ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಲೆಜೆಂಡ್ಸ್ ಲೀಗ್ ಕ್ರಿಕೆಟ್: ಕಣಕ್ಕಿಳಿಯುವುದಾಗಿ ಘೋಷಿಸಿದ ಭಾರತದ ವಿಶ್ವಕಪ್ ಹೀರೋ!

Legends League Cricket: Former India cricketer Gautam Gambhir will play play in 2nd edition of LLC

ಲೆಜೆಂಡ್ಸ್ ಲೀಗ್ ಕ್ರಿಕೆಟ್ ಕ್ರಿಕೆಟ್ ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲ ಮೂಡಿಸಿರುವ ಟೂರ್ನಿಯಾಗಿದ್ದು ಕ್ರಿಕೆಟ್‌ನಿಂದ ನಿವೃತ್ತಿಯಾಗಿರುವ ಸಾಕಷ್ಟು ಮಾಜಿ ಆಟಗಾರರು ಈ ಟೂರ್ನಿಯಲ್ಲಿ ಆಡಲು ಸಜ್ಜಾಗಿದ್ದಾರೆ. ಕಳೆದ ವರ್ಷ ನಡೆದ ಈ ಟೂರ್ನಿಯ ಮೊದಲ ಆವೃತ್ತಿ ಸಾಕಷ್ಟು ಅದ್ಭುತ ಪ್ರತಿಕ್ರಿಯೆ ಪಡೆದುಕೊಂಡಿದ್ದು ಈ ಬಾರಿ ಎರಡನೇ ಆವೃತ್ತಿಗೆ ದಿನಗಣನೆ ಆರಂಭವಾಗಿದೆ. ಈ ಸಂದರ್ಭದಲ್ಲಿ ಭಾರತದ ಮಾಜಿ ಆರಂಭಿಕ ಆಟಗಾರ ರಾಜಕಾರಣಿಯಾಗಿಯೂ ಯಶಸ್ಸು ಸಾಧಿಸುತ್ತಿರುವ ಗೌತಮ್ ಗಂಭೀರ್ ಕೂಡ ತಾನು ಈ ವಿಶಿಷ್ಠ ಟೂರ್ನಿಯಲ್ಲಿ ಭಾಗಿಯಾಗುವುದಾಗಿ ಘೋಷಿಸಿದ್ದಾರೆ.

ಸೆಪ್ಟೆಂಬರ್ 17ರಿಂದ ಲೆಜೆಂಡ್ಸ್ ಲೀಗ್‌ ಕ್ರಿಕೆಟ್‌ನ ಎರಡನೇ ಆವೃತ್ತಿ ಆರಂಭವಾಗಲಿದ್ದು ಗಂಭೀರ್ 'ಇಂಡಿಯಾ ಮಹಾರಾಜಾಸ್' ತಂಡದ ಪರವಾಗಿ ಆಡಲು ಸಜ್ಜಾಗಿದ್ದಾರೆ. ಈ ಟೂರ್ನಿಯಲ್ಲಿ ಆಡುತ್ತಿರುವ ಬಗ್ಗೆ ಗಂಭೀರ್ ಪ್ರತಿಕ್ರಿಯೆ ನೀಡಿದ್ದು ಈ ಟೂರ್ನಿಯಲ್ಲಿ ಭಾಗಿಯಾಗುತ್ತಿರುವುದಕ್ಕೆ ಹರ್ಷವಾಗುತ್ತಿದೆ. ಮತ್ತೆ ಕ್ರಿಕೆಟ್ ಅಂಗಳಕ್ಕೆ ಇಳಿಯಲು ಉತ್ಸುಕನಾಗಿದ್ದೇನೆ" ಎಂದಿದ್ದಾರೆ ಗಂಭೀರ್.

Anil Kumble: ಪಂಜಾಬ್ ಕಿಂಗ್ಸ್ ಕೋಚ್ ಸ್ಥಾನದಿಂದ ಕನ್ನಡಿಗ ಕುಂಬ್ಳೆ ಔಟ್; ಬೇರೆ ಕೋಚ್ ಆಯ್ಕೆ!Anil Kumble: ಪಂಜಾಬ್ ಕಿಂಗ್ಸ್ ಕೋಚ್ ಸ್ಥಾನದಿಂದ ಕನ್ನಡಿಗ ಕುಂಬ್ಳೆ ಔಟ್; ಬೇರೆ ಕೋಚ್ ಆಯ್ಕೆ!

