ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟೆಸ್ಟ್, ಏಕದಿನದಲ್ಲಿ ಅಬ್ಬರಿಸಿದ ಬಳಿಕ ಟಿ20 ತಂಡದ ಮೇಲೆ ಕಣ್ಣಿಟ್ಟ ಆಸಿಸ್ ಯುವ ಬ್ಯಾಟ್ಸ್‌ಮನ್

Labuschagne Eyes T20 Chance After Stellar Start To Australia Career

ಆಸ್ಟ್ರೇಲಿಯಾ ಕ್ರಿಕೆಟ್‌ನಲ್ಲಿ ಸದ್ಯ ಯುವ ಕ್ರಿಕೆಟಿಗನೋರ್ವ ಮಿಂಚುಹರಿಸುತ್ತಿದ್ದಾನೆ. ಸ್ಮಿತ್, ವಾರ್ನರ್ ನಿಷೇಧಕ್ಕೊಳಗಾದ ಸಂದರ್ಭದಲ್ಲಿ ಆಸಿಸ್ ತಂಡದಲ್ಲಿ ಅವಕಾಶವನ್ನು ಗಿಟ್ಟಿಸಿಕೊಂಡ ಈತ ಈಗ ತಂಡದ ಪ್ರಮುಖ ಸದಸ್ಯನಾಗಿದ್ದಾನೆ. ಮಾತ್ರವಲ್ಲ ಈ ಬಾರಿಯ ವಾರ್ಷಿಕ ಗುತ್ತಿಗೆ ಪಟ್ಟಿಯಲ್ಲಿ ಸ್ಥಾನವನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾನೆ.

ಆಸ್ಟ್ರೇಲಿಯಾ ಕ್ರಿಕೆಟ್‌ನಲ್ಲಿ ಹೀಗೆ ಸುದ್ದಿಯಾಗುತ್ತಿರುವ ಆಟಗಾರ ಬೇರೆ ಯಾರೂ ಅಲ್ಲ. ಆದು 25 ವರ್ಷದ ಯುವ ಕ್ರಿಕೆಟಿಗ ಮಾರ್ನಸ್ ಲ್ಯಾಬುಶೈನ್. ಏಕದಿನ ಕ್ರಿಕೆಟ್‌ನಲ್ಲಿ 50.83ರ ಸರಾಸರಿಯಲ್ಲಿ ಬ್ಯಾಟ್ ಬೀಸುತ್ತಿದ್ದರೆ ಟೆಸ್ಟ್ ಕ್ರಿಕೆಟ್‌ನಲ್ಲಿ ಲ್ಯಾಬುಶೈನ್ 63.43 ಸರಾಸರಿಯಲ್ಲಿ ಬ್ಯಾಟಿಂಗ್ ಮಾಡಿ ಆಸ್ಟ್ರೇಲಿಯಾದ ಪ್ರಮುಖ ಬ್ಯಾಟ್ಸ್‌ಮನ್ ಆಗಿ ಗುರುತಿಸಿಕೊಂಡಿದ್ದಾರೆ.

ಧೋನಿ ಅಲ್ಲ ಯುವರಾಜ್ ಅಲ್ಲ: 2011ರ ವಿಶ್ವಕಪ್ ಗೆಲ್ಲಲು ಈತನೇ ಕಾರಣ ಎಂದ ರೈನಾಧೋನಿ ಅಲ್ಲ ಯುವರಾಜ್ ಅಲ್ಲ: 2011ರ ವಿಶ್ವಕಪ್ ಗೆಲ್ಲಲು ಈತನೇ ಕಾರಣ ಎಂದ ರೈನಾ

ಈಗ ಲ್ಯಾಬುಶೈನ್ ಟಿ20 ಫಾರ್ಮ್ಯಾಟ್‌ನಲ್ಲಿ ಆಸ್ಟ್ರೇಲಿಯಾ ತಂಡವನ್ನು ಪ್ರತಿನಿಧಿಸಬೇಕು ಎಂಬ ಗುರಿಯನ್ನು ಹೊಂದಿದ್ದಾರೆ. ಟಿ20 ಮಾದರಿಯಲ್ಲಿ ಲ್ಯಾಬುಶೈನ್ ದೇಸಿ ಟೂರ್ನಿಯಲ್ಲಿ ಆಡಿದ್ದರೂ ಗಮನಾರ್ಹ ಪ್ರದರ್ಶನ ನೀಡಿಲ್ಲ. 10 ಪಂದ್ಯಗಳಲ್ಲಿ ಟಿ20 ಕ್ರಿಕೆಟ್ ಆಡಿರುವ ಲ್ಯಾಬುಶೈನ್ 12.12ರ ಸರಾಸರಿಯಲ್ಲಿ 97 ರನ್ ಅಷ್ಟೇ ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಅಂತಾರಾಷ್ಟ್ರೀಯ ಟಿ20 ಪಂದ್ಯದಲ್ಲಿ ಈವರೆಗೂ ಲ್ಯಾಬುಶೈನ್ ಅವಕಾಶವನ್ನು ಪಡೆದುಕೊಂಡಿಲ್ಲ.

ವೀಡಿಯೋ ಸಂದರ್ಶನವೊಂದರಲ್ಲಿ ಪಾಲ್ಗೊಂಡಿದ್ದ ಲ್ಯಾಬುಶೈನ್, ನನ್ನನ್ನು ನಾನು ಕೇವಲ ಎರಡು ಮಾದರಿಯ ಕ್ರಿಕೆಟ್‌ಗಷ್ಟೇ ಸೀಮಿತಗೊಳಿಸಲು ಬಯಸುವುದಿಲ್ಲ, ಚುಟುಕು ಮಾದರಿಯಲ್ಲೂ ಆಡುವ ಅವಕಾಶವನ್ನು ಖಂಡಿತಾ ಪಡೆಯುತ್ತೇನೆ ಎಂದು ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.

ಆನ್‌ಲೈನ್ ಸಂಗೀತ ಕಛೇರಿಯಲ್ಲಿ ಪಾಲ್ಗೊಂಡ ವಿರಾಟ್, ರೋಹಿತ್, ಸಾನಿಯಾಆನ್‌ಲೈನ್ ಸಂಗೀತ ಕಛೇರಿಯಲ್ಲಿ ಪಾಲ್ಗೊಂಡ ವಿರಾಟ್, ರೋಹಿತ್, ಸಾನಿಯಾ

ಕೇವಲ ಎರಡು ಮಾದರಿಗಷ್ಟೇ ನನ್ನನ್ನು ನಾನು ಸೀಮಿತಗೊಳಿಸುವುದರಲ್ಲಿ ಅರ್ಥವಿಲ್ಲ, ಟಿ20 ಮಾದರಿಯತ್ತಲೂ ನನ್ನ ಗಮನವನ್ನು ಹರಿಸಿದ್ದೇನೆ ಅಲ್ಲೂ ಅವಕಾಶವನ್ನು ಪಡೆದುಕೊಳ್ಳುತ್ತೇನೆ ಎಂದು ಲ್ಯಾಬುಶೈನ್ ಸಂದರ್ಶನದ ಸಂದರ್ಭದಲ್ಲಿ ಹೇಳಿಕೊಂಡಿದ್ದಾರೆ.

Story first published: Monday, May 4, 2020, 16:24 [IST]
Other articles published on May 4, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X