ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

2ನೇ ಟೆಸ್ಟ್ ಪಂದ್ಯದಲ್ಲಿ ಕುಲ್‌ದೀಪ್ ಸ್ಥಾನ ಪಡೆಯುವ ವಿಶ್ವಾಸ ವ್ಯಕ್ತಪಡಿಸಿದ ಗವಾಸ್ಕರ್

Kuldeep Yadav could be include in for 2nd Test in place of Shahbaz Nadeem- Sunil Gavaskar

ಸುದೀರ್ಘ ಕಾಲದಿಂದ ಬೆಂಚ್ ಕಾದಿದ್ದ ಕುಲ್‌ದೀಪ್ ಯಾದವ್ ಮುಂದಿನ ಟೆಸ್ಟ್ ಪಂದ್ಯದಲ್ಲಿ ಆಡುವ ಅವಕಾಶ ಪಡೆಯಬಹುದು ಎಂದು ಕ್ರಿಕೆಟ್ ದಿಗ್ಗಜ ಸುನಿಲ್ ಗವಾಸ್ಕರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್‌ನ ಸೋಲಿನ ಬಳಿಕ ಸುನಿಲ್ ಗವಾಸ್ಕರ್ ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

ಟೀಮ್ ಇಂಡಿಯಾದ ಎಡಗೈ ಸ್ಪಿನ್ನರ್ ಕುಲ್‌ದೀಪ್ ಯಾದವ್ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಅವಕಾಶ ಪಡೆಯದ ಬಗ್ಗೆ ಸಾಕಷ್ಟು ಅಚ್ಚರಿ ಹಾಗೂ ಟೀಕೆಗಳು ವ್ಯಕ್ತವಾಗಿತ್ತು. ಸತತವಾಗಿ ಮೀಸಲು ಆಟಗಾರರನ್ನು ತಂಡಕ್ಕೆ ಸಏರಿರಿ ಆಡುವ ಬಳಗದಲ್ಲಿ ಅವಕಾಶ ನೀಡಿದರೂ ಕುಲ್‌ದೀಪ್‌ ಯಾದವ್‌ಗೆ ಬೆಂಚ್ ಕಾಯಿಸುತ್ತಿರುವ ವಿಚಾರ ಅಭಿಮಾನಿಗಳಿಗೂ ಬೇಸರವನ್ನು ತರಿಸಿದೆ.

ಕುಲ್‌ದೀಪ್ ಆಡಿಸದಕ್ಕೆ ಯಾವುದೇ ಕಾರಣಕ್ಕೂ ವಿಷಾದವಿಲ್ಲ: ವಿರಾಟ್ ಕೊಹ್ಲಿಕುಲ್‌ದೀಪ್ ಆಡಿಸದಕ್ಕೆ ಯಾವುದೇ ಕಾರಣಕ್ಕೂ ವಿಷಾದವಿಲ್ಲ: ವಿರಾಟ್ ಕೊಹ್ಲಿ

ಈ ಬಗ್ಗೆ ಮಾತನಾಡಿದ ದಿಗ್ಗಜ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಮುಂದಿನ ಟೆಸ್ಟ್ ಪಂದ್ಯದಲ್ಲಿ ಕುಲ್‌ದೀಪ್ ಯಾದವ್ ತಂಡದಲ್ಲಿ ಸ್ಥಾನವನ್ನು ಪಡೆಯಬಹುದು ಎಂದಿದ್ದಾರೆ. ಫೆಬ್ರವರಿ 13ರಿಂದ ಎರಡನೇ ಟೆಸ್ಟ್ ಆರಂಭವಾಗಲಿದ್ದು ಆ ಪಂದ್ಯದಲ್ಲಿ ಶಹ್ಬಾಜ್ ನದೀಮ್ ಅಥವಾ ವಾಶಿಂಗ್ಟನ್ ಸುಂದರ್ ಸ್ಥಾನದಲ್ಲಿ ಅವಕಾಶ ಪಡೆದುಕೊಳ್ಳಬಹುದು. ಆದರೆ ಆಲ್‌ರೌಂಡರ್ ಸಾಮರ್ಥ್ಯವನ್ನು ಹೊಂದಿರುವ ಕಾರಣ ಸುಂದರ್ ಆಡುವ ಬಳಗದಲ್ಲಿ ಸ್ಥಾನವನ್ನು ಉಳಿಸಿಕೊಳ್ಳಲು ಅರ್ಹರಾಗಿದ್ದಾರೆ ಎಂದು ಸುನಿಲ್ ಗವಾಸ್ಕರ್ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

ಟೀಮ್ ಇಂಡಿಯಾ ಮುಂದಿನ ಟೆಸ್ಟ್ ಪಂದ್ಯದಲ್ಲಿ ಯಾವುದೇ ಬದಲಾವಣೆಯನ್ನಾದರು ಮಾಡಿಕೊಳ್ಳಬಹುದು. ಆದರೆ ಈ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಗಳಿಸಿದಂತೆ ದೊಡ್ಡ ಮೊತ್ತವನ್ನು ಗಳಿಸದಂತೆ ನೋಡಿಕೊಳ್ಳಲೇಬೇಕಿದೆ ಎಂದಿದ್ದಾರೆ ಗವಾಸ್ಕರ್.

ಯುರೋ ಮಿಲಿಯನ್ ಈ ವಾರ ಭಾರತೀಯರಿಗೆ ಯೂರೋ 144 ಮಿ. ಜಾಕ್‌ಪಾಟ್ ನೀಡಲಿದೆ!ಯುರೋ ಮಿಲಿಯನ್ ಈ ವಾರ ಭಾರತೀಯರಿಗೆ ಯೂರೋ 144 ಮಿ. ಜಾಕ್‌ಪಾಟ್ ನೀಡಲಿದೆ!

ಇನ್ನು ಇದೇ ಸಂದರ್ಭದಲ್ಲಿ ಅವರು ಶಹ್ಬಾಜ್ ನದೀಮ್ ಬಗ್ಗೆ ಪ್ರತಿಕ್ರಿಯಿಸಿದರು. ನದೀಮ್ ಈ ಪಂದ್ಯದಲ್ಲಿ ನರ್ವಸ್ ಆಗಿದ್ದಂತೆ ಕಂಡು ಬಂದರು. ಅವರು ಬೌಲಿಂಗ್ ಮಾಡಿದ ರೀತಿಯ ಬಗ್ಗೆ ನಾನು ಮಾತನಾಡಲಾರೆ. ಆದರೆ ಹಲವು ನೋಬಾಲ್‌ಗಳನ್ನು ಎಸೆದಿರುವುದು ಆತಂಕಕಾರಿ. ಇದು ಅಶ್ವಿನ್‌ಗೂ ಈ ಪಂದ್ಯದಲ್ಲಿ ಸಂಭವಿಸಿತು. ಸುದೀರ್ಘಕಾಲದ ಬಳಿಕ ಅವರು ನೋ ಬಾಲ್ ಎಸೆದರು. ಈ ಬಗ್ಗೆ ಟೀಮ್ ಇಂಡಿಯಾ ಗಮನಹರಿಸಬೇಕಿದೆ ಎಂದು ಗವಾಸ್ಕರ್ ಪ್ರತಿಕ್ರಿಯಿಸಿದ್ದಾರೆ.

Story first published: Tuesday, February 9, 2021, 20:37 [IST]
Other articles published on Feb 9, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X