ಸೇಂಟ್ ಲೂಸಿಯಾ ಫ್ರಾಂಚೈಸಿ ಸ್ವಾಧೀನಕ್ಕೆ ಮುಂದಾದ ಕಿಂಗ್ಸ್‌ XI ಪಂಜಾಬ್

ಪಂಜಾಬ್, ಫೆಬ್ರವರಿ 17: ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್‌)ನ ಆಕರ್ಷಣೀಯ ಫ್ರಾಂಚೈಸಿ, ಅದರಲ್ಲೂ ಈ ಬಾರಿ ಅತೀ ಹೆಚ್ಚು ಸಂಖ್ಯೆಯಲ್ಲಿ ಕರ್ನಾಟಕದ ಆಟಗಾರರನ್ನು ಹೊಂದಿರುವ ಕಿಂಗ್ಸ್ ಇಲೆವೆನ್ ಪಂಜಾಬ್‌, ಕೆರಿಬಿಯನ್ ಲೀಗ್‌ (ಸಿಪಿಎಲ್‌) ಫ್ರಾಂಚೈಸಿ ಸೇಂಟ್‌ ಲೂಸಿಯಾವನ್ನು ಸ್ವಾಧೀನಪಡಿಸಿಕೊಳ್ಳಲು ಮುಂದಾಗಿದೆ.

ಆರ್‌ಸಿಬಿ ತಂಡದ ಪಂದ್ಯಗಳು ಎಲ್ಲೆಲ್ಲಿ ಯಾವಾಗ? ಸಂಪೂರ್ಣ ಮಾಹಿತಿ ಇಲ್ಲಿದೆ

ಸೇಂಟ್ ಲೂಸಿಯಾ ಝೌಕ್ಸ್ ಅನ್ನು ಕಿಂಗ್ಸ್ XI ಪಂಜಾಬ್ ಸ್ವಾಧೀನಪಡಿಸಿಕೊಂಡರೆ, ಸಿಪಿಎಲ್‌ನ ಫ್ರಾಂಚೈಸಿಯನ್ನು ತನ್ನ ತೆಕ್ಕೆಗೆ ತೆಗೆದುಕೊಂಡ ಎರಡನೇ ಐಪಿಎಲ್ ಫ್ರಾಂಚೈಸಿಯಾಗಿ ಕೆXIಪಿ ಗುರುತಿಸಿಕೊಳ್ಳಲಿದೆ. ಇದಕ್ಕೂ ಮುನ್ನ ಕೋಲ್ಕತ್ತಾ ನೈಟ್ ರೈಡರ್ಸ್ ಫ್ರಾಂಚೈಸಿ, ಸಿಪಿಎಲ್‌ನ ಟ್ರಿಂಬಾಗೊ ನೈಟ್ ರೈಡರ್ಸ್ ಫ್ರಾಂಚೈಸಿಯನ್ನು ತನ್ನ ವಶಕ್ಕೆ ತೆಗೆದುಕೊಂಡಿತ್ತು.

ICC T20I ranking: ನಂ.1 ಸ್ಥಾನಿ ಅಝಮ್ ಬೆನ್ನಲ್ಲೇ ಕನ್ನಡಿಗ ಕೆಎಲ್ ರಾಹುಲ್!

'ಸಿಪಿಎಲ್‌ನ ಭಾಗವಾಗಲು ನಾವು ಒಪ್ಪಂದಕ್ಕೆ ಸಹಿ ಹಾಕಲಿದ್ದೇವೆ. ನಾವು ಸೇಂಟ್ ಲೂಸಿಯಾ ಫ್ರ್ಯಾಂಚೈಸ್ ಪಡೆಯುತ್ತಿದ್ದೇವೆ. ನಾವು ಬಿಸಿಸಿಐ ಅನುಮೋದನೆ ಪಡೆದ ನಂತರವೇ ಕಂಪನಿಯ ರಚನೆ ಮತ್ತು ಹೆಸರನ್ನು ಸಂವಹನ ಮಾಡಲಾಗುತ್ತದೆ,' ಎಂದು ಕೆXIಪಿ ಸಹ ಮಾಲಕ ನೆಸ್ ವಾಡಿಯಾ ಪಿಟಿಐ ಜೊತೆ ಹೇಳಿಕೊಂಡಿದ್ದಾರೆ.

ಸಿಪಿಎಲ್‌ನಲ್ಲಿ ಸ್ಪರ್ಧಿಸುತ್ತಿರುವ 6 ತಂಡಗಳಲ್ಲಿ ಸೇಂಟ್ ಲೂಸಿಯಾ ಝೌಕ್ಸ್ ತಂಡ ಕೂಡ ಒಂದು. ವೆಸ್ಟ್ ಇಂಡೀಸ್ ಮಾಜಿ ನಾಯಕ ಡ್ಯಾರೆನ್ ಸಮಿ ಸದ್ಯ ಈ ತಂಡದ ನಾಯಕತ್ವ ವಹಿಸಿಕೊಂಡಿದ್ದಾರೆ. ಅಂದ್ಹಾಗೆ ಐಪಿಎಲ್ ಮಾಜಿ ಚಾಂಪಿಯನ್ಸ್ ಕೆಕೆಆರ್, 2015ರಲ್ಲಿ ಟ್ರಿಂಬಾಗೊ ನೈಟ್‌ ರೈಡರ್ಸ್ ಅನ್ನು ತನ್ನ ಸ್ವಾಧೀನಕ್ಕೆ ತೆಗೆದುಕೊಂಡಿತ್ತು.

For Quick Alerts
ALLOW NOTIFICATIONS
For Daily Alerts

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Monday, February 17, 2020, 22:44 [IST]
Other articles published on Feb 17, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X