ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಲೆಜೆಂಡ್ಸ್ ಲೀಗ್: ಬೃಹತ್ 209 ರನ್ ಗಳಿಸಿ ಆ ಓರ್ವ ಬೌಲರ್‌ನಿಂದ ಸೋತ ಇಂಡಿಯಾ ಮಹಾರಾಜಸ್!

Legends League Cricket: World Giants beat India Maharajas by 3 wickets

ಈ ಬಾರಿ ನಡೆಯುತ್ತಿರುವ ಲೆಜೆಂಡ್ಸ್ ಲೀಗ್ ಕ್ರಿಕೆಟ್ ಟೂರ್ನಿಯ ಮೂಲಕ ಮತ್ತೊಮ್ಮೆ ವಿಶ್ವ ಕ್ರಿಕೆಟ್‌ನ ಎಲ್ಲಾ ಮಾಜಿ ಕ್ರಿಕೆಟಿಗರ ಆಟವನ್ನು ಮೈದಾನದಲ್ಲಿ ವೀಕ್ಷಿಸಬಹುದಾದ ಅವಕಾಶ ಕ್ರಿಕೆಟ್ ಅಭಿಮಾನಿಗಳಿಗೆ ಸಿಕ್ಕಿದೆ. ಈ ಬಾರಿಯ ಲೆಜೆಂಡ್ಸ್ ಲೀಗ್ ಕ್ರಿಕೆಟ್ ಜನವರಿ 20ರಂದು ಆರಂಭವಾಗಿದ್ದು ಜನವರಿ 29ರಂದು ನಡೆಯಲಿರುವ ಫೈನಲ್ ಪಂದ್ಯದ ಮೂಲಕ ಅಂತ್ಯಗೊಳ್ಳಲಿದೆ.

IPL 2022ಕ್ಕೆ ಆರಂಭಿಕ ಹಿನ್ನಡೆ: ಈ ಪ್ರಮುಖ ಆಟಗಾರರು ಟೂರ್ನಿಯಲ್ಲಿ ಆಡುವುದಿಲ್ಲ!IPL 2022ಕ್ಕೆ ಆರಂಭಿಕ ಹಿನ್ನಡೆ: ಈ ಪ್ರಮುಖ ಆಟಗಾರರು ಟೂರ್ನಿಯಲ್ಲಿ ಆಡುವುದಿಲ್ಲ!

ಹೀಗೆ ಆರಂಭವಾಗಿರುವ ಲೆಜೆಂಡ್ಸ್ ಲೀಗ್ ಕ್ರಿಕೆಟ್ ಟೂರ್ನಿಯ ಮೊದಲ 3 ಪಂದ್ಯಗಳು ಈಗಾಗಲೇ ಮುಗಿದಿದ್ದು ಎಲ್ಲಾ ತಂಡಗಳು ಕೂಡ ಒಂದೊಂದು ಪಂದ್ಯದಲ್ಲಿ ಜಯ ಸಾಧಿಸಿವೆ. ಹೌದು, ಈ ಬಾರಿಯ ಲೆಜೆಂಡ್ಸ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ 3 ವಿಭಿನ್ನ ತಂಡಗಳು ಸೆಣಸಾಟವನ್ನು ನಡೆಸುತ್ತಿದ್ದು, ಇಂಡಿಯಾ ಮಹಾರಾಜಾಸ್, ಏಷ್ಯಾ ಲಯನ್ಸ್ ಮತ್ತು ವರ್ಲ್ಡ್‌ ಜಿಯಂಟ್ಸ್ ತಂಡಗಳು ಕಣಕ್ಕಿಳಿದಿವೆ. ಇಂಡಿಯಾ ಮಹಾರಾಜಾಸ್ ತಂಡದಲ್ಲಿ ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರರು ಇದ್ದರೆ, ಏಷ್ಯಾ ಲಯನ್ಸ್ ತಂಡದಲ್ಲಿ ಭಾರತವನ್ನು ಹೊರತುಪಡಿಸಿ ಏಷ್ಯಾ ಖಂಡದ ಉಳಿದ ಕ್ರಿಕೆಟ್ ತಂಡಗಳ ಮಾಜಿ ಕ್ರಿಕೆಟಿಗರು ಸದಸ್ಯರಾಗಿದ್ದಾರೆ ಹಾಗೂ ವರ್ಲ್ಡ್ ಜಿಯಂಟ್ಸ್ ತಂಡದಲ್ಲಿ ಏಷ್ಯಾ ಖಂಡವನ್ನು ಹೊರತುಪಡಿಸಿ ವಿಶ್ವ ಕ್ರಿಕೆಟ್‌ನ ಉಳಿದ ದೇಶಗಳ ಮಾಜಿ ಕ್ರಿಕೆಟಿಗರು ಭಾಗವಹಿಸುತ್ತಿದ್ದಾರೆ.

