ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಚೇತೇಶ್ವರ್ ಪೂಜಾರ ಕುರಿತ ಟೀಕೆಗಳಿಗೆ ತನ್ನದೇ ಶೈಲಿಯಲ್ಲಿ ಉತ್ತರ ನೀಡಿದ ವಿರಾಟ್ ಕೊಹ್ಲಿ

India vs England: Leave Pujara alone, its for individuals to figure out drawbacks in their game says Virat Kohli

ಭಾರತ ಮತ್ತು ಇಂಗ್ಲೆಂಡ್ ನಡುವಿನ 5 ಪಂದ್ಯಗಳ ಟೆಸ್ಟ್ ಸರಣಿ ಸದ್ಯ ಎಲ್ಲೆಡೆ ಭಾರಿ ಚರ್ಚೆಗೀಡಾಗುತ್ತಿದೆ. 5 ಪಂದ್ಯಗಳ ಟೆಸ್ಟ್ ಸರಣಿಯ ಮೊದಲನೇ ಪಂದ್ಯ ಬುಧವಾರದಿಂದ (ಆಗಸ್ಟ್ 4) ಆರಂಭವಾಗಿದ್ದು ಈ ಪಂದ್ಯ ನಾಟಿಂಗ್‍ಹ್ಯಾಮ್ ಟ್ರೆಂಟ್ ಬ್ರಿಡ್ಜ್ ಕ್ರೀಡಾಂಗಣದಲ್ಲಿ ನಡೆಯುತ್ತಿದೆ.

ಟೋಕಿಯೋ ಒಲಿಂಪಿಕ್ಸ್: ಇತಿಹಾಸ ಬರೆದ ರಸ್ಲರ್ ರವಿಕುಮಾರ್ ದಾಹಿಯ, ಭಾರತಕ್ಕೆ ಮತ್ತೊಂದು ಬೆಳ್ಳಿ ಖಚಿತ!ಟೋಕಿಯೋ ಒಲಿಂಪಿಕ್ಸ್: ಇತಿಹಾಸ ಬರೆದ ರಸ್ಲರ್ ರವಿಕುಮಾರ್ ದಾಹಿಯ, ಭಾರತಕ್ಕೆ ಮತ್ತೊಂದು ಬೆಳ್ಳಿ ಖಚಿತ!

ಈ ಪಂದ್ಯ ಆರಂಭಕ್ಕೂ ಮುನ್ನ ಒಂದು ದಿನದ ಹಿಂದೆ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಸುದ್ದಿಗೋಷ್ಠಿ ನಡೆಸುವುದರ ಮೂಲಕ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಕುರಿತು ಮಾತನಾಡಿದರು. ಮೊದಲನೇ ಪಂದ್ಯದಲ್ಲಿ ಭಾರತದ ಯಾವ ಆಟಗಾರರು ಕಣಕ್ಕಿಳಿಯಲಿದ್ದಾರೆ ಎಂಬುದರ ಕುರಿತು ಮಾತನಾಡಿದ ವಿರಾಟ್ ಕೊಹ್ಲಿ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಉತ್ತಮ ಪ್ರದರ್ಶನ ತೋರುವ ಕುರಿತು ವಿಶ್ವಾಸವನ್ನು ವ್ಯಕ್ತಪಡಿಸಿದರು.

ಭಾರತ 3-1 ಅಂತರದಿಂದ ಸರಣಿ ಗೆಲ್ಲಲಿದೆ: ಅಚ್ಚರಿಯ ಭವಿಷ್ಯ ನುಡಿದ ಮೈಕಲ್ ವಾನ್ಭಾರತ 3-1 ಅಂತರದಿಂದ ಸರಣಿ ಗೆಲ್ಲಲಿದೆ: ಅಚ್ಚರಿಯ ಭವಿಷ್ಯ ನುಡಿದ ಮೈಕಲ್ ವಾನ್

