ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕೆಕೆಆರ್‌ಗೆ ಬೇಡವಾದರಾ ಕುಲ್‌ದೀಪ್: ಯಾದವ್ ಕಣಕ್ಕಿಳಿಯುವ ಬಗ್ಗೆ ಕೋಚ್ ಸ್ಪಷ್ಟನೆ

Kuldeep Yadav is unwanted in Kolkata Knight Riders? Coach Mills explain the truth

ಈ ಬಾರಿಯ ಐಪಿಎಲ್‌ನಲ್ಲಿ ಕೆಕೆಆರ್ ತಂಡದ ಪ್ರಮುಖ ಸ್ಪಿನ್ ಬೌಲರ್ ಕುಲ್‌ದೀಪ್ ಯಾದವ್ ಕಳೆದ ಕೆಲ ಪಂದ್ಯಗಳಲ್ಲಿ ಕಣಕ್ಕಿಳಿದಿಲ್ಲ. ರಾಷ್ಟ್ರೀಯ ತಂಡದ ಪ್ರಮುಖ ಬೌಲರ್ ಆಗಿರುವ ಕುಲ್‌ದೀಪರ್ ಯಾದವ್ ಅವರನ್ನು ಯಾವ ಕಾರಣಕ್ಕೆ ಕಡೆಗಣಿಸಲಾಗುತ್ತಿದೆ ಎಂಬ ಬಗ್ಗೆ ಮಾತುಗಳು ಕೇಳಿ ಬಂದಿದೆ. ವಿಶ್ವದರ್ಜೆಯ ಬೌಲರ್ ಆಗಿರುವ ಕುಲ್‌ದೀಪ್ ಯಾದವ್ ಕಣಕ್ಕಿಳಿಯದ ಬಗ್ಗೆ ಕೋಚ್ ಕೈಲ್ ಮಿಲ್ಸ್ ಪ್ರತಿಕ್ರಿಯಿಸಿದ್ದಾರೆ.

ಕುಲ್‌ದೀಪ್ ಯಾದವ್ ಅವರನ್ನು ಕಣಕ್ಕೆ ಇಳಿಸದಿರುವ ನಿರ್ಧಾರವನ್ನು ಕೋಚ್ ಕೈಲ್ ಮಿಲ್ಸ್ ಸಮರ್ಥನೆ ಮಾಡಿಕೊಂಡಿದ್ದಾರೆ. ಸಣ್ಣ ಕ್ರೀಡಾಂಗಣದಲ್ಲಿ ಆಡಲಾಗುತ್ತಿದೆ ಹಾಗಾಗಿ ತಂಡದಲ್ಲಿ ಈ ಬದಲಾವಣೆಯನ್ನು ಮಾಡಿಕೊಳ್ಳಲಾಗಿದೆ ಎಂದು ಕುಲ್‌ದೀಪ್ ಯಾದವ್ ಅಲಭ್ಯತೆಯ ಬಗ್ಗೆ ಹೇಳಿಕೆಯನ್ನು ನೀಡಿದ್ದಾರೆ.

2-3 ಪಂದ್ಯಗಳ ಸೋಲು ದೊಡ್ಡ ವಿಚಾರವಲ್ಲ: ಆಲ್ ರೌಂಡರ್ ಬೆನ್ನಿಗೆ ನಿಂತ ಡಿಕೆ2-3 ಪಂದ್ಯಗಳ ಸೋಲು ದೊಡ್ಡ ವಿಚಾರವಲ್ಲ: ಆಲ್ ರೌಂಡರ್ ಬೆನ್ನಿಗೆ ನಿಂತ ಡಿಕೆ

