ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮಳೆಯಿಂದಾಗಿ ರದ್ದಾಗಿದ್ದ ಭಾರತ-ದಕ್ಷಿಣ ಆಫ್ರಿಕಾ 5ನೇ ಟಿ20 ಪಂದ್ಯದ ಟಿಕೆಟ್ ಹಣ ಶೇ.50ರಷ್ಟು ಮರುಪಾವತಿ: ಎಂದು ಮತ್ತು ಎಲ್ಲಿ?

KSCA match tickets refund

ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ಜೂನ್ 19ರಂದು ನಡೆದ ಭಾರತ- ದಕ್ಷಿಣ ಆಫ್ರಿಕಾ ಐದನೇ ಹಾಗೂ ಅಂತಿಮ ಟಿ20 ಪಂದ್ಯ ಮಳೆಯಿಂದಾಗಿ ಯಾವುದೇ ಫಲಿತಾಂಶವಿಲ್ಲದೆ ಅಂತ್ಯಗೊಂಡಿತು. ಪರಿಣಾಮ ಐದು ಪಂದ್ಯಗಳ ಟಿ20 ಸರಣಿಯು 2-2ರಿಂದ ಸಮಬಲಗೊಂಡಿದ್ದು, ಅಭಿಮಾನಿಗಳು ನಿರಾಸೆಗೊಂಡರು.

ಹೀಗಾಗಿ ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ (ಕೆಎಸ್‌ಸಿಎ) ಕೇವಲ ಮೂರು ಓವರ್‌ಗಳಿಗೆ ಪಂದ್ಯ ರದ್ದುಗೊಂಡ ಪರಿಣಾಮ ವಿಷಾದ ವ್ಯಕ್ತಪಡಿಸಿತು. ಜೊತೆಗೆ ನುಡಿದಂತೆ ನಡೆಯಲು ಮುಂದಾಗಿದೆ. ನಿಯಮಗಳು ಮತ್ತು ನಿಬಂಧನೆಗಳ ಪ್ರಕಾರ ಒಂದು ಎಸೆತ ಆಗಿದ್ದರೂ ಸಹ ಮರುಪಾವತಿಯ ಪ್ರಶ್ನೆ ಇರುವುದಿಲ್ಲ. ಆದಾಗ್ಯೂ ಕೆಎಸ್‌ಸಿಎ ಕ್ರಿಕೆಟ್ ಅಭಿಮಾನಿಗಳಿಗೆ ಕೊಡುಗೆ ನೀಡಲು ಆಸೆ ವ್ಯಕ್ತಪಡಿಸಿದೆ. ಎಲ್ಲಿ ಮತ್ತು ಹೇಗೆ ಎಂದು ಈ ಕೆಳಗೆ ತಿಳಿಯಿರಿ

ಟಿಕೆಟ್‌ನ ಶೇಕಡಾ 50ರಷ್ಟು ಮೊತ್ತ ಮರುಪಾವತಿ

ಟಿಕೆಟ್‌ನ ಶೇಕಡಾ 50ರಷ್ಟು ಮೊತ್ತ ಮರುಪಾವತಿ

ಪಂದ್ಯದಲ್ಲಿ ಪಾವತಿಸಿದ ಎಲ್ಲಾ ಟಿಕೆಟ್‌ಗಳಿಗೆ ಶೇಕಡಾ 50ರಷ್ಟು ಮೊತ್ತವನ್ನು ಮರುಪಾವತಿಸಲು ಕೆಎಸ್‌ಸಿಎ ನಿರ್ಧರಿಸಿದೆ. ಜುಲೈ 1, 2, 3 (ಶುಕ್ರವಾರ, ಶನಿವಾರ ಮತ್ತು ಭಾನುವಾರ) ವಿವಿಧ ಕೆಎಸ್‌ಸಿಎ ಗೇಟ್ ಮೂಲಕ ಟಿಕೆಟ್ ಹಣವನ್ನು ಹಿಂದಿರುಗಿಸಲಾಗುತ್ತದೆ. ಆದ್ರೆ ಟಿಕೆಟ್‌ಗಳನ್ನು ಕಳೆದುಕೊಳ್ಳದೆ ಇರುವ ಎಲ್ಲಾ ಪಾವತಿಸಿದ ಟಿಕೆಟ್ ಹೊಂದಿರುವವರು ಮರುಪಾವತಿಯನ್ನು ಪಡೆಯಲು ಸಾಧ್ಯವಿದೆ.

ಕ್ರಿಕೆಟಿಗರ ಸೆಕೆಂಡ್ ಇನ್ನಿಂಗ್ಸ್ ಸವಾಲುಗಳು: ನಿವೃತ್ತಿಯ ಬಳಿಕ ಕ್ರಿಕೆಟಿಗರ ಮುಂದಿರುವ ಆಯ್ಕೆಗಳೇನು?

