ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಲೆಜೆಂಡ್ಸ್ ಲೀಗ್: ಇಂಡಿಯಾ ಮಹಾರಾಜಾಸ್‌ ಫೈನಲ್ ಪ್ರವೇಶ ನಿರ್ಧರಿಸಲಿದೆ ಈ ಪಂದ್ಯ; ಲೈವ್ ವೀಕ್ಷಣೆ ಹೇಗೆ?

Legends League Cricket: India Maharajas vs World Giants preview, playing XI and live streaming

ಈ ಬಾರಿ ನಡೆಯುತ್ತಿರುವ ಲೆಜೆಂಡ್ಸ್ ಲೀಗ್ ಕ್ರಿಕೆಟ್ ಟೂರ್ನಿಯ ಮೂಲಕ ಮತ್ತೊಮ್ಮೆ ವಿಶ್ವ ಕ್ರಿಕೆಟ್‌ನ ಎಲ್ಲಾ ಮಾಜಿ ಕ್ರಿಕೆಟಿಗರ ಆಟವನ್ನು ಮೈದಾನದಲ್ಲಿ ವೀಕ್ಷಿಸಬಹುದಾದ ಅವಕಾಶ ಕ್ರಿಕೆಟ್ ಅಭಿಮಾನಿಗಳಿಗೆ ಸಿಕ್ಕಿದೆ. ಈ ಬಾರಿಯ ಲೆಜೆಂಡ್ಸ್ ಲೀಗ್ ಕ್ರಿಕೆಟ್ ಜನವರಿ 20ರಂದು ಆರಂಭವಾಗಿದ್ದು ಜನವರಿ 29ರಂದು ನಡೆಯಲಿರುವ ಫೈನಲ್ ಪಂದ್ಯದ ಮೂಲಕ ಅಂತ್ಯಗೊಳ್ಳಲಿದೆ. ಇನ್ನು ಈ ಟೂರ್ನಿಯಲ್ಲಿ ಇಂಡಿಯಾ ಮಹಾರಾಜಾಸ್, ಏಷ್ಯಾ ಲಯನ್ಸ್ ಮತ್ತು ವರ್ಲ್ಡ್ ಜಿಯಂಟ್ಸ್ ತಂಡಗಳು ಭಾಗವಹಿಸಿವೆ.

ಕೊಹ್ಲಿ ಕ್ರಿಕೆಟ್‌ನಿಂದ ದೂರ ಉಳಿದರೆ ಒಳ್ಳೆಯದು ಎಂದ ರವಿ ಶಾಸ್ತ್ರಿ! ಇದರ ಹಿಂದಿನ ಉದ್ದೇಶವೇನು?ಕೊಹ್ಲಿ ಕ್ರಿಕೆಟ್‌ನಿಂದ ದೂರ ಉಳಿದರೆ ಒಳ್ಳೆಯದು ಎಂದ ರವಿ ಶಾಸ್ತ್ರಿ! ಇದರ ಹಿಂದಿನ ಉದ್ದೇಶವೇನು?

ಇನ್ನು ಇಂಡಿಯಾ ಮಹಾರಾಜಸ್ ತಂಡ ಭಾರತದ ನಿವೃತ್ತ ಕ್ರಿಕೆಟಿಗರನ್ನು ಒಳಗೊಂಡ ತಂಡವಾಗಿದ್ದರೆ, ಏಷ್ಯಾ ಲಯನ್ಸ್ ಭಾರತದ ಕ್ರಿಕೆಟಿಗರನ್ನು ಹೊರತುಪಡಿಸಿ ಏಷ್ಯಾ ಖಂಡದ ಉಳಿದ ಕ್ರಿಕೆಟ್ ತಂಡಗಳ ಮಾಜಿ ಆಟಗಾರರನ್ನು ಒಳಗೊಂಡಿದೆ ಹಾಗೂ ವರ್ಲ್ಡ್ ಜಿಯಂಟ್ಸ್ ಏಷ್ಯಾ ಖಂಡವನ್ನು ಹೊರತುಪಡಿಸಿ ವಿಶ್ವದ ಉಳಿದ ಕ್ರಿಕೆಟ್ ತಂಡಗಳ ಮಾಜಿ ಆಟಗಾರರನ್ನು ಒಳಗೊಂಡಿರುವ ತಂಡವಾಗಿದೆ.

ಆತನಿಲ್ಲದೇ ನಮ್ಮ ದೇಶಕ್ಕೆ ಪ್ರವಾಸ ಕೈಗೊಂಡ ಟೀಮ್ ಇಂಡಿಯಾ ಸೋತಿದೆ ಎಂದ ಡೇಲ್ ಸ್ಟೇನ್!ಆತನಿಲ್ಲದೇ ನಮ್ಮ ದೇಶಕ್ಕೆ ಪ್ರವಾಸ ಕೈಗೊಂಡ ಟೀಮ್ ಇಂಡಿಯಾ ಸೋತಿದೆ ಎಂದ ಡೇಲ್ ಸ್ಟೇನ್!

