ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಲಂಕಾ ಕ್ರಿಕೆಟ್‌ನ ಬ್ಯಾಟಿಂಗ್ ದಿಗ್ಗಜನ್ನು ಕಂಗೆಡಿಸಿದ್ದರು ಇಬ್ಬರು ವೇಗಿಗಳು: ಓರ್ವ ಭಾರತೀಯ

Kumar Sangakkara Picks 2 Bowlers Difficult To Face

ವಿಶ್ವ ಕ್ರಿಕೆಟ್‌ನ ಶ್ರೇಷ್ಠ ಬ್ಯಾಟ್ಸ್‌ಮನ್‌ಗಳಲ್ಲಿ ಸಂಗಕ್ಕರ ಕೂಡ ಒಬ್ಬರು. ಎದುರಾಳಿ ಬೌಲರ್‌ಗಳನ್ನು ಅಕ್ಷರಶಃ ದಂಡಿಸುತ್ತಿದ್ದ ಸಂಗಕ್ಕರ ಒಂದೂವರೆ ದಶಕಕ್ಕೂ ಹೆಚ್ಚು ಕಾಲ ಶ್ರೀಲಂಕಾ ತಂಡದ ಪ್ರಮುಖ ಅಂಗವಾಗಿದ್ದರು. ಶ್ರೀಲಂಕಾ ಕ್ರಿಕೆಟ್‌ನ ಈ ದಿಗ್ಗಜ ಕ್ರಿಕೆಟಗನಿಗೆ ಭಾರತೀಯ ವೇಗಿಯ ದಾಳಿಯನ್ನು ಎದುರಿಸಿವುದು ಬಹಳಷ್ಠು ಕಠಿಣವೆನಿಸುತ್ತಿತ್ತು ಎಂದು ಸ್ವತಃ ಸಂಗಕ್ಕರ ಬಹಿರಂಗಪಡಿಸಿದ್ದಾರೆ.

ವಿಶ್ವ ಕ್ರಿಕೆಟ್‌ನಲ್ಲಿ ತನಗೆ ಇಬ್ಬರು ಬೌಲರ್‌ಗಳನ್ನು ಎದುರಿಸುವುದು ಕಠಣವೆನಿಸಿತ್ತು ಎಂದು ಸಂಗಕ್ಕರ ಹೇಳಿದ್ದಾರೆ. ಅದರಲ್ಲಿ ಇನ್ನೋರ್ವ ಬೌಲರ್‌ ಹೆಸರನ್ನು ಕೂಡ ಸಂಗಕ್ಕರ ಬಹಿರಂಗಪಡಿಸಿದ್ದು, ಪಾಕಿಸ್ತಾನದ ದಿಗ್ಗಜ ಬೌಲರ್ ಹೆಸರನ್ನು ಶ್ರೀಲಂಕಾದ ಮಾಜಿ ನಾಯಕ ಹೇಳಿಕೊಂಡಿದ್ದಾರೆ.

ಸಿಪಿಎಲ್ 2020: ಈ ಬಾರಿಯ ಸಿಪಿಎಲ್‌ನಲ್ಲಿ ಇತಿಹಾಸ ಸೃಷ್ಟಿಸಲಿರುವ ಭಾರತೀಯಸಿಪಿಎಲ್ 2020: ಈ ಬಾರಿಯ ಸಿಪಿಎಲ್‌ನಲ್ಲಿ ಇತಿಹಾಸ ಸೃಷ್ಟಿಸಲಿರುವ ಭಾರತೀಯ

ಹಾಗಾದರೆ ಶ್ರೀಲಂಕಾದ ಶ್ರೇಷ್ಠ ಆಟಗಾರನಿಗೆ ಕಂಗೆಡಿಸಿದ್ದ ಆ ಇಬ್ಬರು ಬೌಲರ್‌ಗಳು ಯಾರು? ಯಾವ ಭಾರತೀಯ ವೇಗಿಯ ದಾಳಿ ಸಂಗಕ್ಕರಗೆ ಎದುರಿಸಲು ಕಷ್ಟವೆನಿಸಿತ್ತು ಮುಂದೆ ಓದಿ.

