ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಲೆಜೆಂಡ್ಸ್ ಲೀಗ್ ಕ್ರಿಕೆಟ್: ವಿಶೇಷ ಪಂದ್ಯದಲ್ಲಿ ಆಡಲಿದ್ದಾರೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ

Legends League Cricket: BCCI president Sourav Ganguly will play a special match in LLC 2

ಮಾಜಿ ಕ್ರಿಕೆಟಿಗರಿಗಾಗಿ ಇರುವ ಕ್ರಿಕೆಟ್ ಲೀಗ್ ಲೆಜೆಂಡ್ಸ್ ಲೀಗ್ ಕ್ರಿಕೆಟ್‌ನ ಎರಡನೇ ಆವೃತ್ತಿ ಆರಂಭಕ್ಕೆ ದಿನಗಣನೆ ಆರಂಭವಾಗಿದೆ. ಈಗಾಗಲೇ ಅನೇಕ ಮಾಜಿ ಕ್ರಿಕೆಟಿಗರು ಈ ಮಹತ್ವದ ಟೂರ್ನಿಯಲ್ಲಿ ಭಾಗಿಯಾಗುತ್ತಿರುವುದನ್ನು ಖಚಿತಪಡಿಸಿದ್ದಾರೆ. ಈ ಸಂದರ್ಭದಲ್ಲಿ ಬಿಸಿಸಿಐ ಅಧ್ಯಕ್ಷ ಹಾಗೂ ಭಾರತದ ಮಾಜಿ ನಾಯಕ ಸೌರವ್ ಗಂಗೂಲಿ ಈ ಲೆಜೆಂಡ್ಸ್ ಲೀಗ್ ಕ್ರಿಕೆಟ್‌ನಲ್ಲಿ ಭಾಗವಹಿಸುವ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

ಲೆಜೆಂಡ್ಸ್ ಲೀಗ್ ಕ್ರಿಕೆಟ್‌ನಲ್ಲಿ ವಿಶೇಷ ಪಂದ್ಯವೊಂದರಲ್ಲಿ ತಾನು ಆಡುತ್ತಿರುವುದಾಗಿ ಸೌರವ್ ಗಂಗೂಲಿ ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇತ್ತೀಚೆಗಷ್ಟೇ ಲೆಜೆಂಡ್ಸ್ ಲೀಗ್ ಕ್ರಿಕೆಟ್ ಭಾರತದಲ್ಲಿಯೇ ಆಯೋಜನೆ ಮಾಡುತ್ತಿರುವುದಾಗಿ ಆಯೋಜಕರು ಸ್ಪಷ್ಟಪಡಿಸಿದ್ದರು. ಹೀಗಾಗಿ ಮಾಜಿ ನಾಯಕ ಸೌರವ್ ಗಂಗೂಲಿ ಅವರ ಆಟವನ್ನು ಅಭಿಮಾಣಿಗಳು ಮತ್ತೆ ಕಣ್ತುಂಬಿಕೊಳ್ಳುವ ಅವಕಾಶ ದೊರೆಯಲಿದೆ.

CWG 2022: ಧ್ವಜಧಾರಿಯಾಗಿ ಭಾರತವನ್ನು ಮುನ್ನಡೆಸಿದ ಪಿವಿ ಸಿಂಧು, ಮನ್‌ಪ್ರೀತ್ ಸಿಂಗ್; ದಿನ 1ರ ಭಾರತದ ವೇಳಾಪಟ್ಟಿCWG 2022: ಧ್ವಜಧಾರಿಯಾಗಿ ಭಾರತವನ್ನು ಮುನ್ನಡೆಸಿದ ಪಿವಿ ಸಿಂಧು, ಮನ್‌ಪ್ರೀತ್ ಸಿಂಗ್; ದಿನ 1ರ ಭಾರತದ ವೇಳಾಪಟ್ಟಿ