ಕುಲ್‌ದೀಪ್ ಯಾದವ್ ವಿಶ್ವದ ಅತ್ಯುತ್ತಮ ಸ್ಪಿನ್ನರ್‌ಗಳಲ್ಲಿ ಒಬ್ಬರು. ಆದರೆ ತಂಡದಲ್ಲಿ ಕೆಲ ಬದಲಾವಣೆ ಮಾಡಿಕೊಲ್ಳುವ ಸಲುವಾಗಿ ಹಾಗೂ ಕ್ರೀಡಾಂಗಣ ಸಣ್ಣದಾಗಿರುವ ಕಾರಣದಿಂದಾಗಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಆಡುವ ಬಳಗದಿಂದ ಹೊರಬಿದ್ದಿದ್ದಾರೆ ಎಂದು ನ್ಯೂಜಿಲೆಂಡ್ ಕ್ರಿಕೆಟ್ ತಂಡದ ಮಾಜಿ ವೇಗಿ ಕೈಲ್ ಮಿಲ್ಸ್ ಪಂದ್ಯದ ಬಳಿಕ ನಡೆದ ಮಾಧ್ಯಮಗೋಷ್ಠಿಯಲ್ಲಿ ಹೇಳಿಕೆಯನ್ನು ನೀಡಿದ್ದಾರೆ. ಕುಲ್‌ದೀಪ್ ಯಾದವ್ ಕಳೆದ ಐಪಿಎಲ್ ಆವೃತ್ತಿಯಲ್ಲಿ ಕಳಪೆ ಪ್ರದರ್ಶನವನ್ನು ನೀಡಿದ್ದರು.

"ನನ್ನ ಪ್ರಕಾರ ತಂಡದಲ್ಲಿ ಸ್ಪರ್ಧೆ ಇರುವುದು ಉತ್ತಮ ಅಲ್ಲವೆ?. ನಾವು ಅತಿ ದೊಡ್ಡ ಸ್ವಾಡ್ ಹೊಂದಿದ್ದೇವೆ. ಇರುವ ಕೆಲವೇ ಸ್ಥಾನಕ್ಕೆ ಸಾಕಷ್ಟು ಸ್ಪರ್ಧೆಯಿದೆ. ಕಳೆದೆರಡು ಪಂದ್ಯಗಳಲ್ಲಿ ಕುಲ್ದೀಪ್ ಅವಕಾಶವನ್ನು ಪಡೆದುಕೊಂಡಿಲ್ಲ. ಆದರೆ ತಂಡದ ಒಳಗೆ ಅವರು ಲಭ್ಯರಿದ್ದಾರೆ. ತಂಡಕ್ಕೆ ಇನ್ನೂ ಕೊಡುಗೆಯನ್ನು ನೀಡುತ್ತಿದ್ದಾರೆ" ಎಂದು ಮಿಲ್ಸ್ ಹೇಳಿಕೆಯನ್ನು ನೀಡಿದ್ದಾರೆ.

ಐಪಿಎಲ್ 2020: ಟೂರ್ನಿಯ ದ್ವಿತೀಯಾರ್ಧ ಇನ್ನಷ್ಟು ಕಠಿಣವಾಗಿರಲಿದೆ ಎಂದ ಡೆಲ್ಲಿ ಬೌಲರ್ಐಪಿಎಲ್ 2020: ಟೂರ್ನಿಯ ದ್ವಿತೀಯಾರ್ಧ ಇನ್ನಷ್ಟು ಕಠಿಣವಾಗಿರಲಿದೆ ಎಂದ ಡೆಲ್ಲಿ ಬೌಲರ್

ನಾವು ತಂಡದ ಸಂಸ್ಕೃತಿಯನ್ನು ಹೊಂದಿದ್ದೇವೆ. ತಂಡವಾಗಿ ನಿರ್ಧಾರಗಳನ್ನು ಕೈಗೊಳ್ಳುವಾಗ ನಿರ್ದಿಷ್ಠ ದೃಷ್ಟಿಕೋನವನ್ನು ಹೊಂದಿರುತ್ತೇವೆ. ಮಾತ್ರವಲ್ಲ ಈ ಬಗ್ಗೆ ಆಟಗಾರರೊಂದಿಗೂ ಚರ್ಚಿಸಲಾಗುತ್ತದೆ. ಯಾವುದೇ ಕ್ರಿಕೆಟಿಗನಿಗೆ ಆರಂಭಿಕ ಇಲೆವೆನ್‌ನಿಂದ ತಪ್ಪಿಸಿಕೊಳ್ಳುವುದು ಸುಲಭವಲ್ಲ ಎಂದು ಕೈಲ್ ಮಿಲ್ಸ್ ಹೇಳಿದ್ದಾರೆ.

Story first published: Friday, October 9, 2020, 10:14 [IST]
Other articles published on Oct 9, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X