ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಪಾಕ್ ಅಸಲಿಯತ್ತು ಬಿಡಿಸಿಟ್ಟ ಮಾಜಿ ಬ್ಯಾಟಿಂಗ್ ಕೋಚ್ ಗ್ರ್ಯಾಂಟ್ ಫ್ಲವರ್

‘Lack of freedom’ most frustrating thing about living in Pakistan: Grant Flower

ಇಸ್ಲಮಾಬಾದ್, ಆಗಸ್ಟ್ 16: ಪಾಕಿಸ್ತಾನ ದೇಶದಲ್ಲಿನ ಬದುಕು ಮತ್ತು ಪಾಕ್ ಕ್ರಿಕೆಟ್ ಬೋರ್ಡ್‌ನಲ್ಲಿ ಸುಮಾರು ಐದು ವರ್ಷಗಳ ಕಾಲ ಕಳೆದ ಅನುಭವದ ಬಗ್ಗೆ ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ಬ್ಯಾಟಿಂಗ್ ಕೋಚ್ ಗ್ರ್ಯಾಂಟ್‌ ಫ್ಲವರ್ ಬಾಯ್ಬಿಟ್ಟಿದ್ದಾರೆ. ಪಿಸಿಬಿಯು ಫ್ಲವರ್ ಜೊತೆಗಿನ ಒಪ್ಪಂದ ಮುಂದುವರೆಸದಿರಲು ನಿರ್ಧರಿಸಿದ ಬಳಿಕ ಫ್ಲವರ್, ಪಾಕ್‌ ಬಗ್ಗೆ ಮಾತನಾಡಿದ್ದಾರೆ.

ನೇಣಿಗೆ ಶರಣಾದ ಟೀಮ್ ಇಂಡಿಯಾ ಮಾಜಿ ಬ್ಯಾಟ್ಸ್ಮನ್ ವಿಬಿ ಚಂದ್ರಶೇಖರ್ನೇಣಿಗೆ ಶರಣಾದ ಟೀಮ್ ಇಂಡಿಯಾ ಮಾಜಿ ಬ್ಯಾಟ್ಸ್ಮನ್ ವಿಬಿ ಚಂದ್ರಶೇಖರ್

ಸ್ನೇಹಿ ಜನರು ಪಾಕಿಸ್ತಾನ ದೇಶದಲ್ಲಿನ ಒಳ್ಳೆಯ ವಿಚಾರ. ಹಾಗೇ ಸ್ವಾತಂತ್ರ್ಯದ ಕೊರತೆ ಮತ್ತು ಭದ್ರತೆ ವಿಚಾರ ಪಾಕಿಸ್ತಾನದಲ್ಲಿ ಬದುಕುವ ನಿಟ್ಟಿನಲ್ಲಿ ಇರುವ ತುಂಬಾನೇ ನಿರಾಶಾದಾಯಕವಾದ ಸಂಗತಿ ಎಂದು ಗ್ರ್ಯಾಂಟ್ ಫ್ಲವರ್ ಹೇಳಿಕೊಂಡಿದ್ದಾರೆ.

ಸೋಷಿಯಲ್‌ ಮೀಡಿಯಾದಲ್ಲಿ ನಗ್ನ ಫೋಟೊ ಪ್ರಕಟಿಸಿದ ಇಂಗ್ಲೆಂಡ್‌ ಆಟಗಾರ್ತಿ!ಸೋಷಿಯಲ್‌ ಮೀಡಿಯಾದಲ್ಲಿ ನಗ್ನ ಫೋಟೊ ಪ್ರಕಟಿಸಿದ ಇಂಗ್ಲೆಂಡ್‌ ಆಟಗಾರ್ತಿ!

