ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಆರು ಬಾಲ್‌ಗೆ ಆರು ಸಿಕ್ಸರ್: ಯುವರಾಜ್ ದಾಖಲೆ ನೆನಪಿಸಿದ ಕೀವಿಸ್ ಕ್ರಿಕೆಟಿಗ

Leo Carter Becomes 7th Batsman Across Formats To Hit 6 Sixes In An Over

ಟೀಮ್ ಇಂಡಿಯಾ ಸ್ಪೋಟಕ ಆಟಗಾರ ಯುವರಾಜ್ ಸಿಂಗ್ 2007 ವಿಶ್ವಕಪ್‌ನಲ್ಲಿ ಮಿಂಚು ಹರಿಸಿದ್ದರು. ಅದರಲ್ಲೂ ಇಂಗ್ಲೆಂಡ್‌ ವಿರುದ್ಧ ನಡೆದ ಪಂದ್ಯದಲ್ಲಿ ಯುವರಾಜ್ ವಿಶ್ವವನ್ನೇ ತನ್ನತ್ತ ತಿರುಗಿ ನೋಡುವಂತೆ ಮಾಡಿದ್ದರು. ಆ ಪಂದ್ಯದಲ್ಲಿ ಯುವರಾಜ್‌ ಸಿಂಗ್ ಓವರ್‌ನ ಎಲ್ಲಾ ಎಸೆತಗಳನ್ನೂ ಸಿಕ್ಸರ್‌ಗೆ ಅಟ್ಟಿದ್ದರು. ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಹೊಸದೊಂದು ಮೈಲಿಗಲ್ಲು ಸ್ಥಾಪಿಸಿರು.

ನ್ಯೂಜಿಲ್ಯಾಂಡ್‌ ಕ್ಯಾಂಟರ್‌ಬರಿ ತಂಡದ ಆಟಗಾರ ಯುವರಾಜ್ ಸಿಂಗ್ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮಾಡಿದ ಸಾಧನೆಯನ್ನು ನೆನಪಿಸುವಂತೆ ಮಾಡಿದ್ದಾರೆ. ಓವರ್‌ನ ಎಲ್ಲಾ ಎಸೆತಗಳನ್ನೂ ನ್ಯೂಜಿಲ್ಯಾಂಡ್‌ ಆಟಗಾರ ಲಿಯೋ ಕಾರ್ಟರ್ ಸಿಕ್ಸರ್‌ಗೆ ಅಟ್ಟಿ ಮಿಂಚುಹರಿಸಿದ್ದಾರೆ.

25 ವರ್ಷದ ಕ್ಯಾಂಟರ್‌ಬರಿ ಎಡಗೈ ಬ್ಯಾಟ್ಸ್‌ಮನ್ ಲಿಯೋ ಕಾರ್ಟರ್ ಎಡಗೈ ಸ್ಪಿನ್ನರ್ ಏಂಟನ್ ಡೇವ್ಕಿಚ್ ಎಸೆದ ಓವರ್‌ನ ಎಲ್ಲಾ ಬಾಲ್‌ಗಳನ್ನು ಸಿಕ್ಸರ್‌ಗೆ ತಳ್ಳಿ ತಂಡವನ್ನು ಸುಲಭವಾಗಿ ಗೆಲ್ಲುವಂತೆ ಮಾಡಿದರು. ನಾರ್ತರ್ನ್ ದಿಸ್ಟ್ರಿಕ್ಟ್‌ ಮತ್ತು ಕ್ಯಾಂಟ್‌ಬರಿ ತಂಡದ ಮಧ್ಯೆ ಟಿ20 ಪಂದ್ಯ ಈ ದಾಖಲೆಗೆ ಸಾಕ್ಷಿಯಾಯಿತು. ಮೊದಲು ಬ್ಯಾಟಿಂಗ್ ಮಾಡಿದ ನಾರ್ತರ್ನ್ ಡಿಸ್ಟ್ರಿಕ್ಟ್‌ ತಂಡ 219ರನ್ ಬಾರಿಸಿ ಭರ್ಜರಿ ಮೊತ್ತದ ಟಾರ್ಗೆಟ್‌ ನೀಡಿತು. ಈ ಮೂಲಕ 220 ರನ್‌ಗಳ ಗುರಿಯನ್ನು ಪಡೆದಿದ್ದ ಕ್ಯಾಂಟರ್‌ಬರಿ ತಂಡ ಇನ್ನೂ ಏಳು ಎಸೆತ ಬಾಕಿ ಇರುವಂತೆಯೇ ಗೆಲುವನ್ನು ಆಚರಿಸಿಕೊಂಡಿತು.

