ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಅಂತಾರಾಷ್ಟ್ರೀಯ ಟಿ20 ಇತಿಹಾಸ ಬರೆದ ಶ್ರೀಲಂಕಾ ವೇಗಿ ಲಸಿತ್ ಮಾಲಿಂಗ

Lasith Malinga scripts history, takes four wickets in four deliveries against New Zealand

ಕೊಲಂಬೋ, ಸೆಪ್ಟೆಂಬರ್ 7: ಶ್ರೀಲಂಕಾ ವೇಗಿ ಲಸಿತ್ ಮಾಲಿಂಗ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಇತಿಹಾಸ ನಿರ್ಮಿಸಿದ್ದಾರೆ. ನಾಲ್ಕು ಎಸೆತಗಳಲ್ಲಿ ನಾಲ್ಕು ವಿಕೆಟ್ ಪಡೆದ ಅಪರೂಪದ ದಾಖಲೆ ಮಾಲಿಂಗ ಅವರಿಂದಾಗಿದೆ. ನ್ಯೂಜಿಲೆಂಡ್‌ ವಿರುದ್ಧದ ಟಿ20ಐ ಪಂದ್ಯದಲ್ಲಿ ಮಾಲಿಂಗ ಈ ಸಾಧನೆ ಮೆರೆದರು.

ಪ್ರೊ ಕಬಡ್ಡಿ: ಸಿಡಿದು ನಿಂತ ಪವನ್, ಬೆಂಗಳೂರು ಬುಲ್ಸ್‌ಗೆ ರೋಚಕ ಜಯಪ್ರೊ ಕಬಡ್ಡಿ: ಸಿಡಿದು ನಿಂತ ಪವನ್, ಬೆಂಗಳೂರು ಬುಲ್ಸ್‌ಗೆ ರೋಚಕ ಜಯ

ಶ್ರೀಲಂಕಾದ ಪಾಲ್ಲೆಕೆಲೆ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ಶುಕ್ರವಾರ (ಸೆಪ್ಟೆಂಬರ್ 6) ನಡೆದ ಶ್ರೀಲಂಕಾ-ನ್ಯೂಜಿಲೆಂಡ್ 3ನೇ ಮತ್ತು ಕೊನೆಯ ಟಿ20 ಪಂದ್ಯದ 3ನೇ ಓವರ್‌ನಲ್ಲಿ ನಾಲ್ಕು ಎಸೆತಗಳಲ್ಲಿ ಕಿವೀಸ್ ಪ್ರಮುಖ ನಾಲ್ಕು ವಿಕೆಟ್‌ಗಳನ್ನು ಮಾಲಿಂಗ ಮುರಿದಿದ್ದಾರೆ.

ಕ್ರಿಕೆಟರ್ ದಿನೇಶ್ ಕಾರ್ತಿಕ್‌ಗೆ ಶೋಕಾಸ್ ನೋಟಿಸ್ ನೀಡಿದ ಬಿಸಿಸಿಐ!ಕ್ರಿಕೆಟರ್ ದಿನೇಶ್ ಕಾರ್ತಿಕ್‌ಗೆ ಶೋಕಾಸ್ ನೋಟಿಸ್ ನೀಡಿದ ಬಿಸಿಸಿಐ!

ಲಸಿತ್ ಮಾಲಿಂಗ ಮಾರಕ ಬೌಲಿಂಗ್ ನೆರವಿನಿಂದ ಶ್ರೀಲಂಕಾ ತಂಡ ಪಂದ್ಯವನ್ನು 37 ರನ್‌ಗಳಿಂದ ಗೆದ್ದುಕೊಂಡಿದೆ. ಮೂರು ಪಂದ್ಯಗಳ ಟಿ20 ಸರಣಿ 2-1ರಿಂದ ಕಿವೀಸ್ ವಶವಾಗಿದೆ.

