ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ತನ್ನ 400* ದಾಖಲೆ ಮುರಿಯಲು ಈ ಇಬ್ಬರು ಭಾರತೀಯರಿಂದ ಸಾಧ್ಯ; ಬ್ರ್ಯಾನ್ ಲಾರಾ

ಈ ದಾಖಲೆ ಮುರಿಯಬಲ್ಲ ಟೀಂ ಇಂಡಿಯಾದ ಹುಲಿಗಳು ಇವರೆ | Oneindia Kannada
Lara picks two Indian batsmen who can break his record

ಲೆಜೆಂಡರಿ ಕ್ರಿಕೆಟಿಗ ಬ್ರ್ಯಾನ್ ಲಾರಾ ಟೆಸ್ಟ್ ಇನ್ನಿಂಗ್ಸ್‌ನಲ್ಲಿ ಅತೀ ಹೆಚ್ಚು ರನ್‌ ಬಾರಿಸಿರುವ ತನ್ನ ದಾಖಲೆ ಬಗ್ಗೆ ಮತ್ತೆ ಮಾತನಾಡಿದ್ದಾರೆ. ಆಸ್ಟ್ರೇಲಿಯಾ ಕ್ರಿಕೆಟಿಗ ಡೇವಿಡ್ ವಾರ್ನರ್ ಅವರು ಈ ದಾಖಲೆಯನ್ನು ಮುರಿಯದೆ ಇರುವ ಬಗ್ಗೆ ಬೇಸರವನ್ನೂ ವ್ಯಕ್ತಪಡಿಸಿದ್ದಾರೆ.

ಇದೇ ಸಂದರ್ಭದಲ್ಲಿ ಮಾತನಾಡಿರುವ ಬ್ರಿಯಾನ್ ಲಾರಾ ತನ್ನ ದಾಖಲೆಯನ್ನು ಯಾರು ಮುರಿಯಬಹುದು ಎಂಬ ಅಭಿಪ್ರಾಯವನ್ನು ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಲಾರಾ ಇಬ್ಬರು ಭಾರತೀಯ ಕ್ರಿಕೆಟಿಗರ ಹೆಸರನ್ನು ಹೇಳಿದ್ದಾರೆ. ಈ ಇಬ್ಬರು ಮುಂದಿನ ದಿನಗಳಲ್ಲಿ ತನ್ನ ಅಜೇಯ 400 ರನ್ ದಾಖಲೆ ಮುರಿಯುವ ಸಾಮರ್ಥ್ಯ ಹೊಂದಿದ್ದಾರೆ ಎಂದು ಲಾರಾ ಹೇಳಿದ್ದಾರೆ.

ಲಾರಾ 400* ದಾಖಲೆ ಮುರಿಯಲು ಈ ಭಾರತೀಯನಿಂದ ಸಾಧ್ಯ: ಡೇವಿಡ್ ವಾರ್ನರ್ಲಾರಾ 400* ದಾಖಲೆ ಮುರಿಯಲು ಈ ಭಾರತೀಯನಿಂದ ಸಾಧ್ಯ: ಡೇವಿಡ್ ವಾರ್ನರ್

ಪಾಕಿಸ್ತಾನದ ವಿರುದ್ಧ ನಡೆದ ಎರಡನೇ ಟೆಸ್ಟ್‌ ಪಂದ್ಯದಲ್ಲಿ ಡೇವಿಡ್ ವಾರ್ನರ್ 335 ರನ್ ಗಳಿಸಿ ಅಜೇಯವಾಗಿದ್ದರು. ಲಾರಾ ದಾಖಲೆಯನ್ನು ಮುರಿತ್ತಾರೆ ಎಂದು ಎಲ್ಲರೂ ಅಂದುಕೊಳ್ಳುತ್ತಿದ್ದಂತೆ ಆಸ್ಟ್ರೇಲಿಯಾ ನಾಯಕ ಟಿಮ್ ಪೈನ್ ಇನ್ನಿಂಗ್ಸ್‌ ಡಿಕ್ಲೇರ್ ಮಾಡಿ ನಿರಾಸೆ ಮೂಡಿಸಿದ್ದರು. ಇದಕ್ಕೆ ಸ್ವತಃ ಲಾರಾ ಕೂಡ ಬೇಸರವನ್ನು ವ್ಯಕ್ತಪಡಿಸಿದ್ದಾರೆ.