ವಿಶೇಷ ಪಂದ್ಯಕ್ಕೆ ಸೌರವ್ ಗಂಗೂಲಿ ನಾಯಕ

ವಿಶೇಷ ಪಂದ್ಯಕ್ಕೆ ಸೌರವ್ ಗಂಗೂಲಿ ನಾಯಕ

ಇನ್ನು ಸೆಪ್ಟೆಂಬರ್ 16ರಂದು ಇಂಡಿಯಾ ಮಹಾರಾಜಾಸ್ ಹಾಗೂ ವಲ್ಡ್ಸ್ ಜೈಂಡ್ಸ್ ತಂಡದ ವಿರುದ್ಧ ವಿಶೇಷ ಪಂದ್ಯವೊಂಡು ನಡೆಯಲಿದೆ. ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ವಿಶೇಷ ಪಂದ್ಯ ನಡೆಯಲಿದ್ದು ಈ ವಿಶೇಷ ಪಂದ್ಯದಲ್ಲಿ ಇಂಡಿಯಾ ಮಹಾರಾಜಾಸ್ ತಂಡವನ್ನು ಸೌರವ್ ಗಂಗೂಲಿ ಮುನ್ನಡೆಸಲಿದ್ದಾರೆ. ಎದುರಾಳಿ ತಂಡವಾಗಿಡುವ ವಿಶ್ವ ಮಹಾರಾಜಾಸ್ ತಂಡದ ನಾಯಕತ್ವವನ್ನು ಇಯಾನ್ ಮಾರ್ಗನ್ ವಹಿಸಿಕೊಳ್ಳಲಿದ್ದಾರೆ.

ನಾವೂ ಭಾಗಿಯಾಗುತ್ತೇವೆ ಎಂದ ದಿಗ್ಗಜ ಆಟಗಾರರು

ನಾವೂ ಭಾಗಿಯಾಗುತ್ತೇವೆ ಎಂದ ದಿಗ್ಗಜ ಆಟಗಾರರು

ಇತ್ತೀಚೆಗಷ್ಟೇ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಬ್ರೇಟ್ ಲೀ, ಭಾರತದ ಮಾಜಿ ಕ್ರಿಕೆಟಿಗ ಜೋಗಿಂದರ್ ಶರ್ಮಾ, ದಕ್ಷಿಣ ಆಫ್ರಿಕಾದ ದಿಗ್ಗಜರಾದ ಜಾಂಟಿ ರೋಡ್ಸ್ ಹಾಗೂ ಅಲ್ಬೀ ಮಾರ್ಕೆಲ್, ಇಂಗ್ಲೆಂಡ್‌ನ ಲಿಯಾಮ್ ಪ್ಲಂಕೆಟ್ ಶ್ರೀಲಂಕಾದ ಅಜಂತಾ ಮೆಂಡಿಸ್ ಹಾಗೂ ದಿಲ್ಹರ ಫೆರ್ನಾಂಡೋ ಲೆಜೆಂಡ್ಸ್ ಲೀಗ್‌ನಲ್ಲಿ ಭಾಗಿಯಾಗುತ್ತಿರುವುದಾಗಿ ಘೋಷಿಸಿದ್ದರು. ಇದೀಗ ಈ ಪಟ್ಟಿ ಮತ್ತಷ್ಟು ಬೆಳೆಯುತ್ತಿದೆ. ನ್ಯೂಜಿಲೆಂಡ್‌ನ ಮಾಜಿ ಕ್ರಿಕೆಟಿಗ ರಾಸ್ ಟೇಲರ್, ದಕ್ಷಿಣ ಆಫ್ರಿಕಾದ ಮಾಜಿ ಆಟಗಾರರಾದ ಮಾರ್ನೆ ಮಾರ್ಕೆಲ್ ಹಾಗೂ ಲ್ಯಾನ್ಸ್ ಕ್ಲೂಸ್ನರ್ ಕೂಡ ಈ ಟೂರ್ನಿಯಲ್ಲಿ ಭಾಗಿಯಾಗುತ್ತಿರುವುದಾಗಿ ಘೋಷಿಸಿದ್ದಾರೆ