ಯಾವ ಟಿಕೆಟ್‌ ಹಣವನ್ನ ಯಾವ ಗೇಟ್‌ನಲ್ಲಿ ಮರುಪಾವತಿ?

ಯಾವ ಟಿಕೆಟ್‌ ಹಣವನ್ನ ಯಾವ ಗೇಟ್‌ನಲ್ಲಿ ಮರುಪಾವತಿ?

1. G Upper/ G Lower 1 & 2 (Rs 750): ಗೇಟ್ ನಂಬರ್ 5, ಕಬ್ಬನ್ ರೋಡ್‌
2. A & B Upper And B Lower (Rs 2000): ಗೇಟ್ ನಂಬರ್ 2, ಕಬ್ಬನ್ ರೋಡ್‌
3. D Corporate (Rs 4000): ಗೇಟ್ ನಂಬರ್ 18, ಕ್ವೀನ್ಸ್‌ ರೋಡ್
4. N Stand (Rs 5000): ಗೇಟ್ ನಂಬರ್ 18, ಕ್ವೀನ್ಸ್‌ ರೋಡ್
5. E Excutive (Rs 6000): ಗೇಟ್ ನಂಬರ್ 18, ಕ್ವೀನ್ಸ್‌ ರೋಡ್

ಆನ್‌ಲೈನ್ ಟಿಕೆಟ್ ಮಾರಾಟ
6. Grand Terrace (Rs 6000): ಗೇಟ್ ನಂಬರ್ 18, ಕ್ವೀನ್ಸ್‌ ರೋಡ್
7. P Corporate (Rs 10,000): ಗೇಟ್ ನಂಬರ್ 19, ಕ್ವೀನ್ಸ್‌ ರೋಡ್
8. Pavillion Terrace (Rs 15,000): ಗೇಟ್ ನಂಬರ್ 19, ಕ್ವೀನ್ಸ್‌ ರೋಡ್
9. P2 Stand (Rs 20,000): ಗೇಟ್ ನಂಬರ್ 19, ಕ್ವೀನ್ಸ್‌ ರೋಡ್

ಟೆಸ್ಟ್ ಕ್ರಿಕೆಟ್‌ನ 4ನೇ ಇನ್ನಿಂಗ್ಸ್‌ನಲ್ಲಿ ವೇಗದ ಶತಕ ಸಿಡಿಸಿದ ಟಾಪ್ 3 ಬ್ಯಾಟ್ಸ್‌ಮನ್‌ಗಳು

ಮಳೆಯಿಂದಾಗಿ ರದ್ದುಗೊಂಡಿದ್ದ ಅಂತಿಮ ಟಿ20 ಪಂದ್ಯ

ಮಳೆಯಿಂದಾಗಿ ರದ್ದುಗೊಂಡಿದ್ದ ಅಂತಿಮ ಟಿ20 ಪಂದ್ಯ

ಭಾರತ-ದಕ್ಷಿಣ ಆಫ್ರಿಕಾ ಅಂತಿಮ ಟಿ20 ಪಂದ್ಯದಲ್ಲಿ ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ಫೀಲ್ಡಿಂಗ್ ಆಯ್ದುಕೊಂಡಿದ್ದು, ಟೀಂ ಇಂಡಿಯಾವನ್ನ ಬ್ಯಾಟಿಂಗ್‌ಗೆ ಆಹ್ವಾನಿಸಿತು. ಮಳೆಯಿಂದಾಗಿ ಪಂದ್ಯ ನಿಧಾನಗತಿಯಲ್ಲಿ ಪ್ರಾರಂಭಗೊಂಡು ಒಂದು ಓವರ್ ಕಡಿತಗೊಂಡು 19 ಓವರ್‌ಗೆ ನಿಗದಿಯಾಯಿತು. ಆದ್ರೆ ಟೀಂ ಇಂಡಿಯಾ 3.3 ಓವರ್‌ಗಳಿಗೆ 2 ವಿಕೆಟ್ ನಷ್ಟಕ್ಕೆ 28 ರನ್ ಕಲೆಹಾಕಿದ್ದ ವಳೆ ಮಳೆ ನಿಲ್ಲದ ಪರಿಣಾಮ ಪಂದ್ಯವನ್ನ ರದ್ದುಗೊಳಿಸಲಾಯಿತು. ಪರಿಣಾಮ ಐದು ಪಂದ್ಯಗಳ ಟಿ20 ಸರಣಿ 2-2ರಿಂದ ಸಮಬಲಗೊಂಡಿತು.

Story first published: Tuesday, June 28, 2022, 10:40 [IST]
Other articles published on Jun 28, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X