ಶ್ರೀಲಂಕಾ ಕ್ರಿಕೆಟ್‌ನ ಶ್ರೇಷ್ಠ ಆಟಗಾರ

ಶ್ರೀಲಂಕಾ ಕ್ರಿಕೆಟ್‌ನ ಶ್ರೇಷ್ಠ ಆಟಗಾರ

ಕುಮಾರ್ ಸಂಗಕ್ಕರ ವಿಸ್ವ ಕ್ರಿಕೆಟ್‌ನಲ್ಲಿ ಅದ್ಭುತ ಪ್ರದರ್ಶನವನ್ನು ತೋರಿದ್ದಾರೆ. ಟೆಸ್ಟ್‌ ಕ್ರಿಕೆಟ್‌ನಲ್ಲಿ 57.40 ಸರಾಸರಿಯಲ್ಲಿ ಬ್ಯಾಟಿಂಗ್ ಮಾಡಿರುವ ಸಂಗಕ್ಕರ 12,400 ರನ್ ಕಲೆ ಹಾಕಿ ಸುದೀರ್ಘ ಮಾದರಿಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರ ಪೈಕಿ ಆರನೇ ಸ್ಥಾನವನ್ನು ಗಳಿಸಿದ್ದಾರೆ.

ಏಕದಿನ ಕ್ರಿಕೆಟ್‌ನಲ್ಲಿ ಸಚಿನ್ ನಂತರದ ಸಾಧನೆ

ಏಕದಿನ ಕ್ರಿಕೆಟ್‌ನಲ್ಲಿ ಸಚಿನ್ ನಂತರದ ಸಾಧನೆ

ಏಕದಿನ ಕ್ರಿಕೆಟ್‌ನಲ್ಲೂ ಮಿಂಚಿರುವ ಸಂಗಕ್ಕರ ಅತಿ ಹೆಚ್ಚು ರನ್ ಗಳಿಕೆಯಲ್ಲಿ ಸಾರ್ವಕಾಲಿಕ ಶ್ರೇಷ್ಠ ಆಟಗಾರ ಸಚಿನ್ ತೆಂಡೂಲ್ಕರ್ ನಂತರದ ಸ್ಥಾನವನ್ನು ಪಡೆದುಕೊಂಡಿದ್ದಾರೆ. 404 ಏಕದಿನ ಪಂದ್ಯಗಳಿಂದ ಸಂಗಕ್ಕರ 14,234 ರನ್ ಗಳಿಸಿದ್ದಾರೆ. ಈ ಮೂಲಕ ಏಕದಿನ ಮಾದರಿಯ ರನ್ ಗಳಿಕೆಯಲ್ಲಿ ಎರಡನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ.

ಇಬ್ಬರು ಬೌಲರ್‌ಗಳನ್ನು ಎದುರಿಸುವುದು ಕಠಿಣ

ಇಬ್ಬರು ಬೌಲರ್‌ಗಳನ್ನು ಎದುರಿಸುವುದು ಕಠಿಣ

ಆಧುನಿಕ ಕ್ರಿಕೆಟ್‌ನ ಶ್ರೇಷ್ಠ ಆಟಗಾರರಲ್ಲಿ ಒಬ್ಬರೆನಿಸಿದ ಕುಮಾರ್ ಸಂಗಕ್ಕರ ಇಬ್ಬರು ಬೌಲರ್‌ಗಳನ್ನು ಎದುರಿಸಲು ಕಷ್ಟಪಡುತ್ತಿದ್ದರು ಎಂದು ಅವರೇ ಬಹಿರಂಗಪಡಿಸಿದ್ದಾರೆ. ಟೀಮ್ ಇಂಡಿಯಾದ ಮಾಜಿ ವೇಗಿ ಜಹೀರ್ ಖಾನ್ ಬೌಲಿಂಗ್ ಎದುರಿಸುವುದು ಕುಮಾರ್ ಸಂಗಕ್ಕರಗೆ ತುಂಬಾ ಕಠಿಣವಾಗಿತ್ತು ಎಂದು ಅವರು ಹೇಳಿದ್ದಾರೆ. ಜಹೀರ್ ಖಾನ್ ಅವರುನ್ನು ಸಾಕಷ್ಟು ಬಾರಿ ನಾನು ಎದುರಿಸಿದ್ದೇನೆ. ಆತನೋರ್ವ ತುಂಬಾ ಕಠಿಣ ಬೌಲರ್ ಎಂದು ಸಂಗಕ್ಕರ ಹೇಳಿಕೊಂಡಿದ್ದಾರೆ.

