ಆ ಒಂದು ಕನಸಿಗಾಗಿ ಮುಂಬೈ ಇಂಡಿಯನ್ಸ್ ಬಿಟ್ಟಿದ್ದ ಮಾಲಿಂಗಗೆ ಕೊನೆಗೆ ಸಿಕ್ಕಿದ್ದು ಸೋಲು, ಕಡೆಗಣನೆ!

ಸದ್ಯ ಕ್ರಿಕೆಟ್ ಜಗತ್ತಿನಲ್ಲಿ ಶ್ರೀಲಂಕಾದ ಲೆಜೆಂಡರಿ ವೇಗಿ ಲಸಿತ್ ಮಾಲಿಂಗ ನಿವೃತ್ತಿಯನ್ನು ಘೋಷಿಸಿರುವ ಸುದ್ದಿ ಸಾಕಷ್ಟು ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಹೌದು, ಸೆಪ್ಟೆಂಬರ್ 14ರ ಮಂಗಳವಾರದಂದು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಅಧಿಕೃತವಾಗಿ ಟ್ವೀಟ್ ಮಾಡುವ ಮೂಲಕ ಟಿ ಟ್ವೆಂಟಿ ಕ್ರಿಕೆಟ್‌ನಿಂದ ತಾವು ನಿವೃತ್ತಿ ಹೊಂದುತ್ತಿರುವ ವಿಷಯವನ್ನು ಲಸಿತ್ ಮಾಲಿಂಗ ಘೋಷಣೆ ಮಾಡಿದರು. ಈ ಹಿಂದೆಯೇ ಏಕದಿನ ಮತ್ತು ಟೆಸ್ಟ್ ಕ್ರಿಕೆಟ್ ಹಾಗೂ ಫ್ರಾಂಚೈಸಿ ಲೀಗ್‌ಗಳಿಗೆ ನಿವೃತ್ತಿಯನ್ನು ಘೋಷಣೆ ಮಾಡಿದ್ದ ಲಸಿತ್ ಮಾಲಿಂಗ ಈ ಬಾರಿ ಅಂತರರಾಷ್ಟ್ರೀಯ ಟಿ ಟ್ವೆಂಟಿ ಕ್ರಿಕೆಟ್‌ಗೂ ನಿವೃತ್ತಿ ಘೋಷಿಸುವುದರ ಮೂಲಕ ಎಲ್ಲಾ ಮಾದರಿಯ ಕ್ರಿಕೆಟ್‍ನಿಂದ ದೂರ ಸರಿದಿದ್ದಾರೆ.

ಮ್ಯಾಂಚೆಸ್ಟರ್‌ ಟೆಸ್ಟ್ ರದ್ದು: ಆ ಒಂದು ಭಯದಿಂದಲೇ ಕೊಹ್ಲಿ ಪಡೆ ಓಡಿಹೋಯಿತು ಎಂದ ಮಾಜಿ ಕ್ರಿಕೆಟಿಗಮ್ಯಾಂಚೆಸ್ಟರ್‌ ಟೆಸ್ಟ್ ರದ್ದು: ಆ ಒಂದು ಭಯದಿಂದಲೇ ಕೊಹ್ಲಿ ಪಡೆ ಓಡಿಹೋಯಿತು ಎಂದ ಮಾಜಿ ಕ್ರಿಕೆಟಿಗ

