ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿಶ್ವದ ಬೆಸ್ಟ್ ಯಾರ್ಕರ್ ಬೌಲರ್ ಯಾರು? ಬೂಮ್ರಾ ಹೇಳಿದ್ದಾರೆ ಉತ್ತರ

Lasith Malinga Is The Best Yorker Bowler In The World: Jasprit Bumrah

ಯಾರ್ಕರ್ ಬೌಲರ್‌ಗಳ ಪ್ರಮುಖ ಅಸ್ತ್ರ. ಆದರೆ ಈ ಅಸ್ತ್ರವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಎಲ್ಲಾ ಬೌಲರ್‌ಗಳಿಂದಲೂ ಸಾಧ್ಯವಿಲ್ಲ. ಗುರಿಯಲ್ಲಿ ಸ್ವಲ್ಪ ಎಡವಟ್ಟಾದರೂ ಬ್ಯಾಟ್ಸ್‌ಮನ್‌ಗೆ ಸುಲಭ ತುತ್ತಾಗಿ ಸಿಕ್ಸರ್ ಬಾರಿಸಿಕೊಳ್ಳಬೇಕಾಗುತ್ತದೆ. ಆದರೆ ಯಾರ್ಕರ್ ಎಸೆತದಲ್ಲಿ ಅತ್ಯಂತ ಪರಿಣಾಮಕಾರಿ ಬೌಲರ್ ಯಾರೆಂದು ಟೀಮ್ ಇಂಡಿಯಾ ಜಸ್ಪ್ರೀತ್ ಬೂಮ್ರಾ ಹೇಳಿದ್ದಾರೆ.

ಯಾರ್ಕರ್ ಎಸೆತದ ಸ್ಪೆಶಲಿಸ್ಟ್ ಯಾರು ಎಂದು ಜಸ್ಪ್ರೀತ್ ಬೂಮ್ರಾ ಹೇಳಿದ್ದಾರೆ. ಬೂಮ್ರಾ ಹೇಳಿದ ಹೆಸರು ಬೇರೆ ಯಾರದ್ದೂ ಅಲ್ಲ. ಶ್ರೀಲಂಕಾದ ವೇಗಿ ಲಸಿತ್ ಮಾಲಿಂಗ ಅವರದ್ದು. ವಿಶ್ವದ ಶ್ರೇಷ್ಠ ಯಾರ್ಕರ್ ಬೌಲರ್ಮಾಲಿಂಗ ಎಂದು ಬೂಮ್ರಾ ಹೇಳಿದ್ದಾರೆ.

ಆಸೀಸ್-ಭಾರತ ಸೇರಿಸಿ ಫಿಂಚ್ ಪ್ರಕಟಿಸಿದ ತಂಡದಲ್ಲಿ ಸಚಿನ್, ರೋಹಿತ್ ಇಲ್ಲ!ಆಸೀಸ್-ಭಾರತ ಸೇರಿಸಿ ಫಿಂಚ್ ಪ್ರಕಟಿಸಿದ ತಂಡದಲ್ಲಿ ಸಚಿನ್, ರೋಹಿತ್ ಇಲ್ಲ!

ದಶಕಗಳ ಕಾಲ ಮಲಿಂಗಾ ಯಾರ್ಕರ್ ಅನ್ನು ಅತ್ಯಂತ ಪರಿಣಾಮಕಾರಿಯಾಗಿ ಬಳಸಿಕೊಂಡಿದ್ದಾರೆ ಎಂದು ಮಾಲಿಂಗ ಅವರನ್ನು ಗುಣಗಾನ ಮಾಡಿದ್ದಾರೆ ಜಸ್ಪ್ರೀತ್ ಬೂಮ್ರಾ. ಐಪಿಎಲ್‌ನಲ್ಲಿಈ ಇಬ್ಬರೂ ವೇಗಿಗಳು ಹಲವು ವರ್ಷಗಳ ಕಾಲ ಜೊತೆಯಾಗಿ ಆಡಿದ್ದಾರೆ. ಕಳೆದ ಬಾರಿ ಮುಂಬೈ ಇಂಡಿಯನ್ಸ್ ನಾಲ್ಕು ಬಾರಿ ಚಾಂಪಿಯನ್ ಆಗುವಲ್ಲಿಯೂ ಈ ಇಬ್ಬರು ವೇಗಿಗಳ ಕೊಡುಗೆ ಪ್ರಮುಖವಾಗಿತ್ತು.

"ಮಾಲಿಂಗ ವಿಶ್ವದ ಬೆಸ್ಟ್‌ ಯಾರ್ಕರ್ ಬೌಲರ್‌. ತನ್ನ ಬತ್ತಳಿಕೆಯಲ್ಲಿದ್ದ ಈ ಅಸ್ತ್ರವನ್ನು ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಹಲವು ವರ್ಷಗಳ ಕಾಲ ಯಶಸ್ವಿಯಾಗಿ ಬಳಸಿಕೊಂಡಿದ್ದಾರೆ. ಯಾರ್ಕರ್‌ ಎಸೆತದ ಸಂಪೂರ್ಣ ಲಾಭವನ್ನು ಅವರು ಪಡೆದುಕೊಂಡಿದ್ದಾರೆ," ಎಂದು ಬುಮ್ರಾ ಹೇಳಿರುವುದಾಗಿ ಮುಂಬೈ ಇಂಡಿಯನ್ಸ್‌ ತಂಡ ಟ್ವೀಟ್‌ ಮಾಡಿದೆ.

ಟೀಮ್ ಇಂಡಿಯಾದ ವೇಗಿ ಬೂಮ್ರಾ ಭಾರತೀಯ ವೇಗದ ಬೌಲಿಂಗ್ ವಿಭಾಗದ ಪ್ರಮುಖ ಅಸ್ತ್ರವಾಗಿದ್ದಾರೆ. ವಿಶ್ವದ ಶ್ರೇಷ್ಟ ಬ್ಯಾಟ್ಸ್‌ಮನ್‌ಗಳು ಕೂಡ ಬೂಮ್ರಾ ಬೌಲಿಂಗ್ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಇತ್ತೀಚಿನ ಸರಣಿಯಲ್ಲಿ ಬೂಮ್ರಾ ತಮ್ಮ ಹಿಂದಿನ ಲಯವನ್ನು ಕಳೆದುಕೊಂಡಿದ್ದರು. ಆದರೆ ಮತ್ತೆ ತನ್ನ ಲಯವನ್ನು ಕಂಡುಕೊಳ್ಳುವುದು ಯುವ ವೇಗಿಗೆ ಅಸಾಧ್ಯದ ಕೆಲಸವಲ್ಲ.

Story first published: Friday, June 5, 2020, 16:39 [IST]
Other articles published on Jun 5, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X