ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಲೆಜೆಂಡ್ಸ್ ಲೀಗ್: ಇಂಡಿಯಾ ಮಹಾರಾಜಾಸ್‌ಗೆ ಇವರದ್ದೇ ತಲೆನೋವು; ಫೈನಲ್ ತಲುಪಲು ಇದೊಂದೇ ದಾರಿ!

Legends League Cricket: India Maharajas should win against World Giants to enter finals

ಕ್ರಿಕೆಟ್‍ನಿಂದ ನಿವೃತ್ತಿ ಹೊಂದಿರುವ ವಿಶ್ವದ ಹಲವಾರು ಮಾಜಿ ಕ್ರಿಕೆಟಿಗರು ಮತ್ತೊಮ್ಮೆ ಮೈದಾನದಲ್ಲಿ ಸೆಣಸಾಡುವುದನ್ನು ನೋಡಲು ಕಾಯುತ್ತಿದ್ದ ಕ್ರಿಕೆಟ್ ಪ್ರೇಕ್ಷಕರಿಗೆ ಪ್ರಸ್ತುತ ನಡೆಯುತ್ತಿರುವ ಲೆಜೆಂಡ್ಸ್ ಕ್ರಿಕೆಟ್ ಲೀಗ್ ಟೂರ್ನಮೆಂಟ್ ಮನರಂಜನೆಯನ್ನು ತಂದಿದೆ ಎಂದು ಹೇಳಬಹುದು. ಈ ಟೂರ್ನಿಯಲ್ಲಿ 3 ತಂಡಗಳಾದ ಇಂಡಿಯಾ ಮಹಾರಾಜಸ್, ಏಷ್ಯಾ ಲಯನ್ಸ್ ಮತ್ತು ವರ್ಲ್ಡ್ ಜಿಯಂಟ್ಸ್ ತಂಡಗಳು ಕಣಕ್ಕಿಳಿಯುತ್ತಿದ್ದು ಟೂರ್ನಿಯ ಮೊದಲನೇ ಪಂದ್ಯ ಜನವರಿ 20ರಂದು ಆರಂಭವಾಗಿದ್ದು ಅಂತಿಮ ಪಂದ್ಯ ಜನವರಿ 29ರಂದು ನಡೆಯಲಿದೆ.

ಅವರಿಬ್ಬರು ಜಗಳ ಬಿಟ್ಟು ಮಾತನಾಡಿ ಸರಿಪಡಿಸಿಕೊಳ್ಳಬೇಕಿದೆ ಎಂದು ಬುದ್ಧಿ ಹೇಳಿದ ಮಾಜಿ ಕ್ರಿಕೆಟಿಗಅವರಿಬ್ಬರು ಜಗಳ ಬಿಟ್ಟು ಮಾತನಾಡಿ ಸರಿಪಡಿಸಿಕೊಳ್ಳಬೇಕಿದೆ ಎಂದು ಬುದ್ಧಿ ಹೇಳಿದ ಮಾಜಿ ಕ್ರಿಕೆಟಿಗ

ಇಂಡಿಯಾ ಮಹಾರಾಜಸ್ ತಂಡ ಭಾರತದ ನಿವೃತ್ತ ಕ್ರಿಕೆಟಿಗರನ್ನು ಒಳಗೊಂಡ ತಂಡವಾಗಿದ್ದರೆ, ಏಷ್ಯಾ ಲಯನ್ಸ್ ಭಾರತದ ಕ್ರಿಕೆಟಿಗರನ್ನು ಹೊರತುಪಡಿಸಿ ಏಷ್ಯಾ ಖಂಡದ ಉಳಿದ ಕ್ರಿಕೆಟ್ ತಂಡಗಳ ಮಾಜಿ ಆಟಗಾರರನ್ನು ಒಳಗೊಂಡಿದೆ ಹಾಗೂ ವರ್ಲ್ಡ್ ಜಿಯಂಟ್ಸ್ ಏಷ್ಯಾ ಖಂಡವನ್ನು ಹೊರತುಪಡಿಸಿ ವಿಶ್ವದ ಉಳಿದ ಕ್ರಿಕೆಟ್ ತಂಡಗಳ ಮಾಜಿ ಆಟಗಾರರನ್ನು ಒಳಗೊಂಡಿರುವ ತಂಡವಾಗಿದೆ.

