ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮಾಜಿ ಕ್ರೀಡಾ ಸಚಿವರ ಆರೋಪಕ್ಕೆ ಸಂಗಕ್ಕರ, ಜಯವರ್ಧನೆ ಪ್ರತಿಕ್ರಿಯೆ

Kumar Sangakkara Reacts After Former Sri Lanka Sports Minister Alleges

ಭಾರತದ ವಿರುದ್ಧದ 2011 ವಿಶ್ವಕಪ್‌ನ ಫೈನಲ್ ಪಂದ್ಯದಲ್ಲಿ ಫಿಕ್ಸಿಂಗ್ ನಡೆದಿತ್ತು ಎಂಬ ಶ್ರೀಲಂಕಾ ಮಾಜಿ ಕ್ರೀಡಾ ಸಚಿವರ ಆರೋಪಕ್ಕೆ ಕುಮಾರ್ ಸಂಗಕ್ಕರ ಪ್ರತಿಕ್ರಿಯಿಸಿದ್ದಾರೆ. ಅಂದು ಕುಮಾರ್ ಸಂಗಕ್ಕರ ಶ್ರೀಲಂಕಾ ತಂಡವನ್ನು ಮುನ್ನಡೆಸಿದ್ದರು. ಆ ಹಿನ್ನೆಲೆಯಲ್ಲಿ ಸಂಗಕ್ಕರ ಪ್ರತಿಕ್ರಿಯೆ ಪ್ರಾಮುಖ್ಯತೆ ಪಡೆದುಕೊಂಡಿದೆ.

2011 ಫೈನಲ್ ಪಂದ್ಯದಲ್ಲಿ ಶ್ರೀಲಂಕಾ ತಮಡ ಗೆಲುವನ್ನು ಪಡೆಯಬಹುದಾಗಿತ್ತು, ಆದರೆ ಶ್ರೀಲಂಕಾ ಅಂದಿನ ವಿಶ್ವಕಪ್ ಪಂದ್ಯವನ್ನು ಭಾರತಕ್ಕೆ ಮಾರಿಕೊಂಡಿತ್ತು. ಈ ಮಾತನ್ನು ನಾನು ಸಾಕಷ್ಟು ಎಚ್ಚರಿಕೆಯಿಂದಲೇ ಹೇಳುತ್ತಿದ್ದೇನೆ. ಆದರೆ ದೇಶದ ವಿಚಾರವಾಗಿರುವುದರಿಂದ ಹೆಚ್ಚಿನ ಸಂಗತಿಯನ್ನು ಬಹಿರಂಗ ಪಡಿಸಲು ಆಗುವುದಿಲ್ಲ ಎಂದಿದ್ದರು ಮಹಿಂದಾನಂದ ಅಲುತ್‌ಗಮಗೆ.

ಭಾರತ-ಶ್ರೀಲಂಕಾ ಫೈನಲ್ ಪಂದ್ಯದಲ್ಲಿ ಫಿಕ್ಸಿಂಗ್- ಲಂಕಾ ಮಾಜಿ ಕ್ರೀಡಾ ಸಚಿವ ಆರೋಪಭಾರತ-ಶ್ರೀಲಂಕಾ ಫೈನಲ್ ಪಂದ್ಯದಲ್ಲಿ ಫಿಕ್ಸಿಂಗ್- ಲಂಕಾ ಮಾಜಿ ಕ್ರೀಡಾ ಸಚಿವ ಆರೋಪ

ಶ್ರೀಲಂಕಾದ ಮಾಜಿ ಕ್ರೀಡಾ ಸಚಿವರ ಈ ಹೇಳಿಕೆಗೆ ಸಂಗಕ್ಕರ ಟ್ವೀಟ್ ಮೂಲಕ ಪ್ರತಿಕ್ರಿಯಿಸಿದ್ದಾರೆ. ಈ ಆರೋಪಕ್ಕೆ ಸಂಬಂಧಪಟ್ಟಂತೆ ಶ್ರೀಲಂಕಾದ ಮಾಜಿ ಕ್ರೀಡಾ ಸಚಿವರಲ್ಲಿ ದಾಖಲೆಯಿದ್ದರೆ ಅದನ್ನು ಐಸಿಸಿಯ ಮುಂದೆ ಇಡಲಿ. ಈ ವಿಚಾರದಲ್ಲಿ ವಿಸ್ತೃತ ತನಿಖೆ ನಡೆಯಲಿ ಎಂದು ಸಂಗಕ್ಕರ ಬರೆದುಕೊಂಡಿದ್ದಾರೆ.

