ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಲೆಜೆಂಡ್ಸ್ ಲೀಗ್: 28 ಎಸೆತಕ್ಕೆ 69 ರನ್ ಚಚ್ಚಿದ ಅಫ್ಗನ್; ಮಹತ್ವದ ಪಂದ್ಯದಲ್ಲಿ ಸೋತ ಇಂಡಿಯಾ ಮಹಾರಾಜಸ್

Legends League cricket: Asia Lions beat India Maharajas by 36 runs

ಈ ಬಾರಿ ನಡೆಯುತ್ತಿರುವ ಲೆಜೆಂಡ್ಸ್ ಲೀಗ್ ಕ್ರಿಕೆಟ್ ಟೂರ್ನಿಯ ಮೂಲಕ ಮತ್ತೊಮ್ಮೆ ವಿಶ್ವ ಕ್ರಿಕೆಟ್‌ನ ಕೆಲ ಮಾಜಿ ಕ್ರಿಕೆಟಿಗರ ಆಟವನ್ನು ಮೈದಾನದಲ್ಲಿ ವೀಕ್ಷಿಸಬಹುದಾದ ಅವಕಾಶ ಕ್ರಿಕೆಟ್ ಅಭಿಮಾನಿಗಳಿಗೆ ಸಿಕ್ಕಿದೆ.

ಮುಂಬರುವ ಟಿ20 ವಿಶ್ವಕಪ್‌ನಲ್ಲಿ ಭಾರತವನ್ನ ಪಾಕಿಸ್ತಾನ ಸೋಲಿಸಲಿದೆ: ಶೋಯೆಬ್ ಅಕ್ತರ್ ಭವಿಷ್ಯಮುಂಬರುವ ಟಿ20 ವಿಶ್ವಕಪ್‌ನಲ್ಲಿ ಭಾರತವನ್ನ ಪಾಕಿಸ್ತಾನ ಸೋಲಿಸಲಿದೆ: ಶೋಯೆಬ್ ಅಕ್ತರ್ ಭವಿಷ್ಯ

ಇನ್ನು ಕ್ರಿಕೆಟ್‍ನಿಂದ ನಿವೃತ್ತಿ ಹೊಂದಿರುವ ಹಲವಾರು ದಿಗ್ಗಜ ಕ್ರಿಕೆಟಿಗರನ್ನೊಳಗೊಂಡ 3 ತಂಡಗಳ ನಡುವಿನ ಸೆಣಸಾಟವೇ ಈ ಲೆಜೆಂಡ್ಸ್ ಲೀಗ್ ಕ್ರಿಕೆಟ್ ಟೂರ್ನಮೆಂಟ್ ಆಗಿದೆ. ಈ ಟೂರ್ನಿಯಲ್ಲಿ ಇಂಡಿಯಾ ಮಹಾರಾಜಸ್, ಏಷ್ಯಾ ಲಯನ್ಸ್ ಮತ್ತು ವರ್ಲ್ಡ್ ಜಿಯಂಟ್ಸ್ ತಂಡಗಳು ಕಣಕ್ಕಿಳಿಯುತ್ತಿದ್ದು ಟೂರ್ನಿ ಜನವರಿ 20ರಂದು ಆರಂಭವಾಗಿದ್ದು ಅಂತಿಮ ಪಂದ್ಯ ಜನವರಿ 29ರಂದು ನಡೆಯಲಿದೆ. ಇಂಡಿಯಾ ಮಹಾರಾಜಸ್ ತಂಡ ಭಾರತದ ನಿವೃತ್ತ ಕ್ರಿಕೆಟಿಗರನ್ನು ಒಳಗೊಂಡ ತಂಡವಾಗಿದ್ದರೆ, ಏಷ್ಯಾ ಲಯನ್ಸ್ ಭಾರತದ ಕ್ರಿಕೆಟಿಗರನ್ನು ಹೊರತುಪಡಿಸಿ ಏಷ್ಯಾ ಖಂಡದ ಉಳಿದ ಕ್ರಿಕೆಟ್ ತಂಡಗಳ ಮಾಜಿ ಆಟಗಾರರನ್ನು ಒಳಗೊಂಡಿರಲಿದೆ ಹಾಗೂ ವರ್ಲ್ಡ್ ಜಿಯಂಟ್ಸ್ ಏಷ್ಯಾ ಖಂಡವನ್ನು ಹೊರತುಪಡಿಸಿ ವಿಶ್ವದ ಉಳಿದ ಕ್ರಿಕೆಟ್ ತಂಡಗಳ ಮಾಜಿ ಆಟಗಾರರನ್ನು ಒಳಗೊಂಡಿರುವ ತಂಡವಾಗಿದೆ.

