ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವೆಸ್ಟ್‌ ಬೆಂಗಾಲ್ ಸಿಎಂ ಪರಿಹಾರ ನಿಧಿಗೆ ಮಾಜಿ ಆಟಗಾರ ಲಕ್ಷ್ಮಿರತ್ನ ದೇಣಿಗೆ

Laxmi Ratan Shukla donates IPL commentary fee to WB CMs Relief Fund

ಕೋಲ್ಕತ್ತಾ: ಟೀಮ್ ಇಂಡಿಯಾದ ಮಾಜಿ ಆಲ್ ರೌಂಡರ್, ಈಗ ಕಾಮೆಂಟೇಟರ್, ರಾಜಕಾರಣಿ ಆಗಿರುವ ಲಕ್ಷ್ಮಿರತ್ನ ಶುಕ್ಲಾ ಈ ಬಾರಿ ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್) 2021ರಲ್ಲಿ ಕಾಮೆಂಟರಿ ನೀಡಿರುವ ಸಂಪೂರ್ಣ ವೇತನದ ಹಣವನ್ನು ಕೊರೊನಾ ಪರಿಹಾರರ್ಥವಾಗಿ ವೆಸ್ಟ್‌ ಬೆಂಗಾಲ್ ಚೀಫ್ ಮಿನಿಸ್ಟರ್ ರಿಲೀಫ್‌ ಫಂಡ್‌ಗೆ ದೇಣಿಗೆಯಾಗಿ ನೀಡಿದ್ದಾರೆ.

WTC ಫೈನಲ್ ಹಾಗೂ ಇಂಗ್ಲೆಂಡ್ ವಿರುದ್ಧದ 5 ಟೆಸ್ಟ್ ಪಂದ್ಯಗಳ ಸರಣಿಗೆ ಭಾರತದ ತಂಡ ಪ್ರಕಟWTC ಫೈನಲ್ ಹಾಗೂ ಇಂಗ್ಲೆಂಡ್ ವಿರುದ್ಧದ 5 ಟೆಸ್ಟ್ ಪಂದ್ಯಗಳ ಸರಣಿಗೆ ಭಾರತದ ತಂಡ ಪ್ರಕಟ

ಲಕ್ಷ್ಮಿರತ್ನ ಶುಕ್ಲಾ ಅವರು 2016ರಿಂದ 2021ರ ವರೆಗೆ ಅಂದರೆ ಈ ವರ್ಷಾರಂಭದವರೆಗೆ ಕೋಲ್ಕತ್ತಾ ಸ್ಪೋರ್ಟ್ಸ್‌ ಆ್ಯಂಡ್ ಯೂತ್ ಅಫೇರ್ಸ್‌(ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ) ಸಚಿವರಾಗಿದ್ದರು. ಈಗ ಶುಕ್ಲಾ ಹೌರಾ ಉತ್ತರ ಕ್ಲೇತ್ರದಿಂದ ತೃಣಮೂಲ ಕಾಂಗ್ರೆಸ್‌ನ ಎಂಎಲ್‌ಎ ಆಗಿದ್ದಾರೆ.

'ನನ್ನ ಹುಟ್ಟುಹಬ್ಬದ ದಿನ ಐಪಿಎಲ್ 2021ರ ಕಾಮೆಂಟರಿಯಿಂದ ಬಂದ ಹಣವನ್ನು ನಾನು ರಾಜ್ಯದ ಕಲ್ಯಾಣಕ್ಕೆ ವಿನಿಯೋಸುತ್ತಿದ್ದೇನೆ ಎನ್ನಲು ನನಗೆ ಖುಷಿಯಾಗುತ್ತಿದೆ,' ಎಂದು ಶುಕ್ಲಾ ಹೇಳಿದ್ದಾರೆ. ಮೇ 6ರಂದು ಶುಕ್ಲಾ 40ನೇ ಹರೆಯಕ್ಕೆ ಕಾಲಿರಿಸಿದ್ದರು. ಇದೇ ದಿನ ತನ್ನ ಪಾಲಿನ ದೇಣಿಗೆಯನ್ನು ಶುಕ್ಲಾ ಘೋಷಿಸಿದ್ದರು.

ಐಪಿಎಲ್ ನಡೆಯದಿದ್ರೆ ಬಿಸಿಸಿಐಗೆ ಆಗೋ ನಷ್ಟವೆಷ್ಟು?: ಸತ್ಯ ಬಾಯ್ಬಿಟ್ಟ ಗಂಗೂಲಿ!ಐಪಿಎಲ್ ನಡೆಯದಿದ್ರೆ ಬಿಸಿಸಿಐಗೆ ಆಗೋ ನಷ್ಟವೆಷ್ಟು?: ಸತ್ಯ ಬಾಯ್ಬಿಟ್ಟ ಗಂಗೂಲಿ!

ಮೂಲತಃ ಹೌರಾದವರೇ ಆದ ಶುಕ್ಲಾ, ಟೀಮ್ ಇಂಡಿಯಾ ಪರ 3 ಏಕದಿನ ಪಂದ್ಯಗಳಲ್ಲಿ 18 ರನ್, 1 ವಿಕೆಟ್, 34 ಐಪಿಎಲ್ ಇನ್ನಿಂಗ್ಸ್‌ಗಳಲ್ಲಿ 405 ರನ್, 15 ವಿಕೆಟ್ ದಾಖಲೆ ಹೊಂದಿದ್ದಾರೆ.

Story first published: Friday, May 7, 2021, 19:31 [IST]
Other articles published on May 7, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X