ತನ್ನಲ್ಲಿರುವ ದಾಖಲೆಯನ್ನು ಅವರು ಐಸಿಸಿ ಮತ್ತು ಭ್ರಷ್ಟಾಚಾರ ವಿರೋಧಿ ಮತ್ತು ಭದ್ರತಾ ವಿಭಾಗಕ್ಕೆ ಸಲ್ಲಿಸಲಿ ಈ ಬಗ್ಗೆ ಸಂಪೂರ್ಣ ತನಿಖೆಯಾಗಲಿ ಎಂದು ಟ್ವಿಟ್ಟರ್‌ನಲ್ಲಿ ಕುಮಾರ್ ಸಂಗಕ್ಕರ ಆಗ್ರಹಿಸಿದ್ದಾರೆ. ಶ್ರೀಲಂಕಾದ ಇನ್ನೋರ್ವ ಮಾಜಿ ನಾಯಕ ಜಯವರ್ಧನೆ ಇದೇ ವಿಚಾರವಾಗಿ ಬರೆದಿದ್ದ ಟ್ವೀಟ್‌ಗೆ ಸಂಗಕ್ಕರ ಪ್ರತಿಕ್ರಿಯಿಸುತ್ತಾ ಈ ಮಾತನ್ನು ಹೇಳಿದ್ದಾರೆ.

ವಿಶ್ವಕಪ್‌ನಲ್ಲಿ ಕಪಿಲ್‌ ದೇವ್ ಸ್ಫೋಟಕ ಬ್ಯಾಟಿಂಗ್ ನಡೆಸಿದ್ದ ದಿನವಿದುವಿಶ್ವಕಪ್‌ನಲ್ಲಿ ಕಪಿಲ್‌ ದೇವ್ ಸ್ಫೋಟಕ ಬ್ಯಾಟಿಂಗ್ ನಡೆಸಿದ್ದ ದಿನವಿದು

ಶ್ರೀಲಂಕಾದ ಇನ್ನೋರ್ವ ದಿಗ್ಗಜ ಕ್ರಿಕೆಟಿಗ ಜಯವರ್ಧನೆ ಮಾಜಿ ಕ್ರೀಡಾ ಸಚಿವರ ಈ ಹೇಳಿಕೆ ರಾಜಕೀಯ ದುರುದ್ದೇಶವನ್ನು ಹೊಮದಿದೆಯಾ ಎಂಬ ಅನುಮಾನವನ್ನು ವ್ಯಕ್ತಪಡಿಸುವ ರೀತಿಯಲ್ಲಿ ಬರೆದುಕೊಂಡಿದ್ದಾರೆ. ಜಯವರ್ಧನೆ ಟ್ವಿಟ್ಟರ್‌ನಲ್ಲಿ "ಸದ್ಯದಲ್ಲಿ ಯಾವುದಾದರೂ ಚುನಾವಣೆ ನಡೆಯಲಿದೆಯಾ? ಸರ್ಕಸ್ ಆರಂಭವಾದಂತೆ ಭಾಸವಾಗುತ್ತಿದೆ. ಹೆಸರುಗಳು ಮತ್ತು ಸಾಕ್ಷ್ಯಗಳು ಎಲ್ಲಿ? ಎಂದು ಜಯವರ್ಧನೆ ಪ್ರಶ್ನಿಸಿದ್ದಾರೆ.

Story first published: Thursday, June 18, 2020, 22:20 [IST]
Other articles published on Jun 18, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X