ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

'ನಾನೇನು ಹುಚ್ಚನಾ, 300 ಪಂದ್ಯಗಳನ್ನು ಆಡಿದ್ದೇನೆ'.. ಧೋನಿ ಆಕ್ರೋಶಕ್ಕೆ ಕುಲ್‌ದೀಪ್ ಕೊಟ್ರು ಕಾರಣ

Kuldeep Yadav Recalls The Day When Ms Dhoni Got Angry At Him

ಟೀಮ್ ಇಂಡಿಯಾದ ಮಾಜಿ ನಾಯಕ ಧೋನಿ ತಾಳ್ಮೆಗೆ ಹೆಸರುಗಳಿಸಿದವರು. ಆ ಕಾರಣಕ್ಕೇ ಧೋನಿ ಕ್ಯಾಪ್ಟನ್ ಕೂಲ್ ಎಂದು ಹೆಸರನ್ನು ಪಡೆದುಕೊಂಡಿದ್ದಾರೆ. ಆದರೆ ಇಂತಾ ಧೋನಿ ತಾಳ್ಮೆ ಕಳೆದುಕೊಳ್ಳುವಂತೆ ತಾನು ನಡದುಕೊಂಡ ಸಂದರ್ಭವನ್ನು ಟೀಮ್ ಇಂಡಿಯಾದ ಸ್ಪಿನ್ನರ್ ಕುಲ್‌ದೀಪ್ ಯಾದವ್ ನೆನಪಿಸಿಕೊಂಡಿದ್ದಾರೆ.

ಇನ್ಸ್ಟಾಗ್ರಾಮ್ ಲೈವ್‌ನಲ್ಲಿ ಕುಲ್‌ದೀಪ್ ಯಾದವ್ ಖ್ಯಾತ ನಿರೂಪಕ ಜತಿನ್ ಸಪ್ರು ಜೊತೆಗೆ ಕಾಣಿಸಿಕೊಂಡರು. ಈ ಸಂದರ್ಭದಲ್ಲಿ ಹಲವಾರು ವಿಚಾರಗಳನ್ನು ಕುಲ್‌ದೀಪ್ ಯಾವವ್ ಹಂಚಿಕೊಂಡಿದ್ದಾರೆ. ಧೋನಿಗೆ ಕೋಪವನ್ನು ತರಿಸಿದ ಸಂದರ್ಭವನ್ನು ಕೂಡ ಈ ಸಂದರ್ಭದಲ್ಲಿಕುಲ್‌ದೀಪ್ ಯಾದವ್ ಹೇಳಿಕೊಂಡಿದ್ದಾರೆ.

ಧೋನಿ ತಾಳ್ಮೆ ಕಳೆದುಕೊಂಡಿದ್ದ ಆ ಘಟನೆ ಯಾವುದು.. ಘಟನೆಯ ಬಳಿಕ ಏನಾಯ್ತು ಮುಂದೆ ಓದಿ

ಶ್ರೀಲಂಕಾ ವಿರುದ್ಧದ ಪಂದ್ಯ

ಶ್ರೀಲಂಕಾ ವಿರುದ್ಧದ ಪಂದ್ಯ

ಅದು 2017ರ ಡಿಸೆಂಬರ್‌ನಲ್ಲಿ ಇಂದೋರ್‌ನಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಟೆಸ್ಟ್ ಪಂದ್ಯ. ಈ ಪಂದ್ಯದಲ್ಲಿ ವಿಕೆಟ್ ಕೀಪಿಂಗ್ ನಡೆಸುತ್ತಿದ್ದ ಧೋನಿ ತಾಳ್ಮೆಯನ್ನು ಕಳೆದುಕೊಂಡು ಬೌಲಿಂಗ್ ಮಾಡುತ್ತಿದ್ದ ಕುಲ್‌ದೀಪ್ ಯಾದವ್ ಅವರ ಮೇಲೆ ಕೂಗಾಡಿದ್ದರು.

