ಎಲ್ಲಾ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಲಸಿತ್ ಮಾಲಿಂಗ

ಕೊಲಂಬೋ: ಶ್ರೀಲಂಕಾದ ಅನುಭವಿ ವೇಗಿ ಲಸಿತ್ ಮಾಲಿಂಗ ಎಲ್ಲಾ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಟೆಸ್ಟ್‌ ಮತ್ತು ಏಕದಿನಕ್ಕೆ ನಿವೃತ್ತಿ ಘೋಷಿಸಿದ್ದ ಲಸಿತ್ ಮಾಲಿಂಗ ಟಿ20 ಮಾದರಿಯಲ್ಲಿ ಮಾತ್ರ ಆಡುತ್ತಿದ್ದರು. ಆದರೆ ವಿಶ್ವಕಪ್‌ಗಾಗಿ ಪ್ರಕಟಿತ ಶ್ರೀಲಂಕಾ ತಂಡದಲ್ಲಿ ತನ್ನ ಹೆಸರು ಇಲ್ಲದಿದ್ದ ಕಾರಣಕ್ಕೋ ಏನೋ ಮಾಲಿಂಗ ಕ್ರಿಕೆಟ್‌ ವೃತ್ತಿ ಬದುಕಿಗೆ ಕೊನೆ ಹಾಡಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮಾಲಿಂಗ 546 ವಿಕೆಟ್ ದಾಖಲೆ ಹೊಂದಿದ್ದಾರೆ.

ನಾವು ಐದನೇ ಟೆಸ್ಟ್‌ಗೆ ಮರು ವೇಳಾಪಟ್ಟಿ ತಯಾರಿಸಲಿದ್ದೇವೆ: ಗಂಗೂಲಿನಾವು ಐದನೇ ಟೆಸ್ಟ್‌ಗೆ ಮರು ವೇಳಾಪಟ್ಟಿ ತಯಾರಿಸಲಿದ್ದೇವೆ: ಗಂಗೂಲಿ

ಇದಕ್ಕೂ ಮುನ್ನ ಮಾಲಿಂಗ ತಾನು ಈ ಬಾರಿಯ ಟಿ20 ವಿಶ್ವಕಪ್ ಬಳಿಕ ವೃತ್ತಿಪರ ಕ್ರಿಕೆಟ್‌ಗೆ ಕೊನೆ ಹಾಡುವುದಾಗಿ ಹೇಳಿದ್ದರು. ಆದರೆ ವಿಶ್ವಕಪ್‌ಗೆ ಮಲಿಂಗಗೆ ಅವಕಾಶ ಸಿಗಲಿಲ್ಲ. ಎಲ್ಲದಕ್ಕಿಂತ ಹೆಚ್ಚಾಗಿ ಮಾಲಿಂಗ ಈಚಿನ ದಿನಗಳಲ್ಲಿ ಕ್ರಿಕೆಟ್‌ನಿಂದ ದೂರವೇ ಉಳಿದಿದ್ದರು. ಕೋವಿಡ್-19 ಭೀತಿ ಶುರುವಾದ ಬಳಿಕ ಮಾಲಿಂಗ ಪಂದ್ಯಗಳನ್ನಾಡಿದ್ದೆ ಕಡಿಮೆ.

