲಿ ಶಾರ್ದೂಲ್ ನೆಟ್‌ನಲ್ಲಿ ಬೌಲಿಂಗ್ ಅಭ್ಯಾಸ ನಡೆಸಿದ್ದರು.

Story first published: Wednesday, July 1, 2020, 10:16 [IST]
Other articles published on Jul 1, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X