ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಲೆಜೆಂಡ್ಸ್ ಲೀಗ್ ಕ್ರಿಕೆಟ್: ಇಂಡಿಯಾ ಮಹಾರಾಜಾಸ್‌ಗೆ ವರ್ಲ್ಡ್ ಜೈಂಟ್ಸ್ ಸವಾಲು: ಸಂಪೂರ್ಣ ಮಾಹಿತಿ

Legends League Cricket 2022: Special Match between India Maharajas and World Giants full details

ಶನಿವಾರದಿಂದ ಲೆಜೆಂಡ್ಸ್ ಲೀಗ್ ಕ್ರಿಕೆಟ್ ಟೂರ್ನಿ ಆರಂಭವಾಗಲಿದೆ. ನಿವೃತ್ತ ಕ್ರಿಕೆಟಿಗರು ಭಾಗಿಯಾಗುವ ಈ ಟೂರ್ನಿ ಸಾಕಷ್ಟು ಕುತೂಹಲ ಕೆಳಿಸಿದೆ. ಈ ಟೂರ್ನಿಯ ಆರಂಭಕ್ಕೂ ಮುನ್ನ ಕೊಲ್ಕತ್ತಾದಲ್ಲಿ ಶುಕ್ರವಾರ ವಿಶೇಷ ಪಂದ್ಯ ನಡೆಯಲಿದ್ದು ಇಂಡಿಯಾ ಮಹಾರಾಜಾಸ್ ಹಾಗೂ ವರ್ಲ್ಡ್ ಜೈಂಟ್ಸ್ ತಂಡಗಳು ಮುಖಾಮುಖಿಯಾಗುತ್ತಿದೆ. ಭಾರತದ ಸ್ವಾತಂತ್ರ್ಯೋತ್ಸವ ಸಂಭ್ರಮಕ್ಕೆ 75 ಪೂರೈಸಿರುವ ಹಿನ್ನೆಲೆಯಲ್ಲಿ ಈ ವಿಶೇಷ ಪಂದ್ಯವನ್ನು ಆಯೋಜಿಸಲಾಗುತ್ತಿದ್ದು ಕೊಲ್ಕತ್ತಾದ ಈಡನ್ ಗಾರ್ಡನ್‌ನಲ್ಲಿ ಈ ಪಂದ್ಯ ನಡೆಯಲಿದೆ.

ಇಂಡಿಯಾ ಮಹಾರಾಜಾಸ್ ತಂಡವನ್ನು ವೀರೇಂದ್ರ ಸೆಹ್ವಾಗ್ ಮುನ್ನಡೆಸಲಿದ್ದು ಹರ್ಭಜನ್ ಸಿಂಗ್ ಮೊಹಮ್ಮದ್ ಕೈಫ್ ಮೊದಲಾದ ಆಟಗಾರರು ಪ್ರತಿನಿಧಿಸಲಿದ್ದಾರೆ. ನಿವೃತ್ತಿ ಪಡೆದಿರುವ ಕ್ರಿಕೆಟಿಗರನ್ನು ಮತ್ತೊಮ್ಮೆ ಮೈದಾನದಲ್ಲಿ ನೋಡಲು ಈ ಮೂಲಕ ಅಭಿಮಾನಿಗಳಿಗೆ ಅವಕಾಶ ದೊರೆಯುತ್ತಿದೆ. ಇನ್ನು ವರ್ಲ್ಡ್ ಜೈಂಟ್ಸ್ ತಂಡವನ್ನು ಜಾಕ್ ಕ್ಯಾಲೀಸ್ ಮುನ್ನಡೆಸುತ್ತಿದ್ದು ವಿಶ್ವಕೊಪ್ ವಿಜೇತ ಇಂಗ್ಲೆಂಡ್ ತಂಡದ ನಾಯಕ ಇಯಾನ್ ಮಾರ್ಗನ್ ಮುತ್ತಯ್ಯ ಮುರಳೀಧರನ್ ಮೊದಲಾದ ಆಟಗಾರರು ಕಣಕ್ಕಿಳಿಯುತ್ತಿದ್ದಾರೆ.

