ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟೀಮ್ ಇಂಡಿಯಾದ ಕುಲ್‌ದೀಪ್ ಯಾದವ್‌ಗೆ ಬೆಂಬಲವಾಗಿರುವ ವಿಶ್ವ ಶ್ರೇಷ್ಠ ಸ್ಪಿನ್ನರ್ ಯಾರು?

Kuldeep Yadav Narrates First Interaction With Australian Legend

ಟೀಮ್ ಇಂಡಿಯಾದ ಯುವ ಸ್ಪಿನ್ನರ್ ಕುಲ್‌ದೀಪ್ ಯಾದವ್ ಟೀಮ್ ಇಂಡಿಯಾಗೆ ಕಾಲಿಡುವ ಮುನ್ನವೇ ದೊಡ್ಡ ಹೆಸರನ್ನು ಮಾಡಿದ್ದವರು. ಅಂಡರ್19 ವಿಶ್ವಕಪ್‌ನಲ್ಲಿ ಕುಲ್‌ದೀಪ್ ಬೌಲಿಂಗ್‌ಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿತ್ತು. ಪ್ರಮುಖ ಕ್ರಿಕೆಟಿಗರು ಕೂಡ ಕುಲ್‌ದೀಪ್ ಬೌಲಿಂಗ್ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಡಿಸಿದ್ದರು. ಅದರಲ್ಲಿ ಆಸ್ಟ್ರೇಲಿಯಾದ ಸ್ಪಿನ್ ದಿಗ್ಗಜ ಶೇನ್ ವಾರ್ನ್ ಕೂಡ ಒಬ್ಬರು.

ಬಳಿಕ ಆಸ್ಟ್ರೇಲಿಯಾ ವಿರುದ್ಧ 2017ರಲ್ಲಿ ಟೆಸ್ಟ್‌ ಸರಣಿಯಲ್ಲಿ ಟೀಮ್ ಇಂಡಿಯಾಗೆ ಪದಾರ್ಪಣೆಯನ್ನು ಮಾಡಿದ್ದ ಕುಲ್‌ದೀಪ್ ಯಾದವ್ ಅವರನ್ನು ಟೀಮ್ ಇಂಡಿಯಾ ಕೋಚ್ ಆಗಿದ್ದ ಅನಿಲ್ ಕುಂಬ್ಳೆ ಶೇನ್ ವಾರ್ನ್‌ಗೆ ಪರಿಚಯಿಸಿದ್ದರು. ಆ ಸಂದರ್ಭದ ಮೊದಲಿನ ಕೆಲ ನಿಮಿಷಗಳ ಕಾಲ ಇಬ್ಬರು ದಿಗ್ಗಜರ ಮಾತಿ ಮಧ್ಯೆ ಮೂಕವಿಸ್ಮಿತನಾಗಿದ್ದೆ ಎಂದು ಕುಲ್‌ದೀಪ್ ಯಾದವ್ ಹೇಳಿಕೊಂಡಿದ್ದಾರೆ.

ಸಿಪಿಎಲ್‌ 2020: ಹಿಂದಿ ಕಾಮೆಂಟೇಟರ್‌ಗಳ ಹೆಸರುಗಳು ಪ್ರಕಟಸಿಪಿಎಲ್‌ 2020: ಹಿಂದಿ ಕಾಮೆಂಟೇಟರ್‌ಗಳ ಹೆಸರುಗಳು ಪ್ರಕಟ

ಶೇನ್ ವಾರ್ನ್ ಹಾಗೂ ಅನಿಲ್ ಕುಂಬ್ಳೆ ನಡುವನ ಮಾತುಕತೆ ಹೇಗಿತ್ತು. ಕುಲ್‌ದೀಪ್ ವೃತ್ತಿ ಜೀವನದಲ್ಲಿ ಶೇನ್ ವಾರ್ನ್ ಪಾತ್ರ ಯಾವ ರೀತಿ ಇದೆ ಎಂಬುದನ್ನು ಸ್ವತಃ ಕುಲ್‌ದೀಪ್ ಹೇಳಿಕೊಂಡಿದ್ದಾರೆ.