ಲೆಜೆಂಡ್ಸ್ ಲೀಗ್ ಕ್ರಿಕೆಟ್‌ನ ಸಹ-ಸಂಸ್ಥಾಪಕ ಮತ್ತು ಸಿಇಒ ರಾಮನ್ ರಹೇಜಾ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಇತರ ದಿಗ್ಗಜರೊಂದಿಗೆ ಪಂದ್ಯವನ್ನು ಆಡುತ್ತಿರುವ ದಿಗ್ಗಜ ಸೌರವ್ ಗಂಗೂಲಿ ಅವರಿಗೆ ಧನ್ಯವಾದಗಳು. ಒಮ್ಮೆ ಲೆಜೆಂಡ್ ಎನಿಸಿದರೆ ಆತ ಯಾವಾಗಲೂ ಲೆಜೆಂಡ್. ದಾದಾ ಯಾವಾಗಲೂ ಕ್ರಿಕೆಟ್‌ಗಾಗಿ ಇರುವ ವ್ಯಕ್ತಿ. ಅವರು ವಿಶೇಷ ಸಾಮಾಜಿಕ ಕಳಕಳಿಗಾಗಿ ಪಂದ್ಯವನ್ನು ಆಡಲಿದ್ದಾರೆ. ಇದು ನಮ್ಮ ಪ್ರೇಕ್ಷಕರಿಗೆ ಅದ್ಭುತವಾದ ಸಂದರ್ಭವಾಗಿರಲಿದೆ. ಈ ಸಂದರ್ಭದಲ್ಲಿ ದಾದಾ ಅವರ ಸಾಂಪ್ರದಾಯಿಕ ಹೊಡೆತಗಳನ್ನು ನಿರೀಕ್ಷಿಸಬಹುದು" ಎಂದಿದ್ದಾರೆ.

2023ರ ವಿಶ್ವಕಪ್‌ಗೆ ಈತ ಉತ್ತಮ ಆಯ್ಕೆ; ರೋಹಿತ್ ಶರ್ಮಾನೂ ಬಯಸಿದ್ದಾರೆ ಎಂದ ಪ್ರಗ್ಯಾನ್ ಓಜಾ2023ರ ವಿಶ್ವಕಪ್‌ಗೆ ಈತ ಉತ್ತಮ ಆಯ್ಕೆ; ರೋಹಿತ್ ಶರ್ಮಾನೂ ಬಯಸಿದ್ದಾರೆ ಎಂದ ಪ್ರಗ್ಯಾನ್ ಓಜಾ

ಹರ್ಷ ವ್ಯಕ್ತಪಡಿಸಿದ್ದ ಸೆಹ್ವಾಗ್: ಲೆಜೆಂಡ್ಸ್ ಲೀಗ್ ಟೂರ್ನಿಯಲ್ಲಿ ಭಾರತದ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಕಣಕ್ಕಿಳಿಯುವುದಾಗಿ ಖಚಿತ ಪಡಿಸಿದ್ದರು. ಈ ಸಂದರ್ಭದಲ್ಲಿ ಅವರು "ನಾನು ಮತ್ತೆ ಕ್ರಿಕೆಟ್ ಅಂಗಳಕ್ಕೆ ಇಳಿಯುವುದಕ್ಕೆ ಸಂತೋಷಗೊಂಡಿದ್ದೇನೆ. ನಾನು ಮೊದಲ ಆವೃತ್ತಿಯಲ್ಲಿ ಕಣಕ್ಕಿಲಿಯುವ ಅವಕಾಶವನ್ನು ಕಳೆದುಕೊಂಡಿದ್ದೆ. ಈ ಬಾರಿ ಇದು ಮತ್ತಷ್ಟು ಹೊಸತನದೊಂದಿಗೆ ಆಯೋಜನೆಯಾಗುವ ನಿರೀಕ್ಷೆಯಿದೆ. ಹಾಗಾಗಿ ನಾನು ಈ ಟೂರ್ನಿಯಲ್ಲಿ ಭಾಗಿಯಾಗಲು ಉತ್ಸುಕನಾಗಿದ್ದೇನೆ" ಎಂದಿದ್ದರು ಸೆಹ್ವಾಗ್

