ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

LLC ಫೈನಲ್‌: ಅಮೋಘ ಗೆಲುವು ಸಾಧಿಸಿದ ಗಂಭೀರ್ ನೇತೃತ್ವದ ಇಂಡಿಯಾ ಕ್ಯಾಪಿಟಲ್ಸ್‌ಗೆ ಚಾಂಪಿಯನ್ ಕಿರೀಟ

Legends League Cricket Final: India Capitals won by 104 runs and lift the trophy

ಲೆಜೆಂಡ್ಸ್ ಲೀಗ್ ಕ್ರಿಕೆಟ್‌ ರೋಮಾಂಚನಕಾರಿಯಾಗಿ ಅಂತ್ಯಕಂಡಿದೆ. ಎರಡನೇ ಆವೃತ್ತಿಯ ಈ ಟೂರ್ನಿಯಲ್ಲಿ ಗಂಭೀರ್ ನೇತೃತ್ವದ ಇಂಡಿಯಾ ಕ್ಯಾಪಿಟಲ್ಸ್ ತಂಡ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ ಮೊದಲ ಬಾರಿಗೆ ಈ ಟೂರ್ನಿಯಲ್ಲಿ ಚಾಂಪಿಯನ್ ಕಿರೀಟವನ್ನು ತನ್ನದಾಗಿಸಿಕೊಂಡಿದೆ.

ಈ ಪಂದ್ಯದಲ್ಲಿ ಇಂಡಿಯಾ ಕ್ಯಾಪಿಟಲ್ಸ್ ತಂಡದ ಪರವಾಗಿ ಗೆಲುವಿನ ರುವಾರಿಯಾಗಿ ಕಾಣಿಸಿಕೊಂಡವರು ರಾಸ್ ಟೇಲರ್ ಹಾಗೂ ಮಿಚೆಲ್ ಜಾನ್ಸನ್. ಟಾಸ್ ಸೋತು ಮೊದಲಿಗೆ ಬ್ಯಾಟಿಂಗ್ ನಡೆಸುವ ಸವಾಲು ದೊರೆತರೂ ಎದುರಾಳಿ ಬಿಲ್ವಾರ ಕಿಂಗ್ಸ್ ತಂಡಕ್ಕೆ ಬೃಹತ್ ಗುರಿಯನ್ನು ಮುಂದಿಟ್ಟಿತ್ತು ಇಂಡಿಯಾ ಕ್ಯಾಪಿಟಲ್ಸ್. ಬಳಿಕ ಈ ಮೊತ್ತವನ್ನು ಬೆನ್ನಟ್ಟಿದ ಇರ್ಫಾನ್ ಪಠಾಣ್ ನೇತೃತ್ವದ ಬಿಲ್ವಾರ ಕಿಂಗ್ಸ್ ಯಾವ ಹಂತದಲ್ಲಿಯೂ ಹೋರಾಟದ ಪ್ರದರ್ಶನ ನೀಡಲೇ ಇಲ್ಲ. ಹೀಗಾಗಿ ಈ ಪಂದ್ಯವನ್ನು ಅಮೋಘ 104 ರನ್‌ಗಳ ಅಂತರದಿಂದ ಗೆದ್ದು ಬೀಗಿದೆ ಇಂಡಿಯಾ ಕ್ಯಾಪಿಟಲ್ಸ್ ತಂಡ.

T20 World Cup: ಜಸ್ಪ್ರೀತ್ ಬುಮ್ರಾ ಅನುಪಸ್ಥಿತಿ ಭಾರತ ತಂಡಕ್ಕೆ ದೊಡ್ಡ ಸಮಸ್ಯೆಯಲ್ಲ ಎಂದ ಮಾಜಿ ಆಟಗಾರT20 World Cup: ಜಸ್ಪ್ರೀತ್ ಬುಮ್ರಾ ಅನುಪಸ್ಥಿತಿ ಭಾರತ ತಂಡಕ್ಕೆ ದೊಡ್ಡ ಸಮಸ್ಯೆಯಲ್ಲ ಎಂದ ಮಾಜಿ ಆಟಗಾರ