ಕಪ್ ಮುಖ್ಯನಾ? ದ್ರಾವಿಡ್, ಗಂಗೂಲಿ, ಸಚಿನ್, ರೋಹಿತ್ ಎಷ್ಟು ಕಪ್ ಗೆದ್ದಿದ್ದಾರೆ ಎಂದ ಮಾಜಿ ಕ್ರಿಕೆಟಿಗಕಪ್ ಮುಖ್ಯನಾ? ದ್ರಾವಿಡ್, ಗಂಗೂಲಿ, ಸಚಿನ್, ರೋಹಿತ್ ಎಷ್ಟು ಕಪ್ ಗೆದ್ದಿದ್ದಾರೆ ಎಂದ ಮಾಜಿ ಕ್ರಿಕೆಟಿಗ

ಸದ್ಯ ಕ್ರಿಕೆಟ್ ಜಗತ್ತಿನಲ್ಲಿ ಲೆಜೆಂಡ್ಸ್ ಲೀಗ್ ಕ್ರಿಕೆಟ್ ಟೂರ್ನಮೆಂಟ್ ತನ್ನದೇ ಆದ ರೀತಿಯಲ್ಲಿ ಸದ್ದು ಮಾಡುತ್ತಿದ್ದು, ಟೂರ್ನಿಯ ಲೀಗ್ ಹಂತದ 5 ಪಂದ್ಯಗಳು ಈಗಾಗಲೇ ಮುಗಿದಿದ್ದು, ಆರನೇ ಪಂದ್ಯ ಇಂದು ( ಜನವರಿ 27 ) ಇಂಡಿಯಾ ಮಹಾರಾಜಾಸ್ ಮತ್ತು ವರ್ಲ್ಡ್ ಜಿಯಂಟ್ಸ್ ತಂಡಗಳ ನಡುವೆ ರಾತ್ರಿ 8 ಗಂಟೆಗೆ ನಡೆಯಲಿದೆ. ಇದು ಟೂರ್ನಿಯ ಲೀಗ್ ಹಂತದ ಅಂತಿಮ ಪಂದ್ಯವಾಗಿದ್ದು, ಈ ಪಂದ್ಯದ ಫಲಿತಾಂಶವು ಟೂರ್ನಿಯಲ್ಲಿ ಯಾವ ತಂಡಗಳು ಫೈನಲ್ ಪ್ರವೇಶಿಸಲಿವೆ ಎಂಬುದನ್ನು ನಿರ್ಧರಿಸಲಿದೆ. ಸದ್ಯ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ವರ್ಲ್ಡ್ ಜಿಯಂಟ್ಸ್ ತಂಡ ಫೈನಲ್ ಪ್ರವೇಶಿಸುವುದು ಖಚಿತವಾಗಿದ್ದು, ಇನ್ನುಳಿದ ಏಷ್ಯಾ ಲಯನ್ಸ್ ಮತ್ತು ಇಂಡಿಯಾ ಮಹಾರಾಜಾಸ್ ತಂಡಗಳಲ್ಲಿ ಯಾವ ತಂಡ ಫೈನಲ್ ಪ್ರವೇಶಿಸಲಿದೆ ಎಂಬುದರ ಕುರಿತಾದ ಮಾಹಿತಿ ಈ ಕೆಳಕಂಡಂತಿದೆ ಓದಿ.

ಸದ್ಯ ಎಲ್ಲಾ ತಂಡಗಳ ಸ್ಥಾನ ಅಂಕಪಟ್ಟಿಯಲ್ಲಿ ಹೀಗಿದೆ

ಸದ್ಯ ಎಲ್ಲಾ ತಂಡಗಳ ಸ್ಥಾನ ಅಂಕಪಟ್ಟಿಯಲ್ಲಿ ಹೀಗಿದೆ

ಜನವರಿ 26ರಂದು ನಡೆದ ವರ್ಲ್ಡ್ ಜಿಯಂಟ್ಸ್ ಮತ್ತು ಏಷ್ಯಾ ಲಯನ್ಸ್ ತಂಡಗಳ ನಡುವಿನ ಪಂದ್ಯದಲ್ಲಿ ವರ್ಲ್ಡ್ ಜಿಯಂಟ್ಸ್ 7 ವಿಕೆಟ್‍ಗಳ ಭರ್ಜರಿ ಗೆಲುವನ್ನು ಸಾಧಿಸಿದ ನಂತರ ಅಂಕಪಟ್ಟಿಯಲ್ಲಿ 3 ತಂಡಗಳು ಈ ಕೆಳಕಂಡಂತೆ ಸ್ಥಾನ ಪಡೆದುಕೊಂಡಿವೆ.