ಕುತೂಹಲ ಮೂಡಿಸಿದೆ ಎರಡನೇ ಆವೃತ್ತಿ: ಇನ್ನು ಕಳೆದ ಆವೃತ್ತಿಯಲ್ಲಿ ಭಾರತ, ಶ್ರೀಲಂಕಾ, ಪಾಕಿಸ್ತಾನ, ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್‌ನ ಮಾಜಿ ಆಟಗಾರರು ಈ ಟೂರ್ನಿಯಲ್ಲಿ ಭಾಗವಹಿಸಿದ್ದರು. ಈ ಆಟಗಾರರು, ಭಾರತ, ಏಷ್ಯಾ ಹಾಗೂ ವಿಶ್ವ ತಂಡ ಎಂದು ಮೂರು ತಂಡಗಳಾಗಿ ಹಣಾಹಣಿ ನಡೆಸಿದ್ದರು. ಆದರೆ ಈ ಬಾರಿ ಯಾವ ಮಾದರಿಯಲ್ಲಿ ಈ ಟೂರ್ನಿ ಆಯೋಜನೆಯಾಗಲಿದೆ ಎಂಬುದು ಕುತೂಹಲ ಮೂಡಿಸಿದೆ

IND vs WI ಪ್ರಥಮ ಟಿ20: ಈ ಮೈಲಿಗಲ್ಲುಗಳತ್ತ ರೋಹಿತ್, ಜಡೇಜಾ ಮತ್ತು ಪಾಂಡ್ಯ ಕಣ್ಣುIND vs WI ಪ್ರಥಮ ಟಿ20: ಈ ಮೈಲಿಗಲ್ಲುಗಳತ್ತ ರೋಹಿತ್, ಜಡೇಜಾ ಮತ್ತು ಪಾಂಡ್ಯ ಕಣ್ಣು

Dinesh Karthik ಭಾರತ ಕಂಡ ಶ್ರೇಷ್ಠ 360° ಆಟಗಾರ | *Cricket | OneIndia Kannada

ಇತ್ತೀಚೆಗಷ್ಟೇ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಬ್ರೇಟ್ ಲೀ, ಭಾರತದ ಮಾಜಿ ಕ್ರಿಕೆಟಿಗ ಜೋಗಿಂದರ್ ಶರ್ಮಾ, ದಕ್ಷಿಣ ಆಫ್ರಿಕಾದ ದಿಗ್ಗಜರಾದ ಜಾಂಟಿ ರೋಡ್ಸ್ ಹಾಗೂ ಅಲ್ಬೀ ಮಾರ್ಕೆಲ್, ಇಂಗ್ಲೆಂಡ್‌ನ ಲಿಯಾಮ್ ಪ್ಲಂಕೆಟ್ ಶ್ರೀಲಂಕಾದ ಅಜಂತಾ ಮೆಂಡಿಸ್ ಹಾಗೂ ದಿಲ್ಹರ ಫೆರ್ನಾಂಡೋ ಲೆಜೆಂಡ್ಸ್ ಲೀಗ್‌ನಲ್ಲಿ ಭಾಗಿಯಾಗುತ್ತಿರುವುದಾಗಿ ಘೋಷಿಸಿದ್ದರು. ಇದೀಗ ಈ ಪಟ್ಟಿ ಮತ್ತಷ್ಟು ಬೆಳೆಯುತ್ತಿದೆ. ನ್ಯೂಜಿಲೆಂಡ್‌ನ ಮಾಜಿ ಕ್ರಿಕೆಟಿಗ ರಾಸ್ ಟೇಲರ್, ದಕ್ಷಿಣ ಆಫ್ರಿಕಾದ ಮಾಜಿ ಆಟಗಾರರಾದ ಮಾರ್ನೆ ಮಾರ್ಕೆಲ್ ಹಾಗೂ ಲ್ಯಾನ್ಸ್ ಕ್ಲೂಸ್ನರ್ ಕೂಡ ಈ ಟೂರ್ನಿಯಲ್ಲಿ ಭಾಗಿಯಾಗುತ್ತಿರುವುದಾಗಿ ಘೋಷಿಸಿದ್ದಾರೆ

Story first published: Saturday, July 30, 2022, 0:11 [IST]
Other articles published on Jul 30, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X