ಲೆಜೆಂಡ್ಸ್‌ ಲೀಗ್: ಯೂಸುಫ್ ಮತ್ತು ಮಿಚೆಲ್ ಜಾನ್ಸನ್ ನಡುವೆ ಕಿರಿಕ್, ಪಠಾಣ್‌ರನ್ನ ನೂಕಿದ ಜಾನ್ಸನ್!

ಅಂತರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದರೂ ಪೈಪೋಟಿ ಸ್ವಲ್ಪವೂ ಕಡಿಮೆಯಾಗಿಲ್ಲ. ಯೂಸುಫ್ ಪಠಾಣ್, ಮಿಚೆಲ್ ಜಾನ್ಸನ್ ಅವರ ಸ್ಪರ್ಧಾತ್ಮಕ ಮನಸ್ಥಿತಿ ಮೊದಲಿನಂತೆಯೇ ಲೆಜೆಂಡ್ಸ್ ಲೀಗ್ ಕ್ರಿಕೆಟ್‌ನಲ್ಲಿ ಕಂಡುಬಂದಿದೆ.

ಲೆಜೆಂಡ್ ಲೀಗ್ ಕ್ರಿಕೆಟ್‌ನ ಎರಡನೇ ಆವೃತ್ತಿಯಲ್ಲಿ ಇಂಡಿಯಾ ಕ್ಯಾಪಿಟಲ್ಸ್ ಮತ್ತು ಭಿಲ್ವಾರಾ ಕಿಂಗ್ಸ್ ಮುಖಾಮುಖಿಯಾದವು. ಈ ಪಂದ್ಯದಲ್ಲಿ ಯೂಸುಫ್ ಪಠಾಣ್ ಮತ್ತು ಮಿಚೆಲ್ ಜಾನ್ಸನ್ ನಡುವೆ ಜಟಾಪಟಿ ನಡೆದಿದೆ. ಮೊದಲಿಗೆ ಮಾತಿಗೆ ಮಾತು ಬೆಳೆದಿದ್ದು, ನಂತರ ಪರಸ್ಪರ ನೂಕಾಡುವಂತಹ ಪರಿಸ್ಥಿತಿಗೆ ಮಾರ್ಪಟ್ಟಿತು. ಜಾನ್ಸನ್ ಯೂಸುಫ್ ಅವರನ್ನು ಹಿಂದಕ್ಕೆ ತಳ್ಳಿದ್ದಾರೆ. ಪರಿಸ್ಥಿತಿ ಕೈ ಮೀರುವ ಮೊದಲು ಆನ್‌ಫೀಲ್ಡ್ ಅಂಪೈರ್‌ಗಳು ಮಧ್ಯಪ್ರವೇಶಿಸಿದ್ದಾರೆ.

227ರನ್ ಚೇಸ್ ಮಾಡಿದ ಇಂಡಿಯಾ ಕ್ಯಾಪಿಟಲ್ಸ್‌

ಲೆಜೆಂಡ್ಸ್ ಲೀಗ್ ಕ್ರಿಕೆಟ್‌ನಲ್ಲಿ ಇಂಡಿಯಾ ಕ್ಯಾಪಿಟಲ್ಸ್ 4 ವಿಕೆಟ್‌ಗಳಿಂದ ಭಿಲ್ವಾರಾ ಕಿಂಗ್ಸ್ ಅನ್ನು ಸೋಲಿಸಿ ಫೈನಲ್ ತಲುಪಿದೆ. ಮೊದಲು ಬ್ಯಾಟಿಂಗ್ ಮಾಡಿದ ಭಿಲ್ವಾರ ಕಿಂಗ್ಸ್ 226/5 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಇಂಡಿಯಾ ಕ್ಯಾಪಿಟಲ್ಸ್ 19.3 ಓವರ್‌ಗಳಲ್ಲಿ 6 ವಿಕೆಟ್‌ಗೆ 231 ರನ್ ಗಳಿಸಿತು.