ಟೂರ್ನಿಯಲ್ಲಿ ಇಲ್ಲಿಯವರೆಗೂ ಒಟ್ಟು 3 ಪಂದ್ಯಗಳನ್ನಾಡಿರುವ ವರ್ಲ್ಡ್ ಜಿಯಂಟ್ಸ್ 2 ಪಂದ್ಯಗಳಲ್ಲಿ ಗೆದ್ದು, ಉಳಿದೊಂದು ಪಂದ್ಯದಲ್ಲಿ ಸೋತಿದ್ದು, 4 ಅಂಕಗಳೊಂದಿಗೆ +1.244 ನೆಟ್ ರನ್ ರೇಟ್ ಜತೆಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಅತ್ತ ಟೂರ್ನಿಯಲ್ಲಿ ಇಲ್ಲಿಯವರೆಗೂ ಒಟ್ಟು 4 ಪಂದ್ಯಗಳನ್ನಾಡಿರುವ ಏಷ್ಯಾ ಲಯನ್ಸ್ 2 ಪಂದ್ಯಗಳಲ್ಲಿ ಗೆದ್ದು, ಉಳಿದೆರಡು ಪಂದ್ಯಗಳಲ್ಲಿ ಸೋತು, 4 ಅಂಕಗಳೊಂದಿಗೆ -0.452 ನೆಟ್ ರನ್ ರೇಟ್ ಪಡೆದುಕೊಂಡು ಅಂಕಪಟ್ಟಿಯಲ್ಲಿ ದ್ವಿತೀಯ ಸ್ಥಾನದಲ್ಲಿದೆ. ಹಾಗೂ ಟೂರ್ನಿಯಲ್ಲಿ ಇಲ್ಲಿಯವರೆಗೂ ಒಟ್ಟು 3 ಪಂದ್ಯಗಳನ್ನಾಡಿರುವ ಇಂಡಿಯಾ ಮಹಾರಾಜಾಸ್ 1 ಪಂದ್ಯದಲ್ಲಿ ಗೆದ್ದು, ಉಳಿದೆರಡು ಪಂದ್ಯಗಳಲ್ಲಿ ಸೋತು, 2 ಅಂಕಗಳನ್ನು ಪಡೆದುಕೊಳ್ಳುವುದರ ಜತೆಗೆ -0.503 ನೆಟ್ ರನ್ ರೇಟ್ ಹೊಂದಿ ಅಂಕಪಟ್ಟಿಯಲ್ಲಿ ಅಂತಿಮ ಸ್ಥಾನದಲ್ಲಿದೆ.

ಇಂಡಿಯಾ ಮಹಾರಾಜಾಸ್ ಫೈನಲ್ ಪ್ರವೇಶಿಸಲು ಇದೊಂದೇ ದಾರಿ

ಇಂಡಿಯಾ ಮಹಾರಾಜಾಸ್ ಫೈನಲ್ ಪ್ರವೇಶಿಸಲು ಇದೊಂದೇ ದಾರಿ

ಇನ್ನು ಟೂರ್ನಿಯ ಲೀಗ್ ಹಂತದಲ್ಲಿನ ತನ್ನ ಅಂತಿಮ ಪಂದ್ಯದಲ್ಲಿ ಇಂದು ( ಜನವರಿ 27 ) ವರ್ಲ್ಡ್ ಜಿಯಂಟ್ಸ್ ತಂಡವನ್ನು ಎದುರಿಸಲಿರುವ ಇಂಡಿಯಾ ಮಹಾರಾಜಾಸ್ ಫೈನಲ್ ಪ್ರವೇಶಿಸಬೇಕೆಂದರೆ ಈ ಪಂದ್ಯವನ್ನು ಕಡ್ಡಾಯವಾಗಿ ಗೆಲ್ಲಲೇಬೇಕಾಗಿದೆ. ಈ ಪಂದ್ಯದಲ್ಲಿ ವರ್ಲ್ಡ್ ಜಿಯಂಟ್ಸ್ ತಂಡವನ್ನು ಇಂಡಿಯಾ ಮಹಾರಾಜಾಸ್ ಸೋಲಿಸಿ ಉತ್ತಮ ನೆಟ್ ರನ್ ರೇಟ್ ಪಡೆದುಕೊಂಡರೆ ಅಂಕಪಟ್ಟಿಯಲ್ಲಿ ದ್ವಿತೀಯ ಸ್ಥಾನಕ್ಕೇರಲಿದ್ದು, ಸದ್ಯ ಟೂರ್ನಿಯಲ್ಲಿನ ತನ್ನ ಎಲ್ಲಾ ಲೀಗ್ ಹಂತದ ಪಂದ್ಯಗಳನ್ನು ಆಡಿ ದ್ವಿತೀಯ ಸ್ಥಾನದಲ್ಲಿರುವ ಏಷ್ಯಾ ಲಯನ್ಸ್ ತೃತೀಯ ಹಂತಕ್ಕೆ ಕುಸಿಯಲಿದೆ. ಹೀಗಾಗಿ ಈ ಪಂದ್ಯವನ್ನು ಇಂಡಿಯಾ ಮಹಾರಾಜಾಸ್ ಗೆದ್ದಿದ್ದೇ ಆದರೆ ವರ್ಲ್ಡ್ ಜಿಯಂಟ್ಸ್ ತಂಡದ ಜತೆ ಫೈನಲ್ ಪಂದ್ಯವನ್ನು ಪ್ರವೇಶಿಸಲಿದೆ. ಒಂದುವೇಳೆ ಈ ಪಂದ್ಯದಲ್ಲಿ ಇಂಡಿಯಾ ಮಹಾರಾಜಾಸ್ ಸೋತಿದ್ದೇ ಆದರೆ ಟೂರ್ನಿಯಿಂದ ತಂಡ ಹೊರಬೀಳಲಿದ್ದು, ಫೈನಲ್ ಹಂತಕ್ಕೆ ವರ್ಲ್ಡ್ ಜಿಯಂಟ್ಸ್ ಮತ್ತು ಏಷ್ಯಾ ಲಯನ್ಸ್ ತಂಡಗಳು ಪ್ರವೇಶ ಪಡೆದುಕೊಳ್ಳಲಿವೆ.