ಇನ್ನು ಈ ಟೂರ್ನಿಯಲ್ಲಿ ಇಲ್ಲಿಯವರೆಗೂ ಲೀಗ್ ಹಂತದ 5 ಪಂದ್ಯಗಳು ನಡೆದಿದ್ದು, ಆರನೇ ಹಾಗೂ ಅಂತಿಮ ಪಂದ್ಯ ಇಂದು ( ಜನವರಿ 27 ) ಇಂಡಿಯಾ ಮಹಾರಾಜಾಸ್ ಮತ್ತು ವರ್ಲ್ಡ್ ಜಿಯಂಟ್ಸ್ ತಂಡಗಳ ನಡುವೆ ನಡೆಯಲಿದೆ. ಈ ಪಂದ್ಯದ ಫಲಿತಾಂಶವು ಟೂರ್ನಿಯಲ್ಲಿ ಯಾವ ತಂಡಗಳು ಫೈನಲ್ ಪ್ರವೇಶಿಸಲಿವೆ ಎಂಬುದನ್ನು ನಿರ್ಧರಿಸಲಿದೆ. ಸದ್ಯ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ವರ್ಲ್ಡ್ ಜಿಯಂಟ್ಸ್ ತಂಡ ಫೈನಲ್ ಪ್ರವೇಶಿಸುವುದು ಖಚಿತವಾಗಿದ್ದು, ಇನ್ನುಳಿದ ಏಷ್ಯಾ ಲಯನ್ಸ್ ಮತ್ತು ಇಂಡಿಯಾ ಮಹಾರಾಜಾಸ್ ತಂಡಗಳಲ್ಲಿ ಯಾವ ತಂಡ ಫೈನಲ್ ಪ್ರವೇಶಿಸಲಿದೆ ಎಂಬುದು ಈ ಪಂದ್ಯ ಮುಗಿದ ನಂತರ ತಿಳಿಯಲಿದೆ. ಈ ಪಂದ್ಯದಲ್ಲಿ ಇಂಡಿಯಾ ಮಹಾರಾಜಸ್ ಜಯ ಸಾಧಿಸಿದರೆ ವರ್ಲ್ಡ್ ಜಯಂಟ್ಸ್ ತಂಡದ ಜತೆಗೆ ಫೈನಲ್ ಪ್ರವೇಶಿಸಲಿದೆ. ಒಂದುವೇಳೆ ಇಂಡಿಯಾ ಮಹಾರಾಜಾಸ್ ಸೋಲುಂಡರೆ ಟೂರ್ನಿಯಿಂದ ಹೊರ ಬೀಳಲಿದ್ದು, ಏಷ್ಯಾ ಲಯನ್ಸ್ ಹಾಗೂ ವರ್ಲ್ಡ್ ಜಿಯಂಟ್ಸ್ ತಂಡಗಳು ಫೈನಲ್ ಪ್ರವೇಶಿಸಲಿವೆ.

ಅವರಿಬ್ಬರು ಜಗಳ ಬಿಟ್ಟು ಮಾತನಾಡಿ ಸರಿಪಡಿಸಿಕೊಳ್ಳಬೇಕಿದೆ ಎಂದು ಬುದ್ಧಿ ಹೇಳಿದ ಮಾಜಿ ಕ್ರಿಕೆಟಿಗಅವರಿಬ್ಬರು ಜಗಳ ಬಿಟ್ಟು ಮಾತನಾಡಿ ಸರಿಪಡಿಸಿಕೊಳ್ಳಬೇಕಿದೆ ಎಂದು ಬುದ್ಧಿ ಹೇಳಿದ ಮಾಜಿ ಕ್ರಿಕೆಟಿಗ

ಹೀಗೆ ಈ ಬಾರಿಯ ಟೂರ್ನಿಯ ಫೈನಲ್ ಪಂದ್ಯಕ್ಕೆ ಯಾವ ತಂಡ ಪ್ರವೇಶ ಪಡೆದುಕೊಳ್ಳಲಿದೆ ಎಂಬುದನ್ನು ನಿರ್ಧರಿಸಲಿರುವ ಈ ಮಹತ್ವದ ಪಂದ್ಯದ ಕುರಿತಾದ ಮಾಹಿತಿಗಳು ಈ ಕೆಳಕಂಡಂತಿವೆ.