ಧೋನಿ ಮಾತು ಕೇಳಿಸಿಕೊಳ್ಳದ ಕುಲ್‌ದೀಪ್

ಧೋನಿ ಮಾತು ಕೇಳಿಸಿಕೊಳ್ಳದ ಕುಲ್‌ದೀಪ್

ತಾನು ಬೌಲಿಂಗ್ ಮಾಡುತ್ತಿದ್ದಾಗ ಶ್ರೀಲಂಕಾ ಕ್ರಿಕೆಟಿಗ ಕುಸಲ್ ಪೆರೆರ ಬೌಂಡರಿಯನ್ನು ಬಾರಿಸಿದ್ದರು, ಈ ಸಂದರ್ಭದಲ್ಲ ಧೋನಿ ವಿಕೆಟ್ ಹಿಂಬದಿಯಿಂದ ಫೀಲ್ಡಿಂಗ್ ಬದಲಾಯಿಸುವಂತೆ ಕಿರುಚಿ ಹೇಳಿದರು, ಆದರೆ ನಾನು ಅದನ್ನು ಕೇಳಿಸಿಕೊಂಡಿರಲಿಲ್ಲ. ಈ ಸಂದರ್ಭದಲ್ಲಿ ಕುಸಲ ಮತ್ತೊಂದು ಬೌಂಡರಿಯನ್ನು ರಿವರ್ಸ್ ಸ್ವೀಪ್ ಮೂಲಕ ಬಾರಿಸಿದ್ದರು. ಇದು ಧೋನಿ ತಾಳ್ಮೆ ಕಳೆದುಕೊಳ್ಳುವಂತೆ ಮಾಡಿತು ಎಂದು ಕುಲ್‌ದೀಪ್ ಯಾದವ್ ಹೇಳಿದ್ದಾರೆ.

ಹುಚ್ಚಾ ನನಗೆ, 300 ಪಂದ್ಯ ಆಡಿದ್ದೇನೆ..

ಹುಚ್ಚಾ ನನಗೆ, 300 ಪಂದ್ಯ ಆಡಿದ್ದೇನೆ..

'ಆಗ ಆಕ್ರೋಶದಿಂದ ಧೋನಿ ತನ್ನತ್ತ ಆಗಮಿಸಿ" ನಾನೇನು ಹುಚ್ಚನಾ, 300 ಪಂದ್ಯಗಳನ್ನು ಆಡಿದ್ದೇನೆ, ನನ್ನ ಮಾತನ್ನು ಕೇಳಲ್ವ ನೀನು" ಎಂದು ಧೋನಿ ಹೇಳಿದ್ದರು' ಎಂದು ಕುಲ್‌ದೀಪ್ ಯಾದವ್ ಆ ಸಂದರ್ಭವನ್ನು ನೆನಪಿಸಿಕೊಂಡಿದ್ದಾರೆ.

ಕಳೆದ 20 ವರ್ಷದಿಂದ ಕೋಪಗೊಂಡಿಲ್ಲ

ಕಳೆದ 20 ವರ್ಷದಿಂದ ಕೋಪಗೊಂಡಿಲ್ಲ

ಈ ಘಟನೆಯ ಬಳಿಕ ನಾನು ಭಯಗೊಂಡಿದ್ದೆ ಎಂದ ಕುಲ್‌ದೀಪ್ ಪಂದ್ಯ ಮುಗಿದ ಬಳಿಕ ಧೋನಿಯ ಜೊತೆಗೆ ಮಾತನಾಡಿದ್ದರಂತೆ. ಆಗ ಧೋನಿ ನಾನು ಕಳೆದ 20 ವರ್ಷಗಳಲ್ಲಿ ಕೋಪಗೊಂಡಿದ್ದೇ ಇಲ್ಲ ಎಂದು ಹೇಳಿದ್ದರು ಎಂದು ಇನ್ಸ್ಟಾಗ್ರಾಮ್ ಸಂದರ್ಶನದಲ್ಲಿ ನೆನಪಿಸಿಕೊಂಡಿದ್ದಾರೆ.

Story first published: Friday, April 17, 2020, 17:46 [IST]
Other articles published on Apr 17, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X