ಮೊದಲ ಮಾತುಕತೆ

ಮೊದಲ ಮಾತುಕತೆ

ಪುಣೆ ಟೆಸ್ಟ್ ಪಂದ್ಯದ ಸಂದರ್ಭದಲ್ಲಿ ನಾನು ಶೇನ್ ವಾರ್ನ್ ಅವರನ್ನು ಮೊದಲಿಗೆ ಭೇಟಿ ಮಾಡಿದ್ದೆ. ಆಗ ಅನಿಲ್ ಕುಂಬ್ಳೆ ನಮ್ಮ ಕೋಚ್ ಆಗಿದ್ದರು. ಅವರಲ್ಲಿ ಶೇನ್ ವಾರ್ನ್ ಅವರನ್ನು ಭೇಟಿಯಾಗಿಸುವಂತೆ ಕೇಳಿಕೊಂಡಿದ್ದೆ. ಕಡೆಗೆ ಅದು ಸಾಧ್ಯವಾದಾಗ ನಾನು ಆರಂಭದ ಹತ್ತು ನಿಮಿಷಗಳ ಕಾಲ ಸಂಪೂರ್ಣವಾಗಿ ಮೌನವಾಗಿದ್ದೆ. ಕುಂಬ್ಳೆ ಜೊತೆಗೆ ವಾರ್ನ್ ಬೇರೆ ವಿಚಾರದ ಬಗ್ಗೆ ವಿವರಿಸುತ್ತಿದ್ದರು ಎಂದು ಶೇನ್ ಆರ್ನ್ ಭೇಟಿಯಾದ ಕ್ಷಣವನ್ನು ನೆನಪಿಸಿಕೊಂಡಿದ್ದಾರೆ ಕುಲ್‌ದೀಪ್ ಯಾದವ್.

ಬಳಿಕ ಸಾಕಷ್ಟು ಮಾತನಾಡಿದೆ

ಬಳಿಕ ಸಾಕಷ್ಟು ಮಾತನಾಡಿದೆ

ಅವರಿಬ್ಬರ ಮಾತುಗಳನ್ನೂ ನಾನು ಕೇಳಿಸಿಕೊಳ್ಳುತ್ತಿದ್ದೆ. ಬಳಿಕ ನಾನು ಮಾತನಾಡಲು ಆರಂಭಿಸಿದೆ. ನಂತರ ಸಾಕಷ್ಟು ಮಾತನಾಡಿದೆ. ನನ್ನ ಯೋಜನೆಗಳನ್ನು ಅವರೊಂದಿಗೆ ಹಂಚಿಕೊಂಡಿದ್ದೆ. ಬೌಲಿಂಗ್ ಮಾಡುವಾಗ ಯೋಚಿಸುವ ವಿಚಾರಗಳನ್ನು ಹೇಳಿಕೊಂಡೆ. ಬಳಿಕ ವಾರ್ನ್ ನೀನು ಸಾಕಷ್ಟು ಯೋಚನೆಗಳನ್ನು ನಡೆಸುತ್ತಿಯಾ ಎಂದು ಹೇಳಿದ್ದರು ಎಂದು ಕುಲ್‌ದೀಪ್ ಯಾದವ್ ಟಿವಿ ನಿರೂಪಕಿ ಮಡೊನ್ನಾ ಟಿಕ್ಸೈರಾ ಜೊತೆಗಿನ ಯುಟ್ಯೂಬ್ ಸಂವಾದದಲ್ಲಿ ನೆನಪಿಸಿಕೊಂಡಿದ್ದಾರೆ.

