ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕೊನೆಯ 10 ಓವರ್‌ಗಳನ್ನ ''ಡೆತ್‌ ಓವರ್ಸ್‌'' ಎಂದು ಕರೆಯಬೇಡಿ: ಎಲ್. ಶಿವರಾಮಕೃಷ್ಣನ್ ಮನವಿ

L Shivaramakrishnan

ಭಾರತದ ಮಾಜಿ ಸ್ಪಿನ್ನರ್, ವೀಕ್ಷಕ ವಿವರಣೆಗಾರ ಲಕ್ಷ್ಮಣ್ ಶಿವರಾಮಕೃಷ್ಣನ್ ಕ್ರಿಕೆಟ್‌ನಲ್ಲಿ ಸಾಮಾನ್ಯವಾಗಿ ಬಳಸಲಾಗುವ ಡೆತ್‌ ಓವರ್ಸ್‌ ಪದವನ್ನು ಇನ್ಮುಂದೆ ಯಾರೂ ಬಳಸಬೇಡಿ ಎಂದು ವಿಶ್ವದ ಎಲ್ಲಾ ವೀಕ್ಷಕ ವಿವರಣೆಗಾರರಿಗೆ ಮನವಿ ಮಾಡಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ ಕೊನೆಯ 10 ಓವರ್‌ಗಳಲ್ಲಿ ಕ್ರಿಕೆಟ್ ಭಾಷೆಯಲ್ಲಿ ಡೆತ್ ಓವರ್ಸ್‌ ಎಂದು ಬಳಸುವುದುಂಟು.

ಲಿಮಿಟೆಡ್ ಓವರ್‌ ಕ್ರಿಕೆಟ್‌ನಲ್ಲಿ ಕೊನೆಯ ಕೆಲವು ಓವರ್‌ಗಳು ಅತ್ಯಂತ ನಿರ್ಣಾಯಕವಾಗಿವೆ. ಏಕೆಂದರೆ ಬ್ಯಾಟಿಂಗ್ ತಂಡವು ಗರಿಷ್ಠ ರನ್‌ಗಳನ್ನು ಸಂಗ್ರಹಿಸಲು ನೋಡುತ್ತದೆ ಹಾಗೆ ಅದೇ ರೀತಿಯಲ್ಲಿ ಬೌಲರ್‌ಗಳು ಹಾಗೆ ಮಾಡುವುದನ್ನು ತಡೆಯಲು ಪ್ರಯತ್ನಿಸುತ್ತಾರೆ. ಆಟದ ಈ ಹಂತಕ್ಕೆ ವೀಕ್ಷಕ ವಿವರಣೆಗಾರರು "ಡೆತ್ ಓವರ್ಸ್‌" ಎಂಬ ಪದವನ್ನು ಬಳಸುತ್ತಾರೆ. ಆದ್ರೆ ಈ ಪದಬಳಕೆ ಪ್ರಸ್ತುತ ಜಗತ್ತಿನ ಸನ್ನಿವೇಶದಲ್ಲಿ ಸರಿಯಿಲ್ಲ ಎಂಬುದು ಶಿವರಾಮಕೃಷ್ಣನ್ ವಾದವಾಗಿದೆ.

ಜನವರಿ 19ರಂದು ಟ್ವೀಟ್ ಮಾಡಿರುವ ಶಿವರಾಮಕೃಷ್ಣನ್ ಕೊನೆಯ ಓವರ್‌ಗಳನ್ನ ಡೆತ್ ಓವರ್ಸ್ ಎಂಬ ಪದಬಳಕೆಯು ಹೆಚ್ಚು ಸೂಕ್ತವಾಗಿಲ್ಲ, ಹೀಗಾಗಿ ಅದನ್ನ ಬಳಸದಂತೆ ಉಳಿದ ವೀಕ್ಷಕ ವಿವರಣೆಗಾರರಿಗೆ ಮನವಿ ಮಾಡಿದ್ದಾರೆ. ಪ್ರಸ್ತುತ ವಿಶ್ವವು ಕೋವಿಡ್-19 ಸಾಂಕ್ರಾಮಿಕ ರೋಗದಿಂದ ಬಳಲುತ್ತಿದ್ದು, ದಿನನಿತ್ಯ ಸಾವಿರಾರು ಜನರು ಸಾವನ್ನಪ್ಪುತ್ತಿದ್ದಾರೆ. ಹೀಗಾಗಿ ಕೊನೆಯ ಓವರ್‌ಗಳಲ್ಲಿ 'ಡೆತ್' ಎಂಬ ಪದಬಳಕೆಯು ಈ ಕಷ್ಟದ ಸಂದರ್ಭದಲ್ಲಿ ಸರಿಯಾಗಿಲ್ಲ ಎಂದು ಶಿವರಾಮಕೃಷ್ಣನ್ ಅಭಿಪ್ರಾಯ ಪಟ್ಟಿದ್ದಾರೆ.