38 ವರ್ಷ ಹರೆಯದ ಲಸಿತ್ ಮಾಲಿಂಗ ಶ್ರೀಲಂಕಾ ತಂಡದ ಪರ 17 ವರ್ಷಗಳ ಕಾಲ ಅಂತರರಾಷ್ಟ್ರೀಯ ಕ್ರಿಕೆಟ್ ಅಡಿದ್ದಾರೆ. 2011 ರಲ್ಲಿಯೇ ಅಂತರರಾಷ್ಟ್ರೀಯ ಟೆಸ್ಟ್ ಕ್ರಿಕೆಟ್‍ಗೆ ನಿವೃತ್ತಿಯನ್ನು ಘೋಷಣೆ ಮಾಡಿದ್ದ ಲಸಿತ್ ಮಾಲಿಂಗ 2019ರಲ್ಲಿ ಏಕದಿನ ಕ್ರಿಕೆಟ್‍ಗೂ ವಿದಾಯವನ್ನು ಘೋಷಿಸಿದ್ದರು. ಹೀಗೆ ಟೆಸ್ಟ್ ಮತ್ತು ಏಕದಿನ ಕ್ರಿಕೆಟ್‍ನಿಂದ ದೂರ ಸರಿದಿದ್ದ ಲಸಿತ್ ಮಾಲಿಂಗ ವಿವಿಧ ದೇಶಗಳ ಫ್ರಾಂಚೈಸಿ ಲೀಗ್‌ಗಳಲ್ಲಿ ಆಡುತ್ತಾ ಮಿಂಚುತ್ತಿದ್ದರು. ಅದರಲ್ಲಿಯೂ ಲಸಿತ್ ಮಾಲಿಂಗ ಅತಿ ಹೆಚ್ಚಾಗಿ ತಮ್ಮನ್ನು ತಾವು ತೊಡಗಿಸಿಕೊಂಡ ಫ್ರಾಂಚೈಸಿ ಲೀಗ್ ತಂಡವೆಂದರೆ ಅದು ಇಂಡಿಯನ್ ಪ್ರೀಮಿಯರ್ ಲೀಗ್‌ನ ಮುಂಬೈ ಇಂಡಿಯನ್ಸ್. ಹೌದು 2009ರಿಂದಲೂ ಮುಂಬೈ ಇಂಡಿಯನ್ಸ್ ತಂಡದ ಆಟಗಾರನಾಗಿದ್ದ ಲಸಿತ್ ಮಾಲಿಂಗ 122 ಪಂದ್ಯಗಳಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಪ್ರತಿನಿಧಿಸಿ 170 ವಿಕೆಟ್‍ಗಳನ್ನು ತಮ್ಮದಾಗಿಸಿಕೊಂಡಿದ್ದು ಐಪಿಎಲ್ ಇತಿಹಾಸದಲ್ಲಿಯೇ ಅತಿ ಹೆಚ್ಚು ವಿಕೆಟ್ ಪಡೆದ ಆಟಗಾರ ಎಂಬ ದಾಖಲೆಯನ್ನು ತಮ್ಮ ಹೆಸರಿನಲ್ಲಿ ಹೊಂದಿದ್ದಾರೆ.

ಹೀಗೆ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಉತ್ತಮ ಪ್ರದರ್ಶನವನ್ನು ನೀಡುತ್ತಾ ಮಿಂಚಿದ್ದ ಲಸಿತ್ ಮಾಲಿಂಗ 2019ರಲ್ಲಿ ನಡೆದಿದ್ದ ಫೈನಲ್ ಪಂದ್ಯದಲ್ಲಿ ಕೊನೆಯದಾಗಿ ಮುಂಬೈ ಇಂಡಿಯನ್ಸ್ ತಂಡದ ಪರ ಕಣಕ್ಕಿಳಿದಿದ್ದರು. ಇದಾದ ಬಳಿಕ ಯಾವುದೇ ಐಪಿಎಲ್ ಪಂದ್ಯದಲ್ಲಿಯೂ ಕೂಡ ಲಸಿತ್ ಮಾಲಿಂಗ ಭಾಗವಹಿಸಿರಲಿಲ್ಲ. ನಂತರ 2021ರ ಜನವರಿ ಸಮಯದಲ್ಲಿ ಎಲ್ಲಾ ಫ್ರಾಂಚೈಸಿ ಕ್ರಿಕೆಟ್ ಲೀಗ್‌ಗಳಿಂದಲೂ ನಿವೃತ್ತಿ ಹೊಂದುತ್ತಿರುವುದಾಗಿ ಲಸಿತ್ ಮಾಲಿಂಗ ಅಧಿಕೃತವಾಗಿ ಘೋಷಣೆ ಹೊರಡಿಸಿದರು. ಆ ಸಮಯದಲ್ಲಿ ವಿಶ್ವದೆಲ್ಲೆಡೆ ಕೊರೋನಾವೈರಸ್ ಹಬ್ಬುತ್ತಿದ್ದ ಕಾರಣ ಲಸಿತ್ ಮಾಲಿಂಗ ಫ್ರಾಂಚೈಸಿ ಕ್ರಿಕೆಟ್ ಲೀಗ್‌ಗಳಿಂದ ದೂರ ಉಳಿಯಲು ತೀರ್ಮಾನವನ್ನು ಮಾಡಿದ್ದರು.