IPL 2022: ಭಾರತದಲ್ಲೇ ನಡೆಯಲಿದೆ ಐಪಿಎಲ್‌: ಪ್ರೇಕ್ಷಕರಿಗಿಲ್ಲ ಅವಕಾಶ!IPL 2022: ಭಾರತದಲ್ಲೇ ನಡೆಯಲಿದೆ ಐಪಿಎಲ್‌: ಪ್ರೇಕ್ಷಕರಿಗಿಲ್ಲ ಅವಕಾಶ!

ಹೀಗೆ ತಮ್ಮ ಬಾಲ್ಯದ ಕ್ರಿಕೆಟ್ ಹೀರೋಗಳನ್ನು ಈ ಟೂರ್ನಿಯ ಮೂಲಕ ಮತ್ತೊಮ್ಮೆ ಮೈದಾನದಲ್ಲಿ ವೀಕ್ಷಿಸುವಂಥ ಅವಕಾಶ ಕ್ರಿಕೆಟ್ ಅಭಿಮಾನಿಗಳಿಗೆ ಲಭಿಸಿದ್ದು, ಟೂರ್ನಿಯಲ್ಲಿ ನಡೆಯುತ್ತಿರುವ ಪಂದ್ಯಗಳಲ್ಲಿ ರನ್ ಹೊಳೆಯೇ ಹರಿಯುತ್ತಿದೆ. ಹೌದು, ಪ್ರಸ್ತುತ ಅಂತರರಾಷ್ಟ್ರೀಯ ಪಂದ್ಯಗಳಲ್ಲೂ ಕೂಡ ಈ ಬಾರಿಯ ಲೆಜೆಂಡ್ಸ್ ಲೀಗ್ ಟೂರ್ನಿ ಪಂದ್ಯಗಳ ರೀತಿಯ ರನ್ ಹೊಳೆಯ ಪಂದ್ಯಗಳು ನಡೆಯುತ್ತಿಲ್ಲ ಹಾಗೂ ರೋಚಕವಾಗಿಲ್ಲ ಎಂದೇ ಹೇಳಬಹುದು. ಇನ್ನು ಜನವರಿ 22ರ ಶನಿವಾರದಂದು ಒಮನ್‌ನ ಅಲ್ ಅಮೆರತ್ ಕ್ರಿಕೆಟ್ ಗ್ರೌಂಡ್‌ನಲ್ಲಿ ಇಂಡಿಯಾ ಮಹಾರಾಜಾಸ್ ಮತ್ತು ವರ್ಲ್ಡ್ ಜಿಯಂಟ್ಸ್ ತಂಡಗಳ ನಡುವೆ ಪಂದ್ಯ ನಡೆದಿದ್ದು ಮೊದಲು ಬ್ಯಾಟಿಂಗ್ ಮಾಡಿದ ಇಂಡಿಯಾ ಮಹಾರಾಜಾಸ್ ನಮನ್ ಓಜಾ ಅವರ 140 ರನ್‌ಗಳ ಅಮೋಘ ಪ್ರದರ್ಶನದ ನೆರವಿನಿಂದ 20 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 209 ರನ್ ಗಳಿಸಿ ಎದುರಾಳಿ ವರ್ಲ್ಡ್ ಜಿಯಂಟ್ಸ್ ತಂಡಕ್ಕೆ ಗೆಲ್ಲಲು 210 ರನ್‌ಗಳ ಬೃಹತ್ ಗುರಿಯನ್ನು ನೀಡಿತು. ಹೀಗೆ ವರ್ಲ್ಡ್ ಜಿಯಂಟ್ಸ್ ಇಂಡಿಯಾ ಮಹಾರಾಜಾಸ್ ನೀಡಿದ್ದ ಬೃಹತ್ ಗುರಿಯನ್ನು ತಲುಪುವುದಿಲ್ಲ ಎಂದು ಹೆಚ್ಚು ಮಂದಿ ಊಹಿಸಿದ್ದರು. ಆದರೆ ಈ ಊಹೆಗಳನ್ನು ವರ್ಲ್ಡ್ ಜಿಯಂಟ್ಸ್ ತಂಡದ ಓರ್ವ ಬೌಲರ್ ಹುಸಿಗೊಳಿಸಿದ್ದು ಇಂಡಿಯಾ ಮಹಾರಾಜಾಸ್ ತಂಡಕ್ಕೆ ಈ ಕೆಳಕಂಡಂತೆ ಸೋಲುಣಿಸಿದ್ದಾರೆ..