ಪಾಕ್ ವೇಗಿ ಎದುರಿಸುವುದು ದುಸ್ವಪ್ನ

ಪಾಕ್ ವೇಗಿ ಎದುರಿಸುವುದು ದುಸ್ವಪ್ನ

ಇನ್ನು ಇದೇ ಸಂದರ್ಭದಲ್ಲಿ ಸಂಗಕ್ಕರ ಪಾಕಿಸ್ತಾನ್ ದಿಗ್ಗಜ ಬೌಲರ್ ವಾಸಿಮ್ ಅಕ್ರಮ್ ಬೌಲಿಂಗ್ ಎದುರಿಸುವುದು ನಿಜಕ್ಕೂ ದುಸ್ವಪ್ನ ಎಂದು ಬಹಿರಂಗಪಡಿಸಿದ್ದಾರೆ. ಈ ಮೂಲಕ ಇಬ್ರೂ ಏಷ್ಯಾದ ಬೌಲರ್‌ಗಳನ್ನು ಎದುರಿಸುವುದೇ ಕಠಿಣವಾಗಿತ್ತು ಎಂದು ಕುಮಾರ್ ಸಂಗಕ್ಕರ ಹೇಳಿಕೊಂಡಿದ್ದಾರೆ.

ಮುರಳೀಧರನ್ ಬೌಲಿಂಗ್‌ಗೆ ಕೀಪಿಂಗ್ ಕಠಿಣ

ಮುರಳೀಧರನ್ ಬೌಲಿಂಗ್‌ಗೆ ಕೀಪಿಂಗ್ ಕಠಿಣ

ಇದೇ ಸಂದರ್ಭದಲ್ಲಿ ಶ್ರೇಷ್ಠ ವಿಕೆಟ್ ಕೀಪರ್ ಕೂಡ ಆಗಿರುವ ಸಂಗಕ್ಕರಾಗೆ ಯಾವ ಬೌಲರ್‌ನ ಬೌಲಿಂಗ್‌ಗೆ ವಿಕೆಟ್ ಕೀಪಿಂಗ್ ಕಠಿಣ ಎಂಬ ಪ್ರಶ್ನೆ ಎದುರಾಗಿತ್ತು. ಇದಕ್ಕೆ ಸ್ಪಿನ್ ದಿಗ್ಗಜ ಮುತ್ತಯ್ಯ ಮುರಳೀಧರನ್ ಹೆಸರನ್ನು ಕೈಗೆತ್ತಿಕೊಂಡರು. ಮುರಳೀಧರನ್ ಎಸೆತವನ್ನು ಊಹಿಸುವುದು ತುಂಬಾ ಕಷ್ಠ. ಆತನ ಬೌಲಿಂಗ್‌ನಲ್ಲಿನ ಬದಲಾವಣೆ ಹಾಗೂ ಸ್ವಿಂಗ್ ಮಾನಸಿಕ ಹಾಗೂ ದೈಹಿಕ ಫಿಟ್‌ನೆಸ್‌ಗೆ ಪರೀಕ್ಷೆಯಾಗಿತ್ತು ಎಂದು ಸಂಗಕ್ಕರ ಹೇಳಿಕೊಂಡಿದ್ದಾರೆ.

Story first published: Tuesday, August 11, 2020, 17:52 [IST]
Other articles published on Aug 11, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X