"ಎಲ್ಲ ಕಮೆಂಟೇಟರ್‌ಗಳಿಗೆ ವಿನಂತಿ, ದಯವಿಟ್ಟು 'ಡೆತ್ ಓವರ್' ಎಂದು ಹೇಳಬೇಡಿ. ಒಂದೋ ಇದನ್ನು ಸ್ಲಾಗ್ ಓವರ್ ಅಥವಾ ಎಂಡ್ ಓವರ್ ಎಂದು ಕರೆಯಿರಿ. ನಾವು ಕಠಿಣ ಸಮಯವನ್ನು ಎದುರಿಸುತ್ತಿದ್ದೇವೆ. ಸಾವು ಒಳ್ಳೆಯ ಮಾತಲ್ಲ. ಕೊನೆಯ ಹತ್ತು ಓವರ್‌ಗಳು ಖಂಡಿತವಾಗಿಯೂ ಪ್ರಮುಖ ಓವರ್‌ಗಳು ಆದರೆ ಅದು ತಂಡದ ಪರ ಸಾಗಗಿದ್ರೆ, ಯಾರೊಬ್ಬರೂ ಸಾಯುವುದಿಲ್ಲ, "ಎಂದು ಶಿವರಾಮಕೃಷ್ಣನ್ ಟ್ವೀಟ್ ಮಾಡಿದ್ದಾರೆ.

ಏಕದಿನ ಕ್ರಿಕೆಟ್‌ನಲ್ಲಿ ಕೊನೆಯ 10 ಓವರ್‌ಗಳನ್ನು ''ಡೆತ್ ಓವರ್ಸ್'' ಎಂದು ಪರಿಗಣಿಸಿದ್ರೆ, ಟಿ20 ಕ್ರಿಕೆಟ್‌ನಲ್ಲಿ ಕೊನೆಯ ಐದು ಓವರ್‌ಗಳಿಗೆ ಈ ಪದ ಬಳಕೆ ಮಾಡಲಾಗುತ್ತದೆ. ಮೇಲೆ ತಿಳಿಸಿದಂತೆ ಈ ಓವರ್‌ಗಳಲ್ಲಿ ಉಭಯ ತಂಡಗಳಿಗೂ ಬಹಳ ಪ್ರಮುಖವಾದದ್ದು ಮತ್ತು ನಿರ್ಣಾಯಕವಾಗಿದೆ. ಏಕೆಂದರೆ ಇದು ಪಂದ್ಯದ ಪ್ರಮುಖ ಹಂತವನ್ನ ನಿರ್ಧರಿಸುತ್ತದೆ. ಇದು ನಾಯಕ ಮತ್ತು ಆಟಗಾರರ ಕೌಶಲ್ಯ ಮತ್ತು ಮಾನಸಿಕ ಶಕ್ತಿಯನ್ನು ಸಹ ಪರೀಕ್ಷಿಸುತ್ತದೆ.

