ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಲಂಕಾ ವಿರುದ್ಧದ ಮೂರು ಏಕದಿನ ಪಂದ್ಯದಲ್ಲೂ ಆ ಜೋಡಿ ಆಡಬೇಕು: ವಿವಿಎಸ್ ಲಕ್ಷ್ಮಣ್

Kuldeep Yadav and Chahal should playing together in ODI series against Sri Lanka

ಶ್ರೀಲಂಕಾ ವಿರುದ್ಧದ ಸೀಮಿತ ಓವರ್‌ಗಳ ಸರಣಿ ಈಗ ಎಲ್ಲರಲ್ಲೂ ಕುತೂಹಲ ಮೂಡಿಸಿದೆ. ಶಿಖರ್ ಧವನ್ ನೇತೃತ್ವದ ತಂಡ ಯಾವ ರೀತಿಯ ಪ್ರದರ್ಶನ ಲಂಕಾ ವಿರುದ್ಧ ನೀಡಲಿದೆ ಎಂಬುದು ಎಲ್ಲರ ಕುತೂಹಲವಾಗಿದೆ. ಟೀಮ್ ಇಂಡಿಯಾ ಮಾಜಿ ಕ್ರಿಕೆಟಿಗ ವಿವಿಎಸ್ ಲಕ್ಷ್ಮಣ್ ಈ ಸರಣಿಯ ಬಗ್ಗೆ ಪ್ರತಿಕ್ರಿಯೆ ನೀಡಿದ್ದು ಏಕದಿನ ಸರಣಿಯ ಎಲ್ಲಾ ಪಂದ್ಯಗಳಲ್ಲಿಯೂ ಟೀಮ್ ಇಂಡಿಯಾದ ಒಂದು ಜೋಡಿ ಜೊತೆಯಾಗಿ ಕಣಕ್ಕಿಳಿಯುವುದನ್ನು ನೋಡಲು ಬಯಸುತ್ತೇನೆ ಎಂದಿದ್ದಾರೆ.

ಭಾರತ ಕ್ರಿಕೆಟ್‌ನ ಸ್ಟೈಲಿಶ್ ಆಟಗಾರ ವಿವಿಎಸ್ ಲಕ್ಷ್ಮಣ್ ಹೆಸರಿಸಿದ ಆ ಜೋಡಿ ಯುಜಯವೇಂದ್ರ ಚಾಹಲ್ ಹಾಗೂ ಕುಲ್‌ದೀಪ್ ಯಾದವ್. ಶ್ರೀಲಂಕಾದಲ್ಲಿ ನಡೆಯುವ ಏಕದಿನ ಸರಣಿಯಲ್ಲಿ ಈ ಜೋಡಿ ಮಹತ್ವದ ಪಾತ್ರವಹಿಸುವ ಸಾಧ್ಯತೆಯಿದೆ ಎಂದಿದ್ದಾರೆ ಲಕ್ಷ್ಮಣ್.

"ವಿರಾಟ್ ಕೊಹ್ಲಿ ನಾಯಕತ್ವದ ಭವಿಷ್ಯಕ್ಕೆ ಟಿ20 ವಿಶ್ವಕಪ್ ನಿರ್ಣಾಯಕ"

ಶ್ರೀಲಂಕಾ ವಿರುದ್ಧದ ಮೂರು ಏಕದಿನ ಹಾಗೂ ಮೂರು ಟಿ20 ಪಂದ್ಯಗಳ ಸರಣಿಗೆ ಈಗಾಗಲೇ 20 ಆಟಗಾರರ ತಂಡ ಶ್ರೀಲಂಕಾಗೆ ಪ್ರಯಾಣಿಸಿದೆ. ಜುಲೈ 13ರಿಂದ ಏಕದಿನ ಸರಣಿ ಆರಂಭವಾಗಲಿದೆ. ಈ ಪ್ರವಾಸದಲ್ಲಿ ಆರು ಮಂದಿ ಸ್ಪಿನ್ನರ್‌ಗಳು ಅವಕಾಶವನ್ನು ಪಡೆದುಕೊಂಡಿದ್ದು ಕುಲ್‌ದೀಪ್ ಯಾದವ್ ಹಾಗೂ ಯುಜುವೇಂದ್ರ ಚಾಹಲ್ ಜೋಡಿ ಕೂಡ ಇದರಲ್ಲಿ ಒಂದಾಗಿದೆ. ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ನಡೆದ ಚರ್ಚೆಯಲ್ಲಿ ಈ ಇಬ್ಬರು ಸ್ಪಿನ್ನರ್‌ಗಳು ಏಕದಿನ ಸರಣಿಯ ಎಲ್ಲಾ ಪಂದ್ಯದಲ್ಲಿ ಭಾರತ ತಂಡದ ಪರವಾಗಿ ಕಣಕ್ಕಿಳಿಯಬೇಕು ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

