ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಲೆಜೆಂಡ್ಸ್ ಲೀಗ್ ಸೀಸನ್ 2: ಕಣಕ್ಕಿಳಿಯಲು ಸಜ್ಜಾಗಿದ್ದಾರೆ ಮತ್ತಷ್ಟು ನಿವೃತ್ತ ಸೂಪರ್‌ಸ್ಟಾರ್‌ಗಳು!

Legends League Cricket season 2: Brett Lee and other stars confirm to participate in LLC 2

ಲೆಜೆಂಡ್ಸ್ ಲೀಗ್ ಕ್ರಿಕೆಟ್ ಮತ್ತೊಮ್ಮೆ ಕ್ರಿಕೆಟ್ ಪ್ರೇಮಿಗಳಿಗೆ ಮನರಂಜನೆ ನೀಡಲು ಸಜ್ಜಾಗುತ್ತಿದೆ. ಮೊದಲ ಆವೃತ್ತಿಯಲ್ಲಿ ಉತ್ತಮ ಯಶಸ್ಉ ಸಾಧಿಸಿದ ಬಳಿಕ ಇದೀಗ ಎರಡನೇ ಆವೃತ್ತಿಗೆ ಸಿದ್ಧತೆಗಳು ನಡೆಯುತ್ತಿದೆ. ಕಳೆದ ಬಾರಿ ಹಲವು ದಿಗ್ಗಜ ಆಟಗಾರರು ಈ ಟೂರ್ನಿಯಲ್ಲಿ ಭಾಗಿಯಾಗಿದ್ದರು. ಈ ಬಾರಿ ನಿವೃತ್ತಿ ಪಡೆದಿರುವ ಮತ್ತಷ್ಟು ಸೂಪರ್‌ಸ್ಟಾರ್‌ ಈ ಟೂರ್ನಿಯಲ್ಲಿ ಭಾಗಿಯಾಗುತ್ತಿರುವುದು ಅಭಿಮಾನಿಗಳ ಖುಷಿ ಹೆಚ್ಚಿಸಿದೆ.

ಎರಡನೇ ಆವೃತ್ತಿಯ ಲೆಜೆಂಡ್ಸ್ ಲೀಗ್ ಕ್ರಿಕೆಟ್ ಸೆಪ್ಟೆಂಬರ್ 20ರಿಂದ ಆರಂಭವಾಗಲಿದ್ದು ಅಕ್ಟೋಬರ್ 10ರಂದು ಫೈನಲ್ ಪಂದ್ಯ ಆಯೋಜನೆಯಾಗಲಿದೆ. ಮೊದಲ ಆವೃತ್ತಿಯಲ್ಲಿ ಭಾರತ, ಪಾಕಿಸ್ತಾನ, ಶ್ರೀಲಂಕಾ, ಆಸ್ಟ್ರೇಲಿಯಾ ಇಂಗ್ಲೆಂಡ್ ದಕ್ಷಿಣ ಆಫ್ರಿಕಾದ ಮಾಜಿ ಆಟಗಾರರು ಭಾಗವಹಿಸಿದ್ದರು. ಈ ಆಟಗಾರರು ಮೂರು ತಂಡಗಳಾಗಿ ಸ್ಪರ್ಧಿಸಿದ್ದರು. ಈ ಟೂರ್ನಿಗೆ ಈ ಬಾರಿ ಮತ್ತಷ್ಟು ಕ್ರಿಕೆಟಿಗರು ಸೇರಿಕೊಳ್ಳುತ್ತಿರುವುದು ಪಂದ್ಯಾವಳಿಯ ಕುತೂಹಲ ಹೆಚ್ಚಿಸಿದೆ.

IND vs ENG 3ನೇ ಟಿ20: ವಿರಾಟ್ ಕೊಹ್ಲಿ ಫಾರ್ಮ್‌ ಬಗ್ಗೆ ರೋಹಿತ್ ಶರ್ಮಾ ಹೇಳಿದ್ದೇನು?IND vs ENG 3ನೇ ಟಿ20: ವಿರಾಟ್ ಕೊಹ್ಲಿ ಫಾರ್ಮ್‌ ಬಗ್ಗೆ ರೋಹಿತ್ ಶರ್ಮಾ ಹೇಳಿದ್ದೇನು?

ಖಚಿತಪಡಿಸಿದ ಬ್ರೇಟ್ ಲೀ, ಜೋಗಿಂದರ್ ಶರ್ಮಾ, ಜಾಂಟಿ ರೋಡ್ಸ್

ಖಚಿತಪಡಿಸಿದ ಬ್ರೇಟ್ ಲೀ, ಜೋಗಿಂದರ್ ಶರ್ಮಾ, ಜಾಂಟಿ ರೋಡ್ಸ್

ಈ ಬಾರಿಯ ಲೆಜೆಂಡ್ಸ್ ಲೀಗ್ ಕ್ರಿಕೆಟ್‌ನಲ್ಲಿ ಮತ್ತಷ್ಟು ಸೂಪರ್ ಸ್ಟಾರ್ ಕ್ರಿಕೆಟಿಗರು ಭಾಗಿಯಾಗುತ್ತಿರುವುದು ಸ್ಪಷ್ಟವಾಗಿದೆ. ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಬ್ರೇಟ್ ಲೀ, ಭಾರತದ ಮಾಜಿ ಕ್ರಿಕೆಟಿಗ ಜೋಗಿಂದರ್ ಶರ್ಮಾ, ದಕ್ಷಿಣ ಆಫ್ರಿಕಾದ ದಿಗ್ಗಜರಾದ ಜಾಂಟಿ ರೋಡ್ಸ್ ಹಾಗೂ ಅಲ್ಬೀ ಮಾರ್ಕೆಲ್, ಇಂಗ್ಲೆಂಡ್‌ನ ಲಿಯಾಮ್ ಪ್ಲಂಕೆಟ್ ಶ್ರೀಲಂಕಾದ ಅಜಂತಾ ಮೆಂಡಿಸ್ ಹಾಗೂ ದಿಲ್ಹರ ಫೆರ್ನಾಂಡೋ ಈ ಟೂರ್ನಿಯಲ್ಲಿ ಆಡಲಿರುವ ಆಟಗಾರರ ಪಟ್ಟಿಗೆ ಸೇರಿಕೊಂಡಿದ್ದಾರೆ.