ಅಷ್ಟೇ ಅಲ್ಲದೆ ತಮ್ಮ ತಂಡದ ಆಟಗಾರರ ಕುರಿತು ಸಾಮಾಜಿಕ ಜಾಲತಾಣದಲ್ಲಿ ಎದುರಾಗುತ್ತಿರುವ ಟೀಕೆಗಳ ಕುರಿತು ಸಹ ಪ್ರತಿಕ್ರಿಯಿಸಿರುವ ವಿರಾಟ್ ಕೊಹ್ಲಿ ತಮ್ಮದೇ ಆದ ಶೈಲಿಯಲ್ಲಿ ಟೀಕಾಕಾರರಿಗೆ ಉತ್ತರ ನೀಡುವುದರ ಮೂಲಕ ಬಾಯಿ ಮುಚ್ಚಿಸಿದ್ದಾರೆ. ಅದರಲ್ಲಿಯೂ ಚೇತೇಶ್ವರ್ ಪೂಜಾರ ಕುರಿತು ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಟೀಕೆಗಳು ವ್ಯಕ್ತವಾಗುತ್ತಿವೆ. ಇತ್ತೀಚೆಗಷ್ಟೇ ನಡೆದ ನ್ಯೂಜಿಲೆಂಡ್ ವಿರುದ್ಧದ ಪ್ರತಿಷ್ಠಿತ ವಿಶ್ವ ಟೆಸ್ಟ್ ಚಾಂಪಿಯನ್ ಫೈನಲ್ ಪಂದ್ಯದ ನಂತರ ಚೇತೇಶ್ವರ್ ಪೂಜಾರ ಕುರಿತು ತುಸು ಹೆಚ್ಚೇ ಟೀಕೆಗಳು ವ್ಯಕ್ತವಾದವು. ಈ ಎಲ್ಲಾ ಬೆಳವಣಿಗೆಗಳ ಕುರಿತು ಮಾತನಾಡಿದ ವಿರಾಟ್ ಕೊಹ್ಲಿ ಈ ಕೆಳಕಂಡಂತೆ ಉತ್ತರ ನೀಡುವುದರ ಮೂಲಕ ಚೇತೇಶ್ವರ್ ಪೂಜಾರ ಮೇಲಿನ ಟೀಕೆಗಳ ಕಾಲೆಳೆದರು..

ವಿಫಲತೆ ತಿದ್ದಿಕೊಳ್ಳುವುದು ಆಟಗಾರನಿಗೆ ಬಿಟ್ಟ ವಿಚಾರ

ವಿಫಲತೆ ತಿದ್ದಿಕೊಳ್ಳುವುದು ಆಟಗಾರನಿಗೆ ಬಿಟ್ಟ ವಿಚಾರ

ಓರ್ವ ಕ್ರಿಕೆಟಿಗ ಕಳಪೆ ಪ್ರದರ್ಶನ ನೀಡುವುದರ ಮೂಲಕ ವಿಫಲನಾದರೆ ಅದನ್ನು ಪ್ರಶ್ನಿಸುವ ಮತ್ತು ಟೀಕಿಸುವ ಹಕ್ಕು ನಮಗ್ಯಾರಿಗೂ ಇರುವುದಿಲ್ಲ. ಉತ್ತಮ ಪ್ರದರ್ಶನ ನೀಡುತ್ತಿದ್ದ ಆಟಗಾರ ವಿಫಲನಾದಾಗ ಮತ್ತೆ ಉತ್ತಮ ಪ್ರದರ್ಶನ ನೀಡಿ ಯಶಸ್ಸಿನ ಹಾದಿಗೆ ಮರಳುವುದು ಆತನಿಗೆ ತಿಳಿದಿರುತ್ತದೆ. ಈ ಹಿಂದೆ ಉತ್ತಮ ಪ್ರದರ್ಶನ ನೀಡಿ ಮಿಂಚಿದ್ದ ಆಟಗಾರನಿಗೆ ಮತ್ತೆ ವಿಫಲತೆಯಿಂದ ಯಶಸ್ಸಿನ ಹಾದಿಗೆ ಮರಳುವುದು ಹೇಗೆ ಎಂಬ ವಿಚಾರ ತಿಳಿದಿರುತ್ತದೆ ಎಂದು ವಿರಾಟ್ ಕೊಹ್ಲಿ ಖಾರವಾಗಿ ಪ್ರತಿಕ್ರಿಯಿಸಿದರು. ಹೀಗಾಗಿ ಆಟಗಾರ ತನ್ನ ವಿಫಲತೆಯನ್ನು ತಿದ್ದಿಕೊಳ್ಳುವುದು ಆತನಿಗೆ ಬಿಟ್ಟಿರುವ ವಿಚಾರ ಅದಕ್ಕೆ ಬೇರೆಯವರು ಮೂಗು ತೂರಿಸಬಾರದು ಎಂಬರ್ಥದಲ್ಲಿ ವಿರಾಟ್ ಕೊಹ್ಲಿ ತಮ್ಮದೇ ಆದ ಶೈಲಿಯಲ್ಲಿ ಉತ್ತರ ನೀಡಿದರು.