ವಾರ್ನ್ ಮಾನಸಿಕ ಶಕ್ತಿಯನ್ನು ಹೊಗಳಿದ ಯಾದವ್

ವಾರ್ನ್ ಮಾನಸಿಕ ಶಕ್ತಿಯನ್ನು ಹೊಗಳಿದ ಯಾದವ್

ಈ ಸಂದರ್ಭದಲ್ಲಿ ಶೇನ್ ವಾರ್‌ ಅವರ ಮಾನಸಿಕ ಶಕ್ತಿಯನ್ನು ಕುಲ್‌ದೀಪ್ ಯಾದವ್ ಹೊಗಳಿದ್ದಾರೆ. ಮಾನಸಿಕವಾಗಿ ಅವರು ಸಾಕಷ್ಟು ಬಲಿಷ್ಠರು. ತನ್ನ ಬೌಲಿಂಗ್‌ಗಿಂತಲೂ ಹೆಚ್ಚಾಗಿ ಬುದ್ಧಿಯನ್ನು ಉಪಯೋಗಿಸಿ ಅವರು ಹೆಚ್ಚಿನ ವಿಕೆಟ್ ಪಡೆಯುತ್ತಿದ್ದರು ಎಂದು ಭಾವಿಸುತ್ತೇನೆ. ಅತ್ಯುತ್ತಮ ಯೋಜನೆಗಳನ್ನು ರೂಪಿಸುತ್ತಿದ್ದರು. ಸಣ್ಣ ಸಂಗತಿಗಳು ಬಹಳ ದೊಡ್ಡ ವಿಚಾರವಾಗುವಂತಾ ಸಾಕಷ್ಟು ಮಾಹಿತಿಯನ್ನು ಅವರು ಹಂಚಿಕೊಂಡಿದ್ದಾರೆ ಎಂದು ಕುಲ್ದೀಪ್ ಹೇಳಿದ್ದಾರೆ.

ಕೋಚ್‌ ರೀತಿ ಬೆಂಬಲಿಸುತ್ತಾರೆ

ಕೋಚ್‌ ರೀತಿ ಬೆಂಬಲಿಸುತ್ತಾರೆ

ಬಳಿಕ ನಾನು ಶೇನ್ ವಾರ್ನ್ ಅವರನ್ನು ಸಾಕಷ್ಟು ಬಾರಿ ಭೇಟಿಯಾಗಿದ್ದೇನೆ. ಅವರು ನನಗೆ ಯಾವಾಗಲೂ ಕೋಚ್ ರೀತಿಯಲ್ಲೇ ಮಾರ್ಗದರ್ಶನವನ್ನು ನೀಡುತ್ತಾರೆ. ಬಳಿಕ ಮುಂದುವರಿಯುತ್ತಾ ನನ್ನ ಸ್ನೇಹಿತರಂತಾಗಿದ್ದಾರೆ. ನಮ್ಮ ಆಸ್ಟ್ರೇಲಿಯಾ ಪ್ರವಾಸದ ಸಂದರ್ಭದಲ್ಲಿ ಸಾಕಷ್ಟು ಸಮಯವನ್ನು ಅವರೊಂದಿಗೆ ನಾನು ಕಳೆದಿದ್ದೇನೆ. ನನಗೆ ಯಾವುದೇ ರೀತಿಯ ಸಲಹೆಗೂ ಅವರನ್ನು ಸಂಪರ್ಕಿಸುತ್ತೇನೆ. ಫೋನ್ ಹಾಗೂ ಸಂದೇಶಗಳ ಮೂಲಕ ಸಾಕಷ್ಟು ಮಾತುಕತೆಯನ್ನು ನಡೆಸುತ್ತೇನೆ ಎಂದು ಕುಲ್‌ದೀಪ್ ಯಾದವ್ ಹೇಳಿಕೊಂಡಿದ್ದಾರೆ.

Story first published: Thursday, August 13, 2020, 23:06 [IST]
Other articles published on Aug 13, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X