ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಲೆಜೆಂಡ್ಸ್ ಲೀಗ್ ಕ್ರಿಕೆಟ್ 2022: ತಂಡಗಳು, ವೇಳಾಪಟ್ಟಿ, ಲೈವ್ ಸ್ಟ್ರೀಮಿಂಗ್ ವಿವರ

ಬಹು ನಿರೀಕ್ಷಿತ ಲೆಜೆಂಡ್ಸ್ ಲೀಗ್ ಕ್ರಿಕೆಟ್‌ ಎರಡನೇ ಆವೃತ್ತಿಯ ಸಂಪೂರ್ಣ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಸೆಪ್ಟೆಂಬರ್ 16 ರಿಂದ ಲೆಜೆಂಡ್ಸ್ ಲೀಗ್ ಕ್ರಿಕೆಟ್‌ ಆರಂಭವಾಗಲಿದ್ದು, 20 ದಿನಗಳ ಕಾಲ ಪಂದ್ಯಾವಳಿ ನಡೆಯಲಿದೆ. ದೇಶದ ಪ್ರಮುಖ ಆರು ನಗರಗಳಲ್ಲಿ ಪಂದ್ಯಗಳು ನಡೆಯಲಿವೆ.

ಸೆಪ್ಟೆಂಬರ್ 16ರಂದು ಲೀಗ್‌ನ ಆರಂಭಕ್ಕೂ ಮುನ್ನ ವಿಶೇಷ ಪಂದ್ಯವನ್ನು ಆಯೋಜನೆ ಮಾಡಲಾಗಿದೆ. ಕೋಲ್ಕತ್ತಾದ ಈಡನ್‌ ಗಾರ್ಡನ್ಸ್ ಮೈದಾನದಲ್ಲಿ ಇಂಡಿಯಾ ಮಹಾರಾಜಾಸ್ ತಂಡ ವಿಶ್ವದ ಪ್ರಮುಖ ಆಟಗಾರರನ್ನು ಒಳಗೊಂಡ ವರ್ಲ್ಡ್ ಜೈಂಟ್ಸ್ ತಂಡವನ್ನು ಎದುರಿಸಲಿದೆ.

Asia Cup 2022: ಶ್ರೀಲಂಕಾ ವಿರುದ್ಧ ಸೋತ ನಂತರ ರೋಹಿತ್ ನಾಯಕತ್ವದ ಬಗ್ಗೆ ಅಖ್ತರ್ ದೊಡ್ಡ ಹೇಳಿಕೆAsia Cup 2022: ಶ್ರೀಲಂಕಾ ವಿರುದ್ಧ ಸೋತ ನಂತರ ರೋಹಿತ್ ನಾಯಕತ್ವದ ಬಗ್ಗೆ ಅಖ್ತರ್ ದೊಡ್ಡ ಹೇಳಿಕೆ

ಸೆಪ್ಟೆಂಬರ್ 17ರಂದು ಲೀಗ್‌ನ ಮೊದಲ ಅಧಿಕೃತ ಪಂದ್ಯ ನಡೆಯಲಿದೆ. ಗೌತಮ್ ಗಂಭೀರ್ ನಾಯಕತ್ವದ ಇಂಡಿಯಾ ಕ್ಯಾಪಿಟಲ್ಸ್‌ ಮತ್ತು ವೀರೇಂದ್ರ ಸೆಹ್ವಾಗ್ ನಾಯಕತ್ವದ ಗುಜರಾತ್ ಜೈಂಟ್ಸ್‌ ಮುಖಾಮುಖಿಯಾಗಲಿವೆ. ಕೋಲ್ಕತ್ತಾದ ಈಡನ್‌ ಗಾರ್ಡನ್ಸ್ ಮೈದಾನದಲ್ಲಿ ಈ ಪಂದ್ಯ ನಡೆಯಲಿದ್ದು, ಸಂಜೆ 7-30ಕ್ಕೆ ಪಂದ್ಯ ಆರಂಭವಾಗಲಿದೆ.

ಎರಡನೇ ಪಂದ್ಯ ಸೆಪ್ಟೆಂಬರ್ 18ರಂದು ಲಕ್ನೋದಲ್ಲಿ ನಡೆಯಲಿದೆ. ಹರ್ಭಜನ್ ಸಿಂಗ್ ನಾಯಕತ್ವದ ಮಣಿಪಾಲ್ ಟೈಗರ್ಸ್ ತಂಡ ಇರ್ಫಾನ್ ಪಠಾಣ್ ನಾಯಕತ್ವದ ಭಿಲ್ವಾರಾ ಕಿಂಗ್ಸ್ ಅನ್ನು ಎದುರಿಸಲಿದೆ.