ನ್ಯೂಜಿಲೆಂಡ್ ದಂತಕಥೆ ರಾಸ್ ಟೇಲರ್ ಇಂಡಿಯಾ ಕ್ಯಾಪಿಟಲ್ಸ್ ಪರ 39 ಎಸೆತಗಳಲ್ಲಿ 84 ರನ್ ಗಳಿಸಿ ಮ್ಯಾಚ್ ವಿನ್ನಿಂಗ್ ಇನ್ನಿಂಗ್ಸ್ ಆಡಿದರು. ಟೇಲರ್ 9 ಬೌಂಡರಿಗಳು ಮತ್ತು 5 ಸಿಕ್ಸರ್‌ಗಳ ಮೂಲಕ ತಮ್ಮ ಇನ್ನಿಂಗ್ಸ್ ಅನ್ನು ಮುಗಿಸಿದ್ರು. ಟೇಲರ್ ಜೊತೆಗೆ, ಆಶ್ಲೇ ನರ್ಸ್ 28 ಎಸೆತಗಳಲ್ಲಿ ಬಿರುಸಿನ 60 ರನ್ ಗಳಿಸಿ ಅಂತಿಮವಾಗಿ ಅಜೇಯರಾಗಿ ಉಳಿದು ಪಂದ್ಯವನ್ನು ಗೆದ್ದರು.

ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದ ಯೂಸುಫ್

ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದ ಯೂಸುಫ್

ಈ ಪಂದ್ಯದಲ್ಲಿ ಯೂಸುಫ್ ಪಠಾಣ್ ವಿಲ್ಲಾವರ ಕಿಂಗ್ಸ್ ಪರ ಆಡುತ್ತಿದ್ದರು. ಯೂಸುಫ್ 24 ಪಂದ್ಯಗಳಲ್ಲಿ 48 ರನ್ ಗಳಿಸಿದ್ರು. ಯೂಸುಫ್ 3 ಬೌಂಡರಿ ಮತ್ತು 4 ಸಿಕ್ಸರ್‌ಗಳಿಂದ ತಮ್ಮ ಸ್ಪೋಟಕ ಇನ್ನಿಂಗ್ಸ್ ಆಡಿದ್ರು. ಆದ್ರೆ ಅಂತಿಮವಾಗಿ ಅವರ ತಂಡವು ಪಂದ್ಯವನ್ನು ಗೆಲ್ಲಲು ಸಾಧ್ಯವಾಗಲಿಲ್ಲ. ಮತ್ತೊಂದೆಡೆ ಮಿಚೆಲ್ ಜಾನ್ಸನ್ 4 ಓವರ್‌ಗಳಲ್ಲಿ 51 ರನ್ ನೀಡಿ 2 ವಿಕೆಟ್ ಪಡೆದರು.

ಲೆಜೆಂಡ್ಸ್ ಲೀಗ್ ಕ್ರಿಕೆಟ್ ಫೈನಲ್ ಅಕ್ಟೋಬರ್ 5 ರಂದು (ಬುಧವಾರ) ಜೈಪುರದ ಸವಾಯಿ ಮಾನ್ ಸಿಂಗ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಗೌತಮ್ ಗಂಭೀರ್ ಅವರ ಇಂಡಿಯಾ ಕ್ಯಾಪಿಟಲ್ಸ್ ಫೈನಲ್‌ನಲ್ಲಿ ಗುಜರಾತ್ ಜೈಂಟ್ಸ್ ಮತ್ತು ಭಿಲ್ವಾರಾ ಕಿಂಗ್ಸ್ ನಡುವಿನ ಪಂದ್ಯದ ವಿಜೇತರನ್ನು ಎದುರಿಸಲಿದೆ.