"ತಂಡದಲ್ಲಿ 6 ಮಂದಿ ಸ್ಪಿನ್ನರ್‌ಗಳು ಇದ್ದಾರೆ. ಆದರೆ ಏಕದಿನ ಸರಣಿಯ ಮೂರು ಪಂದ್ಯಗಳಲ್ಲಿಯೂ ನಾನು ಈ ಜೊಡಿ ಬೌಲಿಂಗ್ ದಾಳಿಗೆ ಇಳಿಯುವುದನ್ನು ನೀಡಲು ಬಯಸುತ್ತೇನೆ. ಏಕದಿನ ಸರಣಿಯಲ್ಲಿ ಎಲ್ಲಾ ಬೌಲರ್‌ಗಳು ಕೂಡ 10 ಓವರ್‌ಗಳನ್ನು ಎಸೆಯಲು ಅವಕಾಶವನ್ನು ಪಡೆಯುತ್ತಾರೆ. ಹೆಚ್ಚು ಓವರ್ ಎಸೆಯಲು ಅವಕಾಶ ಪಡೆಯುತ್ತಿದ್ದರೆ ನೀವು ಹೆಚ್ಚು ಯಶಸ್ಸು ಗಳಿಸಲು ಕೂಡ ಅವಕಾಶವನ್ನು ಪಡೆಯುತ್ತೀರಿ. ಈ ಮೂಲಕ ಅವರು ತಮ್ಮ ಆತ್ಮವಿಶ್ವಾಸವನ್ನು ಮರಳಿಗಳಿಸಲು ಸಾಧ್ಯವಿದೆ. ವಿಶೇಷವಾಗಿ ಕುಲ್‌ದೀಪ್ ಯಾದವ್" ಎಂದು ಲಕ್ಷ್ಮಣ್ ಪ್ರತಿಕ್ರಿಯೆಯನ್ನು ನೀಡಿದ್ದಾರೆ.

"ತಂಡದಲ್ಲಿರುವ ಆಟಗಾರರಿಗೆ ಮಾಡುವ ಅವಮಾನ": ಪೃಥ್ವಿ ಶಾ ಸೇರ್ಪಡೆಗೆ ಕಪಿಲ್ ದೇವ್ ವಿರೋಧ

IPL ಗೆ ಕೈ ಕೊಟ್ಟ ಸ್ಟೀವ್ ಸ್ಮಿತ್ | Steve Smith | Oneindia Kannada

"ಚಾಹಲ್ ಅತ್ಯಂತ ಯಶಸ್ವೀ ಹಾಗೂ ಅನುಭವಿ ಬೌಲರ್ ಎಂಬುದು ನಮಗೆಲ್ಲರಿಗೂ ತಿಳಿದಿದೆ. ಆತ ತುಂಬಾ ಆತ್ಮವಿಶ್ವಾಸವನ್ನು ಹೊಂದಿದ ಆಟಗಾರನಾಗಿದ್ದು ಟಿ20 ವಿಶ್ವಕೊ್ ದೃಷ್ಟಿಯಿಂದ ಟೀಮ್ ಇಂಡಿಯಾದ ಪ್ರಮುಖ ಸದಸ್ಯ. ಆದರೆ ಕುಲ್‌ದೀಪ್ ತಮ್ಮ ಆತ್ಮವಿಶ್ವಾಸವನ್ನು ಮರಳಿಗಳಿಸಬೇಕಾದ ಅನಿವಾರ್ಯತೆಯಲ್ಲಿದ್ದಾರೆ" ಎಂದು ಲಕ್ಷ್ಮಣ್ ಹೇಳಿದ್ದಾರೆ.

Story first published: Sunday, July 4, 2021, 14:12 [IST]
Other articles published on Jul 4, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X