ವರ್ಲ್ಡ್ ಜಿಯಂಟ್ಸ್ ತಂಡಕ್ಕೆ ಸಿಗಲಿಲ್ಲ ದೊಡ್ಡ ಆರಂಭ

ವರ್ಲ್ಡ್ ಜಿಯಂಟ್ಸ್ ತಂಡಕ್ಕೆ ಸಿಗಲಿಲ್ಲ ದೊಡ್ಡ ಆರಂಭ

ಇನ್ನು ವರ್ಲ್ಡ್ ಜಿಯಂಟ್ಸ್ ತಂಡಕ್ಕೆ ಇಂಡಿಯಾ ಮಹಾರಾಜಾಸ್ ರೀತಿ ದೊಡ್ಡ ಆರಂಭ ಸಿಗಲಿಲ್ಲ. ವರ್ಲ್ಡ್ ಜಿಯಂಟ್ಸ್ ಪರ ಆರಂಭಿಕರಾಗಿ ಕಣಕ್ಕಿಳಿದ ಕೆವಿನ್ ಪೀಟರ್ಸನ್ 27 ಎಸೆತಗಳಲ್ಲಿ 53 ರನ್ ಬಾರಿಸಿ ಮಿಂಚಿದರೆ, ಮತ್ತೋರ್ವ ಆರಂಭಿಕ ಆಟಗಾರ ಕೆವಿನ್ ಒಬ್ರಿಯನ್ 9 ರನ್ ಗಳಿಸಿದರು. ಇನ್ನುಳಿದಂತೆ ಜೋನಾಥನ್ ಟ್ರಾಟ್ 6, ಕೋರೆ ಆ್ಯಂಡರ್ಸನ್ 0, ಬ್ರಾಡ್ ಹಡಿನ್ 21, ಅಲ್ಬಿ ಮಾರ್ಕೆಲ್ 4, ಡೆರೆನ್ ಸಮಿ 28, ಮೊರ್ನೆ ಮೊರ್ಕೆಲ್ 21 ರನ್ ಗಳಿಸಿದರು. ಹಾಗೂ ಇಮ್ರಾನ್ ತಾಹಿರ್ ಅಜೇಯ 52, ಮತ್ತು ರಾಯ್ ಜೇ ಸೈಡ್‌ಬಾಟಮ್ ಅಜೇಯ 6 ರನ್ ಗಳಿಸಿದರು.