ಐಪಿಎಲ್: ಹೊಸದಾಗಿ ಆರ್‌ಸಿಬಿ ಸೇರಿರುವ ಲಂಕಾದ ವನಿಂದು ಹಸರಂಗಗೆ ಕೊಹ್ಲಿ ವಾಟ್ಸಾಪ್ ಸಂದೇಶಐಪಿಎಲ್: ಹೊಸದಾಗಿ ಆರ್‌ಸಿಬಿ ಸೇರಿರುವ ಲಂಕಾದ ವನಿಂದು ಹಸರಂಗಗೆ ಕೊಹ್ಲಿ ವಾಟ್ಸಾಪ್ ಸಂದೇಶ

ಆದರೆ ಅಂತರರಾಷ್ಟ್ರೀಯ ಟಿ ಟ್ವೆಂಟಿ ಕ್ರಿಕೆಟ್‌ಗೆ ಮಾತ್ರ ಲಸಿತ್ ಮಾಲಿಂಗ ನಿವೃತ್ತಿಯನ್ನು ಘೋಷಿಸದೇ ಕನಸೊಂದನ್ನು ಹೊತ್ತುಕೊಂಡಿದ್ದರು. ಆದರೆ ಆ ಕನಸು ಕೊನೆಗೂ ಈಡೇರದ ಕಾರಣ ಇದೀಗ ಲಸಿತ್ ಮಾಲಿಂಗ ಅಂತಾರಾಷ್ಟ್ರೀಯ ಟಿ ಟ್ವೆಂಟಿ ಕ್ರಿಕೆಟ್‍ಗೂ ನಿವೃತ್ತಿಯನ್ನು ಘೋಷಿಸುವುದರ ಮೂಲಕ ತಮ್ಮ ಕ್ರಿಕೆಟ್ ವೃತ್ತಿ ಜೀವನಕ್ಕೆ ಪೂರ್ಣ ವಿರಾಮ ಇಟ್ಟಿದ್ದಾರೆ. ಅಷ್ಟಕ್ಕೂ ಲಸಿತ್ ಮಾಲಿಂಗ ಈ ಸಮಯದಲ್ಲಿ ಅಂತರರಾಷ್ಟ್ರೀಯ ಟಿ ಟ್ವೆಂಟಿ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದರ ಹಿಂದಿನ ಕಾರಣ ಏನೆಂಬುದರ ಮಾಹಿತಿ ಮುಂದೆ ಇದೆ ಓದಿ..

ಶ್ರೀಲಂಕಾ ಪರ ಕೊನೆಯದಾಗಿ ಟಿ ಟ್ವೆಂಟಿ ವಿಶ್ವಕಪ್ ಆಡುವ ಆಸೆಯನ್ನು ಇಟ್ಟುಕೊಂಡಿದ್ದ ಮಾಲಿಂಗ

ಶ್ರೀಲಂಕಾ ಪರ ಕೊನೆಯದಾಗಿ ಟಿ ಟ್ವೆಂಟಿ ವಿಶ್ವಕಪ್ ಆಡುವ ಆಸೆಯನ್ನು ಇಟ್ಟುಕೊಂಡಿದ್ದ ಮಾಲಿಂಗ

ಹೌದು ಈ ವರ್ಷದ ಜನವರಿ ತಿಂಗಳಿನಲ್ಲಿ ಎಲ್ಲಾ ಫ್ರಾಂಚೈಸಿ ಕ್ರಿಕೆಟ್ ಲೀಗ್‌ಗಳಿಗೂ ನಿವೃತ್ತಿಯನ್ನು ಘೋಷಿಸಿದ ಲಸಿತ್ ಮಾಲಿಂಗ ಇದೇ ವರ್ಷ ನಡೆಯಲಿರುವ ಬಹುನಿರೀಕ್ಷಿತ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ಶ್ರೀಲಂಕಾ ತಂಡದ ಪರ ತಮ್ಮ ಕೊನೆಯ ಟಿ ಟ್ವೆಂಟಿ ಪಂದ್ಯವನ್ನಾಡುವ ಕನಸನ್ನು ಇಟ್ಟುಕೊಂಡಿದ್ದರು. ಫ್ರಾಂಚೈಸಿ ಕ್ರಿಕೆಟ್ ಲೀಗ್‌ಗೆ ನಿವೃತ್ತಿ ಘೋಷಿಸುವ ಮುನ್ನವೇ ಶ್ರೀಲಂಕಾ ತಂಡದ ಪರ ಮುಂಬರಲಿರುವ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ಭಾಗವಹಿಸಬೇಕೆಂಬ ಇಂಗಿತವನ್ನು ಲಸಿತ್ ಮಾಲಿಂಗ ವ್ಯಕ್ತಪಡಿಸಿದ್ದರು.

