ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

KXIP ನಾಯಕತ್ವ, ಕೆ.ಎಲ್ ರಾಹುಲ್ ಫಾರ್ಮ್‌ ಮೇಲೆ ಪರಿಣಾಮ ಬೀರಿಲ್ಲ: ಅಜಿತ್ ಅಗರ್ಕರ್

KXIP Captaincy Has Not Affected KL Rahuls Form: Ajit Agarkar

ಪ್ಲೇ ಆಫ್ ಹಂತಕ್ಕೆ ತಲುಪಲು ಗೆಲ್ಲಲೇಬೇಕಾದ ಬೇಕಾದ ಪಂದ್ಯದಲ್ಲಿ ಮುಗ್ಗರಿಸಿದ ಕಿಂಗ್ಸ್‌ ಇಲೆವೆನ್ ಪಂಜಾಬ್ ಟೂರ್ನಿಯಿಂದ ಹೊರಬಿದ್ದಿದ್ದಾಗಿದೆ. ಇಷ್ಟಾದರೂ ಅತಿ ಹೆಚ್ಚು ರನ್‌ಗಳಿಸಿರುವ ಪಟ್ಟಿಯಲ್ಲಿ KXIP ನಾಯಕ ಕೆ.ಎಲ್ ರಾಹುಲ್ ಅಗ್ರಸ್ಥಾನದಲ್ಲೇ ಇದ್ದಾರೆ.

14 ಪಂದ್ಯಗಳಲ್ಲಿ 670 ರನ್‌ಗಳಿಸಿರುವ ಕೆ.ಎಲ್ ರಾಹುಲ್ ಆರೆಂಜ್ ಕ್ಯಾಪ್ ಹೊಂದಿದ್ದು, ನಾಯಕತ್ವವು ಅವರ ಫಾರ್ಮ್ ಮೇಲೆ ಯಾವುದೇ ಪರಿಣಾಮ ಬೀರಿಲ್ಲ ಎಂದು ಟೀಮ್ ಇಂಡಿಯಾ ಮಾಜಿ ಕ್ರಿಕೆಟಿಗ ಅಜಿತ್ ಅಗರ್ಕರ್ ಅಭಿಪ್ರಾಯ ಪಟ್ಟಿದ್ದಾರೆ.

ಐಪಿಎಲ್‌ನಲ್ಲಿ ವಿಶೇಷ ಸಾಧನೆ ಮಾಡಿ ಕೊಹ್ಲಿ ಸಾಧನೆ ಸರಿಗಟ್ಟಿದ ಕೆಎಲ್ ರಾಹುಲ್ಐಪಿಎಲ್‌ನಲ್ಲಿ ವಿಶೇಷ ಸಾಧನೆ ಮಾಡಿ ಕೊಹ್ಲಿ ಸಾಧನೆ ಸರಿಗಟ್ಟಿದ ಕೆಎಲ್ ರಾಹುಲ್

''ಆತನ ಅದ್ಭುತ ಪ್ರದರ್ಶನವು ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಟೀಮ್ ಇಂಡಿಯಾ ಪರ ಮೂರೂ ಫಾರ್ಮೆಟ್‌ನಲ್ಲಿ ಆಡುವ ಅವಕಾಶವನ್ನು ಒದಗಿಸಿಕೊಟ್ಟಿದೆ. ಅಲ್ಲದೆ ನಿಗದಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಉಪನಾಯಕ ಸ್ಥಾನ ತಂದುಕೊಟ್ಟಿದೆ'' ಎಂದು ಅಗರ್ಕರ್ ಹೇಳಿದ್ದಾರೆ.

ಕೆ.ಎಲ್ ರಾಹುಲ್ ಭವಿಷ್ಯದಲ್ಲಿ ಟೀಮ್ ಇಂಡಿಯಾ ನಾಯಕನಾಗುವುದನ್ನು ನೋಡಬಹುದಾ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅಜಿತ್'' ಆಸ್ಟ್ರೇಲಿಯಾ ಪ್ರವಾಸಕ್ಕೆ ಅವರನ್ನು ಉಪನಾಯಕನನ್ನಾಗಿ ನೇಮಿಸುವ ರಾಷ್ಟ್ರೀಯ ಆಯ್ಕೆಗಾರರ ನಿರ್ಧಾರವು ಆ ಸೂಚನೆಯನ್ನು ನೀಡುತ್ತದೆ'' ಎಂದು ಅಜಿತ್ ಅಗರ್ಕರ್ ಹೇಳಿದರು.

''ಆಸ್ಟ್ರೇಲಿಯಾ ಸರಣಿಗೆ ಆಟಗಾರರ ಆಯ್ಕೆ ಮಾಡಿರುವುದನ್ನು ಗಮನಿಸಿದರೆ ಆತನನ್ನು ಆ ದೃಷ್ಟಿಯಿಂದಲೇ(ನಾಯಕತ್ವ) ನೋಡುತ್ತಿದ್ದಾರೆ. ಅತ್ಯಂತ ಪ್ರಮುಖ ವಿಚಾರ ಎಂದರೆ ಆತನ ನಾಯಕತ್ವವು ಆತನ ಫಾರ್ಮ್ ಮೇಲೆ ಯಾವುದೇ ಪರಿಣಾಮ ಬೀರಿಲ್ಲ ಎಂದು ಅಜಿತ್ ಅಗರ್ಕರ್ ಹೇಳಿದ್ದಾರೆ.

ಐಪಿಎಲ್ ನಂತಹ ಅಧಿಕ-ಒತ್ತಡದ ಟೂರ್ನಿಯು ಯಾವುದೇ ಹೊಸ ಯುವ ನಾಯಕನ ಕಾರ್ಯಕ್ಷಮತೆಯನ್ನು ಹಾನಿಗೊಳಿಸಬಹುದು ಎಂದು ಅಗರ್ಕರ್ ಹೇಳಿದರು. ಆದರೆ ಕೆಎಲ್ ರಾಹುಲ್ ಅವರ ವಿಷಯ ಹೀಗಿಲ್ಲ. ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ತಮ್ಮ ತಂಡವನ್ನು ಮುನ್ನೆಡೆಸುವುದರ ಜೊತೆಗೆ ಪ್ರತಿ ಸಂದರ್ಭದಲ್ಲೂ ರನ್‌ಗಳಿಸಿದ್ದಾರೆ ಎಂದು ರಾಹುಲ್ ಕುರಿತು ಅಗರ್ಕರ್ ಹೊಗಳಿದ್ದಾರೆ.

Story first published: Monday, November 2, 2020, 21:52 [IST]
Other articles published on Nov 2, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X