ಹಾಟ್‌ ಫಾರ್ಮ್‌ನಲ್ಲಿದೆ ವರ್ಲ್ಡ್ ಜಿಯಂಟ್ಸ್!

ಹಾಟ್‌ ಫಾರ್ಮ್‌ನಲ್ಲಿದೆ ವರ್ಲ್ಡ್ ಜಿಯಂಟ್ಸ್!

ಇನ್ನು ಟೀಮ್ ಇಂಡಿಯಾ ಇಂದು ಎದುರಿಸಲಿರುವ ವರ್ಲ್ಡ್ ಜಿಯಂಟ್ಸ್ ತಂಡ ಗೆಲುವಿನ ಉತ್ತುಂಗದಲ್ಲಿದೆ. ವರ್ಲ್ಡ್ ಜಿಯಂಟ್ಸ್ ತಂಡ ಟೂರ್ನಿಯಲ್ಲಿನ ತನ್ನ ಮೊದಲನೇ ಪಂದ್ಯದಲ್ಲಿ ಏಷ್ಯಾ ಲಯನ್ಸ್ ವಿರುದ್ಧ ಅಂತಿಮ ಹಂತದವರೆಗೂ ಹೋರಾಟ ನಡೆಸಿ ಸೋಲುಂಡಿತ್ತು. ಆದರೆ ನಂತರ ನಡೆದ ಟೂರ್ನಿಯಲ್ಲಿನ ತನ್ನ ದ್ವಿತೀಯ ಪಂದ್ಯದಲ್ಲಿ ಇಂಡಿಯಾ ಮಹಾರಾಜಾಸ್ ತಂಡಕ್ಕೆ ವರ್ಲ್ಡ್ ಜಿಯಂಟ್ಸ್ ಸೋಲುಣಿಸಿತು ಹಾಗೂ ಮೂರನೇ ಪಂದ್ಯದಲ್ಲಿ ಏಷ್ಯಾ ಲಯನ್ಸ್ ತಂಡಕ್ಕೂ ಸೋಲಿನ ರುಚಿಯನ್ನು ತೋರಿಸಿತು. ಹೀಗೆ ಟೂರ್ನಿಯಲ್ಲಿ ಉತ್ತಮ ಪ್ರದರ್ಶನಗಳನ್ನು ನೀಡುತ್ತಾ ಬಂದಿರುವ ವರ್ಲ್ಡ್ ಜಿಯಂಟ್ಸ್ ತಂಡವನ್ನು ಸೋಲಿಸುವುದು ಇದೀಗ ಇಂಡಿಯಾ ಮಹಾರಾಜಾಸ್ ತಂಡಕ್ಕೆ ತಲೆನೋವಾಗಿ ಪರಿಣಮಿಸಿದೆ.

ಧೋನಿಯೇ ಐಪಿಎಲ್‌ನ ಶ್ರೇಷ್ಠ ನಾಯಕ, ನಾನು ಸಿಎಸ್‌ಕೆ ಪರ ಆಡಬೇಕು ಎಂದ ಆರ್‌ಸಿಬಿಯ ಸ್ಟಾರ್ ಆಟಗಾರ!

Story first published: Thursday, January 27, 2022, 15:25 [IST]
Other articles published on Jan 27, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X