ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿದೇಶದಲ್ಲಿ ಆರ್ ಅಶ್ವಿನ್ ನೀಡಿದ ಅತ್ಯುತ್ತಮ ಪ್ರದರ್ಶನ: ಲಕ್ಷ್ಮಣ್ ಪ್ರಶಂಸೆ

Laxman praises Ashwin’s ‘lovely display of off-spin’ in Melbourne

ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಅನುಭವಿಸಿದ ಆಘಾತಕಾರಿ ಸೋಲಿನ ಬಳಿಕ ಎರಡನೇ ಟೆಸ್ಟ್‌ನಲ್ಲಿ ಭಾರತ ತಿರುಗಿ ಬಿದ್ದ ರೀತಿಗೆ ವಿಶ್ವ ಕ್ರಿಕೆಟ್ ಅಚ್ಚರಿಗೊಂಡಿದೆ. ವಿರಾಟ್ ಕೊಹ್ಲಿ ಅಲಭ್ಯತೆಯಲ್ಲಿ ಅಜಿಂಕ್ಯ ರಹಾನೆ ಮುನ್ನಡೆಸಿದ ರೀತಿಯೂ ಪ್ರಶಂಸನೀಯವಾಗಿತ್ತು. ಈ ಮಧ್ಯೆ ಅನುಭವಿ ಆಟಗಾರ ಆರ್ ಅಶ್ವಿನ್ ಆಸಿಸ್ ನೆಲದಲ್ಲಿ ನೀಡುತ್ತಿರುವ ಗಮನಾರ್ಹ ಪ್ರದರ್ಶನವೂ ಸಾಕಷ್ಟು ಹೊಗಳಿಕೆಗೆ ಪಾತ್ರವಾಗಿದೆ.

ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗ ವಿವಿಎಸ್ ಲಕ್ಷ್ಮಣ್ ಆರ್ ಅಶ್ವಿನ್ ನೀಡಿದ ಪ್ರದರ್ಶನಕ್ಕೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ವಿದೇಶಿ ನೆಲದಲ್ಲಿ ಆರ್ ಅಶ್ವಿನ್ ನೀಡಿದ ಅತ್ಯಂತ ಶ್ರೇಷ್ಠ ಪ್ರದರ್ಶನ ಇದಾಗಿದೆ ಎಂದು ವಿವಿಎಸ್ ಲಕ್ಷ್ಮಣ್ ಹೊಗಳಿಕೆಯ ಮಾತುಗಳನ್ನಾಡಿದ್ದಾರೆ.

ಟೆಸ್ಟ್ ರ‍್ಯಾಂಕಿಂಗ್: ಆರನೇ ಸ್ಥಾನಕ್ಕೆ ಜಿಗಿದ ಅಜಿಂಕ್ಯ ರಹಾನೆ, 7ಸ್ಥಾನಕ್ಕೇರಿದ ಅಶ್ವಿನ್ಟೆಸ್ಟ್ ರ‍್ಯಾಂಕಿಂಗ್: ಆರನೇ ಸ್ಥಾನಕ್ಕೆ ಜಿಗಿದ ಅಜಿಂಕ್ಯ ರಹಾನೆ, 7ಸ್ಥಾನಕ್ಕೇರಿದ ಅಶ್ವಿನ್

"ಸ್ಟೀವ್ ಸ್ಮಿತ್ ಅವರನ್ನು ಕಟ್ಟಿಹಾಕುವ ಅಸ್ತ್ರವನ್ನು ಆರ್ ಅಶ್ವಿನ್ ಹೊಂದಿದಂತೆ ಭಾಸವಾಗುತ್ತಿದೆ. ಅಡಿಲೇಡ್‌ನಲ್ಲಿ ಅದ್ಭುತವಾದ ಪ್ರದರ್ಶನವನ್ನು ಆರ್ ಅಶ್ವಿನ್ ಮೆಲ್ಬರ್ನ್‌ನಲ್ಲೂ ಮುಂದುವರಿಸಿದ್ದಾರೆ. ನಾನು ವೀಕ್ಷಿಸಿರುವುದರಲ್ಲಿ ಇದು ಅಶ್ವಿನ್ ವಿದೇಶದಲ್ಲಿ ನೀಡಿದ ಅತ್ಯುತ್ತಮ ಪ್ರದರ್ಶನ ಇದಾಗಿದೆ" ಎಂದು ವಿವಿಎಸ್ ಲಕ್ಷ್ಮಣ್ ಹೇಳಿದ್ದಾರೆ.

ಆರ್ ಅಶ್ವಿನ್ ಹೊರತುಪಡಿಸಿ ಚೊಚ್ಚಲ ಪಂದ್ಯವನ್ನಾಡಿದ ಶುಭ್ಮನ್ ಗಿಲ್ ಹಾಗೂ ಮೊಹಮ್ಮದ್ ಸಿರಾಜ್ ಪ್ರದರ್ಶನವನ್ನು ಕೂಡ ಲಕ್ಷ್ಮಣ್ ಕೊಂಡಾಡಿದ್ದಾರೆ. ವಿರಾಟ್ ಕೊಹ್ಲಿ, ಮೊಹಮ್ಮದ್ ಶಮಿ ಹಾಗೂ ಇಶಾಂತ್ ಶರ್ಮಾ ಅವರನ್ನು ಹೊಂದಿಲ್ಲದಿದ್ದರೂ ಟೀಮ್ ಇಂಡಿಯಾ ದುರ್ಬಲವಾದಂತೆ ಕಂಡುಬರಲಿಲ್ಲ ಎಂದು ವಿವಿಎಸ್ ಲಕ್ಷ್ಮಣ್ ಹೇಳಿದ್ದಾರೆ.

ಅಜಿಂಕ್ಯ ರಹಾನೆ ನಾಯತ್ವದ ಭಾರತ ತಂಡ ಆಸ್ಟ್ರೇಲಿಯಾದಲ್ಲಿ ಗೆಲ್ಲಬೇಕು: ಶೋಯೆಬ್ ಅಖ್ತರ್ಅಜಿಂಕ್ಯ ರಹಾನೆ ನಾಯತ್ವದ ಭಾರತ ತಂಡ ಆಸ್ಟ್ರೇಲಿಯಾದಲ್ಲಿ ಗೆಲ್ಲಬೇಕು: ಶೋಯೆಬ್ ಅಖ್ತರ್

ಮಲ್ಬರ್ನ್‌ನಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯವನ್ನು ಟೀಮ್ ಇಂಡಿಯಾ ಗೆದ್ದ ಬಳಿಕ ನಾಲ್ಕು ಪಂದ್ಯಗಳ ಸರಣಿಯಲ್ಲಿ 1-1 ಅಂತರದಿಂದ ಸಮಬಲ ಸಾಧಿಸುವಲ್ಲಿ ತಂಡ ಯಶಸ್ವಿಯಾಗಿದೆ. ಟೆಸ್ಟ್ ಸರಣಿಯ ಮೂರನೇ ಪಂದ್ಯ ಜನವರಿ 7ರಿಂದ ಸಿಡ್ನಿ ಕ್ರಿಕೆಟ್‌ ಗ್ರೌಂಡ್‌ನಲ್ಲಿ ನಡೆಯಲಿದೆ.

Story first published: Friday, January 1, 2021, 9:56 [IST]
Other articles published on Jan 1, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X