ವಿಶ್ವಕಪ್‌ನಲ್ಲೂ ದಾಖಲೆ

ವಿಶ್ವಕಪ್‌ನಲ್ಲೂ ದಾಖಲೆ

ಲಸಿತ್ ಮಾಲಿಂಗ ನಾಲ್ಕು ಎಸೆತಗಳಲ್ಲಿ ನಾಲ್ಕು ವಿಕೆಟ್ ಪಡೆದಿದ್ದು ಇದೇ ಮೊದಲಲ್ಲ. 2007ರ ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಾಲ್ಕು ಎಸೆತಗಳಲ್ಲಿ ನಾಲ್ಕು ವಿಕೆಟ್ ಪಡೆದ ದಾಖಲೆ ಈಗಲೂ ಮಾಲಿಂಗ ಹೆಸರಿನಲ್ಲಿದೆ.

4 ಪ್ರಮುಖ ವಿಕೆಟ್

4 ಪ್ರಮುಖ ವಿಕೆಟ್

ನ್ಯೂಜಿಲೆಂಡ್‌ ಇನ್ನಿಂಗ್ಸ್‌ನ 3ನೇ ಓವರ್‌ನ ಕೊನೆಯ ನಾಲ್ಕು ಎಸೆತಗಳಲ್ಲಿ ಅಂದರೆ 2.3, 2.4, 2.5 ಮತ್ತು 2.6 ಓವರ್‌ಗಳಲ್ಲಿ ಕಾಲಿನ್ ಮುನ್ರೋ, ಹಮೀಶ್ ರುದಫೋರ್ಡ್, ಕಾಲಿನ್ ಡೆ ಗ್ರ್ಯಾಂಡ್‌ಹೋಮ್ ಮತ್ತು ರಾಸ್ ಟೇಲರ್‌ ವಿಕೆಟ್‌ಗಳನ್ನು ಮಲಿಂಗ ಬಲಿ ಪಡೆದರು.

ಹ್ಯಾಟ್ರಿಕ್ ವಿಕೆಟ್‌ಗಳು

ಹ್ಯಾಟ್ರಿಕ್ ವಿಕೆಟ್‌ಗಳು

ಟಿ20ಐನಲ್ಲಿ ನಾಲ್ಕು ಎಸೆತಗಳಲ್ಲಿ ನಾಲ್ಕು ವಿಕೆಟ್ ಸಾಧನೆ ಮೊದಲು ಮಾಡಿದ್ದು ಅಫ್ಘಾನಿಸ್ತಾನದ ಲೆಗ್ ಸ್ಪಿನ್ನರ್ ರಶೀದ್ ಖಾನ್. ಈ ವರ್ಷದ ಆರಂಭದಲ್ಲಿ ಐರ್ಲೆಂಡ್ ವಿರುದ್ಧ ರಶೀದ್ ಈ ದಾಖಲೆ ನಿರ್ಮಿಸಿದ್ದರು. ಅಂದ್ಹಾಗೆ ಅಂತಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮಾಲಿಂಗಗೆ ಹ್ಯಾಟ್ರಿಕ್ ವಿಕೆಟ್ ಸಿಗುತ್ತಿರುವುದು ಇದು 5ನೇ ಬಾರಿ.

ಅಫ್ರಿದಿ ದಾಖಲೆ ಬದಿಗೆ

ಅಫ್ರಿದಿ ದಾಖಲೆ ಬದಿಗೆ

ಇಷ್ಟೇ ಅಲ್ಲ, ಅಂತಾರಾಷ್ಟ್ರೀಯ ಟಿ20ಯಲ್ಲಿ 100 ವಿಕೆಟ್‌ಗಳನ್ನು ಪಡೆದ ವಿಶ್ವದ ಮೊದಲ ಕ್ರಿಕೆಟಿಗನಾಗಿ ಲಸಿತ್ ಮಾಲಿಂಗ ಇತಿಹಾಸ ನಿರ್ಮಿಸಿದ್ದಾರೆ. ಟಿ20ಯಲ್ಲಿ ಅತ್ಯಧಿಕ ವಿಕೆಟ್‌ಗಾಗಿ ಪಾಕಿಸ್ತಾನದ ಸ್ಪಿನ್ನರ್ ಶಾಹಿದ್ ಅಫ್ರಿದಿ 97 ವಿಕೆಟ್‌ಗಳೊಂದಿಗೆ ಈ ಮೊದಲು ಗುರುತಿಸಿಕೊಂಡಿದ್ದರು.

Story first published: Saturday, September 7, 2019, 15:09 [IST]
Other articles published on Sep 7, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X