ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮ್ಯಾಕ್ಸ್‌ವೆಲ್ ಆಟ ನೋಡಿ ಕಾಲೆಳೆದ ಕಿಂಗ್ಸ್ ಇಲೆವೆನ್ ಪಂಜಾಬ್ ಬ್ಯಾಟಿಂಗ್ ಕೋಚ್

KXIP batting coach pokes fun at KL Rahul after Glenn Maxwells batting

ಕಳೆದ ಐಪಿಎಲ್‌ನಲ್ಲಿ ಕೆಟ್ಟ ಪ್ರದರ್ಶನದಿಂದಾಗಿ ಹೆಚ್ಚು ಸುದ್ದಿಯಾದ ಆಟಗಾರ ಆಸ್ಟ್ರೇಲಿಯಾದ ಗ್ಲೆನ್ ಮ್ಯಾಕ್ಸ್‌ವೆಲ್. ಟೂರ್ನಿಯುದ್ದಕ್ಕೂ ಸಂಪೂರ್ಣವಾಗಿ ವಿಫಲರಾಗಿದ್ದ ಮ್ಯಾಕ್ಸ್‌ವೆಲ್ ಸಾಕಷ್ಟು ಟೀಕೆಗೆ ಗುರಿಯಾಗಿದ್ದರು. ಐಪಿಎಲ್‌ನಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಪರ ಕಣಕ್ಕಿಳಿದಿದ್ದ ಮ್ಯಾಕ್ಸ್‌ವೆಲ್ 13 ಪಂದ್ಯಗಳನ್ನಾಡಿದ್ದು ಕನಿಷ್ಟ ಒಂದು ಸಿಕ್ಸರ್ ಸಿಡಿಸುವಲ್ಲಿಯೂ ವಿಫಲರಾಗಿದ್ದರು. ಆದರೆ ಟೀಮ್ ಇಂಡಿಯಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಮ್ಯಾಕ್ಸ್‌ವೆಲ್ ಸ್ಪೋಟಕ ಪ್ರದರ್ಶನ ನೀಡಿ ಮಿಂಚಿದ್ದಾರೆ.

ಸಿಡ್ನಿ ಕ್ರಿಕೆಟ್ ಗ್ರೌಂಡ್‌ನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಮ್ಯಾಕ್ಸ್‌ವೆಲ್ ಆಸ್ಟ್ರೇಲಿಯಾ ತಂಡದ ಪರವಾಗಿ ಕೇವಲ 19 ಎಸೆತಗಳನ್ನು ಎದುರಿಸಿ 45 ರನ್ ಗಳಿಸಿದರು. ಇದರಲ್ಲಿ ಐದು ಬೌಂಡರಿ ಹಾಗೂ ಮೂರು ಭರ್ಜರಿ ಸಿಕ್ಸರ್ ಒಳಗೊಂಡಿತ್ತು.

ಭಾರತ vs ಆಸ್ಟ್ರೇಲಿಯಾ, ಮೊದಲನೇ ಏಕದಿನ ಪಂದ್ಯ, Live ಸ್ಕೋರ್‌ಭಾರತ vs ಆಸ್ಟ್ರೇಲಿಯಾ, ಮೊದಲನೇ ಏಕದಿನ ಪಂದ್ಯ, Live ಸ್ಕೋರ್‌

ಐಪಿಎಲ್‌ನಲ್ಲಿ 11 ಇನ್ನಿಂಗ್ಸ್‌ಗಳಲ್ಲಿ ಮ್ಯಾಕ್ಸ್‌ವೆಲ್ ಬ್ಯಾಟಿಂಗ್ ಮಾಡಿದ್ದರು. ಆದರೆ ಗಳಿಸಿದ್ದು ಕೇವಲ 108 ರನ್ ಮಾತ್ರ. ಅವರ ಹೈಯೆಸ್ಟ್ ರನ್ 32 ಆಗಿತ್ತು. ಅದಕ್ಕಿಂತಲೂ ಹೆಚ್ಚಾಗಿ ಮ್ಯಾಕ್ಸ್‌ವೆಲ್ ಸ್ಟ್ರೈಕ್‌ರೇಟ್ 101.88 ಆಗಿತ್ತು. ಐಪಿಎಲ್ ಟೂರ್ನಿಯಲ್ಲಿ ಮಾಕ್ಸ್‌ವೆಲ್ ಗಳಿಸಿದ್ದು 9 ಬೌಂಡರಿ ಮಾತ್ರವೇ ಆಗಿತ್ತು.

ಆದರೆ ಭಾರತದ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಒಂದೇ ಓವರ್‌ನಲ್ಲಿ ಮ್ಯಾಕ್ಸ್‌ವೆಲ್ 2 ಸಿಕ್ಸರ್ ಬಾರಿಸಿ ಮಿಂಚಿದ್ದರು. 236.84ರ ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್ ಬೀಸಿ ಟೀಮ್ ಇಂಡಿಯಾ ಬೌಲರ್‌ಗಳನ್ನು ಕಾಡಿದರು. ಈ ಭರ್ಜರಿ ಪ್ರದರ್ಶನಕ್ಕೆ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಬ್ಯಾಟಿಂಗ್ ಕೋಚ್ ಆಗಿದ್ದ ವಾಸಿಮ್ ಜಾಫರ್ ತಮಾಷೆಯಾಗಿ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದಾರೆ.

ಭಾರತ vs ಆಸೀಸ್: ಅದಾನಿ ವಿರುದ್ಧ ಇಬ್ಬರಿಂದ ಪ್ರತಿಭಟನೆ-ವಿಡಿಯೋಭಾರತ vs ಆಸೀಸ್: ಅದಾನಿ ವಿರುದ್ಧ ಇಬ್ಬರಿಂದ ಪ್ರತಿಭಟನೆ-ವಿಡಿಯೋ

ಈ ಪೋಸ್ಟ್‌ನಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ನಾಯಕ ಹಾಗೂ ಟೀಮ್ ಇಂಡಿಯಾ ಉಪನಾಯಕನಾಗಿರುವ ಕೆಎಲ್ ರಾಹುಲ್ ಅವರ ಸ್ಥಿತಿಯನ್ನು ಮೀಮೆ ಮೂಲಕ ಕಾಲೆಳೆದಿದ್ದಾರೆ. ಈ ಟ್ವಿಟ್‌ಗೆ ಸಾಕಷ್ಟು ಪ್ರತಿಕ್ರಿಯೆಗಳು ವ್ಯಕ್ತವಾಗುತ್ತದೆ.

Story first published: Friday, November 27, 2020, 14:44 [IST]
Other articles published on Nov 27, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X