ಟ್ವಿಟರ್ ಮೂಲಕ ನಿವೃತ್ತಿ ಘೋಷಿಸಿದ ಲಸಿತ್

ಟ್ವಿಟರ್ ಮೂಲಕ ನಿವೃತ್ತಿ ಘೋಷಿಸಿದ ಲಸಿತ್

ಟ್ವಿಟರ್ ಮೂಲಕ ಲಸಿತ್ ಮಾಲಿಂಗ ತಾನು ಎಲ್ಲಾ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸುತ್ತಿರುವ ಸಂಗತಿ ತಿಳಿಸಿದ್ದಾರೆ. ಮಂಗಳವಾರ (ಸೆಪ್ಟೆಂಬರ್‌ 14) ಟ್ವೀಟ್‌ ಮಾಡಿದ್ದ ಮಾಲಿಂಗ, "ನಾನು ನನ್ನ ಟಿ20 ಶೂ ಅನ್ನು ಜೋತು ಹಾಕುತ್ತಿದ್ದೇನೆ. ನಾನು ಎಲ್ಲಾ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸುತ್ತಿದ್ದೇನೆ. ನನ್ನ ಪ್ರಯಾಣದುದ್ದಕ್ಕೂ ಯಾರೆಲ್ಲಾ ನನಗೆ ಬೆಂಬಲ ನೀಡಿದ್ದರೋ ಅವರಿಗೆಲ್ಲಾ ನಾನು ಋಣಿಯಾಗಿದ್ದೇನೆ. ಮುಂದಿನ ದಿನಗಳಲ್ಲಿ ಅವಕಾಶ ಸಿಕ್ಕರೆ ನನ್ನ ಅನುಭವಗಳನ್ನು ಯುವ ಆಟಗಾರರೊಂದಿಗೆ ಹಂಚಿಕೊಳ್ಳುತ್ತೇನೆ, ಎಂದು ಬರೆದುಕೊಂಡಿದ್ದಾರೆ. ಮಾಲಿಂಗ ಈಗಲೇ 2011ರಲ್ಲಿ ಟೆಸ್ಟ್‌ ಕ್ರಿಕೆಟ್‌ನಿಂದ, 2019ರಲ್ಲಿ ಏಕದಿನ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಿದ್ದರು. ಆದರೆ ಟಿ20ಐ ಕ್ರಿಕೆಟ್‌ನಲ್ಲಿ ಮಾತ್ರ ಮುಂದುವರೆದಿದ್ದರು. ಈಗ ಎಲ್ಲಾ ಮಾದರಿಯ ಕ್ರಿಕೆಟ್‌ಗೆ ಲಸಿತ್ ವಿದಾಯ ಘೋಷಿಸಿದ್ದಾರೆ.

ಮುಂಬೈ ಇಂಡಿಯನ್ಸ್ ಬಲವಾಗಿದ್ದ ಸ್ಮೈಲಿಂಗ್ ಮಾಲಿಂಗ

ಮುಂಬೈ ಇಂಡಿಯನ್ಸ್ ಬಲವಾಗಿದ್ದ ಸ್ಮೈಲಿಂಗ್ ಮಾಲಿಂಗ

ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಹಾಲಿ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ತಂಡದಲ್ಲಿದ್ದ ಲಸಿತ್ ಮಾಲಿಂಗ ಎಂಐ ಅನೇಕ ಸಾರಿ ಟ್ರೋಫಿ ಗೆಲ್ಲುವಲ್ಲಿ ಪ್ರಮುಖ ಕೊಡುಗೆ ನೀಡಿದ್ದರು. ಆದರೆ 2021ರ ಆವೃತ್ತಿಯಲ್ಲಿ ವೈಯಕ್ತಿಕ ಕಾರಣ ನೀಡಿದ್ದ ಮಾಲಿಂಗ ಐಪಿಎಲ್‌ನಿಂದ ದೂರ ಉಳಿಸಿದ್ದರು. ಬಲಗೈ ವೇಗಿಯಾಗಿದ್ದ 38ರ ಹರೆಯದ ಮಾಲಿಂಗ, ಶ್ರೀಲಂಕಾ ಕ್ರಿಕೆಟ್ ತಂಡದ ಪರ 30 ಟೆಸ್ಟ್ ಪಂದ್ಯಗಳಲ್ಲಿ 101 ವಿಕೆಟ್‌ಗಳು, 226 ಏಕದಿನ ಪಂದ್ಯಗಳಲ್ಲಿ 338 ವಿಕೆಟ್, 83 ಟಿ20ಐ ಪಂದ್ಯಗಳಲ್ಲಿ 107 ವಿಕೆಟ್‌ಗಳು ಮತ್ತು 122 ಐಪಿಎಲ್ ಪಂದ್ಯಗಳಲ್ಲಿ 170 ವಿಕೆಟ್ ದಾಖಲೆ ಹೊಂದಿದ್ದಾರೆ. ವಿದಾಯ ಘೋಷಿಸುವಾಗ ವಿಡಿಯೋದಲ್ಲಿ ಮಾತನಾಡಿದ್ದ ಮಾಲಿಂಗ, 'ನಾನು ನನ್ನ ಟಿ20ಐ ಶೂಗಳಿಗೆ 100 ಶೇ. ವಿಶ್ರಾಂತಿ ನೀಡಲು ಬಯಸುತ್ತಿದ್ದೇನೆ. ನನ್ನ ಶೂ ವಿಶ್ರಾಂತಿ ಪಡೆಯುವಾಗ ಕ್ರಿಕೆಟ್‌ ಬಗೆಗಿನ ನನ್ನ ಪ್ರೀತಿ ಎಂದಿಗೂ ವಿಶ್ರಾಂತಿ ಪಡೆಯಲ್ಲ," ಎಂದು ಸ್ಮೈಲಿಂಗ ಮಾಲಿಂಗ ಹೇಳಿದ್ದಾರೆ.