ಟಿ20 ವಿಶ್ವದಾಖಲೆ ನಿರ್ಮಿಸಲು ವಿರಾಟ್ ಕೊಹ್ಲಿಗೆ ಕೇವಲ 1 ರನ್‌ ಬೇಕು!ಟಿ20 ವಿಶ್ವದಾಖಲೆ ನಿರ್ಮಿಸಲು ವಿರಾಟ್ ಕೊಹ್ಲಿಗೆ ಕೇವಲ 1 ರನ್‌ ಬೇಕು!

ಟಿ20 ಕ್ರಿಕೆಟ್‌ನಲ್ಲಿ ಈ ಸಾಧನೆಯನ್ನು ಮೊದಲಿಗೆ ಟೀಮ್ ಇಂಡಿಯಾದ ಯುವರಾಜ್ ಸಿಂಗ್ (2007) ವರ್ಸೆಸ್ಟರ್ಶೈರ್‌ನ ರಾಸ್‌ ವೈಟೆಲಿ(2017) ಅಫ್ಘಾನಿಸ್ತಾನದ ಹಸ್ರತುಲ್ಲಾ ಝಝಾಯ್ (2018)ರಲ್ಲಿ ಈ ಸಾಧನೆಯನ್ನು ಮಾಡಿದ ಆಟಗಾರರಾಗಿದ್ದಾರೆ. ಇದಕ್ಕೂ ಮುನ್ನ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ವೆಸ್ಟ್‌ ಇಂಡೀಸ್‌ನ ಗ್ಯಾರಿ ಸೋಬರ್ಸ್‌ ಮತ್ತು ಭಾರತದ ರವಿ ಶಾಸ್ತ್ರಿ ಕೂಡ ಈ ಸಾಧನೆಯನ್ನು ಮಾಡಿದ್ದಾರೆ.

ಅತಿಹೆಚ್ಚು ಗೂಗಲ್ ಸರ್ಚ್ ಮಾಡಿದ ಆಟಗಾರ ಯಾರು ಗೊತ್ತಾ?ಅತಿಹೆಚ್ಚು ಗೂಗಲ್ ಸರ್ಚ್ ಮಾಡಿದ ಆಟಗಾರ ಯಾರು ಗೊತ್ತಾ?

ದಕ್ಷಿಣ ಆಫ್ರಿಕಾದ ಮಾಜಿ ಆರಂಭಿಕ ಆಟಗಾರ ಹರ್ಶೆಲ್ ಗಿಬ್ಸ್‌ 2007ರ ಏಕದಿನ ವಿಶ್ವಕಪ್‌ನ ಗ್ರೂಪ್‌ಹಂತದ ಪಂದ್ಯದಲ್ಲಿ ನೆದರ್ಲೆಂಡ್ ತಂಡದ ವಿರುದ್ಧ ಈ ಓವರ್‌ನ ಎಲ್ಲಾ ಎಸೆತಗಳನ್ನು ಸಿಕ್ಸರ್‌ಗೆ ಅಟ್ಟಿದ್ರು. ಗಮನಿಸ ಬೇಕಾದ ಅಂಶವೇನೆಂದರೆ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಈ ಸಾಧನೆಯನ್ನು ಮಾಡದ ಆಟಗಾರರು ಅಂದರೆ ಅದು ಹರ್ಷಲ್ ಗಿಬ್ಸ್ ಮತ್ತು ಯುವರಾಜ್ ಸಿಂಗ್ ಮಾತ್ರ.

Story first published: Monday, January 6, 2020, 11:58 [IST]
Other articles published on Jan 6, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X