ಆತನಿಗೆ ಹೆಚ್ಚಿನ ಅವಕಾಶ ನೀಡಿ; ಭಾರತದ ಪರವಾಗಿ ಅಚ್ಚರಿಗಳನ್ನು ಸೃಷ್ಟಿಸಬಲ್ಲ ಕ್ರಿಕೆಟಿಗ ಆತ: ದಿನೇಶ್ ಕಾರ್ತಿಕ್ಆತನಿಗೆ ಹೆಚ್ಚಿನ ಅವಕಾಶ ನೀಡಿ; ಭಾರತದ ಪರವಾಗಿ ಅಚ್ಚರಿಗಳನ್ನು ಸೃಷ್ಟಿಸಬಲ್ಲ ಕ್ರಿಕೆಟಿಗ ಆತ: ದಿನೇಶ್ ಕಾರ್ತಿಕ್

ಹೀಗೆ ನಡೆಯುತ್ತಿರುವ ಲೆಜೆಂಡ್ಸ್ ಲೀಗ್ ಟೂರ್ನಿಯಲ್ಲಿನ ತನ್ನ ಚೊಚ್ಚಲ ಪಂದ್ಯದಲ್ಲಿ ಇಂಡಿಯಾ ಮಹಾರಾಜಾಸ್ ಏಷ್ಯಾ ಲಯನ್ಸ್ ತಂಡದ ವಿರುದ್ಧ ರೋಚಕ ಜಯ ಸಾಧಿಸುವುದರ ಮೂಲಕ ಶುಭಾರಂಭವನ್ನು ಮಾಡಿತ್ತು. ಹಾಗೂ ನಂತರ ನಡೆದ ತನ್ನ ದ್ವಿತೀಯ ಪಂದ್ಯದಲ್ಲಿ ವರ್ಲ್ಡ್ ಜಿಯಂಟ್ಸ್ ತಂಡದ ವಿರುದ್ಧ ಇಂಡಿಯಾ ಮಹಾರಾಜಸ್ ಸೋಲನ್ನು ಅನುಭವಿಸಿತ್ತು. ಹೀಗೆ ಮೊದಲೆರಡು ಪಂದ್ಯಗಳಲ್ಲಿ ಗೆಲುವು ಹಾಗೂ ಸೋಲನ್ನು ಕಂಡಿದ್ದ ಇಂಡಿಯಾ ಮಹಾರಾಜಸ್ ಜನವರಿ 24ರಂದು ನಡೆದ ತನ್ನ ತೃತೀಯ ಪಂದ್ಯದಲ್ಲಿ ಮತ್ತೆ ಏಷ್ಯಾ ಲಯನ್ಸ್ ವಿರುದ್ಧ ಸೆಣಸಾಟ ನಡೆಸಿತು. ಹೀಗೆ ಟೂರ್ನಿಯಲ್ಲಿ ಎರಡನೇ ಬಾರಿಗೆ ಇಂಡಿಯಾ ಮಹಾರಾಜಾಸ್ ವಿರುದ್ಧ ಕಣಕ್ಕಿಳಿದ ಏಷ್ಯಾ ಲಯನ್ಸ್ ಚೊಚ್ಚಲ ಪಂದ್ಯದಲ್ಲಿ ಸೋತಿದ್ದ ಸೇಡನ್ನು ಈ ಪಂದ್ಯದಲ್ಲಿ ತೀರಿಸಿಕೊಂಡಿದೆ. ಪಂದ್ಯದ ಮತ್ತಷ್ಟು ವಿವರ ಈ ಕೆಳಕಂಡಂತಿದೆ.

