ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಚೆನ್ನೈ ವಿರುದ್ಧದ ಹೀನಾಯ ಸೋಲಿಗೆ ಪ್ರತಿಕ್ರಿಯಿಸಿದ ಕೆಎಲ್ ರಾಹುಲ್

Last game we got 220, today we couldnt get half of it, says Punjab Kings skipper KL Rahul

ಮುಂಬೈ: ಮುಂಬೈಯ ವಾಂಖೆಡೆ ಸ್ಟೇಡಿಯಂನಲ್ಲಿ ಶುಕ್ರವಾರ (ಏಪ್ರಿಲ್ 16) ನಡೆದ ಇಂಡಿಯನ್ ಪ್ರೀಮಿಯರ್ ಲೀಗ್‌ 8ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ ವಿರುದ್ಧ ಪಂಜಾಬ್ ಕಿಂಗ್ಸ್‌ 6 ವಿಕೆಟ್ ಹೀನಾಯ ಸೋಲನುಭವಿಸಿದೆ. ಈ ಪಂದ್ಯದ ಸೋಲಿನ ಬಗ್ಗೆ ನಾಯಕ ಕೆಎಲ್ ರಾಹುಲ್ ಪ್ರತಿಕ್ರಿಯಿಸಿದ್ದಾರೆ.

2028ರ ಒಲಿಂಪಿಕ್ಸ್‌ನಲ್ಲಿ ಪುರುಷ, ಮಹಿಳಾ ತಂಡ ಕಣಕ್ಕಿಳಿಸಲು ಬಿಸಿಸಿಐ ಒಪ್ಪಿಗೆ2028ರ ಒಲಿಂಪಿಕ್ಸ್‌ನಲ್ಲಿ ಪುರುಷ, ಮಹಿಳಾ ತಂಡ ಕಣಕ್ಕಿಳಿಸಲು ಬಿಸಿಸಿಐ ಒಪ್ಪಿಗೆ

ಪಂದ್ಯದ ಬಳಿಕ ಮಾತನಾಡಿದ ಕೆಎಲ್ ರಾಹುಲ್, 'ಇಲ್ಲಿ ಹೆಚ್ಚಿಗೆ ಹೇಳಲು ಏನೂ ಉಳಿದಿಲ್ಲ. ಒಂದು ವೇಳೆ ಯಾವುದೇ ತಂಡ ಮೊದಲ 7-8 ಓವರ್‌ಗಳಲ್ಲೇ 5-6 ವಿಕೆಟ್‌ಗಳನ್ನು ಕಳೆದುಕೊಂಡರೆ ಆ ಪಂದ್ಯವನ್ನು ಮತ್ತೆ ಗೆಲುವಿನತ್ತ ಕೊಂಡೊಯ್ಯಲಾಗೋಲ್ಲ. ಅವರು ಚೆನ್ನಾಗಿ ಬೌಲಿಂಗ್ ಮಾಡಿದರು. ಹಿಂದಿನ ಪಂದ್ಯದಲ್ಲಿ ನಾವು 220+ ರನ್ ಗಳಿಸಿದ್ದೆವು. ಈ ದಿನ ಅದರರ್ಥವೂ ಗಳಿಸಲಾಗಲಿಲ್ಲ. ಬಹುಶಃ 150-160 ರನ್ ಗಳಿಸಿದ್ದರೆ, ಗೆಲ್ಲುವ ಸಾಧ್ಯತೆಯಿತ್ತು,' ಎಂದಿದ್ದಾರೆ.

ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಪಂಜಾಬ್‌ ಕಿಂಗ್ಸ್‌ನಿಂದ ಶಾರುಖ್ ಖಾನ್ ಬಿಟ್ಟರೆ ಬೇರೆ ಯಾರಿಂದಲೂ ಗಮನಾರ್ಹ ರನ್ ಬರಲಿಲ್ಲ. ಶಾರುಖ್ ಖಾನ್ 47 (36), ಜಾಯೆ ರಿಚರ್ಡ್ಸನ್ 15, ಕ್ರಿಸ್ ಗೇಲ್ 10, ದೀಪಕ್ ಹೂಡಾ 10, ಕೆಎಲ್ ರಾಹುಲ್ 5, ಮೊಹಮ್ಮದ್ ಶಮಿ 9 ರನ್ ಸೇರಿಸಿದರು.

ಐಪಿಎಲ್ 2021: ಅಪರೂಪದ ದಾಖಲೆ ಬರೆದ ರವೀಂದ್ರ ಜಡೇಜಾಐಪಿಎಲ್ 2021: ಅಪರೂಪದ ದಾಖಲೆ ಬರೆದ ರವೀಂದ್ರ ಜಡೇಜಾ

ಗುರಿ ಬೆನ್ನಟ್ಟಿದ ಚೆನ್ನೈ ಸೂಪರ್ ಕಿಂಗ್ಸ್‌, ಋತುರಾಜ್ ಗಾಯಕ್ವಾಡ್ 5, ಫಾಪ್ ಡು ಪ್ಲೆಸಿಸ್ 36, ಮೊಯೀನ್ ಅಲಿ 46 (31), ಸುರೇಶ್ ರೈನಾ 8, ಸ್ಯಾಮ್ ಕರನ್ 5 ರನ್‌ನೊಂದಿಗೆ 15.4 ಓವರ್‌ಗೆ 4 ವಿಕೆಟ್ ನಷ್ಟದಲ್ಲಿ 107 ರನ್ ಗಳಿಸಿ ಜಯದ ನಗು ಬೀರಿತು. ಸಿಎಸ್‌ಕೆ ವೇಗಿ ದೀಪಕ್ ಚಾಹರ್ 13 ರನ್‌ಗೆ 4 ವಿಕೆಟ್ ಮುರಿದು ಗಮನ ಸೆಳೆದರು.

Story first published: Saturday, April 17, 2021, 8:23 [IST]
Other articles published on Apr 17, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X