2000ನೇ ಇಸವಿಯಿಂದ ವೀಕ್ಷಕ ವಿವರಣೆಗಾರ ಆಗಿರುವ ಎಲ್. ಶಿವರಾಮಕೃಷ್ಣನ್

ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಬಳಿಕ ಮಾಜಿ ಸ್ಪಿನ್ನರ್ ಎಲ್. ಶಿವರಾಮಕೃಷ್ಣನ್ 2000ನೇ ಇಸವಿಯಿಂದ ವೀಕ್ಷಕ ವಿವರಣೆಗಾರನಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸದ್ಯಕ್ಕೆ, ಅವರು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯ(ಐಸಿಸಿ) ಕ್ರಿಕೆಟ್ ಸಮಿತಿಯಲ್ಲಿ ಆಟಗಾರರ ಪ್ರತಿನಿಧಿಗಳಲ್ಲಿ ಒಬ್ಬರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಏತನ್ಮಧ್ಯೆ, ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಮೊದಲ ಏಕದಿನ ಪಂದ್ಯ ಮುಕ್ತಾಯದ ಒಂದು ದಿನದ ನಂತರ ಶಿವರಾಮಕೃಷ್ಣನ್ ಅವರು ಈ ಸಲಹೆ ನೀಡಿದ್ದಾರೆ.

Ind vs SA 2nd ODI: ಟಾಸ್‌ ಗೆದ್ದ ಟೀಂ ಇಂಡಿಯಾ ಬ್ಯಾಟಿಂಗ್ ಆಯ್ಕೆ, ಪ್ಲೇಯಿಂಗ್ 11 LIVEInd vs SA 2nd ODI: ಟಾಸ್‌ ಗೆದ್ದ ಟೀಂ ಇಂಡಿಯಾ ಬ್ಯಾಟಿಂಗ್ ಆಯ್ಕೆ, ಪ್ಲೇಯಿಂಗ್ 11 LIVE

ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ವಿರುದ್ಧ ದಕ್ಷಿಣ ಆಫ್ರಿಕಾ 31ರನ್‌ಗಳ ಗೆಲುವು ಸಾಧಿಸಿತು. ದಕ್ಷಿಣ ಆಫ್ರಿಕಾ ನೀಡಿದ 297ರನ್‌ಗಳ ಗುರಿಯನ್ನ ಬೆನ್ನತ್ತುವಲ್ಲಿ ವಿಫಲಗೊಂಡ ಭಾರತ ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ವೈಫಲ್ಯದಿಂದ ಪ್ರಮುಖ ವಿಕೆಟ್‌ಗಳನ್ನ ಕಳೆದುಕೊಂಡಿತು.

ಇಂದು ಪಾರ್ಲ್‌ನ ಬೋಲ್ಯಾಂಡ್ ಪಾರ್ಕ್‌ನಲ್ಲಿ ನಡೆಯುತ್ತಿರುವ ಎರಡನೇ ಏಕದಿನ ಪಂದ್ಯದಲ್ಲಿ ಟಾಸ್‌ ಗೆದ್ದ ಟೀಂ ಇಂಡಿಯಾ ಮೊದಲು ಬ್ಯಾಟಿಂಗ್ ಆಯ್ದುಕೊಂಡಿದ್ದು, ತಂಡದಲ್ಲಿ ಯಾವುದೇ ಆಟಗಾರರ ಬದಲಾವಣೆ ಇಲ್ಲ. ಭಾರತ ಉತ್ತಮ ಆರಂಭ ಪಡೆದ್ರೂ ಸಹ ಪ್ರಮುಖ ಎರಡು ವಿಕೆಟ್ ಕಳೆದುಕೊಂಡಿದೆ. ದಕ್ಷಿಣ ಆಫ್ರಿಕಾ ತಂಡದಲ್ಲಿ ಒಂದು ಬದಲಾವಣೆಯಾಗಿದ್ದು, ವೇಗಿ ಮಾರ್ಕೊ ಯಾನ್ಸನ್ ಬದಲು ಸಿಸಂದ ಮಗಲಾ ಸ್ಥಾನ ಪಡೆದಿದ್ದಾರೆ. ಮೊದಲ ಮೂರು ಓವರ್‌ಗಳಲ್ಲಿ ಈತ 29ರನ್ ನೀಡಿ ದುಬಾರಿಯೆನಿಸಿದ್ರು.

Story first published: Friday, January 21, 2022, 17:50 [IST]
Other articles published on Jan 21, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X