ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟೀಮ್ ಇಂಡಿಯಾವನ್ನು ನೋಡಿ 'ಆ ವಿಚಾರವನ್ನು' ಪಾಕಿಸ್ತಾನ ಕಲಿಯಲಿ: ಪಾಕ್ ಮಾಜಿ ದಿಗ್ಗಜ ಬ್ಯಾಟ್ಸ್‌ಮನ್

Legendary Zaheer Abbas Explains Difference Between Both Batting Line-Ups

ಇತ್ತೀಚೆಗಷ್ಟೇ ಐಸಿಸಿಯ ಹಾಲ್ ಆಫ್ ಫೇಮ್ ಗೌರವಕ್ಕೆ ಪಾತ್ರರಾದ ಪಾಕಿಸ್ತಾನದ ದಿಗ್ಗಜ ಬ್ಯಾಟ್ಸ್‌ಮನ್ ಜಹೀರ್ ಅಬ್ಬಾಸ್ ಭಾರತ ಕ್ರಿಕೆಟ್ ತಂಡದ ಆಟಗಾರರ ಬಗ್ಗೆ ಹೊಗಳಿಕೆಯ ಮಾತುಗಳನ್ನಾಡಿದ್ದಾರೆ. ಪಾಕಿಸ್ತಾನ ತಂಡದ ಪ್ರದರ್ಶನಕ್ಕೆ ಅಸಮಾಧಾನವನ್ನು ವ್ಯಕ್ತಪಡಿಸುತ್ತಾ ಭಾರತವನ್ನು ನೋಡಿ ಕಲಿಯಿರಿ ಎಂದಿದ್ದಾರೆ.

ಭಾರತದ ತಂಡ ಬ್ಯಾಟಿಂಗ್‌ನಲ್ಲಿ ಸಂಕಷ್ಟವನ್ನು ಅನುಭವಿಸುವ ಸಂದರ್ಭದಲ್ಲಿ ಯಾರಾದರೂ ಒಬ್ಬ ಬ್ಯಾಟ್ಸ್‌ಮನ್ ಅವರನ್ನು ಕಾಪಾಡುತ್ತಾನೆ. ಕಠಿಣ ಸಂದರ್ಭದಲ್ಲಿ ಕನಿಷ್ಠ ಓರ್ವ ಬ್ಯಾಟ್ಸ್‌ಮನ್ ತಂಡವನ್ನು ಸಂಕಷ್ಟದಿಂದ ಪಾರು ಮಾಡುವ ಸಾಮರ್ಥ್ಯವನ್ನು ಹೊಂದಿರುತ್ತಾನೆ ಎಂದು ಜಹೀರ್ ಅಬ್ಬಾಸ್ ಯೂಟ್ಯೂಬ್ ಚಾನೆಲ್‌ನಲ್ಲಿ ಹೇಳಿಕೆಯನ್ನು ನೀಡಿದ್ದಾರೆ.

ಐಪಿಎಲ್ 2020: ಕ್ರಿಸ್ ಗೇಲ್ ಮಹತ್ವದ ಜವಾಬ್ಧಾರಿ ನಿರ್ವಹಿಸಲು ಕೋಚ್ ಕುಂಬ್ಳೆ ಒತ್ತಾಯಐಪಿಎಲ್ 2020: ಕ್ರಿಸ್ ಗೇಲ್ ಮಹತ್ವದ ಜವಾಬ್ಧಾರಿ ನಿರ್ವಹಿಸಲು ಕೋಚ್ ಕುಂಬ್ಳೆ ಒತ್ತಾಯ

ಭಾರತವನ್ನು ನೋಡಿ ಕಲಿಯಲಿ

ಭಾರತವನ್ನು ನೋಡಿ ಕಲಿಯಲಿ

'ಇತ್ತೀಚೆಗೆ ಭಾರತೀಯ ಬ್ಯಾಟ್ಸ್‌ಮನ್‌ಗಳು ಹೇಗೆ ಬ್ಯಾಟಿಂಗ್ ನಡೆಸುತ್ತಾರೆ ಎಂಬುದನ್ನು ಗಮನಿಸಿ. ತಂಡ ಯಾವಾಗ ಸಂಕಷ್ಟಕ್ಕೆ ಸಿಲುಕು ತ್ತದೋ ಆಗ ಯಾರಾದರೂ ಬ್ಯಾಟ್ಸ್‌ಮನ್ ಬಂದು ರನ್ ಗಳಿಸುತ್ತಾನೆ. ಇದನ್ನು ನಾನು ಪಾಕಿಸ್ತಾನ ತಂಡದಲ್ಲಿ ಬಯಸುತ್ತೇನೆ' ಎಂದು ಜಹೀರ್ ಅಬ್ಬಾಸ್ ಹೇಳಿದ್ದಾರೆ.