ಬೃಹತ್ ಮೊತ್ತ ಕಲೆ ಹಾಕಿದ ಏಷ್ಯಾ ಲಯನ್ಸ್

ಬೃಹತ್ ಮೊತ್ತ ಕಲೆ ಹಾಕಿದ ಏಷ್ಯಾ ಲಯನ್ಸ್

ಇನ್ನು ಇಂಡಿಯಾ ಮಹಾರಾಜಾಸ್ ಮತ್ತು ಏಷ್ಯಾ ಲಯನ್ಸ್ ತಂಡಗಳ ನಡುವೆ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಇಂಡಿಯಾ ಮಹಾರಾಜಸ್ ಬೌಲಿಂಗ್ ಆಯ್ಕೆ ಮಾಡಿಕೊಂಡು ಎದುರಾಳಿ ಏಷ್ಯಾ ಲಯನ್ಸ್ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿತು. ಹೀಗೆ ಬ್ಯಾಟಿಂಗ್ ಮುಗಿಸಿದ ಏಷ್ಯಾ ಲಯನ್ಸ್ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 193 ರನ್ ಕಲೆ ಹಾಕಿ ಇಂಡಿಯಾ ಮಹಾರಾಜಾಸ್ ತಂಡಕ್ಕೆ ಗೆಲ್ಲಲು 194 ರನ್‌ಗಳ ಬೃಹತ್ ಗುರಿಯನ್ನು ನೀಡಿತು. ಏಷ್ಯಾ ಲಯನ್ಸ್ ಪರ ಉಪುಲ್ ತರಂಗ 45 ಎಸೆತಗಳಲ್ಲಿ 72 ರನ್ ಗಳಿಸಿ ಮಿಂಚಿದರೆ ಅಸ್ಗರ್ ಅಫ್ಗಾನ್ 28 ಎಸೆತಗಳಲ್ಲಿ ಅಜೇಯ 69 ರನ್ ಚಚ್ಚಿದರು. ಇನ್ನುಳಿದಂತೆ ತಂಡದ ದಿಲ್ಶನ್ ಶೂನ್ಯ, ರೊಮೇಶ್ ಕಲುವಿತರಣ 13, ಮೊಹಮ್ಮದ್ ಯೂಸುಫ್ 26 ಹಾಗೂ ಮಿಸ್ಬಾ ಉಲ್ ಹಕ್ ಅಜೇಯ 7 ರನ್ ಕಲೆ ಹಾಕಿದರು.

ಗುರಿ ಬೆನ್ನತ್ತುವಲ್ಲಿ ವಿಫಲವಾದ ಇಂಡಿಯಾ ಮಹಾರಾಜಸ್

ಗುರಿ ಬೆನ್ನತ್ತುವಲ್ಲಿ ವಿಫಲವಾದ ಇಂಡಿಯಾ ಮಹಾರಾಜಸ್

ಇನ್ನು ಏಷ್ಯಾ ಲಯನ್ಸ್ ನೀಡಿದ ಬೃಹತ್ ಮೊತ್ತವನ್ನು ಬೆನ್ನತ್ತಲು ಬ್ಯಾಟಿಂಗ್ ಆರಂಭಿಸಿದ ಇಂಡಿಯಾ ಮಹಾರಾಜಸ್ ಪರ ಆರಂಭಿಕ ಆಟಗಾರನಾಗಿ ಕಣಕ್ಕಿಳಿದ ಕಳೆದ ಪಂದ್ಯದ ಹೀರೊ ನಮನ್ ಓಜಾ 4 ರನ್ ಗಳಿಸಿ ನಿರಾಸೆ ಮೂಡಿಸಿದರೆ ಮತ್ತೋರ್ವ ಆರಂಭಿಕ ಆಟಗಾರನಾದ ವಾಸಿಂ ಜಾಫರ್ 35 ರನ್ ಗಳಿಸಿದರು. ಇನ್ನುಳಿದಂತೆ ಬದ್ರಿನಾಥ್ 9, ನಾಯಕ ಮೊಹಮ್ಮದ್ ಕೈಫ್ 1, ಸ್ಫೋಟಕ ಆಟಗಾರ ಯೂಸುಫ್ ಪಠಾಣ್ 21, ಸ್ಟುವರ್ಟ್ ಬಿನ್ನಿ 25, ಆವಿಷ್ಕಾರ್ ಸಾಳ್ವಿ 14, ಮುನಾಫ್ ಪಟೇಲ್ 0 ರನ್ ಕಲೆಹಾಕಿದರೆ ನಿಖಿಲ್ ಚೋಪ್ರಾ ಅಜೇಯ 2 ರನ್ ಹಾಗೂ ಮನ್ ಪ್ರೀತ್ ಗೋಣಿ ಅಜೇಯ 35 ರನ್ ಕಲೆ ಹಾಕಿದರು. ಈ ಮೂಲಕ ಇಂಡಿಯಾ ಮಹಾರಾಜಾಸ್ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 157 ರನ್ ಕಲೆಹಾಕಿತು. ಹೀಗೆ ಏಷ್ಯಾ ಲಯನ್ಸ್ 36 ರನ್‌ಗಳ ಭರ್ಜರಿ ಜಯ ಸಾಧಿಸುವುದರ ಮೂಲಕ ಇಂಡಿಯಾ ಮಹಾರಾಜಾಸ್ ವಿರುದ್ಧ ಮೊದಲನೇ ಪಂದ್ಯದಲ್ಲಿ ಸೋತಿದ್ದರ ಪ್ರತೀಕಾರವನ್ನು ತೀರಿಸಿಕೊಂಡಿದೆ.

