ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್‌ ಬಗ್ಗೆ ಅನಿಸಿಕೆ ಹಂಚಿಕೊಂಡ ಇಂಗ್ಲೆಂಡ್ ಬ್ಯಾಟ್ಸ್ಮನ್ ಬೈರ್‌ಸ್ಟೋವ್

IPL ಬಗ್ಗೆ ಕೇಳಿ ಶಾಕ್ ಆದ ಪಾಕ್ ಆಟಗಾರರು..! | Oneindia Kannada
Learnt different things in IPL from different coaches, players: Jonny Bairstow

ಲಂಡನ್, ಮೇ 15: ಇತ್ತೀಚೆಗಷ್ಟೇ ಯಶಸ್ವಿಯಾಗಿ ಮುಕ್ತಾಯಗೊಂಡಿರುವ ಇಂಡಿಯನ್ ಪ್ರೀಮಿಯರ್‌ ಲೀಗ್‌ನಲ್ಲಿ ಆಸ್ಟ್ರೇಲಿಯಾ ಬ್ಯಾಟ್ಸ್ಮನ್ ಡೇವಿಡ್ ವಾರ್ನರ್ ಜೊತೆ ಬ್ಯಾಟಿಂಗ್ ಮಾಡಿದ್ದು, ಆಟವನ್ನು ಸುಧಾರಿಸಲು ನೆರವಾಗಿದೆ ಎಂದು ಇಂಗ್ಲೆಂಡ್ ಆರಂಭಿಕ ಬ್ಯಾಟ್ಸ್ಮನ್ ಜಾನಿ ಬೈರ್‌ಸ್ಟೋವ್ ಹೇಳಿಕೊಂಡಿದ್ದಾರೆ.

ವಿಶ್ವಕಪ್‌: ಟೀಮ್‌ ಇಂಡಿಯಾ ಕುರಿತು ಕೋಚ್‌ ರವಿ ಶಾಸ್ತ್ರಿ ಅಭಿಪ್ರಾಯವಿದುವಿಶ್ವಕಪ್‌: ಟೀಮ್‌ ಇಂಡಿಯಾ ಕುರಿತು ಕೋಚ್‌ ರವಿ ಶಾಸ್ತ್ರಿ ಅಭಿಪ್ರಾಯವಿದು

ಬೈರ್‌ಸ್ಟೋವ್ ಆಕರ್ಷಕ ಶತಕದ ನೆರವಿನಿಂದ ಮಂಗಳವಾರ (ಮೇ 14) ಇಂಗ್ಲೆಂಡ್‌ನ ಬ್ರಿಸ್ಟಲ್‌ನಲ್ಲಿ ನಡೆದ 3ನೇ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಪ್ರವಾಸಿ ಪಾಕಿಸ್ತಾನ ವಿರುದ್ಧ 6 ವಿಕೆಟ್‌ಗಳ ಜಯ ಸಾಧಿಸಿತು. ಅಲ್ಲದೆ 5 ಪಂದ್ಯಗಳ ಏಕದಿನ ಸರಣಿಯಲ್ಲಿ 2-0ಯ ಮುನ್ನಡೆಯೂ ಗಳಿಸಿದೆ.

IPL: ಸೂಪರ್‌ ಕಿಂಗ್ಸ್‌ ಗೆಲುವಿಗಾಗಿ ರಕ್ತವನ್ನೇ ಹರಿಸಿದ್ದ ಶೇನ್‌ ವ್ಯಾಟ್ಸನ್‌!IPL: ಸೂಪರ್‌ ಕಿಂಗ್ಸ್‌ ಗೆಲುವಿಗಾಗಿ ರಕ್ತವನ್ನೇ ಹರಿಸಿದ್ದ ಶೇನ್‌ ವ್ಯಾಟ್ಸನ್‌!

ಪಂದ್ಯದಲ್ಲಿ ಬೈರ್‌ಸ್ಟೋವ್ 93 ಎಸೆತಗಳಿಗೆ 128 ರನ್ ಬಾರಿಸಿದ್ದರು. ಹೀಗಾಗಿ ಇಮಾಮ್ ಉಲ್ ಹಕ್ ಸ್ಫೋಟಕ ಶತದೊಂದಿಗೆ ಪಾಕ್ ನೀಡಿದ್ದ 358 ಬೃಹತ್ ರನ್ ಗುರಿ ಬೆನ್ನತ್ತಿದ ಇಂಗ್ಲೆಂಡ್ 44.5 ಓವರ್‌ಗೆ 4 ವಿಕೆಟ್ ನಷ್ಟದಲ್ಲಿ 359 ರನ್ ಪೇರಿಸುವುದರೊಂದಿಗೆ ಜಯದ ಕೇಕೆ ಹಾಕಿತ್ತು.

ಪಂದ್ಯದ ಬಳಿಕ ಮಾತನಾಡಿದ 29ರ ಹರೆಯದ ಬೈರ್‌ಸ್ಟೋವ್, 'ಐಪಿಎಲ್ ನಲ್ಲಿ ಪಾಲ್ಗೊಂಡಿದ್ದರಿಂದ ಬೇರೆ ಬೇರೆ ಕೋಚ್‌ಗಳಿಂದ ಬೇರೆ ಬೇರೆ ವಿಚಾರಗಳನ್ನು ಕಲಿಯಲು ಸಾಧ್ಯವಾಯ್ತು. ಹೀಗಾಗಿಯೇ ನನ್ನ ಬ್ಯಾಟಿಂಗ್ ಸಾಕಷ್ಟು ಸುಧಾರಿಸಿದೆ' ಎಂದಿದ್ದಾರೆ.

ICC ಮ್ಯಾಚ್‌ ರೆಫ್ರಿಯಾದ ಮೊದಲ ಮಹಿಳೆ ಭಾರತದ ಜಿ.ಎಸ್‌ ಲಕ್ಷ್ಮೀICC ಮ್ಯಾಚ್‌ ರೆಫ್ರಿಯಾದ ಮೊದಲ ಮಹಿಳೆ ಭಾರತದ ಜಿ.ಎಸ್‌ ಲಕ್ಷ್ಮೀ

ಐಪಿಎಲ್‌ನಲ್ಲಿ ಪ್ಲೇ ಆಫ್ ಪ್ರವೇಶಿಸಿದ್ದ ಸನ್ ರೈಸರ್ಸ್ ತಂಡ ಪ್ರತಿನಿಧಿಸಿದ್ದ ಜಾನಿ ಬೈರ್‌ಸ್ಟೋವ್ 10 ಪಂದ್ಯಗಳಲ್ಲಿ 55.62ರ ಸರಾಸರಿಯಂತೆ 445 ರನ್ ಗಳಿಸಿದ್ದರು. ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ವಿನ್ನರ್, ಚೆನ್ನೈ ಸೂಪರ್‌ ಕಿಂಗ್ಸ್ ರನ್ನರ್ ಆಗಿ ಹೊರಹೊಮ್ಮಿದ್ದರೆ, ಎಸ್‌ಆರ್‌ಎಚ್ ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟಿತ್ತು.

Story first published: Wednesday, May 15, 2019, 12:50 [IST]
Other articles published on May 15, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X