 ನವದೆಹಲಿಯಲ್ಲಿ ಮೂರು ಪಂದ್ಯ

ನವದೆಹಲಿಯಲ್ಲಿ ಮೂರು ಪಂದ್ಯ

ಸೆಪ್ಟೆಂಬರ್ 22, ಗುರುವಾರ, ಗುಜರಾತ್ ಜೈಂಟ್ಸ್ ವಿರುದ್ಧ ಮಣಿಪಾಲ್ ಟೈಗರ್ಸ್ ನಡುವೆ ಪಂದ್ಯ ನಡೆಯಲಿದೆ. ಸೆಪ್ಟೆಂಬರ್ 24, ಶನಿವಾರ, ಇಂಡಿಯಾ ಕ್ಯಾಪಿಟಲ್ಸ್ ವಿರುದ್ಧ ಭಿಲ್ವಾರಾ ಕಿಂಗ್ಸ್ ಪಂದ್ಯ ನಡೆಯಲಿದೆ. ರಾತ್ರಿ 7.30ಕ್ಕೆ ಪಂದ್ಯ ಆರಂಭವಾಗಲಿವೆ. ಸೆಪ್ಟೆಂಬರ್ 25, ಭಾನುವಾರ, ಇಂಡಿಯಾ ಕ್ಯಾಪಿಟಲ್ಸ್ ವಿರುದ್ಧ ಗುಜರಾತ್ ಜೈಂಟ್ಸ್ ಪಂದ್ಯ ನಡೆಯಲಿದ್ದು, ಸಂಜೆ 4 ಗಂಟೆಗೆ ಆರಂಭವಾಗಲಿದೆ, ಮೂರು ಪಂದ್ಯಗಳು ನವದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆಯಲಿವೆ.

ಭಾರತ ಪಾಕ್ ಏಷ್ಯಾಕಪ್‌ ಫೈನಲ್ ಆಡಲಿವೆ ಎಂದು ಟಿಕೆಟ್ ಖರೀದಿಸಿದ್ದೆ: ಶೋಯೆಬ್ ಅಖ್ತರ್

 ಕಟಕ್‌, ಜೋಧ್‌ಪುರದಲ್ಲಿ ತಲಾ ಮೂರು ಪಂದ್ಯ ಆಯೋಜನೆ

ಕಟಕ್‌, ಜೋಧ್‌ಪುರದಲ್ಲಿ ತಲಾ ಮೂರು ಪಂದ್ಯ ಆಯೋಜನೆ

ಸೆಪ್ಟೆಂಬರ್ 26, ಸೋಮವಾರ, ಮಣಿಪಾಲ್ ಟೈಗರ್ಸ್ ವಿರುದ್ಧ ಭಿಲ್ವಾರಾ ಕಿಂಗ್ಸ್ ಪಂದ್ಯ ನಡೆಯಲಿದೆ. ಸೆಪ್ಟೆಂಬರ್ 27, ಮಂಗಳವಾರ, ಗುಜರಾತ್ ಜೈಂಟ್ಸ್ ವಿರುದ್ಧ ಭಿಲ್ವಾರಾ ಕಿಂಗ್ಸ್ ಪಂದ್ಯ ನಡೆಯಲಿದೆ. ಸೆಪ್ಟೆಂಬರ್ 29, ಗುರುವಾರ, ಇಂಡಿಯಾ ಕ್ಯಾಪಿಟಲ್ಸ್ ವಿರುದ್ಧ ಮಣಿಪಾಲ್ ಟೈಗರ್ಸ್ ಪಂದ್ಯ ನಡೆಯಲಿದ್ದು, ಮೂರು ಪಂದ್ಯಗಳು ರಾತ್ರಿ 7.30ಕ್ಕೆ ಆರಂಭವಾಗಲಿದ್ದು, ಕಟಕ್‌ನ ಬಾರಾಬತಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿವೆ.

ನಂತರದ ಮೂರು ಪಂದ್ಯಗಳು ಜೋಧ್‌ಪುರದ ಬರ್ಕತುಲ್ಲಾ ಸ್ಟೇಡಿಯಂನಲ್ಲಿ ನಡೆಯಲಿವೆ. ಸೆಪ್ಟೆಂಬರ್ 30, ಶುಕ್ರವಾರ, ಗುಜರಾತ್ ಜೈಂಟ್ಸ್ ವಿರುದ್ಧ ಭಿಲ್ವಾರಾ ಕಿಂಗ್ಸ್ ಪಂದ್ಯ ನಡೆಯಲಿದ್ದು, ಅಕ್ಟೋಬರ್ 1, ಶನಿವಾರ, ಇಂಡಿಯಾ ಕ್ಯಾಪಿಟಲ್ಸ್ ವಿರುದ್ಧ ಮಣಿಪಾಲ್ ಟೈಗರ್ಸ್ ಪಂದ್ಯ ನಡೆಯಲಿದೆ. ಎರಡೂ ಪಂದ್ಯಗಳು ರಾತ್ರಿ 7.30ಕ್ಕೆ ಆರಂಭವಾಗುತ್ತವೆ.