ಇಂಡಿಯಾ ಮಹಾರಾಜಸ್ ತಂಡಕ್ಕೆ ಖಳನಾಯಕನಾದ ಅಸ್ಗರ್ ಅಫ್ಗಾನ್

ಇಂಡಿಯಾ ಮಹಾರಾಜಸ್ ತಂಡಕ್ಕೆ ಖಳನಾಯಕನಾದ ಅಸ್ಗರ್ ಅಫ್ಗಾನ್

ಏಷ್ಯಾ ಲಯನ್ಸ್ ಮತ್ತು ಇಂಡಿಯಾ ಮಹಾರಾಜಸ್ ತಂಡಗಳ ನಡುವೆ ನಡೆದ ಈ ಪಂದ್ಯದಲ್ಲಿ ಏಷ್ಯಾ ಲಯನ್ಸ್ ತಂಡದ ಆಟಗಾರ ಅಸ್ಗರ್ ಅಫ್ಗಾನ್ ಬೌಲಿಂಗ್ ಮತ್ತು ಬ್ಯಾಟಿಂಗ್ ಎರಡೂ ವಿಭಾಗಗಳಲ್ಲಿಯೂ ಕೂಡ ಉತ್ತಮ ಪ್ರದರ್ಶನ ನೀಡುವುದರ ಮೂಲಕ ಇಂಡಿಯಾ ಮಹಾರಾಜಸ್ ಸೋಲಿಗೆ ಪ್ರಮುಖ ಕಾರಣರಾಗಿದ್ದಾರೆ. ಮೊದಲಿಗೆ 28 ಎಸೆತಗಳಲ್ಲಿ 69 ರನ್ ಚಚ್ಚಿದ ಅಸ್ಗರ್ ಅಫ್ಗಾನ್ ಬೌಲಿಂಗ್‌ನಲ್ಲಿ 2 ಓವರ್ ಎಸೆದು 2 ವಿಕೆಟ್‍ಗಳನ್ನು ಕೂಡ ಪಡೆದು ಮಿಂಚಿದರು. ಇಂಡಿಯಾ ಮಹಾರಾಜಾಸ್ ತಂಡದ ಪ್ರಮುಖ ಆಟಗಾರರಾದ ನಾಯಕ ಮೊಹಮ್ಮದ್ ಕೈಫ್ ಹಾಗೂ ಸ್ಪೋಟಕ ಆಟಗಾರ ಯೂಸುಫ್ ಪಠಾಣ್ ಅವರ ವಿಕೆಟ್‍ಗಳನ್ನು ಅಸ್ಗರ್ ಅಫ್ಗಾನ್ ಪಡೆದರು.

BCCI ಕಾಂಟ್ರಾಕ್ಟ್ ನಲ್ಲಿ ರಾಹುಲ್ ಪಂತ್ ಗೆ ಬಂಪರ್ ಆದ್ರೆ ಪೂಜಾರಾ ರಹಾನೆಗೆ ಹಿಂಬಡ್ತಿ | Oneindia Kannada

Story first published: Tuesday, January 25, 2022, 9:41 [IST]
Other articles published on Jan 25, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X