ಲೆಜೆಂಡ್ಸ್ ಲೀಗ್ ಕ್ರಿಕೆಟ್‌ನಲ್ಲಿ ಆಡಲಿದ್ದಾರೆ ಸೆಹ್ವಾಗ್

ಲೆಜೆಂಡ್ಸ್ ಲೀಗ್ ಕ್ರಿಕೆಟ್‌ನಲ್ಲಿ ಆಡಲಿದ್ದಾರೆ ಸೆಹ್ವಾಗ್

ಕಳೆದ ವಾರವಷ್ಟೇ ಈ ಟೂರ್ನಿಯಲ್ಲಿ ಭಾರತದ ಸ್ಟಾರ್ ಆಟಗಾರರಾದ ವೀರೇಂದ್ರ ಸೆಹ್ವಾಗ್, ಇರ್ಫಾನ್ ಪಠಾಣ್, ಯೂಸುಫ್ ಪಠಾಣ್ ಸೇರಿದಂತೆ ಮುರಳೀಧರನ್, ಮಾಂಟಿ ಪೆನೆಸರ್, ಪ್ರವೀಣ್ ತಾಂಬೆ, ನಮನ್ ಓಜಾ, ಎಸ್ ಬದ್ರೀನಾಥ್, ಸ್ಟುವರ್ಟ್ ಬಿನ್ನಿ, ಎಸ್ ಶ್ರೀಶಾಂತ್, ಮಿಸ್ಬಾ ಉಲ್ ಹಕ್, ಕೆವಿನ್ ಓಬ್ರಿಯಾನ್ ಹಾಗೂ ಅಸ್ಘರ್ ಅಫ್ಘಾನ್ ಆಡಲಿರುವುದಾಗಿ ಖಚಿತಪಡಿಸಿದ್ದರು.

ಹರ್ಷ ವ್ಯಕ್ತಪಡಿಸಿದ್ದ ಸೆಹ್ವಾಗ್

ಹರ್ಷ ವ್ಯಕ್ತಪಡಿಸಿದ್ದ ಸೆಹ್ವಾಗ್

ಕಳೆದ ವಾರ ಲೆಜೆಂಡ್ಸ್ ಲೀಗ್ ಟೂರ್ನಿಯಲ್ಲಿ ಭಾರತದ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಆಡುವುದಾಗಿ ಖಚಿತ ಪಡಿಸಿದ್ದರು. ಈ ಸಂದರ್ಭದಲ್ಲಿ ಅವರು "ನಾನು ಮತ್ತೆ ಕ್ರಿಕೆಟ್ ಅಂಗಳಕ್ಕೆ ಇಳಿಯುವುದಕ್ಕೆ ಸಂತಸಗೊಂಡಿದ್ದೇನೆ. ನಾನು ಮೊದಲ ಆವೃತ್ತಿಯಲ್ಲಿ ಆಡುವ ಅವಕಾಶವನ್ನು ಕಳೆದುಕೊಂಡಿದ್ದೆ. ಈ ಬಾರಿ ಇದು ಮತ್ತಷ್ಟು ಹೊಸತನದೊಂದಿಗೆ ನಡೆಯಲಿದೆ. ಹಾಗಘಾಇ ನಾನು ಒಮಾನ್‌ನಲ್ಲಿ ಈ ಟೂರ್ನಿಯಲ್ಲಿ ಭಾಗಿಯಾಗಲು ಎದುರು ನೋಡುತ್ತಿದ್ದೇನೆ" ಎಂದಿದ್ದಾರೆ.

ಮೂರು ತಂಡಗಳಾಗಿ ಆಡಿದ್ದರು ದಿಗ್ಗಜರು

ಮೂರು ತಂಡಗಳಾಗಿ ಆಡಿದ್ದರು ದಿಗ್ಗಜರು

ಕಳೆದ ಆವೃತ್ತಿಯಲ್ಲಿ ಭಾರತ, ಪಾಕಿಸ್ತಾನ, ಶ್ರೀಲಂಕಾ, ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್‌ನ ಮಾಜಿ ಆಟಗಾರರು ಈ ಟೂರ್ನಿಯಲ್ಲಿ ಭಾಗವಹಿಸಿದ್ದರು. ಈ ಆಟಗಾರರು, ಭಾರತ, ಏಷ್ಯಾ ಹಾಗೂ ವಿಶ್ವ ತಂಡ ಎಂದು ಮೂರು ತಂಡಗಳಾಗಿ ಸ್ಪರ್ಧಿಸಿದ್ದರು. ಆದರೆ ಈ ಬಾರಿ ಯಾವ ಮಾದರಿಯಲ್ಲಿ ಈ ಟೂರ್ನಿ ಆಯೋಜನೆಯಾಗಲಿದೆ ಎಂಬುದು ಇನ್ನಷ್ಟೇ ಸ್ಪಷ್ಟವಾಗಬೇಕಿದೆ.

Story first published: Monday, July 11, 2022, 19:09 [IST]
Other articles published on Jul 11, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X