ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಾರ್ನರ್ ಸೇರ್ಪಡೆ ಆಸ್ಟ್ರೇಲಿಯಾಗೆ ದೊಡ್ಡ ಬಲ ನೀಡಲಿದೆ: ಮಾರ್ನಸ್ ಲ್ಯಾಬುಶೈನ್

Labuschagne feels Warner will be big inclusion for hosts

ಆಸ್ಟ್ರೇಲಿಯಾ ಹಾಗೂ ಟೀಮ್ ಇಂಡಿಯಾ ಮೊದಲೆರಡು ಟೆಸ್ಟ್ ಪಂದ್ಯಗಳಲ್ಲಿ ತಲಾ ಒಂದೊಂದು ಗೆಲುವನ್ನು ಸಾಧಿಸಿ ಸರಣಿಯನ್ನು 1-1 ಅಂತರದಿಂದ ಸಮಬಲಗೊಳಿಸಿದೆ. ಈಗ ಎರಡು ತಂಡಗಳು ಕೂಡ ಸಿಡ್ನಿಯಲ್ಲಿ ನಡೆಯಲಿರುವ ಮೂರನೇ ಟೆಸ್ಟ್‌ನತ್ತ ದೃಷ್ಟಿಯಿಟ್ಟಿದೆ. ಆಸಿಸ್ ತಂಡದ ಯುವ ಆಟಗಾರ ಮಾರ್ನಸ್ ಲ್ಯಾಬುಶೈನ್ ಸಿಡ್ನಿ ಟೆಸ್ಟ್ ಬಗ್ಗೆ ಪ್ರತಿಕ್ರಿಯಿಸಿದ್ದು ಡೇವಿಡ್ ವಾರ್ನರ್ ತಂಡಕ್ಕೆ ಸೇರ್ಪಡೆ ಆಸಿಸ್‌ಗೆ ದೊಡ್ಡ ಬಲ ನೀಡಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.

ಡೇವಿಡ್ ವಾರ್ನರ್ ಮೂರನೇ ಟೆಸ್ಟ್‌ನಲ್ಲಿ ಕಣಕ್ಕಿಳಿಯುವ ಬಗ್ಗೆ ಲ್ಯಾಬುಶೈನ್ ವಿಶ್ವಾಸವನ್ನು ವ್ಯಕ್ತಪಡಿಸಿದ್ದು ಅವರ ಸೇರ್ಪಡೆ ತಂಡಕ್ಕೆ ಶಕ್ತಿ ನೀಡಲಿದೆ ಎಂದಿದ್ದಾರೆ. ಡೇವಿಡ್ ವಾರ್ನರ್ ಅವರು ತಂಡಕ್ಕೆ ಸೇರ್ಪಡೆಗೊಳ್ಳುವುದರಿಂದ ಆಸ್ಟ್ರೇಲಿಯಾ ಬ್ಯಾಟಿಂಗ್‌ನಲ್ಲಿ ಮಾತ್ರವೇ ಬಲಿಷ್ಠವಾಗುವುದಿಲ್ಲ, ಅಂಗಳದಲ್ಲಿ ಅವರ ಹಾಜರಿ ಭಯಂಕರವಾದ ಶಕ್ತಿಯನ್ನು ನೀಡಲಿದೆ ಎಂದಿದ್ದಾರೆ ಮಾರ್ನಸ್ ಲ್ಯಾಬುಶೈನ್.

2021ರ ಟೀಮ್ ಇಂಡಿಯಾದ ಸಂಪೂರ್ಣ ವೇಳಾಪಟ್ಟಿ ಹೇಗಿದೆ ನೋಡಿ2021ರ ಟೀಮ್ ಇಂಡಿಯಾದ ಸಂಪೂರ್ಣ ವೇಳಾಪಟ್ಟಿ ಹೇಗಿದೆ ನೋಡಿ

ಭಾರತದ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಎರಡು ಪಂದ್ಯಗಳಲ್ಲಿ ಗಾಯದ ಕಾರಣದಿಂದಾಗಿ ಡೇವಿಡ್ ವಾರ್ನರ್ ಕಣಕ್ಕಿಳಿದಿರಲಿಲ್ಲ. ಅಂತಿಮ ಎರಡು ಟೆಸ್ಟ್ ಪಂದ್ಯಗಳಲ್ಲಿ ಡೇವಿಡ್ ವಾರ್ನರ್ ಕಣಕ್ಕಿಳಿಯುವ ನಿರೀಕ್ಷೆಯಿದೆ. ಮೂರನೇ ಟೆಸ್ಟ್ ಪಂದ್ಯ ಜನವರಿ 7ರಿಂದ ಆರಂಭವಾಗಲಿದೆ.

"ಡೇವಿಡ್ ವಾರ್ನರ್ ಮುರನೇ ಟೆಸ್ಟ್ ಪಂದ್ಯದಲ್ಲಿ ಆಡುವ ಬಳಗದಲ್ಲಿ ಕಾಣಿಸಿಕೊಮಡರೆ ಅದು ನಮ್ಮ ತಂಡಕ್ಕೆ ದೊಡ್ಡ ಸೇರ್ಪಡೆಯಾಗಲಿದೆ. ಆತ 7000 ಟೆಸ್ಟ್ ರನ್ ಗಳಿಸಿದ್ದು 50 ರಷ್ಟು ಸರಾಸರಿಯನ್ನು ಹೊಂದಿದ್ದಾರೆ. ಆತನೋರ್ವ ಅದ್ಭುತವಾದ ಆಟಗಾರ" ಎಂದು ಲ್ಯಾಬುಶೈನ್ ಆನ್‌ಲೈನ್ ಸಂವಾದದಲ್ಲಿ ಹೇಳಿಕೊಂಡಿದ್ದಾರೆ.

ಸಿಡ್ನಿ ಟೆಸ್ಟ್: ನೆಟ್ ಅಭ್ಯಾಸದಲ್ಲಿ ನಿರತನಾದ ರೋಹಿತ್ ಶರ್ಮಾ: ವಿಡಿಯೋಸಿಡ್ನಿ ಟೆಸ್ಟ್: ನೆಟ್ ಅಭ್ಯಾಸದಲ್ಲಿ ನಿರತನಾದ ರೋಹಿತ್ ಶರ್ಮಾ: ವಿಡಿಯೋ

ಆತನೋರ್ವ ಅದ್ಭುತವಾದ ಸಾಮರ್ಥ್ವಯವನ್ನು ಹೊಂದಿದ ಆಟಗಾರನಾಗಿದ್ದಾರೆ. ತಂಡದ ಜೊತೆಗಿರುವಾಗ ಹಾಗೂ ಅಂಗಳದಲ್ಲಿರುವಾಗ ಅವರ ಎನರ್ಜಿ ಅದ್ಭುತವಾಗಿದೆ. ಆತ ತಂಡದೊಂದಿಗೆ ಇರುವುದು ಶ್ರೇಷ್ಠವಾದ ಅನುಭವವಾಗಿದೆ ಎಂದು ಮಾರ್ನಸ್ ಲ್ಯಾಬುಶೈನ್ ಡೇವಿಡ್ ವಾರ್ನರ್ ಬಗ್ಗೆ ಹೇಳಿಕೆ ನೀಡಿದ್ದಾರೆ.

Story first published: Saturday, January 2, 2021, 9:28 [IST]
Other articles published on Jan 2, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X