ಸಂಭಾವ್ಯ ಆಡುವ ಬಳಗಗಳು

ಸಂಭಾವ್ಯ ಆಡುವ ಬಳಗಗಳು

ಇಂಡಿಯಾ ಮಹಾರಾಜಾಸ್ ಸಂಭಾವ್ಯ ಆಡುವ ಬಳಗ: ನಮನ್ ಓಜಾ (ವಿಕೆಟ್ ಕೀಪರ್), ವಾಸಿಂ ಜಾಫರ್, ಎಸ್ ಬದ್ರಿನಾಥ್, ಮೊಹಮ್ಮದ್ ಕೈಫ್ (ನಾಯಕ), ಯೂಸುಫ್ ಪಠಾಣ್, ಸ್ಟುವರ್ಟ್ ಬಿನ್ನಿ, ನಿಖಿಲ್ ಚೋಪ್ರಾ, ಮನ್‌ಪ್ರೀತ್ ಗೋನಿ, ಅಮಿತ್ ಭಂಡಾರಿ, ಆವಿಷ್ಕರ್ ಸಾಲ್ವಿ, ಮುನಾಫ್ ಪಟೇಲ್


ವರ್ಲ್ಡ್ ಜಿಯಂಟ್ಸ್ ಸಂಭಾವ್ಯ ಆಡುವ ಬಳಗ: ಕೆವಿನ್ ಪೀಟರ್ಸನ್, ಹರ್ಷಲ್ ಗಿಬ್ಸ್, ಕೆವಿನ್ ಒ ಬ್ರಿಯಾನ್, ಕೋರಿ ಆಂಡರ್ಸನ್, ಬ್ರಾಡ್ ಹಡ್ಡಿನ್ ( ವಿಕೆಟ್ ಕೀಪರ್ ), ಆಲ್ಬಿ ಮೊರ್ಕೆಲ್, ಡೇರೆನ್ ಸ್ಯಾಮಿ (ನಾಯಕ), ಬ್ರೆಟ್ ಲೀ, ಮೋರ್ನೆ ಮೊರ್ಕೆಲ್, ರಯಾನ್ ಜೇ ಸೈಡ್ಬಾಟಮ್, ಮಾಂಟಿ ಪನೇಸರ್

ನೇರಪ್ರಸಾರದ ಮಾಹಿತಿ

ನೇರಪ್ರಸಾರದ ಮಾಹಿತಿ

ಈ ಬಾರಿಯ ಲೆಜೆಂಡ್ಸ್ ಲೀಗ್ ಕ್ರಿಕೆಟ್‍ನ ಎಲ್ಲಾ ಪಂದ್ಯಗಳು ಸೋನಿ ಸ್ಪೋರ್ಟ್ ನೆಟ್‌ವರ್ಕ್ ಚಾನೆಲ್‌ನಲ್ಲಿ ನೇರಪ್ರಸಾರವಾಗುತ್ತಿದ್ದು, ಸೋನಿ ಲಿವ್ ಅಪ್ಲಿಕೇಶನ್‌ನಲ್ಲಿಯೂ ವೀಕ್ಷಿಸಬಹುದು.

ಇಂಡಿಯಾ ಮಹಾರಾಜಾಸ್ ತಂಡಕ್ಕಿದು ಸೇಡಿನ ಸಮಯ

ಇಂಡಿಯಾ ಮಹಾರಾಜಾಸ್ ತಂಡಕ್ಕಿದು ಸೇಡಿನ ಸಮಯ

ಇಂಡಿಯಾ ಮಹಾರಾಜಾಸ್ ಮತ್ತು ವರ್ಲ್ಡ್ ಜಿಯಂಟ್ಸ್ ತಂಡಗಳು ಈ ಟೂರ್ನಿಯಲ್ಲಿ ನಡೆದ ಮೂರನೇ ಪಂದ್ಯದಲ್ಲಿ ಸೆಣಸಾಟ ನಡೆಸಿದ್ದವು. ಈ ರೋಚಕ ಪಂದ್ಯದಲ್ಲಿ ವರ್ಲ್ಡ್ ಜಿಯಂಟ್ಸ್ ಇಂಡಿಯಾ ಮಹಾರಾಜಾಸ್ ವಿರುದ್ಧ 3 ವಿಕೆಟ್‍ಗಳ ಜಯ ಸಾಧಿಸಿತ್ತು. ಹೀಗಾಗಿ ಈ ಪಂದ್ಯದಲ್ಲಿ ಇಂಡಿಯಾ ಮಹಾರಾಜಾಸ್ ವರ್ಲ್ಡ್ ಜಿಯಂಟ್ಸ್ ತಂಡವನ್ನು ಸೋಲಿಸಿ ಸೇಡು ತೀರಿಸಿಕೊಳ್ಳುವುದರ ಜೊತೆಗೆ ಫೈನಲ್ ಪ್ರವೇಶವನ್ನು ಕೂಡಾ ಪಡೆದುಕೊಳ್ಳಬಹುದು.

RCBಯಲ್ಲಿ ಮಿಂಚಿದ ಈ ಆಟಗಾರ CSK ಸೇರಬೇಕಂತೆ | Oneindia Kannada

Story first published: Friday, January 28, 2022, 10:27 [IST]
Other articles published on Jan 28, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X