ಅಂತಿಮವಾಗಿ ಅಬ್ಬರಿಸಿದ ಇಮ್ರಾನ್ ತಾಹಿರ್

ಅಂತಿಮವಾಗಿ ಅಬ್ಬರಿಸಿದ ಇಮ್ರಾನ್ ತಾಹಿರ್

ಇನ್ನು ವರ್ಲ್ಡ್ ಜಿಯಂಟ್ಸ್ ತಂಡದ ಡರೆನ್ ಸಮಿ ಮತ್ತು ಮೊರ್ನೆ ಮೊರ್ಕೆಲ್ ವಿಕೆಟ್ ಬೀಳುತ್ತಾ ಇದ್ದಂತೆ ಪಂದ್ಯ ಇಂಡಿಯಾ ಮಹಾರಾಜಸ್ ಪಾಲಾಗಲಿದೆ ಎಂದು ಎಲ್ಲರೂ ಊಹಿಸಿದ್ದರು. ಆದರೆ ಈ ಊಹೆಯನ್ನು ಹುಸಿ ಮಾಡಿದ ಇಮ್ರಾನ್ ತಾಹಿರ್ 19 ಎಸೆತಗಳಿಗೆ ಅಜೇಯ 52 ರನ್ ಚಚ್ಚಿ ವರ್ಲ್ಡ್ ಜಿಯಂಟ್ಸ್ ತಂಡವನ್ನು ಗೆಲುವಿನ ದಡ ಸೇರಿಸಿದರು. ಇನ್ನು ಪಂದ್ಯ ಗೆಲ್ಲಲು ಅಂತಿಮ ಓವರ್‌ನಲ್ಲಿ 11 ರನ್‌ಗಳ ಅಗತ್ಯತೆ ಇತ್ತು. ಈ ಸಂದರ್ಭದಲ್ಲಿ ಅಂತಿಮ ಓವರ್ ಬೌಲಿಂಗ್ ಮಾಡಿದ ವೇಣುಗೋಪಾಲ್ ರಾವ್ ಅವರ ಮೊದಲನೇ ಎಸೆತಕ್ಕೆ ಸಿಕ್ಸರ್ ಬಾರಿಸಿದ ಇಮ್ರಾನ್ ತಾಹಿರ್ ಎರಡನೇ ಎಸೆತಕ್ಕೆ ಯಾವುದೇ ರನ್ ಗಳಿಸಲಿಲ್ಲ ಹಾಗೂ ಮೂರನೇ ಎಸೆತಕ್ಕೆ ಮತ್ತೆ ಸಿಕ್ಸರ್ ಚಚ್ಚಿದ ಇಮ್ರಾನ್ ತಾಹಿರ್ ಇನ್ನೂ 3 ಎಸೆತಗಳು ಬಾಕಿ ಇರುವಾಗಲೇ ವರ್ಲ್ಡ್ ಜಿಯಂಟ್ಸ್ ಜಯದ ನಗೆ ಬೀರುವಂತೆ ಮಾಡಿದರು. ವರ್ಲ್ಡ್ ಜಿಯಂಟ್ಸ್ 19.3 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 210 ರನ್ ಗಳಿಸಿ ಪಂದ್ಯದಲ್ಲಿ 3 ವಿಕೆಟ್‍ಗಳ ಜಯ ಸಾಧಿಸಿತು.

ನಮನ್ ಓಜಾ ಪಂದ್ಯಶ್ರೇಷ್ಠ

ನಮನ್ ಓಜಾ ಪಂದ್ಯಶ್ರೇಷ್ಠ

ಇನ್ನು ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಇಂಡಿಯಾ ಮಹಾರಾಜಾಸ್ ಪರ ಆರಂಭಿಕನಾಗಿ ಕಣಕ್ಕಿಳಿದ ನಮನ್ ಓಜಾ 69 ಎಸೆತಗಳಲ್ಲಿ 140 ರನ್ ಗಳಿಸಿದರು. ನಮನ್ ಓಜಾರ ಈ ಅಮೋಘ ಇನ್ನಿಂಗ್ಸ್‌ನಲ್ಲಿ 15 ಬೌಂಡರಿ ಮತ್ತು 9 ಸಿಕ್ಸರ್ ಕೂಡ ಸೇರಿತ್ತು. ಹೀಗೆ ಅಮೋಘ ಪ್ರದರ್ಶನ ನೀಡಿದ ನಮನ್ ಓಜಾ ಈ ಪಂದ್ಯದಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದಾರೆ.

Story first published: Sunday, January 23, 2022, 10:55 [IST]
Other articles published on Jan 23, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X