ಅಷ್ಟಕ್ಕೂ ಲಾರಾ ತನ್ನ ದಾಖಲೆ ಮುರಿಯುವ ವಿಚಾರವಾಗಿ ಸಾಕಷ್ಟು ಮಾತುಗಳನ್ನಾಡಿದ್ದು ಏನೆಲ್ಲಾ ಹೇಳಿಕೆ ನೀಡಿದ್ದಾರೆ ನೋಡೋಣ;

ಲಾರಾ ಬಾಯಲ್ಲೂ ಬಂತು ರೋಹಿತ್ ಹೆಸರು

ಲಾರಾ ಬಾಯಲ್ಲೂ ಬಂತು ರೋಹಿತ್ ಹೆಸರು

ತನ್ನ ದಾಖಲೆಯನ್ನು ಯಾರು ಮುರಿಯಬಹುದು ಎಂಬ ಪ್ರಶ್ನೆಗೆ ಬ್ರ್ಯಾನ್ ಲಾರಾ ಮೊದಲಿಗೆ ಹೇಳಿರುವ ಹೆಸರು ರೋಹಿತ್ ಶರ್ಮಾ. ಉತ್ತಮ ಅವಕಾಶವನ್ನು ರೋಹಿತ್ ಶರ್ಮಾ ಬಳಸಿಕೊಂಡು ಮುಂದೊಂದು ದಿನ ಈ ದಾಖಲೆ ಮುರಿಯುವ ಸಾಮರ್ಥ್ಯ ಹೊಂದಿದ್ದಾರೆ ಎಂದು ಲಾರಾ ಹೇಳಿದ್ದಾರೆ.

ಲಾರಾ ಹೇಳಿದ ಮತ್ತೊಂದು ಹೆಸರು!

ಲಾರಾ ಹೇಳಿದ ಮತ್ತೊಂದು ಹೆಸರು!

ಬ್ರಿಯಾನ್ ಲಾರಾ ಹೇಳಿದ ಮತ್ತೊಂದು ಹೆಸರು ಟೀಮ್ ಇಂಡಿಯಾದ ಯುವ ಕ್ರಿಕೆಟಿಗ. ಅದು ಬೇರೆ ಯಾರು ಅಲ್ಲ ಪೃಥ್ವಿ ಶಾ. 19 ವರ್ಷದ ಈ ಆಟಗಾರ ಉತ್ತಮ ಆಕ್ರಮಣಕಾರಿ ಆಟದ ಅವಕಾಶವನ್ನು ಹೊಂದಿದ್ದಾರೆ. ಇದು ಭವಿಷ್ಯದಲ್ಲಿ ದೊಡ್ಡ ಮೊತ್ತಕ್ಕೆ ಅವಕಾಶವನ್ನು ಮಾಡಬಹುದು ಎಂದಿದ್ದಾರೆ.

'735 ನಾಟೌಟ್' : ವಾರ್ನರ್ ಭೇಟಿ ಬಳಿಕ ಲಾರಾ ಹೀಗಂದಿದ್ದೇಕೆ?

ವಾರ್ನರ್ ಕೂಡ ಹೇಳಿದ್ದು ರೋಹಿತ್ ಹೆಸರನ್ನೇ!

ವಾರ್ನರ್ ಕೂಡ ಹೇಳಿದ್ದು ರೋಹಿತ್ ಹೆಸರನ್ನೇ!

ತ್ರಿಶತಕ ಬಾರಿಸಿದ ಬಳಿಕ ಡೇವಿಡ್ ವಾರ್ನರ್ ಲಾರಾ ದಾಖಲೆ ಮುರಿಯಲು ಸಾಧ್ಯವಾಗದ್ದಕ್ಕೆ ಬೇಸರವನ್ನು ವ್ಯಕ್ತಪಡಿಸಿದ್ದರು. ಅದಾದ ಬಳಿಕ ಲಾರಾ ದಾಖಲೆಯನ್ನು ಮುರಿಯಲು ರೋಹಿತ್ ಶರ್ಮಾಗೆ ಸಾಧ್ಯ ಎಂದು ಹೇಳಿಕೆ ನೀಡಿದ್ದರು.

ವಾರ್ನರ್‌ಗೆ ಹತ್ತು ಓವರ್‌ಗಳ ಅವಕಾಶ

ವಾರ್ನರ್‌ಗೆ ಹತ್ತು ಓವರ್‌ಗಳ ಅವಕಾಶ

ಇದೇ ಸಂದರ್ಭದಲ್ಲಿ ಬ್ರ್ಯಾನ್ ಲಾರಾ, ಡೇವಿಡ್ ವಾರ್ನರ್‌ಗೆ ಹತ್ತು ಓವರ್‌ಗಳ ಅವಕಾಶವನ್ನು ಕೊಡಬಹುದುಆಗಿತ್ತು. ಆತನೋರ್ವ ಉತ್ತಮ ಟಿ20 ಆಟಗಾರ ಕೂಡ ಆಗಿರುವುದರಿಂದ ವಾರ್ನರ್ ಈ ಸಂದರ್ಭದಲ್ಲಿ ಅಂದುಕೊಂಡಿದ್ದನ್ನು ಸಾಧಿಸುತ್ತಿದ್ದರು ಎಂದು ಹೇಳಿದ್ದಾರೆ.

Story first published: Monday, December 9, 2019, 13:49 [IST]
Other articles published on Dec 9, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X