2014ರಿಂದಲೂ ಪಾಕಿಸ್ತಾನ ಕ್ರಿಕೆಟ್ ತಂಡದ ಬ್ಯಾಟಿಂಗ್ ಕೋಚ್ ಆಗಿ ಕಾರ್ಯ ನಿರ್ವಹಿಸಿದ್ದ ಫ್ಲವರ್ ಅವರೊಂದಿಗಿನ ಒಪ್ಪಂದವನ್ನು ನವೀಕರಿಸುವ ಬದಲು ಇಡೀ ಕೋಚಿಂಗ್ ವಿಭಾಗ ಮತ್ತು ಬೆಂಬಲ ಸಿಬ್ಬಂದಿ ವರ್ಗವನ್ನು ಬದಲಾಯಿಸಲು ಪಿಸಿಬಿ ಬಯಸಿದೆ. 2019ರ ವಿಶ್ವಕಪ್‌ನಲ್ಲಿ ಪಾಕ್ ತಂಡ ಸೆಮಿಫೈನಲ್ ಪ್ರವೇಶಿಸಲು ವಿಫಲವಾದ ಕಾರಣಕ್ಕೆ ಪಿಸಿಬಿ ಈ ನಿರ್ಧಾರ ತಾಳಿತ್ತು.

ಇಎಸ್‌ಪಿಎನ್ ಇಂಟರ್‌ವ್ಯೂ ವೇಳೆ ಪಾಕಿಸ್ಥಾನದಲ್ಲಿ ಬದುಕಲು ನಿರಾಶಾದಾಯಕ ವಿಚಾರವೇನು ಎಂದು ಕೇಳಲಾದ ಪ್ರಶ್ನೆಗೆ, ಫ್ಲವರ್, 'ಭದ್ರತೆಯ ವಿಷಯ ಮತ್ತು ಸ್ವಾತಂತ್ರ್ಯದ ಕೊರತೆ,' ಎಂದು ಪ್ರತಿಕ್ರಿಯಿಸಿದ್ದಾರೆ. 2009ರಲ್ಲಿ ಶ್ರೀಲಂಕಾ ಆಟಗಾರರಿದ್ದ ಬಸ್‌ನ ಮೇಲೆ ಭಯೋತ್ಪಾದಕರು ದಾಳಿ ನಡೆಸಿದ ಬಳಿಕ ಕೆಲವೇ ಕೆಲವು ಅಂತಾರಾಷ್ಟ್ರೀಯ ತಂಡಗಳು ಮಾತ್ರ ಪಾಕಿಸ್ಥಾನಕ್ಕೆ ಪ್ರವಾಸ ಕೈಗೊಂಡಿವೆ.

ಐಪಿಎಲ್ 2020: ಸಹ ಪ್ರಾಯೋಜಕತ್ವದಿಂದ ಹಿಂದೆ ಸರಿದ ಹಾಟ್‌ಸ್ಟಾರ್ಐಪಿಎಲ್ 2020: ಸಹ ಪ್ರಾಯೋಜಕತ್ವದಿಂದ ಹಿಂದೆ ಸರಿದ ಹಾಟ್‌ಸ್ಟಾರ್

ಪಿಸಿಬಿ ಈಗ ಅಂತಾರಾಷ್ಟ್ರೀಯ ಕ್ರಿಕೆಟ್‌ ಪಂದ್ಯಗಳನ್ನು ಪಾಕ್‌ನಲ್ಲಿ ನಡೆಸಲು ಶಕ್ತಿ ಮೀರಿ ಪ್ರಯತ್ನಿಸುತ್ತಿದೆ. ಅಂದ್ಹಾಗೆ ಸಂದರ್ಶನದ ವೇಳೆ ಫ್ಲವರ್ ಅವರು 2017ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಪಾಕ್‌ ತಂಡ ಭಾರತದ ಮೇಲೆ ಗೆಲುವು ಸಾಧಿಸಿದ್ದು ಆ ತಂಡದ ಅತ್ಯುತ್ತಮ ಸಾಧನೆ ಎಂದು ಪ್ರತಿಕ್ರಿಯಿಸಿದರು.

Story first published: Friday, August 16, 2019, 19:57 [IST]
Other articles published on Aug 16, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X