ಉಭಯ ತಂಡಗಳ ಪ್ಲೇಯಿಂಗ್ ಇಲೆವೆನ್

ಉಭಯ ತಂಡಗಳ ಪ್ಲೇಯಿಂಗ್ ಇಲೆವೆನ್

ಇಂಡಿಯಾ ಕ್ಯಾಪಿಟಲ್ಸ್‌: ಗೌತಮ್ ಗಂಭೀರ್ (ನಾಯಕ), ಡ್ವೇನ್ ಸ್ಮಿತ್, ಹ್ಯಾಮಿಲ್ಟನ್ ಮಸಕಡ್ಜಾ, ದಿನೇಶ್ ರಾಮ್ದಿನ್ (ವಿಕೆಟ್ ಕೀಪರ್), ರಾಸ್ ಟೇಲರ್, ಆಶ್ಲೇ ನರ್ಸ್, ಲಿಯಾಮ್ ಪ್ಲಂಕೆಟ್, ಮಿಚೆಲ್ ಜಾನ್ಸನ್, ಪಂಕಜ್ ಸಿಂಗ್, ಪ್ರವೀಣ್ ತಾಂಬೆ, ಪವನ್ ಸುಯಲ್

ಬೆಂಚ್: ಜಾನ್ ಮೂನಿ, ಈಶ್ವರ್ ಪಾಂಡೆ, ಪ್ರಾಸ್ಪರ್ ಉತ್ಸೇಯಾ, ರಜತ್ ಭಾಟಿಯಾ, ದಿಶಾಂತ್ ಯಾಗ್ನಿಕ್, ಮಶ್ರಫೆ ಮೊರ್ತಜಾ, ರವಿ ಬೋಪಾರಾ, ಅಸ್ಗರ್ ಅಫ್ಘಾನ್, ಪ್ರವೀಣ್ ಗುಪ್ತಾ, ಸೊಲೊಮನ್ ಮಿರೆ, ಸುಹೇಲ್ ಶರ್ಮಾ, ಜಾಕ್ವೆಸ್ ಕಾಲಿಸ್, ಫರ್ವೀಜ್ ಮಹರೂಫ್

ಬಿಲ್ವಾರ ಕಿಂಗ್ಸ್‌: ವಿಲಿಯಂ ಪೋರ್ಟರ್‌ಫೀಲ್ಡ್, ಮೊರ್ನೆ ವ್ಯಾನ್ ವೈಕ್ (ವಿಕೆಟ್ ಕೀಪರ್), ಶೇನ್ ವ್ಯಾಟ್ಸನ್, ಜೆಸಲ್ ಕರಿಯಾ, ಯೂಸುಫ್ ಪಠಾಣ್, ಇರ್ಫಾನ್ ಪಠಾಣ್ (ನಾಯಕ), ರಾಜೇಶ್ ಬಿಷ್ಣೋಯ್, ಟಿನೋ ಬೆಸ್ಟ್, ಎಸ್ ಶ್ರೀಶಾಂತ್, ಫಿಡೆಲ್ ಎಡ್ವರ್ಡ್ಸ್, ಮಾಂಟಿ ಪನೇಸರ್

ಬೆಂಚ್: ನಿಕ್ ಕಾಂಪ್ಟನ್, ಸುದೀಪ್ ತ್ಯಾಗಿ, ಮಯಾಂಕ್ ತೆಹ್ಲಾನ್, ನಮನ್ ಓಜಾ, ದಿನೇಶ್ ಸಾಲುಂಖೆ, ಮ್ಯಾಟ್ ಪ್ರಯರ್, ಸಮಿತ್ ಪಟೇಲ್, ತನ್ಮಯ್ ಶ್ರೀವಾಸ್ತವ, ಟಿಮ್ ಬ್ರೆಸ್ನನ್, ಓವೈಸ್ ಶಾ

For Quick Alerts
ALLOW NOTIFICATIONS
For Daily Alerts
Story first published: Monday, October 3, 2022, 19:30 [IST]
Other articles published on Oct 3, 2022

Latest Videos

  + More
  POLLS
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Yes No
  Settings X