ವಿರಾಟ್ ಕೊಹ್ಲಿ ಬದಲಿಗೆ ಹೊಸ ನಾಯಕನಾಗಿ ರೋಹಿತ್ ಶರ್ಮಾ | Oneindia Kannada
ಮಾಲಿಂಗ ವೃತ್ತಿ ಬದುಕು ಆರಂಭಿಸಿದ ಮಾಹಿತಿಗಳು

ಮಾಲಿಂಗ ವೃತ್ತಿ ಬದುಕು ಆರಂಭಿಸಿದ ಮಾಹಿತಿಗಳು

ಲಸಿತ್ ಮಾಲಿಂಗ ಆವರ ಅಂತಾರಾಷ್ಟ್ರೀಯ ವೃತ್ತಿ ಬದುಕು ಆರಂಭವಾಗಿದ್ದು ಟೆಸ್ಟ್ ಕ್ರಿಕೆಟ್ ಮೂಲಕ. 2004ರ ಜುಲೈನಲ್ಲಿ ಮರ್ರಾರ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದಿದ್ದ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಪಂದ್ಯದ ಮೂಲಕ ಮಾಲಿಂಗ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು. 2010ರಲ್ಲಿ ಭಾರತ ವಿರುದ್ಧ ಪಿ ಸಾರ ಓವಲ್ ಸ್ಟೇಡಿಯಂನಲ್ಲಿ ಕಡೇಯ ಟೆಸ್ಟ್ ಆಡಿದ್ದರು. 2004ರಲ್ಲೇ ಯುನೈಟೆಡ್ ಅರಬ್ ಎಮಿರೇಟ್ಸ್ ವಿರುದ್ಧದ ಏಕದಿನ ಪಂದ್ಯದ ಮೂಲಕ ಚೊಚ್ಚಲ ಏಕದಿನ ಪಂದ್ಯ ಆಡಿದ್ದರು. 2019ರಲ್ಲಿ ಬಾಂಗ್ಲಾ ವಿರುದ್ಧದ ಏಕದಿನದೊಂದಿಗೆ ಮಾಲಿಂಗ ಕೊನೇ ಒಡಿಐ ಆಡಿದ್ದರು. ಲಸಿತ್ ಚೊಚ್ಚಲ ಟಿ20ಐ ಆಡಿದ್ದು 2006ರಲ್ಲಿ ಇಂಗ್ಲೆಂಡ್ ವಿರುದ್ಧ. ಕೊನೇ ಟಿ20ಐ ಆಡಿದ್ದು 2020ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ.

ಐಸಿಸಿ ಟಿ20 ವಿಶ್ವಕಪ್ 2021 ಊಹಿಸು
Match 5 - October 19 2021, 03:30 PM
ಸ್ಕಾಟ್ಲೆಂಡ್
ಪಪುವಾ ನ್ಯೂ ಗಿನಿವಾ
Predict Now

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Tuesday, September 14, 2021, 18:07 [IST]
Other articles published on Sep 14, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X