ಟಾಸ್ ಸೋತು ಮೊದಲಿಗೆ ಬ್ಯಾಟಿಂಗ್ ಮಾಡಿದ ಇಂಡಿಯಾ ಕ್ಯಾಪಿಟಲ್ಸ್ ಕಳಪೆ ಆರಂಭವನ್ನು ಪಡೆಯಿತು. 21 ರನ್‌ಗಳಿಗೆ 4 ವಿಎಕಟ್ ಕಳೆದುಕೊಂಡ ಗಂಭೀರ್ ಪಡೆಯ ವಿರುದ್ಧ ಇರ್ಫಾನ್ ಪಠಾಣ್ ತಂಡದ ಬೌಲರ್‌ಗಳು ಉತ್ತಮ ಯಶಸ್ಸು ಸಾಧಿಸಿದರು. ಆದರೆ ಅದಾದ ಬಳಿಕ ಜೊತೆಯಾದ ನ್ಯೂಜಿಲೆಂಡ್‌ನ ಕ್ರಿಕೆಟಿಗ ರಾಸ್ ಟೇಲರ್ ಹಾಗೂ ಆಸಿಸ್ ಕ್ರಿಕೆಟಿಗ ಮಿಚೆಲ್ ಜಾನ್ಸನ್ ಸ್ಪೊಟಕ ಬ್ಯಾಟಿಂಗ್ ಪ್ರದರ್ಶಿಸಿದರು. ರಾಸ್ ಟೇಲರ್ 41 ಎಸೆತಗಳಲ್ಲಿ 81 ರನ್ ಸಿಡಿಸಿದ್ದರು. ಇನ್ನಿಂಗ್ಸ್‌ನಲ್ಲಿ 8 ಸಿಕ್ಸರ್ ಹಾಗೂ 4 ಬೌಂಡರಿ ಒಳಗೊಂಡಿತ್ತು. ಇನ್ನು ಮಿಚೆಲ್ ಜಾನ್ಸನ್ ಕೂಡ 35 ಎಸೆತಗಳಲ್ಲಿ 62 ರನ್ ಚಚ್ಚಿನ ತಮ್ಮ ಬ್ಯಾಟಿಂಗ್ ಸಾಮರ್ಥ್ಯ ಪ್ರದರ್ಶಿಸಿದರು. ಬಳಿಕ ಬಂದ ಆಸ್ಲೇ ನರ್ಸ್ ಕೂಡ ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿದ್ದು 19 ಎಸೆತಗಳಲ್ಲಿ 42 ರನ್ ಬಾರಿಸಿದರು. ಈ ಮೂಲಕ ಇಂಡಿಯಾ ಕ್ಯಾಪಿಟಲ್ಸ್ ತಂಡ 7 ವಿಕೆಟ್ ಕಳೆದುಕೊಂಡು 211 ರನ್‌ಗಳಿಸಿತ್ತು.

212 ರನ್‌ಗಳ ಬೃಹತ್ ಸವಾಲು ಪಡೆದ ಬಿಲ್ವಾರ ಕಿಂಗ್ಸ್ ತಂಡ ಆರಂಭದಿಂದಲೇ ಕಳಪೆ ಪ್ರದರ್ಶನ ನೀಡುತ್ತಾ ಸಾಗಿತ್ತು. ಮಧ್ಯಮ ಕ್ರಮಾಂಕದ ಆಟಗಾರರು ತಂಡದ ನೆರವಿಗೆ ಬಾರಲೇ ಇಲ್ಲ. ಹೀಗಾಗಿ ಇಂಡಿಯಾ ಕ್ಯಾಪಿಟಲ್ಸ್ ತಂಡಕ್ಕೆ ಬಿಲ್ವಾರ ಕಿಂಗ್ಸ್ ತಂಡ ಸುಲಭ ತುತ್ತಾಯಿತು. 18.2 ಓವರ್‌ಗಳಲ್ಲಿ ಕೇವಲ 107 ರನ್‌ಗಳಿಸಿ ಇರ್ಫಾನ್ ಪಠಾಣ್ ಬಳಗ ಆಲೌಟ್ ಆಯಿತು. ಈ ಮೂಲಕ 104 ರನ್‌ಗಳ ಅಂತರದೊಂದಿಗೆ ಇಮಡಿಯಾ ಕ್ಯಾಪಟಿಲ್ಸ್ ತಂಡ ಗೆಲುವು ಸಾಧಿಸಿದ್ದು ಚೊಚ್ಚಲ ಬಾರಿಗೆ ಟೂರ್ನಿಯ ಚಾಂಪಿಯನ್ ಪಟ್ಟವನ್ನು ತನ್ನದಾಗಿಸಿಕೊಂಡಿದೆ.