ಎದುರಾಳಿಗಳಿಂದ ಪಾಕ್ ತಂಡ ಕಲಿಯಲಿ

ಎದುರಾಳಿಗಳಿಂದ ಪಾಕ್ ತಂಡ ಕಲಿಯಲಿ

ಏಷ್ಯಾದ ಬ್ರಾಡ್ಮನ್ ಎಂದೇ ಖ್ಯಾತರಾದ ಜಹೀರ್ ಅಬ್ಬಾಸ್ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 108 ಶತಕವನ್ನು ಗಳಿಸಿದ ಸಾಧನೆ ಮಾಡಿದ್ದಾರೆ. ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡುತ್ತಾ ಪಾಕಿಸ್ತಾನ ಕ್ರಿಕೆಟ್ ತಂಡ ಎದುರಾಳಿಗಳಿಂದ ಪಾಠ ಕಲಿಯಬೇಕು ಎಂದು ಹೇಳಿದ್ದಾರೆ.

ಗವಾಸ್ಕರ್ ಮಾತು ನೆನಪಿಸಿದ ಅಬ್ಬಾಸ್

ಗವಾಸ್ಕರ್ ಮಾತು ನೆನಪಿಸಿದ ಅಬ್ಬಾಸ್

'ಅವರು(ಭಾರತ) ಇದನ್ನು ಕಲಿತಿದ್ದು ನಮ್ಮಿಂದ. ಎಲ್ಲರಿಗೂ ನಾವು ಕಲಿಸಿದ್ದನ್ನು ಚೆನ್ನಾಗಿ ಕಲಿತುಕೊಂಡು ಅಳವಡಿಸಿಕೊಂಡಿದ್ದಾರೆ. ಆದರೆ ಈಗಿನ ಸಂದರ್ಭ ನಾವು ಇತರರಿಂದ ಕಲಿಯಬೇಕಿದೆ. ಗವಾಸ್ಕರ್ ಯಾವಾಗಲೂ "ನೀವು ಯಾವಾಗಲೂ ಎದುರಾಳಿಗಳಿಂದಲೂ ಕಲಿಯಬೇಕು" ಎಂದು ಹೇಳುತ್ತಿದ್ದರು ಎಂಬುದನ್ನು ಜಹೀರ್ ಅಬ್ಬಾಸ್ ನೆನಪಿಸಿಕೊಂಡಿದ್ದಾರೆ.

ನೋಡಿ ಕಲಿತುಕೊಳ್ಳಬೇಕು

ನೋಡಿ ಕಲಿತುಕೊಳ್ಳಬೇಕು

78 ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್‌ನಲ್ಲಿ 44.79ರ ಸರಾಸರಿಯಲ್ಲಿ 5062 ರನ್ ಬಾರಿಸಿರುವ ಅಬ್ಬಾಸ್ ಟೀಮ್ ಇಂಡಿಯಾದ ಉಪನಾಯಕ ರೋಹಿತ್ ಶರ್ಮಾರ ಉದಾಹರಣೆಯನ್ನು ನೀಡಿದರು. 'ರೋಹಿತ್ ಶರ್ಮಾ ಉತ್ತಮ ಬ್ಯಾಟ್ಸ್‌ಮನ್ ಎಂದು ನೀವು ಹೇಳುವಿರಾದರೆ ನೀವು ಆತನಿಂದ ಖಂಡಿತಾ ಕಲಿಯಬೇಕು. ಆತನ ಆಟವನ್ನು ಗಮನಿಸಿ, ಯಾವ ರೀತಿಯಲ್ಲಿ ಬ್ಯಾಟಿಂಗ್ ನಡೆಸುತ್ತಾರೆ, ತಂತ್ರಗಳನ್ನು ಬಳಸುತ್ತಾರೆ ಎಂದು ತಿಳಿದುಕೊಳ್ಳಬೇಕು. ನಾನು ಕೂಡ ಹನೀಫ್ ಮೊಹಮ್ಮದ್ ಹಾಗೂ ರೋಹನ್ ಕನ್ಹಾಯ್ ಅವರಿಂದ ಕಲಿತಿದ್ದೇನೆ. ಅವರಿಂದ ತರಬೇತಿಯನ್ನು ಪಡೆದುಕೊಂಡಿಲ್ಲ. ಆದರೆ ಅವರ ಆಟವನ್ನು ನೋಡು ಕಲಿತಿದ್ದೇನೆ' ಎಂದು ಅಬ್ಬಾಸ್ ಹೇಳಿದ್ದಾರೆ.

Story first published: Thursday, September 10, 2020, 10:03 [IST]
Other articles published on Sep 10, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X