ಇಂಡಿಯಾ ಮಹಾರಾಜಾಸ್ vs ವಿಶ್ವ ಜೈಂಟ್ಸ್ ಪಂದ್ಯದ ವಿವರಗಳು
ಪಂದ್ಯ: ಇಂಡಿಯಾ ಮಹಾರಾಜಸ್ vs ವರ್ಲ್ಡ್ ಜೈಂಟ್ಸ್, ಲೆಜೆಂಡ್ಸ್ ಲೀಗ್ ಕ್ರಿಕೆಟ್ 2022
ದಿನಾಂಕ ಮತ್ತು ಸಮಯ: ಸೆಪ್ಟೆಂಬರ್ 16 2022, ಶುಕ್ರವಾರ, ಸಂಜೆ 7.30
ಸ್ಥಳ: ಈಡನ್ ಗಾರ್ಡನ್ಸ್, ಕೋಲ್ಕತ್ತಾ

ಪಿಚ್ ರಿಪೋರ್ಟ್, ಹವಾಮಾನ ವರದಿ ಹಾಗೂ ನೇರಪ್ರಸಾರ

ಈಡನ್ ಗಾರ್ಡನ್ಸ್‌ನಲ್ಲಿ ಹೊಸ ಚೆಂಡು ಬ್ಯಾಟ್‌ಗೆ ಚೆನ್ನಾಗಿ ಬರುತ್ತದೆ. ಬ್ಯಾಟರ್‌ಗಳು ಇಲ್ಲಿ ಬ್ಯಾಟಿಂಗ್ ಮಾಡುವುದನ್ನು ಆನಂದಿಸುತ್ತಾರೆ. ಬೌಲರ್‌ಗಳು ತಮ್ಮ ಲೈನ್‌ ಮತ್ತು ಲೆಂತ್ ವಿಚಾರವಾಗಿ ಶಿಸ್ತು ಕಾಪಾಡಿಕೊಳ್ಳುವುದು ಮುಖ್ಯವಾಗುತ್ತದೆ.
ಹವಾಮಾನ ವರದಿ: ಕೊಲ್ಕತ್ತಾದ ಹವಾಮಾನ ವರದಿ ಇಂದಿನ ಪಂದ್ಯಕ್ಕೆ ಪೂರಕವಾಗಿಲ್ಲ ಎಂದೇ ಹೇಳಲಾಗುತ್ತಿದೆ. ಶುಕ್ರವಾರ ಭಾರೀ ಪ್ರಮಾಣದಲ್ಲಿ ಮಳೆಸುರಿಯುವ ಭೀತಿಯಿದೆ. 26-32 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶವಿರಲಿದೆ.
ನೇರಪ್ರಸಾರ: ಈ ಪಂದ್ಯದ ನೇರಪ್ರಸಾರದ ಹಕ್ಕು ಸ್ಟಾರ್‌ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ಪ್ರಸಾರವಾಗಲಿದೆ. ಇನ್ನು ಹಾಟ್‌ಸ್ಟಾರ್ ಈ ಪಂದ್ಯದ ಲೈವ್‌ಸ್ಟ್ರೀಮಿಂಗ್ ನಡೆಸಲಿದೆ.

ಇತ್ತಂಡಗಳ ಸಂಭಾವ್ಯ ಆಡುವ ಬಳಗ
ಇಂಡಿಯಾ ಮಹಾರಾಜಾಸ್ ಸಂಭಾವ್ಯ ಆಡುವ ಬಳಗ
ವೀರೇಂದ್ರ ಸೆಹ್ವಾಗ್ (ನಾಯಕ), ಎಸ್ ಬದ್ರಿನಾಥ್, ಯೂಸುಫ್ ಪಠಾಣ್, ಮೊಹಮ್ಮದ್ ಕೈಫ್, ಪಾರ್ಥಿವ್ ಪಟೇಲ್ (ವಿಕೆಟ್ ಕೀಪರ್), ಇರ್ಫಾನ್ ಪಠಾಣ್, ಹರ್ಭಜನ್ ಸಿಂಗ್, ಎಸ್ ಶ್ರೀಶಾಂತ್, ಪ್ರಗ್ಯಾನ್ ಓಜಾ, ಆರ್ ಪಿ ಸಿಂಗ್, ಜೋಗಿಂದರ್ ಶರ್ಮಾ

ವರ್ಲ್ಡ್ ಜೈಂಟ್ಸ್ ಸಂಭಾವ್ಯ XI
ಶೇನ್ ವ್ಯಾಟ್ಸನ್, ಜಾಕ್ವೆಸ್ ಕಾಲಿಸ್ (ನಾಯಕ), ಇಯಾನ್ ಮೋರ್ಗನ್, ಲೆಂಡ್ಲ್ ಸಿಮನ್ಸ್, ಕೆವಿನ್ ಒ'ಬ್ರಿಯನ್, ಮ್ಯಾಟ್ ಪ್ರಿಯರ್ (ವಿಕೆಟ್ ಕೀಪರ್), ಡೇನಿಯಲ್ ವೆಟ್ಟೋರಿ, ಮುತ್ತಯ್ಯ ಮುರಳೀಧರನ್, ಡೇಲ್ ಸ್ಟೇನ್, ಬ್ರೆಟ್ ಲೀ, ಮಿಚೆಲ್ ಜಾನ್ಸನ್

Story first published: Friday, September 16, 2022, 17:30 [IST]
Other articles published on Sep 16, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X