ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಈ ಬ್ಯಾಟ್ಸ್‌ಮನ್‌ಗಳಿಗೆ ಬೌಲಿಂಗ್ ಮಾಡುವುದು ಸವಾಲು ಎಂದ ಕುಲ್‌ದೀಪ್ ಯಾದವ್

Kuldeep Yadav Reveals Two Batsmen Who He Finds Challenging To Contain

ಟೀಮ್ ಇಂಡಿಯಾದ ಸ್ಪಿನ್ನರ್ ಕುಲ್‌ದೀಪ್ ಯಾದವ್ ಬೌಲಿಂಗ್‌ ವೇಳೆ ತನಗೆ ಸವಾಲೆನಿಸುವ ಆಟಗಾರರ ಬಗ್ಗೆ ಹೇಳಿಕೆಯನ್ನು ನೀಡಿದ್ದಾರೆ. ಇಬ್ಬರು ದಾಂಡಿಗರಿಗೆ ಬೌಲಿಂಗ್ ಮಾಡುವುದು ಕಠಿಣ ಎಂದು ಅವರು ದಕ್ಷಿಣ ಆಫ್ರಿಕಾದ ಎಬಿ ಡಿವಿಲಿಯರ್ಸ್ ಮತ್ತು ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್ ಹೆಸರನ್ನು ಹೇಳಿದ್ದಾರೆ.

ಇಎಸ್‌ಪಿಎನ್‌ ವಾಹಿನಿಯ ಕಾರ್ಯಕ್ರಮವೊಂದರಲ್ಲಿ ಭಾರತದ ಮಾಜಿ ವಿಕೆಟ್ ಕೀಪರ್ ದೀಒ್ ದಾಸ್‌ಗುಪ್ತಾ ಜೊತೆಗೆ ಮಾತನಾಡಿದ ಯಾದವ್ ಈ ವಿಚಾರವನ್ನು ಹಂಚಿಕೊಮಡಿದ್ದಾರೆ. ಇಬ್ರು ಆಟಗಾರರು ಬ್ಯಾಟಿಂಗ್‌ನಲ್ಲಿ ವಿಶೇಷ ಸಾಮರ್ಥ್ಯವನ್ನು ಹೊಂದಿದ್ದಾರೆ ಎಂದು ಕುಲ್‌ದೀಪ್ ಹೇಳಿದ್ದಾರೆ.

ಕೃನಾಲ್‌ಗೆ ಚಾಲೆಂಜ್ ಮಾಡಿದ್ದ ಹಾರ್ದಿಕ್‌ಗೆ ಸವಾಲೆಸೆದ ಕೊಹ್ಲಿ: ವೀಡಿಯೊಕೃನಾಲ್‌ಗೆ ಚಾಲೆಂಜ್ ಮಾಡಿದ್ದ ಹಾರ್ದಿಕ್‌ಗೆ ಸವಾಲೆಸೆದ ಕೊಹ್ಲಿ: ವೀಡಿಯೊ

ಸ್ಟೀವ್ ಸ್ಮಿತ್ ನನ್ನ ಎಸೆತವನ್ನು ಹೆಚ್ಚಿನ ಬಾರಿ ಹೆಜ್ಜೆಯಿಂದೆಯಿಟ್ಟು ಆಡುತ್ತಾರೆ, ಜೊತೆಗೆ ತುಂಬಾ ತಡವಾಗಿ ಚೆಂಡನ್ನು ಅವರು ಬಾರಿಸುತ್ತಾರೆ. ಅದು ನನ್ನ ಪಾಲಿಗೆ ಕಠಿಣವೆನಿಸುವ ಸವಾಲಾಗಿದೆ ಎಂದು ಕುಲ್‌ದೀಪ್ ಯಾದವ್ ವಿವರಿಸಿದ್ದಾರೆ.

ಏಕದಿನ ಪಂದ್ಯದ ವಿಚಾರಕ್ಕೆ ಬಂದರೆ ಎಬಿ ಡಿವಿಲಿಯರ್ಸ್ ಕಠಿಣ ಬ್ಯಾಟ್ಸ್ಮನ್ ಆಗಿದ್ದಾರೆ. ಅವರು ವಿಶೇಷ ಬ್ಯಾಟಿಂಗ್ ಶೈಲಿಯನ್ನು ಹೊಂದಿದ್ದು ಸದ್ಯ ನಿವೃತ್ತಿಯಾಗಿದ್ದು ಸಮಾದಾನದ ಸಂಗತಿ. ಆದರೆ ಎಬಿ ಡಿ ಹೊರತು ಪಡಿಸಿದರೆ ಬೇರೆ ಯಾವುದೇ ಆಟಗಾರ ಎಸೆತದಲ್ಲಿ ಚೆನ್ನಾಗಿ ರನ್ ಗಳಿಸುವುದನ್ನು ನಾನು ಕಂಡಿಲ್ಲ ಎಂದಿದ್ದಾರೆ.

ಇಂಗ್ಲೆಂಡ್ ಕ್ರಿಕೆಟರ್ ಸ್ಯಾಮ್ ಕರನ್‌ಗೆ ಅನಾರೋಗ್ಯ, ಕೊರೊನಾ ಪರೀಕ್ಷೆಇಂಗ್ಲೆಂಡ್ ಕ್ರಿಕೆಟರ್ ಸ್ಯಾಮ್ ಕರನ್‌ಗೆ ಅನಾರೋಗ್ಯ, ಕೊರೊನಾ ಪರೀಕ್ಷೆ

ಇನ್ನು ಇದೇ ಸಂದರ್ಭದಲ್ಲಿ ಕುಲ್‌ದೀಪ್ ಕಳೆದ ಏಕದಿನ ವಿಶ್ವಕಪ್ ಬಗ್ಗೆ ಪ್ರದರ್ಶನದ ಬಗ್ಗೆ ಮಾತನಾಡಿದರು. ಐಪಿಎಲ್‌ನಲ್ಲಿ ಉತ್ತಮ ಪ್ರದರ್ಶನ ನನ್ನಿಂದ ಬಾರದ ಕಾರಣ ವಿಶ್ವಕಪ್‌ಗೂ ಮುನ್ನ ಸಾಕಷ್ಟು ತಯಾರಿಯನ್ನು ನಡೆಸಿದ್ದೆ. ವಿಶ್ವಕಪ್‌ನಲ್ಲಿ ಹೆಚ್ಚಿನ ವಿಕೆಟ್ ಪಡೆಯಲಿ ಸಾಧ್ಯವಾಗಿಲ್ಲದಿದ್ದರೂ ಉತ್ತಮವಾಗಿ ಬೌಲಿಂಗ್ ಸಂಘಟಿಸಿದ್ದೇನೆ ಎಂದು ಬಾವಿಸಿದ್ದೇನೆ ಎಂದು ಕುಲ್‌ದೀಪ್ ಯಾದವ್ ಹೇಳಿದ್ದಾರೆ.

Story first published: Friday, July 3, 2020, 17:59 [IST]
Other articles published on Jul 3, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X