ಶ್ರೀಲಂಕಾ ವಿಶ್ವಕಪ್ ತಂಡದಲ್ಲಿ ಲಸಿತ್ ಮಾಲಿಂಗಗೆ ಇಲ್ಲ ಸ್ಥಾನ

ಶ್ರೀಲಂಕಾ ವಿಶ್ವಕಪ್ ತಂಡದಲ್ಲಿ ಲಸಿತ್ ಮಾಲಿಂಗಗೆ ಇಲ್ಲ ಸ್ಥಾನ

ಇನ್ನು ಅಕ್ಟೋಬರ್ 17ರಿಂದ ಬಹುನಿರೀಕ್ಷಿತ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿ ಆರಂಭವಾಗಲಿದ್ದು ವಿವಿಧ ದೇಶಗಳು ತಮ್ಮ ತಂಡಗಳನ್ನು ಪ್ರಕಟಿಸಿವೆ, ಇತ್ತೀಚೆಗಷ್ಟೇ ಶ್ರೀಲಂಕಾ ಕೂಡ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ಭಾಗವಹಿಸಲಿರುವ ತಮ್ಮ ತಂಡವನ್ನು ಘೋಷಣೆ ಮಾಡಿತ್ತು. ಹೀಗೆ ಶ್ರೀಲಂಕಾ ಘೋಷಣೆ ಮಾಡಿದ ತಂಡದಲ್ಲಿ ಶ್ರೀಲಂಕಾ ಪರ ಕೊನೆಯದಾಗಿ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯನ್ನು ಆಡಬೇಕೆಂಬ ಕನಸನ್ನು ಹೊತ್ತಿದ್ದ ಲಸಿತ್ ಮಾಲಿಂಗ ಹೆಸರು ಇರಲಿಲ್ಲ. ಹೀಗೆ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ಲಂಕಾ ಪರ ಕಣಕ್ಕಿಳಿಯಬೇಕೆಂಬ ಆಸೆಯನ್ನು ಹೊತ್ತು ಈ ಹಿಂದೆ ಫ್ರಾಂಚೈಸಿ ಕ್ರಿಕೆಟ್ ಲೀಗ್‌ಗಳಿಂದ ನಿವೃತ್ತಿಯನ್ನು ಹೊಂದಿದ್ದ ಲಸಿತ್ ಮಾಲಿಂಗಗೆ ಕೊನೆಗೂ ಸಿಕ್ಕಿದ್ದು ಕೇವಲ ಕಡೆಗಣನೆ ಮತ್ತು ಸೋಲು.

IPL ನಲ್ಲಿ ಪಾಕ್ ಆಟಗಾರರಿಗೆ ಸಿಕ್ಕ ಸಕ್ಸಸ್ ವಿರಾಟ್ ಮತ್ತು ABD ಗೆ‌ ಇನ್ನೂ ಸಿಕ್ಕಿಲ್ಲ | Oneindia Kannada
ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಗೆ ಪ್ರಕಟವಾಗಿರುವ ಲಂಕಾ ತಂಡ

ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಗೆ ಪ್ರಕಟವಾಗಿರುವ ಲಂಕಾ ತಂಡ

ಇನ್ನು ಅಕ್ಟೋಬರ್ 17ರಿಂದ ಆರಂಭವಾಗಲಿರುವ ಬಹುನಿರೀಕ್ಷಿತ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಗೆ ಪ್ರಕಟವಾಗಿರುವ ಶ್ರೀಲಂಕಾ ತಂಡ ಹೀಗಿದೆ: ದಾಸುನ್ ಶನಕ (ನಾಯಕ), ಧನಂಜಯ ಡಿ ಸಿಲ್ವಾ (ಉಪ ನಾಯಕ), ಅವಿಷ್ಕಾ ಫೆರ್ನಾಂಡೊ, ಚರಿತ್ ಅಸಲಂಕ, ಭಾನುಕಾ ರಾಜಪಕ್ಸೆ, ಕಮಿಂಡು ಮೆಂಡಿಸ್, ಕುಸಾಲ್ ಪೆರೇರಾ, ದಿನೇಶ್ ಚಂಡಿಮಲ್, ವಾನಿಂದು ಹಸರಂಗ, ಚಾಮಿಕ ಕರುಣರತ್ನೆ, ಲಹಿರು ಮಧುಶಂಕ, ದುಷ್ಮಂತ ಚಮೀರ, ನುವಾನ್ ಪ್ರದೀಪ್, ಮಹೀಶ್ ತೀಕ್ಷಣ ಮತ್ತು ಪ್ರವೀಣ್ ಜಯವಿಕ್ರಮ

ಐಸಿಸಿ ಟಿ20 ವಿಶ್ವಕಪ್ 2021 ಊಹಿಸು
Match 4 - October 18 2021, 07:30 PM
ಶ್ರೀಲಂಕಾ
Namibia
Predict Now

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Wednesday, September 15, 2021, 8:18 [IST]
Other articles published on Sep 15, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X