ನಂತರ ಅಕ್ಟೋಬರ್ 2, ಭಾನುವಾರ ಮೊದಲನೇ ಕ್ವಾಲಿಫೈಯರ್ ಪಂದ್ಯ ನಡೆಯಲಿದೆ. ಸಂಜೆ 4 ಗಂಟೆಗೆ ಪಂದ್ಯ ಆರಂಭವಾಗಲಿದೆ. ಅಕ್ಟೋಬರ್ 3ರಂದು ಎಲಿಮಿನೇಟರ್ ಪಂದ್ಯ ಮತ್ತು ಅಕ್ಟೋಬರ್ 5ರಂದು ಫೈನಲ್ ಪಂದ್ಯ ನಡೆಯಲಿದ್ದು ಸ್ಥಳವನ್ನು ಇನ್ನೂ ನಿರ್ಧರಿಸಿಲ್ಲ.

 ಆನ್‌ಲೈನ್‌ ಟಿಕೆಟ್ ಲಭ್ಯ

ಆನ್‌ಲೈನ್‌ ಟಿಕೆಟ್ ಲಭ್ಯ

ಲೆಜೆಂಡ್ಸ್ ಲೀಗ್ ಕ್ರಿಕೆಟ್‌ನ ಎಲ್ಲಾ ಪಂದ್ಯಗಳ ಟಿಕೆಟ್‌ಗಳು ಬುಕ್‌ ಮೈ ಶೋ ಆಪ್‌ನಲ್ಲಿ ಪ್ರತ್ಯೇಕವಾಗಿ ಲಭ್ಯವಿವೆ. ಸೆಪ್ಟೆಂಬರ್ 16 ರಂದು ನಡೆಯಲಿರುವ ಇಂಡಿಯಾ ಮಹಾರಾಜಸ್ ಮತ್ತು ವರ್ಲ್ಡ್ ಜೈಂಟ್ಸ್ ನಡುವಿನ ವಿಶೇಷ ಲಾಭದ ಪಂದ್ಯಕ್ಕೂ ಅಭಿಮಾನಿಗಳು ಟಿಕೆಟ್ ಪಡೆಯಬಹುದು.

ಪಂದ್ಯಗಳು ಸೋನಿಲೈವ್ ಅಪ್ಲಿಕೇಶನ್‌ನಲ್ಲಿ ಲೈವ್ ಸ್ಟ್ರೀಮಿಂಗ್‌ಗೆ ಲಭ್ಯವಿವೆ ಮತ್ತು ಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ಲೈವ್ ಮತ್ತು ಪ್ರತ್ಯೇಕವಾಗಿ ಪ್ರಸಾರವಾಗಲಿದೆ.

 ಪಾಕಿಸ್ತಾನದ ಆಟಗಾರರಿಗೆ ಅವಕಾಶವಿಲ್ಲ

ಪಾಕಿಸ್ತಾನದ ಆಟಗಾರರಿಗೆ ಅವಕಾಶವಿಲ್ಲ

ಲೆಜೆಂಡ್ಸ್ ಲೀಗ್ ಕ್ರಿಕೆಟ್‌ನ ಎರಡನೇ ಆವೃತ್ತಿಯಲ್ಲಿ ಪಾಕಿಸ್ತಾನದ ಯಾವುದೇ ಆಟಗಾರರಿಗೆ ಅವಕಾಶ ನೀಡಿಲ್ಲ. ಆದರೆ ಇತರೆ ರಾಷ್ಟ್ರಗಳ ಪ್ರಮುಖ ಖ್ಯಾತ ಆಟಗಾರರು ಲೆಜೆಂಡ್ಸ್‌ ಲೀಗ್‌ ಕ್ರಿಕೆಟ್‌ನಲ್ಲಿ ಆಡಲಿದ್ದಾರೆ.

ಈ ಬಾರಿ ಆಯ್ಕೆಯಾಗಿರುವ ಎಲ್ಲಾ ಆಟಗಾರರು ಪೂರ್ಣ ಪಂದ್ಯಾವಳಿಯನ್ನು ಆಡಲಿದ್ದಾರೆ, ಇತರೆ ಕೆಲಸದ ಕಾರಣ ನೀಡಿ ಪಂದ್ಯಾವಳಿ ತಪ್ಪಿಸಿಕೊಳ್ಳುವುದಿಲ್ಲ ಎಂದು ಲೆಜೆಂಡ್ಸ್ ಲೀಗ್ ಕ್ರಿಕೆಟ್‌ನ ಸಹ-ಸಂಸ್ಥಾಪಕ ಮತ್ತು ಸಿಇಒ ರಾಮನ್ ರಹೇಜಾ ಮಾಹಿತಿ ನೀಡಿದ್ದಾರೆ.

Story first published: Wednesday, September 7, 2022, 21:37 [IST]
Other articles published on Sep 7, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X