ಪೂಜಾರ ಈ ರೀತಿಯ ಟೀಕೆಗಳಿಗೆ ತಲೆ ಕೆಡಿಸಿಕೊಳ್ಳುವುದಿಲ್ಲ!

ಪೂಜಾರ ಈ ರೀತಿಯ ಟೀಕೆಗಳಿಗೆ ತಲೆ ಕೆಡಿಸಿಕೊಳ್ಳುವುದಿಲ್ಲ!

ಇನ್ನೂ ಮುಂದುವರಿದು ಮಾತನಾಡಿರುವ ವಿರಾಟ್ ಕೊಹ್ಲಿ ಚೇತೇಶ್ವರ್ ಪೂಜಾರ ಈ ರೀತಿಯ ಟೀಕೆಗಳಿಗೆಲ್ಲಾ ತಲೆಯನ್ನು ಕೂಡಾ ಕೆಡಿಸಿಕೊಳ್ಳುವುದಿಲ್ಲ ಎಂದು ಆಶ್ಚರ್ಯಕರ ಹೇಳಿಕೆ ನೀಡಿದ್ದಾರೆ. ವಿರಾಟ್ ಕೊಹ್ಲಿ ಈ ರೀತಿ ಹೇಳಿಕೆ ನೀಡುವುದರ ಮೂಲಕ ಚೇತೇಶ್ವರ್ ಪೂಜಾರ ಕುರಿತು ಟೀಕೆಗಳನ್ನು ವ್ಯಕ್ತಪಡಿಸುತ್ತಿರುವವರ ಕಾಲೆಳೆದಿದ್ದಾರೆ. ಕೇವಲ ಚೇತೇಶ್ವರ್ ಪೂಜಾರ ಮಾತ್ರವಲ್ಲ ತಂಡದ ಇನ್ನೂ ಹಲವಾರು ಆಟಗಾರರು ಟೀಕೆಗಳಿಗೆ ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ಸಹ ವಿರಾಟ್ ಕೊಹ್ಲಿ ಹೇಳಿಕೆ ನೀಡಿದ್ದಾರೆ.

ಮೂರನೆಯವರ ಮಾತಿಗೆ ಬೆಲೆ ಇಲ್ಲ!

ಮೂರನೆಯವರ ಮಾತಿಗೆ ಬೆಲೆ ಇಲ್ಲ!

ಹೊರಗಿನ ಕೆಲ ಜನ ತಾವು ಏನು ಹೇಳಬೇಕೆಂದಿದ್ದಾರೋ ಅದನ್ನು ಹೇಳಿ ಮುಗಿಸುತ್ತಾರೆ ಆದರೆ ಕೊನೆಗೆ ಆ ಟೀಕೆಗಳು ಕೇವಲ ಪದಗಳಾಗಿ ಮಾತ್ರ ಉಳಿಯುತ್ತವೆ ಹೊರತು ಆಟಗಾರರು ಅದಕ್ಕೆ ಪ್ರಾಶಸ್ತ್ಯ ನೀಡುವುದಿಲ್ಲ ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ. ಆ ಟೀಕೆಗಳು ಯಾವುದೇ ರೀತಿಯ ಬೆಲೆಯನ್ನು ಹೊಂದಿಲ್ಲ ಎಂದು ನಿಮಗೆ ಅನಿಸಿದರೆ ಆ ಟೀಕೆಗಳನ್ನು ಬದಿಗೆ ತಳ್ಳಿ ನಿಮ್ಮ ದಾರಿಯಲ್ಲಿ ನೀವು ಸಾಗಬಹುದು ಎಂದು ವಿರಾಟ್ ಕೊಹ್ಲಿ ಮೂರನೆಯವರ ಮಾತಿಗೆ ಬೆಲೆ ಕೊಡುವುದಿಲ್ಲ ಎಂದು ಪರೋಕ್ಷವಾಗಿ ಹೇಳಿಕೊಂಡಿದ್ದಾರೆ.

Story first published: Wednesday, August 4, 2021, 17:03 [IST]
Other articles published on Aug 4, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X