ಕಣಕ್ಕಿಳಿಯಲು ಸಜ್ಜಾಗಿದ್ದಾರೆ ವೀರೇಂದ್ರ ಸೆಹ್ವಾಗ್

ಕಣಕ್ಕಿಳಿಯಲು ಸಜ್ಜಾಗಿದ್ದಾರೆ ವೀರೇಂದ್ರ ಸೆಹ್ವಾಗ್

ಇನ್ನು ಇದಕ್ಕೂ ಮುನ್ನ ಈ ಟೂರ್ನಿಯಲ್ಲಿ ಭಾರತದ ಸ್ಟಾರ್ ಆಟಗಾರರಾದ ವೀರೇಂದ್ರ ಸೆಹ್ವಾಗ್, ಇರ್ಫಾನ್ ಪಠಾಣ್, ಯೂಸುಫ್ ಪಠಾಣ್ ಸೇರಿದಂತೆ ಮುರಳೀಧರನ್, ಮಾಂಟಿ ಪೆನೆಸರ್, ಪ್ರವೀಣ್ ತಾಂಬೆ, ನಮನ್ ಓಜಾ, ಎಸ್ ಬದ್ರೀನಾಥ್, ಸ್ಟುವರ್ಟ್ ಬಿನ್ನಿ, ಎಸ್ ಶ್ರೀಶಾಂತ್, ಮಿಸ್ಬಾ ಉಲ್ ಹಕ್, ಕೆವಿನ್ ಓಬ್ರಿಯಾನ್ ಹಾಗೂ ಅಸ್ಘರ್ ಅಫ್ಘಾನ್ ಆಡಲಿರುವುದಾಗಿ ಖಚಿತಪಡಿಸಿದ್ದರು. ಲೆಜೆಂಡ್ಸ್ ಲೀಗ್ ಟೂರ್ನಿಯಲ್ಲಿ ಭಾರತದ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಕಣಕ್ಕಿಳಿಯುವುದಾಗಿ ಖಚಿತ ಪಡಿಸಿದ್ದರು. ಈ ಸಂದರ್ಭದಲ್ಲಿ ಅವರು "ನಾನು ಮತ್ತೆ ಕ್ರಿಕೆಟ್ ಅಂಗಳಕ್ಕೆ ಇಳಿಯುವುದಕ್ಕೆ ಸಂತೋಷಗೊಂಡಿದ್ದೇನೆ. ನಾನು ಮೊದಲ ಆವೃತ್ತಿಯಲ್ಲಿ ಕಣಕ್ಕಿಲಿಯುವ ಅವಕಾಶವನ್ನು ಕಳೆದುಕೊಂಡಿದ್ದೆ. ಈ ಬಾರಿ ಇದು ಮತ್ತಷ್ಟು ಹೊಸತನದೊಂದಿಗೆ ಆಯೋಜನೆಯಾಗುವ ನಿರೀಕ್ಷೆಯಿದೆ. ಹಾಗಾಗಿ ನಾನು ಒಮಾನ್‌ನಲ್ಲಿ ಈ ಟೂರ್ನಿಯಲ್ಲಿ ಭಾಗಿಯಾಗಲು ಉತ್ಸುಕನಾಗಿದ್ದೇನೆ" ಎಂದಿದ್ದರು ಸೆಹ್ವಾಗ್.

Ishan Kishan ಹಾಗು KL Rahul ಅವರ ವೀಡಿಯೋ ಎಲ್ಲೆಡೆ ವೈರಲ್ | *Cricket | OneIndia Kannada
ಕುತೂಹಲಕ್ಕೆ ಕಾರಣವಾಗಿದೆ ಎರಡನೇ ಆವೃತ್ತಿ

ಕುತೂಹಲಕ್ಕೆ ಕಾರಣವಾಗಿದೆ ಎರಡನೇ ಆವೃತ್ತಿ

ಇನ್ನು ಕಳೆದ ಆವೃತ್ತಿಯಲ್ಲಿ ಭಾರತ, ಶ್ರೀಲಂಕಾ, ಪಾಕಿಸ್ತಾನ, ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್‌ನ ಮಾಜಿ ಆಟಗಾರರು ಈ ಟೂರ್ನಿಯಲ್ಲಿ ಭಾಗವಹಿಸಿದ್ದರು. ಈ ಆಟಗಾರರು, ಭಾರತ, ಏಷ್ಯಾ ಹಾಗೂ ವಿಶ್ವ ತಂಡ ಎಂದು ಮೂರು ತಂಡಗಳಾಗಿ ಹಣಾಹಣಿ ನಡೆಸಿದ್ದರು. ಆದರೆ ಈ ಬಾರಿ ಯಾವ ಮಾದರಿಯಲ್ಲಿ ಈ ಟೂರ್ನಿ ಆಯೋಜನೆಯಾಗಲಿದೆ ಎಂಬುದು ಕುತೂಹಲ ಮೂಡಿಸಿದೆ

Story first published: Friday, August 19, 2022, 16:07 [IST]
Other articles published on Aug 19, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X