ಇಂಡಿಯಾ ಕ್ಯಾಪಿಟಲ್ಸ್ ಆಡುವ ಬಳಗ: ಗೌತಮ್ ಗಂಭೀರ್ (ನಾಯಕ), ಡ್ವೇನ್ ಸ್ಮಿತ್, ಹ್ಯಾಮಿಲ್ಟನ್ ಮಸಕಡ್ಜಾ, ರಾಸ್ ಟೇಲರ್, ದಿನೇಶ್ ರಾಮ್ದಿನ್ (ವಿಕೆಟ್ ಕೀಪರ್), ಆಶ್ಲೇ ನರ್ಸ್, ಮಿಚೆಲ್ ಜಾನ್ಸನ್, ಪ್ರವೀಣ್ ಗುಪ್ತಾ, ಪ್ರವೀಣ್ ತಾಂಬೆ, ಪಂಕಜ್ ಸಿಂಗ್, ಪವನ್ ಸುಯಲ್, ಲಿಯಾಮ್ ಪ್ಲಂಕೆಟ್, ರಜತ್ ಭಾಟಿಯಾ

ಬೆಂಚ್: ಜಾನ್ ಮೂನಿ, ಈಶ್ವರ್ ಪಾಂಡೆ, ಸೊಲೊಮನ್ ಮಿರೆ, ಸುಹೇಲ್ ಶರ್ಮಾ, ದಿಶಾಂತ್ ಯಾಗ್ನಿಕ್, ಅಸ್ಗರ್ ಅಫ್ಘಾನ್, ರವಿ ಬೋಪಾರಾ, ಮಶ್ರಫೆ ಮೊರ್ತಜಾ, ಜಾಕ್ವೆಸ್ ಕಾಲಿಸ್, ಪ್ರಾಸ್ಪರ್ ಉತ್ಸೆಯಾ, ಫರ್ವೀಜ್ ಮಹರೂಫ್

ಬಿಲ್ವಾರ ಕಿಂಗ್ಸ್ ಆಡುವ ಬಳಗ: ವಿಲಿಯಂ ಪೋರ್ಟರ್‌ಫೀಲ್ಡ್, ಮೊರ್ನೆ ವ್ಯಾನ್ ವೈಕ್ (ವಿಕೆಟ್ ಕೀಪರ್), ಶೇನ್ ವ್ಯಾಟ್ಸನ್, ಯೂಸುಫ್ ಪಠಾಣ್, ಇರ್ಫಾನ್ ಪಠಾಣ್ (ನಾಯಕ), ಜೆಸಾಲ್ ಕರಿಯಾ, ರಾಹುಲ್ ಶರ್ಮಾ, ಮಾಂಟಿ ಪನೇಸರ್, ಟಿನೋ ಬೆಸ್ಟ್, ಎಸ್ ಶ್ರೀಶಾಂತ್, ಧಮ್ಮಿಕಾ ಪ್ರಸಾದ್, ಟಿಮ್ ಬ್ರೆಸ್ನನ್, ರಾಜೇಶ್ ಬಿಷ್ಣೋಯ್
ಬೆಂಚ್: ಫಿಡೆಲ್ ಎಡ್ವರ್ಡ್ಸ್, ಸುದೀಪ್ ತ್ಯಾಗಿ, ನಿಕ್ ಕಾಂಪ್ಟನ್, ಮ್ಯಾಟ್ ಪ್ರಯರ್, ದಿನೇಶ್ ಸಾಳುಂಖೆ, ನಮನ್ ಓಜಾ, ಮಯಾಂಕ್ ತೆಹ್ಲಾನ್, ಸಮಿತ್ ಪಟೇಲ್, ತನ್ಮಯ್ ಶ್ರೀವಾಸ್ತವ, ಓವೈಸ್ ಶಾ

Story first published: Thursday, October 6, 2022, 0:00 [IST]
Other articles published on Oct 6, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X